ಕಲ್ಯಾಣಪುರ (ನ,9): ಕ್ರಿಯೇಟಿವ್ ಎಜುಕೇಶನ್ ಫೌಂಡೇಶನ್ ಕಾರ್ಕಳ ಪ್ರವರ್ತಿತ ಕಲ್ಯಾಣಪುರದ ತ್ರಿಶಾ ಪಿಯು ಕಾಲೇಜಿನಲ್ಲಿ ನ.08 ರಂದು ಕಾನೂನು ಕಾನೂನಿನ ಅರಿವು ಹಾಗೂ ನೆರವಿನ ಮೂಲಕ ನಾಗರೀಕರ ಸಬಲೀಕರಣ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಂಪನ್ಮೂಲ ವ್ಯಕ್ತಿ ಆಗಿ ಆಗಮಿಸಿದ ಮಿಲಾಗ್ರಿಸ್ ಮಹಾವಿದ್ಯಾಲಯದ ಹಿರಿಯ ಉಪನ್ಯಾಸಕರಾದ ಶ್ರೀ ಜಯರಾಮ್ ಶೆಟ್ಟಿಗಾರ್ ಮಾತನಾಡಿ ಕಾನೂನಿನ ತಿಳುವಳಿಕೆ ಎಲ್ಲರಿಗೂ ಅನಿವಾರ್ಯ ಅದರಂತೆಯೇ ಸಾಮಾನ್ಯ ಜ್ಞಾನವು ಬಹಳ ಮುಖ್ಯ ಅರಿವಿನ ಕೊರತೆ ಯಾವ ಪರಿಹಾರಕ್ಕೂ ದಾರಿಯಲ್ಲ ತಿಳಿದು ಮುನ್ನಡೆಯಬೇಕು. ಮಾದಕ ದ್ರವ್ಯ ಸೇವನೆಯೂ ಮಹಾಮಾರಿಯನ್ನು ಆಹ್ವಾನಿಸಿಕೊಂಡಂತೆ ಅದರಿಂದ ಸಾಕಷ್ಟು ದೂರವಿರಬೇಕು ಎಂದು ಅನೇಕ ಉದಾಹರಣೆಗಳ ಮೂಲಕ ತಿಳಿಯಪಡಿಸಿದರು.
ಕಾಲೇಜಿನ ಕಾರ್ಯ ಚಟುವಟಿಕೆಗಳು ಶೈಕ್ಷಣಿಕ ಪ್ರಗತಿಯ ಜೊತೆ ಜೊತೆಗೆ ಸಾಹಿತ್ಯ ,ಸಂಸ್ಕೃತಿಕ , ಕ್ರೀಡೆ ಎಲ್ಲಾ ವಿಷಯಗಳೊಂದಿಗೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಕಾಲೇಜು ಸದಾ ಬದ್ಧವಾಗಿದೆ ಎಂದು ಪ್ರಾಂಶುಪಾಲರಾದ ಮಾನ್ಯ ಶ್ರೀ ಸ್ಟ್ಯಾನಿ ಲೋಬೋ ರವರು ಅಧ್ಯಕ್ಷ ಸ್ಥಾನವಹಿಸಿ ಮಾತನಾಡಿದರು.
ವಿದ್ವಾನ ಸುಧಾಕರ್ ಐಡಿ ರವರು ಕಾರ್ಯಕ್ರಮ ನಿರ್ವಹಿಸಿ ಧನ್ಯವಾದಗೈದರು . ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.