ಕುಂದಾಪುರ:(ಜೂ,7): ಅನಾರೋಗ್ಯದ ನಡುವೆಯೂ ಆಸ್ಪತ್ರೆಯಲ್ಲಿ ಮಲಗಿಕೊಂಡೆ ಎಸ್ಎಸ್ ಎಲ್ ಸಿ ಪರೀಕ್ಷೆ ಬರೆದು 580 ಅಂಕ ಪಡೆದ ಶ್ರಾವ್ಯಾಳ ಭವಿಷ್ಯದ ಶಿಕ್ಷಣವನ್ನು ಗಮನಿಸಿದ ಬೈಂದೂರು ಶಾಸಕರು ಹಾಗೂ ಕುಂದಾಪುರ ಎಜುಕೇಶನ್ ಸೊಸೈಟಿ (ರಿ) ಇದರ ಅಧ್ಯಕ್ಷರಾದ ಶ್ರೀ ಬಿ. ಎಂ. ಸುಕುಮಾರ ಶೆಟ್ಟಿಯವರು ಶ್ರಾವ್ಯಗಳ ಪಿ.ಯು.ಸಿ ಶಿಕ್ಷಣಕ್ಕೆ ಉಚಿತ ಅವಕಾಶ ಮಾಡಿಕೊಟ್ಟಿದ್ದಾರೆ.

ಬಗ್ವಾಡಿ ನಿವಾಸಿ ರಾಜು ಪೂಜಾರಿ ಮತ್ತು ಸುಜಾತಾ ಆರ್. ಪೂಜಾರಿ ದಂಪತಿಗಳ ಪುತ್ರಿ ಶ್ರಾವ್ಯಾ ಕರಳು ಸಂಬಂಧಿ ಸಮಸ್ಯೆಗೊಳಗಾಗಿದ್ದು ಅನಾರೋಗ್ಯದ ನಡುವೆಯೂ ಪಿ ಯು ಕಲಿಕೆಗೆ ಆಸಕ್ತಿ ವಹಿಸಿದ್ದಳು. ಇದನ್ನು ಗಮನಿಸಿದ ಶಾಸಕರು ತಮ್ಮ ಅಧ್ಯಕ್ಷತೆಯ ಕುಂದಾಪುರದ ಆರ್. ಎನ್. ಶೆಟ್ಟಿ ಪಿಯು ಕಾಲೇಜಿನಲ್ಲಿ ಈಕೆಗೆ ಉಚಿತ ಪ್ರವೇಶಾತಿ ಕಲ್ಪಿಸಿದ್ದಾರೆ. ಎರಡು ವರ್ಷಗಳ ಪಿ ಯು ಶಿಕ್ಷಣಕ್ಕೆ ಆಕೆಯಿಂದ ಯಾವುದೇ ಫೀಸ್ ಪಡೆಯದಿರಲು ತಿಳಿಸಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ್ ಶೆಟ್ಟಿ ತಿಳಿಸಿರುತ್ತಾರೆ.











