ಕುಂದಾಪುರದ ಪ್ರಸಿದ್ಧ ಮೈಕ್ ಪ್ರಚಾರಕರಾದ ಸುರೇಂದ್ರ ಕಾಂಚನ್ ಸಂಗಮ್ ರವರನ್ನು ಸನ್ಮಾನಿಸಲಾಯಿತು. ಇವರು ಸತತ 35 ಬಾರಿ ರಕ್ತದಾನ ಮಾಡಿರುವುದು ಪ್ರಶಂಸನೀಯ.
Author: KundaVahini Editor
ಉಡುಪಿ : ಬಾಲಮಂದಿರ ಸಂಸ್ಥೆಯ ಮಕ್ಕಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ಬಾಲಕಿಯರ ಬಾಲಮಂದಿರದ ಮಕ್ಕಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ಫೆಬ್ರವರಿ 14 ರಂದು ನಡೆಯಿತು.
ವಿವಿಧ ಸಂಘಟನೆಗಳಿಂದ ರಕ್ತದಾನ ಶಿಬಿರ
ಹೆಲ್ಪಿಂಗ್ ಹ್ಯಾಂಡ್ಸ್ ಕುಂದಾಪುರ, ಆದರ್ಶ್ ಆಸ್ಫತ್ರೆ ಕುಂದಾಪುರ,ಅಭಯ ಹಸ್ತ ಹೆಲ್ಪ್ ಲೈನ್ ಉಡುಪಿ, ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ.) ಕುಂದಾಪುರ ಹಾಗೂ ಇಂಡಿಯನ್ ರೆಡ್ ಕ್ರಾಸ್ ಕುಂದಾಪುರ ಇವರ ಸಹಯೋಗದಲ್ಲಿ ಪುಲ್ವಾಮ ದಾಳಿಯಲ್ಲಿ ವೀರ ಮರಣ ಹೊಂದಿದ ವೀರ ಯೋಧರ ಸ್ಮರಣಾರ್ಥ ಫೆಬ್ರವರಿ 14ರಂದು ಆದರ್ಶ ಆಸ್ಫತ್ರೆ ಕುಂದಾಪುರದಲ್ಲಿ ಸ್ವಯಂ ಪ್ರೆರೀತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಫೆ. 19, 20 – ಶ್ರೀ ಬಗಳಾಂಬ ತಾಯಿ ದೇವಸ್ಥಾನ ಪ್ರತಿಷ್ಠಾ ವರ್ಧಂತಿ ಮಹೋತ್ಸವ
ಕುಂದಾಪುರ (ಫೆ. 15) : ಶ್ರೀ ಬಗಳಾಂಬ ತಾಯಿ ದೇವಸ್ಥಾನ ಚಿಕ್ಕನ್ ಸಾಲ್ ರಸ್ತೆ ಕುಂದಾಪುರ ಇದರ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಇದೇ ಫೆಬ್ರವರಿ 19 ಹಾಗೂ 20ರಂದು ನಡೆಯಲಿದೆ. ವಿದ್ವಾನ್ ಕೋಟ ಶ್ರೀಚಂದ್ರಶೇಖರ ಸೋಮಯಾಜಿ ಸೋಮಯಾಜಿ ಯವರ ನೇತೃತ್ವದಲ್ಲಿ ದಿನಾಂಕ 20 ರಂದು ಬ್ರಹ್ಮಕಲಶಾಭಿಷೇಕ, ಚಂಡಿಕಾಯಾಗ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ಶ್ರೀ […]
ಡಾ| ಬಿ. ಬಿ. ಹೆಗ್ಡೆ ಕಾಲೇಜು : ರಕ್ಷಕ – ಶಿಕ್ಷಕ ಸಭೆ
ಸಭೆಯ ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರು ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ಎಂ. ಸುಕುಮಾರ ಶೆಟ್ಟಿಯವರು ಮಾತನಾಡಿ, ಶಿಸ್ತುಬದ್ಧ ಶೈಕ್ಷಣಿಕ ವಾತಾವರಣದಿಂದ ಕೂಡಿರುವ ಕಾಲೇಜು ಅತ್ಯಂತ ಕಿರು ಅವಧಿಯಲ್ಲಿ ಮಂಗಳೂರು ವಿ.ವಿ. ವ್ಯಾಪ್ತಿಯಲ್ಲಿ ಗಮನಾರ್ಹ ಸಾಧನೆ ಮಾಡಿದೆ.
