ಕುಂದಾಪುರ(ಆ,11): ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಶ್ರಾವ್ಯಾ, ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ನಡೆದ ರಾಜ್ಯ ಮಟ್ಟದ 17ರ ವಯೋಮಾನದ ಬಾಲಕಿಯರ ಚೆಸ್ ಪಂದ್ಯಾಟದಲ್ಲಿ 4ನೇ ಸ್ಥಾನವನ್ನು ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ.
ಸಂಸ್ಥೆಯ ಪ್ರಾಂಶುಪಾಲೆ ಡಾ. ಚಿಂತನಾ ರಾಜೇಶ್ರವರ ಮಾರ್ಗದರ್ಶನ ಮತ್ತು ದೈಹಿಕ ಶಿಕ್ಷಣ ಶಿಕ್ಷಕರಾದ ರಾಜೇಂದ್ರ ಶೆಟ್ಟಿ, ನಾಗೇಶ್ ಪ್ರಭು ಮತ್ತು ವೀರೇಂದ್ರ ನಾಯಕ್ರವರಿಂದ ಪ್ರೇರಣೆ ಮತ್ತು ತರಬೇತಿಯನ್ನು ಪಡೆದಿರುತ್ತಾಳೆ. ಕಂಡ್ಲೂರಿನ ಅರುಣ್ ಮತ್ತು ಸುಜಾತ ದಂಪತಿಯ ಪುತ್ರಿಯಾದ ಈಕೆಯನ್ನು ಸಂಸ್ಥೆಯ ಎಲ್ಲಾ ವಿಭಾಗದ ಮುಖ್ಯಸ್ಥರು ಅಭಿನಂದಿಸಿದ್ದಾರೆ.