ಕುಂದಾಪುರ, (ಎ , 27) : ಜಾಗತೀಕರಣದ ಕಾಲಘಟ್ಟದಲ್ಲಿ ಇಂಗ್ಲೀಷ್ ಭಾಷೆ ಅತೀ ಮುಖ್ಯವಾಗಿದ್ದು, ಭಾಷಾ ಕೌಶಲ್ಯಗಳು ಸಂವಹನದ ಸಂದರ್ಭದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಭಾಷೆಯ ಬಳಕೆಯಿಂದ ಪ್ರಭುದ್ಧತೆ ಪಡೆದುಕೊಳ್ಳುತ್ತದೆ. ವಿಲಿಯಂ ಷೇಕ್ಸ್ಪಿಯರ್ ಜನನ ದಿನ ಹಾಗೂ ಮರಣ ದಿನವಾದ ಏಪ್ರಿಲ್ 23ರಂದು ಆಚರಿಸುವ ಈ ಇಂಗ್ಲೀಷ್ ದಿನಾಚರಣೆ ಆಂಗ್ಲ ಕವಿಯೊಬ್ಬರನ್ನು ಪರಿಚಯಿಸುವುದರೊಂದಿಗೆ ಇಂಗ್ಲೀಷ್ ಭಾಷೆಯ ಬಗೆಗೆ ವಿದ್ಯಾರ್ಥಿಗಳಿಗೆ ಆತ್ಮೀಯತೆ ಬೆಳೆಯುತ್ತದೆ ಎಂದು ಸರಕಾರಿ ಪದವಿ ಪೂರ್ವ ಕಾಲೇಜು, ನೆಂಪು ಇಲ್ಲಿನ […]
Author: KundaVahini Editor
ಮೂಡ್ಲಕಟ್ಟೆ ಐಎಂಜೆ ವಿದ್ಯಾಸಂಸ್ಥೆ: ಪದ್ಮಶ್ರೀ ಡಾ. ಕಿರಣ್ ಸೇತ್ರವರೊಂದಿಗೆ ಸಂವಾದ
ಮೂಡ್ಲಕಟ್ಟೆ( ಎ,24): ಇಲ್ಲಿನ ಐಎಂಜೆ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ದೆಹಲಿ ಐಐಟಿಯ ಪೂರ್ವ ಪ್ರಾಧ್ಯಾಪಕರಾದ ಹಾಗೂ ಸ್ಪಿಕ್ಮಕೆ ಸಂಸ್ಥೆಯು ಸ್ಥಾಪಕರಾದ ಪದ್ಮಶ್ರೀ ಡಾ. ಕಿರಣ್ ಸೇತ್ರವರೊಂದಿಗೆ ವಿದ್ಯಾರ್ಥಿಗಳು ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮನಸ್ಸನ್ನು ಬೇಕಾದಕಡೆ ಕೇಂದ್ರಿಕರಿಸುವುದು ಹೇಗೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ದಿಸೆಯಲ್ಲಿ ಯೋಗ ಹಾಗೂ ಶಾಸ್ತ್ರೀಯ ಸಂಗೀತದ ಮಹತ್ವವನ್ನು ಅವರು ಯಾವ ತರಬೇತಿ ಇಲ್ಲದೇ ಐಐಟಿಯಲ್ಲಿ ಪ್ರಥಮ ರ್ಯಾಂಕ್ ಪಡೆದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಯ ಉದಾಹರಣೆಯನ್ನು ನೀಡಿ […]
ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ ‘ವಿ-ಗ್ರೋ’ ಬ್ಯುಸಿನೆಸ್ ಡೇ : ಆಯ-ವ್ಯಯ ಪಟ್ಟಿ
ಕುಂದಾಪುರ, (ಏ, 24) : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗವು ಆಯೋಜಿಸಿರುವ ‘ವಿ-ಗ್ರೋ’ ಬ್ಯುಸಿನೆಸ್ ಡೇ ಮೂರು ಹಂತದಲ್ಲಿ ಆಯೋಜನೆಗೊಂಡು ಮೊದಲನೇ ಹಂತದಲ್ಲಿ ವ್ಯವಹಾರ ಯೋಜನೆಯ ಪ್ರಸ್ತುತಿ, ಎರಡನೇ ಹಂತದಲ್ಲಿ ತಾವೇ ತಯಾರಿಸಿದ ಉತ್ಪನ್ನಗಳ ಮಾರಾಟ ಹಾಗೂ ಮೂರನೇ ಹಂತದಲ್ಲಿ ಸಂಪೂರ್ಣ ಹಣಕಾಸಿನ ಆಯ-ವ್ಯಯ ಪಟ್ಟಿಗಳನ್ನು ಪ್ರಸ್ತುತಪಡಿಸುವ ಕಾರ್ಯಕ್ರಮ ನಡೆಯಿತು. ಬಿ.ಕಾಂ. ಪದವಿದರರಿಗೆ ನವ ಉದ್ಯಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ […]
ಗಂಗೊಳ್ಳಿ : ಸರಸ್ವತಿ ವಿದ್ಯಾಲಯಕ್ಕೆ ಶೇ.98.3 ಫಲಿತಾಂಶ
