ಗಂಗೊಳ್ಳಿ( ಸೆ.18): ಇಂಜಿನಿಯರ್ಸ್ ಡೇ ಪ್ರಯುಕ್ತ ಹಕ್ಲಾಡಿಯ ಚೆನ್ನಕೇಶವ ಲಯನ್ಸ್ ಕ್ಲಬ್ ಹಾಗೂ ರೋಟರಿ ಕ್ಲಬ್ ಗಂಗೊಳ್ಳಿ ಜಂಟಿ ಸಭೆಯನ್ನು ಇತ್ತೀಚೆಗೆ ಆಯೋಜಿಸಲಾಯಿತು . ಕಾರ್ಯಕ್ರಮದಲ್ಲಿ ಇಂಜಿನಿಯರ್ ಲಯನ್ಸ್ ಸತೀಶ್ ಶೆಟ್ಟಿ ಇವರಿಗೆ ಗಂಗೊಳ್ಳಿ ರೋಟರಿ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.

ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾದ ನಾಗೇಶ್ ಪೂಜಾರಿ ಹಾಗೂ ರೋಟರಿ ಕ್ಲಬ್ ನ ಅಧ್ಯಕ್ಷರಾದ ಸುಗುಣ ಆರ್ ಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಲಯನ್ ಕಿಶೋರ್ ಕುಮಾರ್ ಶೆಟ್ಟಿ ಹಾಗೂ ರೋ ರಾಮನಾಥ್ ನಾಯಕ್ ಲಯನ್ ಸಂಸ್ಥೆ ಹಾಗೂ ರೋಟರಿ ಸಂಸ್ಥೆ ನಡೆದು ಬಂದ ದಾರಿಯ ಕುರಿತು ಮಾತನಾಡಿದರು.

ಇಂಜಿನಿಯರ್ಸ್ ಡೇಯ ಮಹತ್ವದ ಕುರಿತು ನಾರಾಯಣ ನಾಯಕ್ ತನ್ನ ಅನುಭವವನ್ನು ಹಂಚಿಕೊಂಡರು. ಸನ್ಮಾನಿತರ ಪತ್ರವನ್ನು ರೊ ಪ್ರದೀಪ್ ಕುಮಾರ್ ವಾಚಿಸಿದರು.. ಲಯನ್. ಸಂಜೀವ ಬಿಲ್ಲವರವರು ವಂದಿಸಿದರು. ಲಯನ್ಸ್ ಕ್ಲಬ್ಬಿನ ಕಾರ್ಯದರ್ಶಿಯಾಗಿರುವ ಚಂದ್ರಶೇಖರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಎರಡು ಸಂಸ್ಥೆಯ ಪದಾಧಿಕಾರಿಗಳು ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.











