ಉಚ್ಚಿಲ(ಮಾ.5): ಮೊಗವೀರ ಸಮುದಾಯದ ಆರಾಧ್ಯ ದೇವತೆ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನ ಪುನಃಪ್ರತಿಷ್ಠೆ ,ಬ್ರಹ್ಮಕಲಶೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಎಪ್ರಿಲ್ 01ರಿಂದ 15ರವರಗೆ ಜರುಗಲಿದ್ದು , ಹೊರೆ ಕಾಣಿಕೆ,ಪುನರ್ ಪ್ರತಿಷ್ಠೆ,ಬ್ರಹ್ಮಕಲಶ, ನಾಗಮಂಡಲೋತ್ಸವ ಮತ್ತು ಅಂತರ್ ರಾಜ್ಯ ಮಟ್ಟದ ಮತ್ತು ಸ್ಥಳೀಯ ಕಲಾವಿದರಿಂದ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉಪ್ಪಳ ದಿಂದ ಶೀರೂರು ತನಕ ಪ್ರಚಾರ ಪಡಿಸುವ ಉದ್ದೇಶದಿಂದ ನಿರ್ಮಿಸಲಾದ “ಶ್ರೀ ಮಹಾಲಕ್ಷ್ಮೀ ರಥ”ಕ್ಕೆ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಹಾಗೂ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರೂ ಆದ ನಾಡೋಜ ಡಾ. ಜಿ. ಶಂಕರ್ ರವರು ಚಾಲನೆ ನೀಡಿದರು.
ರಥಕ್ಕೆ ಚಾಲನೆ ನೀಡಿ ಮಾತನಾಡಿದ ನಾಡೋಜ ಡಾ. ಜಿ. ಶಂಕರ್ ರವರು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಪುನರ್ ಪ್ರತಿಷ್ಠೆಯ ಈ ಪುಣ್ಯ ಕಾರ್ಯದಲ್ಲಿ ಸಮಾಜ ಭಾಂದವರು ಹಾಗೂ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆನ್ನುವ ಉದ್ದೇಶದಿಂದ ಈ ಪ್ರಚಾರ ರಥವನ್ನು ನಿರ್ಮಿಸಲಾಗಿದ್ದು, ಉಪ್ಪಳದಿಂದ ಶೀರೂರವರೆಗಿನ ಪ್ರತೀ ಗ್ರಾಮಸಭೆಗೆ ಭೇಟಿ ನೀಡಲಿದೆ. ರಥವು ತಮ್ಮ ತಮ್ಮ ಊರಿಗೆ ಭೇಟಿ ನೀಡುವ ಸಂದರ್ಭದಲ್ಲಿ ಆಯಾಯ ಗ್ರಾಮಸಭೆಯ ಗುರಿಕಾರರು, ಅಧ್ಯಕ್ಷರು, ಸೇರದಂತೆ ಮಹಾಜನ ಸಂಘದ ಪ್ರತಿನಿಧಿಗಳು ಹಾಜರಿದ್ದು ಈ ರಥವನ್ನು ಭಕ್ತಿ ಪೂರ್ವಕವಾಗಿ ಸ್ವಾಗತಿಸಿ, ಗಂಧ ಪ್ರಸಾದವನ್ನು ಸ್ವೀಕರಿಸಿ, ತಮ್ಮ ಗ್ರಾಮಸಭೆಯ ವ್ಯಾಪ್ತಿಯಲ್ಲಿ ಈ ರಥವು ಸುಗಮವಾಗಿ ಸಂಚರಿಸಲು ಸಹಕಾರ ನೀಡಬೇಕು ಮತ್ತು ರಥವನ್ನು ಮುಂದಿನ ಗ್ರಾಮಸಭೆಗೆ ಗೌರವಾದರದಿಂದ ಬೀಳ್ಕೊಡಬೇಕಾಗಿ ವಿನಂತಿಸಿದರು.

ಪ್ರಚಾರ ಸಮಿತಿಯ ಅಧ್ಯಕ್ಷರಾದ ಶಿವರಾಮ್ ಕೆ. ಎಂ ರವರು ಈ ರಥದ ಜೊತೆ ಇರಲಿದ್ದಾರೆ ಎಂದರು.ಈ ಸಂದರ್ಭದಲ್ಲಿ ದ. ಕ ಮೊಗವೀರ ಮಹಾಜನ ಅಧ್ಯಕ್ಷ ಜಯ ಸಿ. ಕೋಟ್ಯಾನ , ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗುಂಡು ಬಿ. ಅಮೀನ್, ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ವಾಸುದೇವ ಸಾಲಿಯಾನ್,ಶುಭಾಶ್ಚಂದ್ರ ಕಾಂಚನ್,ಭುವನೇಂದ್ರ ಕಿದಿಯೂರು, ಯಶ್ಪಾಲ್ ಎ.ಸುವರ್ಣ,ರಾಘವೇಂದ್ರ ತಂತ್ರಿಗಳು, ರಾಘವೇಂದ್ರ ಉಪಾಧ್ಯಾಯ, ಮೋಹನ್ ಬೆಂಗ್ರೆ,ಭರತ್ ಉಳ್ಳಾಲ್, ವಿನಯ ಕರ್ಕೇರ, ಭರತ್ ಎರ್ಮಾಳ್,ರಮೇಶ್ ಕುಂದರ್ ಕೋಟ ಮುಂತಾದವರು ಉಪಸ್ಥಿತರಿದ್ದರು.