ಗಂಗೊಳ್ಳಿ(ಎ,24): 2022-23ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು ಶೇ. 98.3 ಫಲಿತಾಂಶ ದಾಖಲಿಸಿದ್ದು, ವಿಜ್ಞಾನ ವಿಭಾಗದಲ್ಲಿ ಶೇಕಡ 100 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಕುಳಿತ 117 ವಿದ್ಯಾರ್ಥಿಗಳಲ್ಲಿ 115 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದು, 45 ವಿದ್ಯಾರ್ಥಿಗಳು ವಿಶಿಷ್ಠ ದರ್ಜೆಯಲ್ಲಿ, 57 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 7 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಮತ್ತು 6 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ […]
ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ: ದ್ವಿತೀಯ ಪಿಯುಸಿ ಪರೀಕ್ಷೇಯಲ್ಲಿ ಉತ್ಕ್ರಷ್ಟ ಸಾಧನೆ
ಕುಂದಾಪುರ( ಎ,21): ಸರಕಾರಿ ಪದವಿ ಪೂರ್ವ ಕಾಲೇಜು, ಉಡುಪಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ ಸಂಸ್ಥೆಯಾಗಿದ್ದು,ಇತ್ತೀಚಿನ ವರ್ಷಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಹಿಂದುಳಿದ ಮತ್ತು ಬಡ ವಿದ್ಯಾರ್ಥಿಗಳಿಗೆ ಆಸರೆಯಾಗಿದೆ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಲ್ಲಿ ವಿವಿಧ ಸಂಯೋಜನೆಗಳಿದ್ದು ಪ್ರತಿ ವರ್ಷವು ಪ್ರತಿಶತ 90 % ಕ್ಕಿಂತ ಹೆಚ್ಚು ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಬರುತ್ತಿದೆ. ಇತ್ತೀಚೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 739 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತು […]
ಎಕ್ಸಲೆಂಟ್ ಪಿಯು ಕಾಲೇಜು ಕುಂದಾಪುರ ಪಿ.ಯು.ಸಿ. ಫಲಿತಾಂಶ : 5 ರಾಜ್ಯ ಮಟ್ಟದ ರ್ಯಾಂಕ್ ಸಾಧನೆ
ಕುಂದಾಪುರ( ಎ,21): ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವೀತಿಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ನಡೆಸಿದ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಕುಂದಾಪುರ ಎಕ್ಸಲೆಂಟ್ ಪಿ.ಯು ಕಾಲೇಜಿನ 5 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ರ್ಯಾಂಕ್ ಪಡೆದಿದ್ದು ಸಂಸ್ಥೆಗೆ ಹೆಮ್ಮೆ ತಂದಿರುತ್ತಾರೆ. ಸಂಸ್ಥೆಯ ವಿದ್ಯಾರ್ಥಿನಿ ವಾಸವಿ ಬೋಳಾರ್ ವಿಜ್ಞಾನ ವಿಭಾಗದಲ್ಲಿ 592 ಅಂಕ ಪಡೆದು ರಾಜ್ಯಕ್ಕೆ 5ನೇ ರ್ಯಾಂಕ್ ಹಾಗೂ ಉಡುಪಿ ಜಿಲ್ಲೆಗೆ 3ನೇ ರ್ಯಾಂಕ್ ಪಡೆದಿರುತ್ತಾಳೆ. ಪ್ರಸ್ತುತ ಎಕ್ಸಲೆಂಟ್ ಪಿ.ಯು ಕಾಲೇಜಿನಲ್ಲಿ ಪಿ.ಸಿ.ಎಮ್.ಸಿ […]
ದ್ವಿತೀಯ ಪಿಯುಸಿ ಫಲಿತಾಂಶ : ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿಗೆ ಶೇಕಡಾ 100 ಫಲಿತಾಂಶ