ವಿಶ್ವ ಸಾಗರ ಕ್ರಿಕೆಟರ್ಸ್ ಗಂಗೊಳ್ಳಿ – ಅಯೋಧ್ಯ ಟ್ರೋಫಿ- 2021
ಗಂಗೊಳ್ಳಿ (ಫೆ:15) : ಇಲ್ಲಿನ ವಿಶ್ವ ಸಾಗರ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ ವಲಯ ಮಟ್ಟದ 60 ಗಜಗಳ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಅಯೋಧ್ಯ ಟ್ರೋಫಿ-2021 ಸರಸ್ವತಿ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಫೆಬ್ರವರಿ 12 ರಿಂದ 14 ರ ತನಕ ನಡೆಯಿತು. ಅಯೋಧ್ಯ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಹಿನ್ನೆಲೆಯಲ್ಲಿ ಈ ಪಂದ್ಯಾಕೂಟವನ್ನು ಆಯೋಜಿಸಲಾಗಿತ್ತು. ಸುಮಾರು 24 ತಂಡಗಳು ವಲಯ ಮಟ್ಟದಲ್ಲಿ ಭಾಗವಹಿಸಿದ್ದು, ಫೈನಲ್ ಪಂದ್ಯದಲ್ಲಿ ಅತಿಥೇಯ ವಿಶ್ವ ಸಾಗರ […]
ನರೇಂದ್ರ ಎಸ್ ಗಂಗೊಳ್ಳಿಗೆ ರಾಜ್ಯಮಟ್ಟದ ಪ್ರಶಸ್ತಿ
ಕುಂದಾಪುರ (ಫೆ – 15): ಬೀದರ್ ದೇಶಪಾಂಡೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ(ರಿ). ಬೀದರ್ ಮತ್ತು ಮಂದಾರ ಕಲಾವಿದರ ವೇದಿಕೆ ಬೀದರ್ ಜಿಲ್ಲೆ ಇವರು ಕೊಡಮಾಡುವ ರಾಜ್ಯ ಮಟ್ಟದ ಕರ್ನಾಟಕ ಪ್ರತಿಭಾ ಚೂಡಾಮಣಿ ರತ್ನ ಪ್ರಶಸ್ತಿಗೆ ಉಡುಪಿ ಜಿಲ್ಲೆಯ ಬಹುಮುಖ ಪ್ರತಿಭಾನ್ವಿತ ಯುವ ಬರಹಗಾರ ನರೇಂದ್ರ ಎಸ್ ಗಂಗೊಳ್ಳಿ ಆಯ್ಕೆಯಾಗಿದ್ದಾರೆ. ಈ ವರೆಗೆ ರಾಜ್ಯ ಮಟ್ಟದ ವಿವಿಧ ದಿನಪತ್ರಿಕೆಗಳಲ್ಲಿ ಸುಮಾರು ಒಂದು ಸಾವಿರದ ಐನೂರಕ್ಕೂ ಹೆಚ್ಚಿನ ಲೇಖನಗಳು ಕಥೆ-ಕವನಗಳನ್ನು ಬರೆದಿರುವ, […]
ಗ್ರೌಂಡ್ ರೈಡರ್ ವಲಯ ಮಟ್ಟದ ಕ್ರಿಕೆಟ್ ಪಂದ್ಯಕೂಟ -ಸಾಧಕರಿಗೆ ಸನ್ಮಾನ
ಗೌಂಡ್ ರೈಡರ್ ಗಂಗೊಳ್ಳಿ ಇವರ ಆಶ್ರಯದಲ್ಲಿ ಬೈಂದೂರು ವಲಯ ಮಟ್ಟದ ಲೀಗ್ ಮಾದರಿಯ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಕೂಟ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಜರುಗಿತು.
ಕನ್ನಡ ನೆಲದಲ್ಲಿ ಛತ್ರಪತಿ ಶಿವಾಜಿ
ಬಸ್ರೂರು ಹಿಂದೆ ಗತವೈಭವ ಮೆರೆದ ಸ್ಥಳ. ಇಲ್ಲಿಯ ಒಂದೊಂದು ಕಲ್ಲು ಒಂದೊಂದು ಇತಿಹಾಸದ ಚಿತ್ರಣವನ್ನೂ ತಿಳಿಸುತ್ತದೆ. ಆಳುಪ, ವಿಜಯನಗರ, ಕೆಳದಿಯಂತಹ ಆಳ್ವಿಕೆ ನಡೆಸಿದ ಪ್ರದೇಶ ಬಸ್ರೂರು. ಬಾರಕೂರು ತನ್ನ ರಾಜಧಾನಿಯನ್ನಾಗಿ ಮಾಡಿ ಬಸ್ರೂರು ವ್ಯಾಪಾರದ ಕೇಂದ್ರವನ್ನಾಗಿ ಆಳುಪರು ಆಳ್ವಿಕೆ ನಡೆಸುತ್ತಿದ್ದರು. ಬಾರಕೂರು ಹಾಗೂ ಬಸ್ರೂರು ಅವಳಿ ಪ್ರದೇಶವೆಂದು ಕರೆಯುತ್ತಿದ್ದರು. ಗುರು ವಿದ್ಯಾರಣ್ಯರ ಮಾರ್ಗದರ್ಶನದಲ್ಲಿ ಸುಭದ್ರವಾಗಿ ಆಳ್ವಿಕೆ ನಡೆಸಿದ ರಾಜ ಮನೆತನ, ವಿಜಯನಗರ ಆಳ್ವಿಕೆ ನಡೆಸಿದ ಪ್ರಸಿದ್ಧ ಪ್ರದೇಶ ಕೂಡಾ ಬಸ್ರೂರು. […]
ಲಯನ್ ಎನ್.ಎಂ.ಹೆಗ್ಡೆ ಅಧಿಕೃತ ಭೇಟಿ
ಲಯನ್ಸ್ ಕ್ಲಬ್ ಬಸ್ರೂರು ಮೂಡ್ಲಕಟ್ಟೆಗೆ 317C ಯ ಲಯನ್ಸ್ ಜಿಲ್ಲಾ ಗವರ್ನರ್ ಲಯನ್ ನೀಲಕಂಠ ಮಂಜುನಾಥ್ ಹೆಗ್ಡೆಯವರ ಅಧಿಕೃತ ಭೇಟಿ ಕಾರ್ಯಕ್ರಮ ನಡೆಯಿತು.