ಕನ್ನಡ ಚಿತ್ರರಂಗದ ಯಶಸ್ವಿ, ಸೃಜನಶೀಲ ನಿರ್ದೇಶಕ, ನಟ ರಿಷಬ್ ಶೆಟ್ಟಿ ನಿರ್ಮಾಣದ ಹೀರೋ ಸಿನಿಮಾ ಇದೇ ಮಾರ್ಚ್ 5 ರಂದು ತೆರೆ ಕಾಣಲಿದೆ. ಸಾಕಷ್ಟು ಕುತೂಹಲ ಹಾಗೂ ರಹಸ್ಯಮಯ ಕಥೆಯನ್ನು ಹೊಂದಿರುವ ಈ ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಸದ್ದು ಮಾಡುತ್ತಿದೆ.
Author: KundaVahini Editor
ಗಂಗೊಳ್ಳಿ ಮೀನುಗಾರಿಕಾ ಬಂದರಿಗೆ ಸಚಿವ ಎಸ್. ಅಂಗಾರ ಭೇಟಿ
ಕರ್ನಾಟಕ ರಾಜ್ಯ ಮೀನುಗಾರಿಕಾ ಮತ್ತು ಬಂದರು ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಎಸ್. ಅಂಗಾರ ರವರು ಕುಂದಾಪುರ ತಾಲೂಕಿನ ಅತಿದೊಡ್ಡ ಮೀನುಗಾರಿಕೆ ಬಂದರಾಗಿರುವ ಗಂಗೊಳ್ಳಿ ಬಂದರಿಗೆ ಭೇಟಿ ನೀಡಿದರು.
ಖ್ಯಾತ ಗಾಯಕ, ಜಾನಪದ ಚಿಂತಕ ಗಣೇಶ್ ಗಂಗೊಳ್ಳಿ ಕರುನಾಡ ರತ್ನ ರಾಜ್ಯ ಪ್ರಶಸ್ತಿಗೆ ಆಯ್ಕೆ
ಖ್ಯಾತ ಗಾಯಕ ಹಾಗೂ ಉಡುಪಿ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷರಾಗಿರುವ ಗಣೇಶ್ ಗಂಗೊಳ್ಳಿಯವರು ಕರುನಾಡ ರತ್ನ ರಾಜ್ಯ ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ.
ಶಿಕ್ಷ ಪ್ರಭಾ ಅಕಾಡೆಮಿ ಕುಂದಾಪುರ : ಸಿ.ಎ. ಇಂಟರ್ ಮೀಡಿಯೇಟ್ ಪರೀಕ್ಷೆಯಲ್ಲಿ ಉತ್ಕೃಷ್ಟ ಸಾಧನೆ
ಕುಂದಾಪುರ : ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ (SPACE) CA/CS/CMA ಹಾಗೂ ಬ್ಯಾಂಕಿಂಗ್ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಎಫ್ ಇಂಡಿಯಾ 2020ರ ನವೆಂಬರ್ ರಲ್ಲಿ ನಡೆಸಿದ ಸಿ.ಎ. ಫೌಂಡೇಶನ್ ಮತ್ತು ಸಿ.ಎ. ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಉತ್ಕೃಷ್ಟ ಸಾಧನೆಗೈದಿದ್ದಾರೆ. ಅಕ್ಷಯ್ ಕಾಮತ್(272), ರಕ್ಷಿತ್ ಶೆಟ್ಟಿ(253), ಸಚಿನ್(240), ಸ್ಕಂದ (227) ,ಸುಚಿನ್ ಕುಮಾರ್ (225) ಆದಿತ್ಯ […]
ಮೂಡ್ಲಕಟ್ಟೆ ಎಂ ಐ ಟಿ: ಎಂ.ಬಿ.ಎ. ವಿಧ್ಯಾರ್ಥಿಗಳಿಗೆ ಇಂಡಕ್ಷನ್ ಮತ್ತು ಓರಿಯಂಟೇಶನ್ ಕಾರ್ಯಕ್ರಮ
ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಎಂ.ಬಿ.ಎ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಇಂಡಕ್ಷನ್ ಮತ್ತು ಓರಿಯಂಟೇಶನ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಪ್ರತಿಷ್ಟಿತ ಕಂಪೆನಿಯಾದ ಸಿನೋಪಿಕ್ ಸಿಸ್ಟಮ್ಸ್ ನ ಮಾನವ ಸಂಪನ್ಮೂಲ ಅಧಿಕಾರಿ ಸೌಜನ್ಯ ಕೆ ಆಗಮಿಸಿದ್ದರು.