ಹೆಮ್ಮಾಡಿ( ಎ,21): ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜು ಹೆಮ್ಮಾಡಿ 2022-23ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡ 100 ಫಲಿತಾಂಶ ದಾಖಲಿಸಿದೆ. ಕಾಲೇಜಿನ ವಿಜ್ಞಾನ ವಿಭಾಗದ 116 ವಿದ್ಯಾರ್ಥಿಗಳಲ್ಲಿ 55 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 56 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ,ಹಾಗೂ 5 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ವಾಣಿಜ್ಯ ವಿಭಾಗದ 15 ವಿದ್ಯಾರ್ಥಿಗಳಲ್ಲಿ 4 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 11 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.ವಿಜ್ಞಾನ ವಿಭಾಗದ […]
ಕಾರ್ಕಳ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿಗೆ ಶೇ. 100 ಫಲಿತಾಂಶ- ಏಳು ರ್ಯಾಂಕ್
ಕಾರ್ಕಳ( ಎ ,21): 2022-23 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿಗೆ ಸತತ ಎರಡನೇ ವರ್ಷವೂ ಶೇ. 100 ಫಲಿತಾಂಶ ದೊರಕಿದೆ. ಪರೀಕ್ಷೆಗೆ ಕುಳಿತ ಎಲ್ಲಾ 380 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲೇ ತೇರ್ಗಡೆ ಹೊಂದುವ ಮೂಲಕ ವಿಶೇಷ ಸಾಧನೆಗೈದಿದ್ದಾರೆ. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಪ್ರಸ್ತುತ್ ಪಟೇಲ್ 592 ಅಂಕಗಳೊಂದಿಗೆ ರಾಜ್ಯಕ್ಕೆ 5ನೇ ರ್ಯಾಂಕ್ , ಸುಮಂತ್ ಶೆಟ್ಟಿ 591 […]
ಡಾ|ಬಿ. ಬಿ ಹೆಗ್ಡೆ ಕಾಲೇಜು: ಬಿಬಿಎ ವಿದ್ಯಾರ್ಥಿಗಳಿಂದ ಕೈಗಾರಿಕಾ ಪರಿವೀಕ್ಷಣೆ
ಕುಂದಾಪುರ (ಎ ,20): ಇಲ್ಲಿನ ಡಾ|ಬಿ. ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವ್ಯವಹಾರ ನಿರ್ವಹಣಾ ವಿಭಾಗದ ವಿದ್ಯಾರ್ಥಿಗಳು ಬ್ರಹ್ಮಾವರದ ಉಪ್ಪುರಿನ ಕೆ ಎಮ್ ಎಫ್ ನಂದಿನಿ ಹಾಲಿನ ಉತ್ಪನ್ನ ಘಟಕ ಹಾಗೂ ತೆಕಟ್ಟೆ ಯ ಹೆಬ್ಬಾರ್ ಕೋಕೋನಟ್ ಆಯಿಲ್ ಘಟಕಕ್ಕೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ವ್ಯವಹಾರ ನಿರ್ವಹಣಾ ವಿಭಾಗದ ಮುಖ್ಯಸ್ಥರಾದ ನಂದಾ ರೈ ಹಾಗೂ ಉಪನ್ಯಾಸಕ ರಜತ್ ಬoಗೇರ ಉಪಸ್ಥಿತರಿದ್ದರು .
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪದವಿ ಆಸೆ ಪೂರೈಸುವ ಆಶಯದಿಂದ ರೂಪು ತಳೆದ ಸಂಸ್ಥೆ ಡಾ। ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು
ಡಾ। ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ , ಉಡುಪಿ ಜಿಲ್ಲೆಯ ಪ್ರತಿಷ್ಠಿತ ಪದವಿ ಕಾಲೇಜುಗಳಲ್ಲಿ ವಿಶೇಷ ಸಾಲಿನಲ್ಲಿ ಗುರುತಿಸಿಕೊಂಡಿದೆ. ‘ಸಮಾಜದ ಕಟ್ಟಕಡೆಯ ಮಗು ವಿದ್ಯಾವಂತನಾಗಬೇಕು’ ಎಂಬುದು ಕಾಲೇಜಿನ ಅಧ್ಯಕ್ಷರು ಮತ್ತು ಬೈಂದೂರು ಶಾಸಕರಾದ ಶ್ರೀ.ಬಿ.ಎಂ. ಸುಕುಮಾರ ಶೆಟ್ಟಿಯವರ ಧ್ಯೇಯ. 130 ವಿದ್ಯಾರ್ಥಿಗಳೊಂದಿಗೆ ಹನ್ನೆರಡು ವರ್ಷಗಳ ಹಿಂದೆ ಆರಂಭಗೊಂಡ ಸಂಸ್ಥೆಯಲ್ಲಿ ಪ್ರಸ್ತುತ 1500 ಕಲಿಕಾರ್ಥಿಗಳಿದ್ದಾರೆ ಎಂಬುದು ಸಂಸ್ಥೆಯ ಸಾಧನೆಯ ಹಾದಿಯ ಹೆಗ್ಗುರುತು. ಯುಜಿಸಿ “ನ್ಯಾಕ್’ ಸಂಸ್ಥೆಯ “B++’ […]










