ಗೊಂಬೆಯಾಟ ಎಂದಾಗಲೆಲ್ಲ ಎಂದೋ ಇಂಡಿಯಾ ಗೋಟ್ ಟ್ಯಾಲೆಂಟ್ ಕಾರ್ಯಕ್ರಮದಲ್ಲಿ ಕಂಡ ರಾಜಸ್ಥಾನದ ರಾಮಾಯಣದ ಗೊಂಬೆಯಾಟವೇ ನೆನಪಿಗೆ ಬರುತಿತ್ತೇ ಹೊರತು ನಮ್ಮೂರಲ್ಲೂ ಒಂದು ಗೊಂಬೆಯಾಟದ ಆರು ತಲೆಮಾರಿನ ಪರಂಪರೆ ಇತ್ತೆಂದು ಗೊತ್ತಾಗಿದ್ದು ಇಂದು ಭಾಸ್ಕರ್ ಕೊಗ್ಗ ಕಾಮತ್ ಮಾತು ಕೇಳಿದ ಬಳಿಕ.
ಜಗವೇ ಆ ದೇವರಾಡಿಸೋ ನಾಟಕ…. ನಾವೆಲ್ಲ ಅವನ ಕೈಯ ಗೊಂಬೆಗಳು ಎಂಬ ಮಾತಿನಂತೆ ಇಂದು ನಮ್ಮ ಕಾಲೇಜಿನ ಯಕ್ಷಗಾನ ಸಂಘ ಹಾಗೂ ಕನ್ನಡ ವಿಭಾಗ ಆಯೋಜಿಸಿದ ಉಪ್ಪಿನಕುದ್ರು ಗೊಂಬೆ ಆಟ ಅಕಾಡೆಮಿಗೆ ವಿಸ್ತರಣ ಚಟುವಟಿಕೆಯ ಅಂಗವಾಗಿ ಭೇಟಿ ನೀಡುವ ಸೌಭಾಗ್ಯ ನಮಗೊದಗಿಬಂತು.
ಉಪ್ಪಿನಕುದ್ರು ಗೊಂಬೆ ಆಟ ಅಕಾಡೆಮಿಯ ಮುಖ್ಯಸ್ಥರಾದ ಭಾಸ್ಕರ್ ಕೊಗ್ಗ ಕಾಮತ್ ಗೊಂಬೆಯ ಬಿಡಿಬಾಗಗಳ ಒಂದೊಂದಾಗಿ ಜೋಡಿಸಿ ಎತ್ಚಿ ಹಿಡಿದಾಗ ಎದ್ದು ನಿಂತ ಮರದ ಗೊಂಬೆ ಅವರಾಡಿಸಿದಂತೆಲ್ಲ ಹೆಜ್ಜೆ ಹಾಕುವಾಗ ಒಂದೊಮ್ಮೆ ಆ ಗೊಂಬೆಗೂ ಜೀವಬಂದಿರಬಹುದೇ ಎoದು ಭಾಸವಾಗುತಿತ್ತು . ಮತ್ತೊಂದು ಗೊಂಬೆ ಬಂದಾಗ ಕುಣಿಸಿದ್ದರ ಸೂತ್ರ ಬಿಟ್ಟು ಮೂಲೆಗಿಡುವಾಗ ಎರಡು ದಿನ ಬದುಕಿ ಗೊತ್ತಾಗದೇ ಮಾಯವಾಗೋ ಮನುಷ್ಯನ ಬದುಕೇ ಜ್ಞಾಪಕಕ್ಕೆ ಬಂದದ್ದು, ಯದ್ಬಾವಂ ತದ್ಬವತಿ ಎಂಬಂತೆ ಗೊಂಬೆಯಾಟ ಕೇವಲ ಸೂತ್ರದಾರನ ಕೈಯಳತೆಗೆ ಯದ್ವಾತದ್ವಾ ಕುಣಿಯುವ ನಿರ್ಜೀವ ವಸ್ತುಗಳ ಡೊಂಬಾರಾಟವಲ್ಲ. ವೇಷಭೂಷಣ ತೊಟ್ಟು ನಮ್ಮೂರ ಕಲೆ ಯಕ್ಷಗಾನದ ಪಾತ್ರಕ್ಕೆ ಜೀವ ತುಂಬುವ ಒಬ್ಬ ಸಂಪೂರ್ಣ ವ್ಯಕ್ತಿಯೆನಿಸಿತು. ಅಷ್ಪೇ ಅಲ್ಲ ಗೊಂಟೆಯಾಟವೆಂದರೆ ಗೊಂಬೆಗಳ ಒಂದು ಚಿಕ್ಕ ಚಲನೆಯ ಹಿಂದೆ ಸೂತ್ರಹಿಡಿದು ಹರಸಾಹಸ ಪಡುವ ಹಲವು ಜನರ ಶ್ರಮವುಂಟು. ನಮ್ಮೂರ ಕಲೆ ನಮಗೆ ಗೊತ್ತಿಲ್ಲವಾದರೂ ಇಷ್ಟರ ವರೆಗೂ ಸುಮಾರು 21 ರಾಷ್ಟ್ರ ಗಳನ್ನು ಸುತ್ತಿ ನಮ್ಮ ಕಲೆಯ ಅವರದೇ ಭಾಷೆಯಲಿ ಪ್ರಸ್ತುತ ಪಡಿಸಿದ್ದಾರೆಂದರೆ ನಮಗ್ಯಾಕೆ ನಮ್ಮೂರ ಕಲೆಯ ಮೇಲೆ ಆಸಕ್ತಿಯಿಲ್ಲವೋ ಗೊತ್ತಿಲ್ಲ.
