ಮೂಡುಬಿದಿರೆ(ಡಿ,06): ಇಲ್ಲಿನ ಶ್ರೀ ಧವಲಾ ಕಾಲೇಜಿನ ಕಲಾಸಂಘದ ಉದ್ಘಾಟನಾ ಕಾರ್ಯಕ್ರಮವು ನವೆಂಬರ್ 30 ರಂದು ಕಾಲೇಜಿನ ಸಭಾಂಗಣದಲ್ಲಿ ಜರುಗಿತು.
ಶ್ರೀ ಸುನಿಲ್ ಪಲ್ಲಮಜಲು , ಕನ್ನಡ ಪ್ರಾಧ್ಯಾಪಕರು, ವೈಬ್ರೆಂಟ್ ಪದವಿಪೂರ್ವ ಕಾಲೇಜು, ಕಲ್ಲಬೆಟ್ಟು, ಮೂಡುಬಿದಿರೆ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾನವಿಕ ಶಾಸ್ತ್ರಗಳ ಅಧ್ಯಯನಗಳು ಕಟ್ಟುವ ಸ್ವಾವಲಂಬಿ ಬದುಕು ಎಂಬ ವಿಷಯದ ಕುರಿತು ಹಲವಾರು ಉದಾಹರಣೆಗಳ ಸಹಿತ ವಿಸ್ತೃತವಾಗಿ ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಮಹಾವೀರ ಅಜ್ರಿಯವರು ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳಿಗೆ ಭವಿಷ್ಯ ಜೀವನ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು. ಪುಷ್ಪಾ, ಸುಭೀಕ್ಷಾ ದ್ವಿತೀಯ ಬಿ.ಎ. ಪ್ರಾರ್ಥಿಸಿದರು. ಕಲಾಸಂಘದ ಕಾರ್ಯದರ್ಶಿ ಮಾರ್ಕ್ ಕ್ರಿಸ್ಟೊ ಸಿಲ್ವಾ ತೃತೀಯ ಬಿ.ಎ. ಸ್ವಾಗತಿಸಿದರು. ಕಲಾಸಂಘದ ಸಂಯೋಜಕರಾದ ಡಾ.ರೂಪಾ ಅತಿಥಿ ಪರಿಚಯದೊಂದಿಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾಸಂಘದ ಜೊತೆ ಕಾರ್ಯದರ್ಶಿ ಯಕ್ಷಿತಾ ದ್ವಿತೀಯ ಬಿ.ಎ. ವಂದಿಸಿದರು. ಮೊನಿಕಾ ಟೆಲ್ಲಿಸ್ ತೃತೀಯ ಬಿ.ಎ. ನಿರೂಪಿಸಿದರು.