ಹೆಮ್ಮಾಡಿ(ಜೂ,7): ಅನಾರೋಗ್ಯದ ನಡುವೆಯೂ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ವಿಶೇಷ ಸಾಧನೆಗೈದ ಕುಂದಾಪುರ ತಾಲ್ಲೂಕಿನ ಬಗ್ವಾಡಿ ಗ್ರಾಮದ ಬಗ್ವಾಡಿ ನಿವಾಸಿ ರಾಜು ಪೂಜಾರಿ ಮತ್ತು ಸುಜಾತಾ ಆರ್. ಪೂಜಾರಿ ದಂಪತಿಗಳ ಪುತ್ರಿ ಶ್ರಾವ್ಯಾ ಕರಳು ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದು, ಇಕೆಯ ವೈದ್ಯಕೀಯ ಚಿಕಿತ್ಸಾ ವೆಚ್ಚ ನೀಡಲು ಉದ್ಯಮಿ ಡಾ. ಗೋವಿಂದ ಬಾಬು ಪೂಜಾರಿ ಮಂದೆ ಬಂದಿದ್ದಾರೆ.
ಬಗ್ವಾಡಿ ಸಿಂಗನಕೊಡ್ಲುವಿನಲ್ಲಿರುವ ಶ್ರಾವ್ಯಳ ಮನೆಗೆ ಖುದ್ದಾಗಿ ಡಾ.ಗೋವಿಂದ ಬಾಬು ಪೂಜಾರಿಯವರಯ ಭೇಟಿ ನೀಡಿ ನೆರವಿನ ಜೊತೆಗೆ ಆತ್ಮ ಸ್ಥೈರ್ಯ ತುಂಬಿದ್ದಾರೆ. ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮೂಲಕ ಈಗಾಗಲೇ ಹಲವಾರು ಅಶಕ್ತ ಕುಟುಂಬಗಳಿಗೆ ಜಾತಿ,ಮತ ,ಪಂಥ ಲೆಕ್ಕಿಸದೇ ಮಾನವೀಯ ನೆಲೆಯಲ್ಲಿ ಸಮಾಜ ಸೇವೆ ಮಾಡುತ್ತಿರುವ ಡಾ. ಗೋವಿಂದ ಬಾಬು ಪೂಜಾರಿಯವರು ಶ್ರಾವ್ಯಳ ಒಂದು ವರ್ಷದ ಚಿಕಿತ್ಸೆ ವೆಚ್ಚ ಭರಿಸುವ ಜೊತೆಗೆ ವೈದ್ಯರು ಶಿಪಾರಸ್ಸು ಮಾಡಿದ ಚಿಕಿತ್ಸೆಗೆ ಸಹಕಾರಿಯಾಗುವ 75 ಸಾವಿರ ರೂ. ಮೌಲ್ಯದ ಚುಚ್ಚುಮದ್ದನ್ನು ನೀಡುವ ಭರವಸೆಯನ್ನು ಸಹ ನೀಡಿರುತ್ತಾರೆ.
ಈ ಸಂಧರ್ಭದಲ್ಲಿ ಪ್ರಸಾದ ಬೈಂದೂರು, ರಾಘವೇಂದ್ರ ನೆಂಪು, ಪ್ರದೀಪ ಪೂಜಾರಿ ಮುಳ್ಳಿಕಟ್ಟೆ, ನರಸಿಂಹ ಬಿ. ನಾಯಕ್ ಉಪುಂದ, ಲೋಕೇಶ್ ಮುಂತಾದವರು ಉಪಸ್ಥಿತರಿದ್ದರು.