ಉಚ್ಚಿಲ(ಸೆ,21): ಕನ್ನಡ ಕರಾವಳಿಯ ಪ್ರಸಿದ್ಧ ಮಹಾಲಕ್ಷ್ಮೀ ದೇವಿಯ ಕ್ಷೇತ್ರವಾದ ಉಚ್ಚಿಲ ಮಹಾ ಲಕ್ಷ್ಮೀ ದೇವಸ್ಥಾನವು ಇತ್ತೀಚೆಗೆ ಪುನರ್ ಪ್ರತಿಷ್ಠೆ ,ಬ್ರಹ್ಮಕಲಶೋತ್ಸವ ಹಾಗೂ ಪುಣ್ಯೋತ್ಸವ ವನ್ನು ಕೈಗೊಂಡು ಕರಾವಳಿಯ ಧಾರ್ಮಿಕ ಇತಿಹಾಸದಲ್ಲಿ ತನ್ನದೇ ಛಾಪನ್ನು ಮೂಡಿಸಿ ಸಹಸ್ರಾರು ಭಕ್ತರನ್ನು ತನ್ನಡೆಗೆ ಆಕರ್ಷಿಸಿಕೊಂಡು ಕರ್ನಾಟಕದ ಪ್ರಸಿದ್ಧ ಹಾಗೂ ಪುಣ್ಯಕ್ಷೇತ್ರವಾಗಿ ಗುರುತಿಸಿಕೊಂಡಿದೆ.ದೇವಿಯ ಸನ್ನಿದಿಯಲ್ಲಿ ದಿನಂಪ್ರತಿ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿದ್ದು ನಂಬಿ ಬಂದ ಭಕ್ತರಿಗೆ ತಾಯಿ ಆಭಯ ನೀಡುತ್ತಿದ್ದಾಳೆ.
ಭಕ್ತರು ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಆಶಯದ ಜೊತೆಗೆ ನಾಡೋಜ ಡಾ. ಜಿ.ಶಂಕರ್ ರವರ ನಾಯಕತ್ವದೊಂದಿಗೆ ಉಚ್ಚಿಲ ಕ್ಷೇತ್ರವು ಇದೇ ಮೊದಲ ಬಾರಿಗೆ ನವರಾತ್ರಿ ದಸರಾ ಉತ್ಸವಕ್ಕೂ ಸಿದ್ದಗೊಳ್ಳುತ್ತಿದ್ದು, ಇದೇ 26/08/20202 ರಿಂದ 05/10/2022 ರಂದು ಅದ್ಧೂರಿ ದಸರಾ ವೈಭವ ನಡೆಯಲಿದೆ.
ಮೊದಲ ಬಾರಿಗೆ ನಡೆಯಲಿರುವ ಉಚ್ಚಿಲ ದಸರಾ 10 ದಿನಗಳ ಕಾಲ ನಡೆಯಲಿದ್ದು , ಸೆ.26 ರಂದು ನವದುರ್ಗೆಯರು ಹಾಗೂ ಶಾರದಾ ದೇವಿಯ ಪ್ರತಿಪ್ಠಾಪನಾ ಕಾರ್ಯ ನಡೆಯಲಿದೆ. ದಸರಾ ಪ್ರಯುಕ್ತ ಪ್ರತಿ ದಿನ ನಿತ್ಯ ಚಂಡಿಕಾಯಾಗ, ಮಧ್ಯಾಹ್ನ ಅನ್ನ ಸಂತರ್ಪಣೆ ಹಾಗೂ ಭಜನಾ ಕಾರ್ಯಕ್ರಮ , ಸಂಜೆ ಸಾವಿರ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ಪ್ರಸಾದ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಭರತನಾಟ್ಯ, ಜಾನಪದ ನ್ರತ್ಯ ಹಾಗೂ ವಿವಿಧ ನ್ರತ್ಯ ಕಾರ್ಯಕ್ರಮ ನಡೆಯಲಿದೆ.
ಅ.05 ನೇ ತಾರೀಖಿನಂದು ಭವ್ಯವಾದ ವಿಸರ್ಜನಾ ಮೆರವಣಿಗೆ ನಡೆಯಲಿದ್ದು ,ಈ ಹಿನ್ನೆಲೆಯಲ್ಲಿ 100 ಕ್ಕೂ ಅಧಿಕ ವಿಶಿಷ್ಠವಾದ ಟ್ಯಾಬ್ಲೋಗಳು,ಹುಲಿವೇಷ, ಭಜನಾ ತಂಡಗಳು,ವಿವಿಧ ವೇಷಭೂಷಣಗಳು, ಹಾಗೂ ಭವ್ಯವಾದ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದ್ದು ಭಕ್ತರು ಸಾವಿರಾರು ಸಂಖ್ಯೆಯಲ್ಲಿ ದಸರಾ ಉತ್ಸವಕ್ಕೆ ಆಗಮಿಸಿ ದೇವರ ಕ್ರಪೆಗೆ ಪಾತ್ರರಾಗಬೇಕೆಂದು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ (ರಿ,), ಉಚ್ಚಿಲ ಹಾಗೂ ದೇವಳದ ಆಡಳಿತ ಮಂಡಳಿ ವಿನಂತಿಸಿಕೊಂಡಿದೆ.
ವರದಿ : ಪ್ರವೀಣ್ ಮೊಗವೀರ ಗಂಗೊಳ್ಳಿ