ಪ್ರತಿ ಗೊಂಬೆಯು ವೇದಿಕೆಯ ಮೇಲೆ ಬಂದಾಗಲು ಸೂತ್ರದಾರರ ಪಕ್ಕವೇ ನಿಂತ ಒಬ್ಬರು ಹಿರಿಯರು ಗೊಂಬೆಯ ಮೌನಕ್ಕೆ ಮಾತಿನ ಅರ್ಥ ನೀಡುದಷ್ಟೇ ಅಲ್ಲದೇ ಅಷ್ಟೇನು ವಿದ್ಯೆ ಕಲಿಯದಿದ್ದರೂ ಹಿಂದಿ ,ಇಂಗ್ಲಿಷಿನ ಸಂಭಾಷಣೆಯನ್ನು ಸಲೀಸಾಗಿ ಹೇಳಬಲ್ಲ ಅವರ ಕಲೆಯ ಮೇಲಿನ ನಿಷ್ಠೆಯ ಕಂಡಾಗಲೆ ಯಾರಿಗಾದರು ಅರಿವಾಗಲೇ ಬೇಕು . ಕರಾವಳಿಯ ಅತಿ ಜನಪ್ರೀಯ ಕಲೆ ಯಕ್ಷಗಾನಕ್ಕಷ್ಟೇ ಸೀಮಿತವಾಗಿದ್ದ ಗೊಂಬೆಯಾಟವನ್ನು ಪೌರಾಣಿಕ ,ಸಾಮಾಜಿಕ,ಕ್ರೀಡೆ , ಯೋಗದಿಂದ ಹಿಡಿದು ಜಿಮ್ನಾಸ್ಟಿಕ್ ನಂತಹ ಕ್ರಿಡೆಯನ್ನು ರಂಗದಲ್ಲಿ ಪ್ರಸ್ತುತ ಪಡಿಸುವಷ್ಟು ಪ್ರಾಬಲ್ಯ ಪಡೆಯುತ್ತಿದೆಯಾದರು ನಾಳೆ ಅದನ್ನು ಮುಂದುವರಿಸಿಕೊಂಡು ಹೋಗಲು ಅದರ ತರಬೇತಿ ನೀಡಬೇಕಿದೆ. ಸರ್ಕಾರ ಗೊಂಬೆಯಾಟವನ್ನು ಸಹ ಗುರುತಿಸಬೇಕಿದೆ. ಈ ಗೊಂಬೆಯಾಟದ ಕಲೆ ಉಳಿಸಿ ಬೆಳೆಸಲು ಸರ್ಕಾರದ ಸಹಾಯ ಅತ್ಯಗತ್ಯ ವಾಗಿದೆ .
ಬೆಳಿಗ್ಗೆ ಯಿಂದ ಮಧ್ಯಾಹ್ನದವರೆಗೂ ಗೊಂಬೆಯಾಟವನ್ನ ನೋಡುತ್ತ ಹಸಿವನ್ನೇ ಮುಂದೂಡಿದ ನಮಗೆ ರುಚಿ ರುಚಿಯಾದ ಊಟದ ವ್ಯವಸ್ಥೆ ಜೊತೆ ಮಧ್ಯಾಹ್ನದ ವೇದಿಕೆ ಪ್ರತಿಭೆಯನ್ನು ಪ್ರಸ್ತುತ ಪಡಿಸಬಯಸುವವರಿಗೆ ಬಿಟ್ಟು ಕೊಟ್ಟದ್ದು ನಮ್ಮ ಕಾಲೇಜಿನಲ್ಲಿ ಪ್ರತಿಭೆಗಳಿಗೇನು ಕಡಿಮೆ ಇಲ್ಲ ಎಂಬ ಕೊಂಚ ಗರ್ವವನ್ನ ಸಹ ನನ್ನ ತಲೆ ಮೇಲೆ ಹೋರಿಸಿತಿರಬಹುದು. ಜೊತೆಗೆ ಆ ಪುಟ್ಟ ಬಾಲಕಿಯ ನಿಲ್ಲದ ನೃತ್ಯ ಪ್ರದರ್ಶನದ ಜೊತೆ ಇವತ್ತಿನ ದಿನ ಕೇವಲ ಮನೋರಂಜನೆಯಷ್ಟೆ ಆಗದೇ ನಮ್ಮೂರ ಕಲೆಯ ಮೇಲಿನ ಜ್ಞಾನವನ್ನ ಹೆಚ್ಚಿಸಿದ್ದಂತು ನಿಜ..
ದೇವಿಪ್ರಸಾದ ಶೆಟ್ಟಿ ಪ್ರಥಮ ಬಿ ಸಿ ಎ ಡಾ. ಬಿ ಬಿ ಹೆಗ್ಡೆ ಕಾಲೇಜು ಕುಂದಾಪುರ