ಕೋಟ(ಡಿ.27):ಭಾರತದ ಸ್ವಾತಂತ್ರ್ಯಕ್ಕೆ ಕರಾವಳಿಗರ ಕೊಡುಗೆ ಹಾಗೂ ಕೋಟ ಪದ್ಮನಾಭ ಕಿಣಿ ಇವರ ಸೇವೆ ಸ್ಮರಣಾರ್ಥ ಸ್ವರಾಜ್ಯ75 ಸಂಘಟನೆ, ಜನ ಸೇವಾ ಟ್ರಸ್ಟ್ ಮೂಡುಗಿಳಿಯಾರು,ಹಸ್ತ ಚಿತ್ತ ಫೌಂಡೇಶನ್,ಜೈ ಕುಂದಾಪುರ ಸೇವಾ ಟ್ರಸ್ಟ್, ಎಂ.ಎಸ್.ಆರ್.ಎಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಹಾಗೂ ಗ್ರಾಮಸ್ಥರ ಸಹಕಾರದಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ನಾಮಫಲಕವನ್ನು ಶ್ರೀ ದೇವದತ್ ಭಟ್ ರವರು ಡಿ.26ರಂದು ಕೋಟದಲ್ಲಿ ಅಳವಡಿಸಿ ಶುಭಕೋರಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ನರೇಂದ್ರ ಕುಮಾರ್ ಕೋಟ ರವರು ಭಾಗವಹಿಸಿ ಸ್ವಾತಂತ್ರ ಹೋರಾಟದಲ್ಲಿ ಕರಾವಳಿಗರ ಪಾತ್ರ ಎಂಬ ವಿಷಯದ ಬಗ್ಗೆ ಮಾಹಿತಿಯನ್ನು ನೀಡಿದರು . ಮುಖ್ಯ ಅತಿಥಿಯಾಗಿ ಪುಂಡಲೀಕ ಮೊಗವೀರ, ದಯಾನಂದ ಕಿಣಿ, ಶರ್ಮಿಳಾ ಎಸ್ ಕಾರಂತ್,ಶ್ರೀ ಶಾಸ್ತ ಮೊಬೈಲ್ ನ ಮಾಲೀಕರಾದ ಆದಿತ್ಯ, ಶ್ರೀಮತಿ ಅಕ್ಷತಾ ಗಿರೀಶ್ ಐತಾಳ್,ಶ್ರೀ ರಾಘವೇಂದ್ರ ಹರ್ಕಾಡಿ ,ಶ್ರೀ ಸತೀಶ್ ಆಚಾಯ೯ ಗುಂಡ್ಮಿ ಹಾಗೂ
ಗ್ರಾಮಸ್ಥರು ಉಪಸ್ಥಿತರಿದ್ದರು.
ಚಂದ್ರ ಆಚಾರ್ಯ ಕೋಟ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸ್ವರಾಜ್ಯ ೭೫ ಕಾರ್ಯಕ್ರಮ ಸಂಚಾಲಕರಾದ ಶ್ರೀ ಪ್ರದೀಪ
ಕುಮಾರ್ ಬಸ್ರೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ನಾಗೇಂದ್ರ ಆಚಾರ್ಯ ಧನ್ಯವಾದಗೈದರು.ಶ್ರೀ ಆಶಾಲತಾ ಮರವಂತೆ ಕಾರ್ಯಕ್ರಮ ನಿರೂಪಿಸಿದರು.