ಶಾಸಕರಾದ ಬಿ. ಎಮ್. ಸುಕುಮಾರ ಶೆಟ್ಟಿ ನೇತೃತ್ವದ ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್. ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಜೂ ,18 ರಂದು ಎಸ್. ಎಸ್. ಎಲ್. ಸಿ ಮಕ್ಕಳ ಶಿಕ್ಷಕ ಪೋಷಕ ಸಭೆಯನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಹಾಗೂ ಉಪಪ್ರಾಂಶುಪಾಲರಾದ ಶ್ರೀಮತಿ ಶುಭಾ ಕೆ. ಎನ್. ಪೋಷಕರಿಗೆ ವಾರ್ಷಿಕ ಕ್ರಿಯಾ ಯೋಜನೆಯ ಬಗ್ಗೆ ಸವಿವರ ಮಾಹಿತಿಯನ್ನು ಒದಗಿಸಿದರು. ತರಗತಿ ಶಿಕ್ಷಕರಾದ ಸಂತೋಷ ಶೆಟ್ಟಿಯವರು ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ವಿದ್ಯೆ ಎಷ್ಟು ಮುಖ್ಯವೋ ಬುದ್ಧಿನೂ ಅಷ್ಟೇ ಮುಖ್ಯವಾಗಿರುತ್ತದೆ. ವಿದ್ಯೆಯನ್ನು ಗುರುಗಳಿಂದ ಕಲಿತರೆ ಬುದ್ಧಿ ತಿಳಿಸುವ ಜವಾಬ್ದಾರಿ ಪೋಷಕರದ್ದಾಗಿರುತ್ತೆ. ಯಾವುದೇ ಒತ್ತಡ ಹೇರದೆ ಮಕ್ಕಳ ಕಲಿಕೆಗೆ ಪೋಷಕರು ಪೂರಕ ವಾತಾವರಣ ಕಲ್ಪಿಸಬೇಕು ಎಂದು ತಿಳಿಸಿದರು.
ಪ್ರಾಂಶುಪಾಲರು ಹಾಗೂ ಸಭೆಯ ಅಧ್ಯಕ್ಷರೂ ಆದ ಶ್ರೀಮತಿ ಚಿಂತನಾ ರಾಜೇಶ್ರವರು ಕೋವಿಡ್ ನಂತರ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಸಹವಾಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಿಲುಕಿ ನಲುಗಿ ಹೋಗುತ್ತಿದ್ದಾರೆ. ಅವರನ್ನು ಸಮರ್ಪಕವಾದ ದಾರಿಯತ್ತ ಕೊಂಡೊಯ್ಯುವಲ್ಲಿ ಶಿಕ್ಷಕರ ಜೊತೆ ಪೋಷಕರು ಮಹತ್ವವಾದ ಪಾತ್ರವನ್ನು ನಿರ್ವಹಿಸಬೇಕು. ಅವರಿಗೆ ಭವಿಷ್ಯದ ಕುರಿತು ನೈತಿಕ ಮೌಲ್ಯ ತಿಳಿಸುವುದರೊಂದಿಗೆ ವಿದ್ಯೆಯ ಮೂಲಕ ತಮ್ಮ ಮಕ್ಕಳನ್ನು ಸುಸಂಸ್ಕೃತ ಸಜ್ಜನ ವ್ಯಕ್ತಿಯಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರಷ್ಟೆ ಪೋಷಕರಿಗೂ ಇದೆ ಎಂಬುವುದಾಗಿ ತಿಳಿಸಿದರು.
ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ಜಗದೀಶ್ ಆಚಾರ್ ಸಾಸ್ತಾನ, ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಲತಾ ಜಿ. ಭಟ್ ಉಪಸ್ಥಿತರಿದ್ದರು. ಶಿಕ್ಷಕರಾದ ಕೆ. ಪರಮೇಶ್ವರ ಉಡುಪ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.