ಗಂಗೊಳ್ಳಿ( ಅ,22): ವ್ಯಕ್ತಿತ್ವದ ಬೆಳವಣಿಗೆ, ನಾಯಕತ್ವ ಗುಣ ಕಲಿಕೆ, ಸಮಾಜದ ಆಗುಹೋಗುಗಳ ಬಗ್ಗೆ ಸ್ಪಂದಿಸುವ ಗುಣ, ಪರಿಸರ ಸಂರಕ್ಷಣೆ ಮುಂತಾದ ಸೃಜನಾತ್ಮಕ ಹವ್ಯಾಸಗಳನ್ನು ವಿದ್ಯಾರ್ಥಿದೆಸೆಯಲ್ಲಿಯೇ ಬೆಳೆಸುವ ಉದ್ದೇಶವನ್ನು ರೋಟರಾಕ್ಟ್ ಕ್ಲಬ್ ಹೊಂದಿದೆ ಎಂದು R I district 3182 ಜಿಲ್ಲಾ ಗವರ್ನರ್ ಎಂ ರಾಮಚಂದ್ರಮೂರ್ತಿ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ರೋಟರಿ ಕ್ಲಬ್ ಆಶ್ರಯದಲ್ಲಿ ಆರಂಭಗೊಂಡ ರೋಟರ್ಯಾಕ್ಟ್ ಕ್ಲಬ್ ನ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ರೋಟರಾಕ್ಟ್ ಕ್ಲಬ್ […]
Day: October 22, 2021
ಯುವ ಬ್ರಿಗೇಡ್ ಕುಂದಾಪುರ: ಅ,23ರಂದು ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ನರಮೇಧದ ವಿರುದ್ಧ ಪಂಜಿನ ಮೆರವಣಿಗೆ
ಕುಂದಾಪುರ (ಅ,22): ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ನರಮೇಧದ ವಿರುದ್ಧ ರಾಜ್ಯಾದ್ಯಂತ ಶಾಂತಿಯುತ ಪ್ರತಿಭಟನೆ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಅಕ್ಟೋಬರ್ 23,ರ ಶನಿವಾರ ಸಂಜೆ 7:00 ಗಂಟೆಯಿಂದ ಕುಂದಾಪುರದ ಶಾಸ್ತ್ರಿ ಸರ್ಕಲ್ನಿಂದ ಪ್ರತಿಭಟನಾ ಮೆರವಣಿಗೆ ಚಾಲನೆ ಪಡೆದು ಕುಂದಾಪುರ ಬಸ್ ನಿಲ್ದಾಣ ಪುನಃ ಶಾಸ್ತ್ರಿ ಸರ್ಕಲ್ ನಲ್ಲಿ ಸಮಾಪ್ತಿಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಶಿರ್ವ: ಡಂಪಿಂಗ್ ಯಾರ್ಡ್ ಆಗುತ್ತಿದೆ ಶಾಂತಿಗುಡ್ಡೆ
ಶಿರ್ವ(ಅ,21): ಕಾಪು-ಶಿರ್ವ ರಸ್ತೆಯ ಶಾಂತಿಗುಡ್ಡೆ ಎಂಬಲ್ಲಿ ಸಾರ್ವಜನಿಕರು ಘನ ಮತ್ತು ದ್ರವ ತ್ಯಾಜ್ಯಗಳು ಹಾಗು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಮನ ಬಂದಂತೆ ರಸ್ತೆ ಬದಿಗೆ ಎಸೆಯುವುದರಿಂದ ಪರಿಸರದ ದನಕರುಗಳಿಗೆ ಮತ್ತು ಜನರಿಗೆ ತೊಂದರೆ ಉಂಟಾಗುವುದರೊಂದಿಗೆ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಗಳಿವೆ. ಸುತ್ತ-ಮುತ್ತ ದಿನನಿತ್ಯ ಒಡಾಡುವ ನಾಗರಿಕರಿಗೆ ಕೆಟ್ಟ ವಾಸನೆಯಿಂದಾಗಿ ಮೂಗು ಮುಚ್ಚಿಕೊಂಡೇ ಹೋಗ ಬೇಕಾದ ಪರಿಸ್ಥಿತಿ ಬಂದೊದಗಿದೆ. ಸುತ್ತಲ ಫಲಪತ್ತೆಯ ಭೂಮಿ ತ್ಯಾಜ ಮತ್ತು ಪ್ಲಾಸ್ಟಿಕ್ ನಿಂದ ತುಂಬಿದೆ. ಇದಕ್ಕೆ ಸಂಬಂದ […]
ಬಡ ಕುಟುಂಬಕ್ಕೆ ಮನೆ ಕಟ್ಟಿಸಿ ಕೊಡುವ ಸಂಕಲ್ಪ:ಸಮಾಜ ಸೇವಕಿ ಶ್ರೀ ಮತಿ ಗೀತಾಂಜಲಿ ಸುವರ್ಣ
ಉಡುಪಿ(ಅ,21) : ಉಷಾ ಪೂಜಾರಿಯವರ ಹಳೆಯದಾದ ಮನೆ ಮಳೆ ಮತ್ತು ಗಾಳಿಗೆ ಮೈಯೊಡ್ಡಿ ಸಂಪೂರ್ಣ ಕುಸಿದಿದ್ದು ,ಇದರ ಮಾಹಿತಿ ಪಡೆದ ಸಮಾಜ ಸೇವಕರು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಆಗಿರುವ ಶ್ರೀಮತಿ ಗೀತಾಂಜಲಿ ಸುವರ್ಣ ಉಷಾರವರ ಮನೆಗೆ ಭೇಟಿಕೊಟ್ಟು ಇವರ ಕಷ್ಟವನ್ನು ಆಲಿಸಿ ಈ ಬಡ ಕುಟುಂಬಕ್ಕೆ ಆಸರೆಯಾಗಲಿ ಎಂದು ಸ್ನೇಹ ಚಾರಿಟೇಬಲ್ ಟ್ರಸ್ಟ್ ಇದರ ಮುಖ್ಯಸ್ಥರಾದ ಶ್ರೀ ಶಿವಾನಂದ್ ಕೋಟ್ಯಾನ್ ರವರ ಸಂಪೂರ್ಣ ಸಹಕಾರದೊಂದಿಗೆ ಶ್ರೀಮತಿ ಗೀತಾಂಜಲಿ ಸುವರ್ಣ […]