ಗಂಗೊಳ್ಳಿ(ಎ,24): 2022-23ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು ಶೇ. 98.3 ಫಲಿತಾಂಶ ದಾಖಲಿಸಿದ್ದು, ವಿಜ್ಞಾನ ವಿಭಾಗದಲ್ಲಿ ಶೇಕಡ 100 ಫಲಿತಾಂಶ ದಾಖಲಿಸಿದೆ.
ಪರೀಕ್ಷೆಗೆ ಕುಳಿತ 117 ವಿದ್ಯಾರ್ಥಿಗಳಲ್ಲಿ 115 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದು, 45 ವಿದ್ಯಾರ್ಥಿಗಳು ವಿಶಿಷ್ಠ ದರ್ಜೆಯಲ್ಲಿ, 57 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 7 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಮತ್ತು 6 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 589 ಅಂಕಗಳನ್ನು ಪಡೆದಿರುವ ಕೀರ್ತಿ ಭಟ್ ಕಾಲೇಜಿನ ಅಗ್ರ ಸ್ಥಾನಿಯಾಗಿ ಮೂಡಿ ಬಂದಿದ್ದಾಳೆ. ವಿಜ್ಞಾನ ವಿಭಾಗದಲ್ಲಿ ಮಾನ್ಯತಾ ವಿ. ಶೇಟ್ ಮತ್ತು ಪ್ರಿಯಾಂಕ 583 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಮಾನ್ಯತಾ ವಿ.ಶೇಟ್ (583), ಪ್ರಿಯಾಂಕ (583), ಶ್ರೇಯಾ ಎಂ.(570), ವರುಣ್ ಮೊಗವೀರ (566), ಅಜ್ಕಾ ಅನಮ್ (563), ಬಿ.ಸಾಹಿಲ್ (560), ವೈಷ್ಣವಿ ಕೆ. (558), ಶಮಿತಾ ಗಾಣಿಗ (557), ಅಗ್ನೀಶ್ ನಾಯಕ್ (555), ಕಿಶನ್ ಡಿ.ಪೂಜಾರಿ (551), ಭಾರ್ಗವ್ ಮಧ್ಯಸ್ಥ (551) ಉತ್ತಮ ಸಾಧನೆ ಮಾಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಕೀರ್ತಿ ಭಟ್ (589), ಅಮೀಕ್ಷಾ ಡಿ.ನಾಯ್ಕ (584), ಮನಸ್ವಿ (581), ಶಿಲ್ಪಾಪ್ರಿಯಾ (578), ದೀಕ್ಷಾ (570), ಶ್ರೀನಿಧಿ (569), ತ್ರಿಶಾ (569), ಶ್ರೀನಿಧಿ (568), ಅನ್ಸಿಟಾ (566), ಶ್ರೇಯಾ ಖಾರ್ವಿ (563), ಎರೋಲ್ (556), ಸಿಂಚನಾ (556), ಸಿಂಚನಾ (555), ಆಯಿಷಾ ರಮ್ಲಾ (554) ಉತ್ತಮ ಸಾಧನೆ ಮಾಡಿದ್ದಾರೆ.