ಕೋಟೇಶ್ವರ (ಜ.4): ವಿವೇಕೋದಯ ಅನುದಾನಿತ ಪ್ರಾಥಮಿಕ ಶಾಲೆ ಹೊಂಬಾಡಿ -ಮಂಡಾಡಿ ಸುಣ್ಣಾರಿ ಶಾಲೆಯ ವಿದ್ಯಾರ್ಥಿಗಳಿಗೆ ದಾನಿಗಳು ಮತ್ತು ಪಂಚಾಯತ್ ನಿಂದ ಕೊಡಲ್ಪಟ್ಟ ಪುಸ್ತಕ ಮತ್ತು ಸಮವಸ್ತ್ರವನ್ನು ಇತ್ತೀಚೆಗೆ ವಿತರಣೆ ಮಾಡಲಾಯಿತು.
ಶಾಲಾ ಸಂಚಾಲಕರಾದ ಕಿಶೋರ ಶೆಟ್ಟಿ ಸುಣ್ಣಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾಗಿದ್ದು ಕಳೆದ ವರ್ಷ ನಿಧನರಾದ ಎಸ್ ದಿನಕರ ಶೆಟ್ಟಿ ಯವರ ಪ್ರಥಮ ವರ್ಷದ ಪುಣ್ಯಸ್ಮರಣೆ ಮಾಡಲಾಯಿತು.
ಶಾಲಾ ಸಂಸ್ಥಾಪಕರಾದ ಕಾಪು ದಿ. ಸಂಜೀವ ಶೆಟ್ಟಿ ಸುಪುತ್ರ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ರಮಾನಂದ ಶೆಟ್ಟಿ ಅನೇಕ ವರ್ಷಗಳಿಂದ ಶಾಲಾ ವಿದ್ಯಾರ್ಥಿಗಳಿಗೆ ಕೊಡುತ್ತಿರುವ ಬಟ್ಟೆಗಳನ್ನು ವಿತರಿಸಲಾಯಿತು. ಹಾಗೆಯೇ ಪಂಚಾಯತ್ ವತಿಯಿಂದ ಪ್ರತಿವರ್ಷ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಸಮವಸ್ತ್ರ ಮತ್ತು ಪುಸ್ತಕವನ್ನು ಅಭಿವೃದ್ಧಿ ಅಧಿಕಾರಿ ಚಂದ್ರಕಾಂತ, ಪಂಚಾಯತ್ ಸದಸ್ಯರಾದ ವಿ. ಚಂದ್ರಶೇಖರ ಹೆಗ್ಡೆ, ಗಣೇಶ ಶೆಟ್ಟಿ, ಸಚಿನ್ ಶೆಟ್ಟಿ ವಿತರಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಎಂ ರತ್ನಾಕರ ಶೆಟ್ಟಿ , ಕೆ ಸಂಜೀವ ಶೆಟ್ಟಿ , ಪ್ರಸನ್ನ ಕುಮಾರ್ ಶೆಟ್ಟಿ, ಎಸ್ ಮಂಜು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಆಶಾ ಶೇರಿಗಾರ್, ಶೈಕ್ಷಣಿಕ ಸಲಹೆಗಾರ ಕಾಳಾವರ ಉದಯಕುಮಾರ್ ಶೆಟ್ಟಿ ಹಾಗೂ ಹಿರಿಯರಾದ ಡಾ. ಮೋಹನದಾಸ ಶೆಟ್ಟಿ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾದ್ಯಾಯ ರಘುರಾಮ ಶೆಟ್ಟಿ ಸ್ವಾಗತಿಸಿದರು.ಸಹಶಿಕ್ಷಕಿ ಸರೋಜಿನಿ ವಂದಿಸಿದರು.ಶಿಕ್ಷಕ ಸಂದೀಪ ಕಾರಕ್ರಮ ನಿರೂಪಿಸಿದರು. ಶಿಕ್ಷಕರಾದ ನೀತಾ ಶೆಟ್ಟಿ ಪೂರ್ಣಿಮಾ, ಆರತಿ,ರಾಧಾ ಶೆಟ್ಟಿ ಹಾಗೂ ರಾಜಶ್ರೀ ಸಹಕರಿಸಿದರು.