ಉಡುಪಿ(ಆ,12): ಭಾರತೀಯ ಲೆಕ್ಕ ಪರಿಶೋಧನಾ ಸಂಸ್ಥೆ ನಡೆಸುವ ಸಿ.ಎ (C.A) ಫೌಂಡೇಶನ್ ಅರ್ಹತಾ ಪರೀಕ್ಷೆಯಲ್ಲಿ ಕಾರ್ಕಳ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಅಶ್ವಿತಾ, ಅಮರ್ ಎ ಎಂ ಹಾಗೂ ಅಭಿಷೇಕ್ ಲಕ್ಷ್ಮಣ್ ನಾಯ್ಕ್ ಇವರು ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಸಂಸ್ಥೆಯ ಪ್ರಥಮ ವರ್ಷದ ಸಿ. ಎ ಫೌಂಡೇಶನ್ ಫಲಿತಾಂಶದಲ್ಲಿಯೇ ಅರ್ಹತೆ ಪಡೆದಿರುವುದು ಪ್ರಶಂಸನೀಯ. ಮುಂದಿನ ಸಿ.ಎ ಮತ್ತು ಸಿ.ಎಸ್.ಇ.ಇ.ಟಿ ಪರೀಕ್ಷೆಯನ್ನು ಗುರಿಯಾಗಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಾದ ಅಶ್ವಿತಾ, ಅಮರ್ ಎ ಎಂ ಹಾಗೂ ಅಭಿಷೇಕ್ ಲಕ್ಷ್ಮಣ್ ನಾಯ್ಕ್ ಇವರನ್ನು ಸಂಸ್ಥೆಯ ಪ್ರಾಂಶುಪಾಲರು, CA ಫೌಂಡೇಶನ್ ಸಂಯೋಜಕರಾದ ರಾಘವೇಂದ್ರ ಬಿ ರಾವ್, ಕ್ರಿಯೇಟಿವ್ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಬೋಧಕ ಮತ್ತು ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.