ಮೂಡ್ಲಕಟ್ಟೆ ಎಂ ಐ ಟಿ : ಸ್ವಚ್ಚತಾ ಕಾರ್ಯಕ್ರಮ
ಮೂಡ್ಲಕಟ್ಟೆ ತಾಂತ್ರಿಕ ವಿಧ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಇತ್ತೀಚೆಗೆ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾಲೇಜಿನಿಂದ ಮೂಡ್ಲಕಟ್ಟೆ ಜನಾರ್ದನ ದೇವಸ್ಥಾನದ ತನಕ ರಸ್ತೆ ಅಕ್ಕಪಕ್ಕದ ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡಿದ್ದಲ್ಲದೆ, ದೇವಸ್ಥಾನದ ಆವರಣವನ್ನು ಸ್ವಚ್ಚಗೊಳಿಸಲಾಯಿತು.
ಬೈಂದೂರಿನ ಯುವಕ ವಿಶ್ವನಾಥ್ ಹೊಸ ದಾಖಲೆ
ರಾವಳಿಯ ಜಾನಪದ ಕ್ರೀಡೆಗಳಲ್ಲೊಂದಾದ ಕಂಬಳದ ನೇಗಿಲು ಹಿರಿಯ ವಿಭಾಗದಲ್ಲಿ ಬೈಂದೂರಿನ ವಿಶ್ವನಾಥ್ ಹೊಸ ದಾಖಲೆ ನಿರ್ಮಿಸಿದ್ದಾರೆ.
ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಗುಲಾಮ್ ನಬಿ ಆಜಾದ್ ನಿವ್ರತ್ತಿ
ಕಾಂಗ್ರೆಸ್ ಹಿರಿಯ ನಾಯಕ ಹಾಗೂ ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕರಾಗಿದ್ದ ಗುಲಾಮ್ ನಭಿ ಆಜಾದ್ ನಿವೃತ್ತರಾಗಿದ್ದಾರೆ. ನಿವೃತ್ತಿಯ ಹಿನ್ನೆಲೆ ವಿದಾಯ ಭಾಷಣ ಮಾಡಿದ ಅವರು, ಪಾಕಿಸ್ತಾನಕ್ಕೆ ಹೋಗದ ಅದೃಷ್ಟವಂತ ಜನರಲ್ಲಿ ನಾನೂ ಸಹ ಒಬ್ಬನಾಗಿದ್ದಾನೆ.
ನೆನಪಾಗುವೆ ಮತ್ತದೆ ಸಂಜೆಯಲಿ
ಕಾಡುತಿದೆ ಮನ ನಿನ್ನ ಮಮತೆಯ ಸ್ಪರ್ಷವನುಬಯಸುತಿದೆ ಒಡಲು ನಿನ್ನ ಆ ಕೖೆ ತುತ್ತನುಕಣ್ಗಳರಸುತಿವೆ ನಿನ್ನ ಬೆಲೆಬರಿತ ಇರುವಿಕೆಯನುನೆನಪಾಗುತಿದೆ ನೀನು ಮತ್ತೆ ಮತ್ತೆ ಬೖೆಯ್ದ ಬಯ್ಗುಳ, ಬಾಯ್ತುಂಬ ಕರೆಯುತಿದೆಹೊಡೆದ ಕೖೆಗಳು, ಕೖೆ ಮುಗಿದ ಬೇಡುತಿದೆಹರಿದ ಸೀರೆಯನ ನಿನುಟ್ಟು, ಶುಭ್ರ ಅಂಗಿಯ ನನಗ್ಹಾಕಿನನ್ನ ಮೊಗದಿ ನಗು ಕಂಡು ನಕ್ಕಿದ್ದೆ ನೀನು ನೆನಪಾಗುವೆ ನೀನು ಮತ್ತೆ ಮತ್ತೆನೀನೂಣಿಸಿದ ನಿನ್ನ ಆ ಕೈಗಳುನೀ ತೊರಿಸಿದ ಆ ನೀಲಿ ಪಕ್ಷಿಗಳುತಿಳಿಯ ಬಾನಲಿ ಸ್ವಾಗತಿಸಿದ ಬಣ್ಣಗಳುನೆನಪಾಗುವೆ ನೀನು ಮತ್ತದೆ […]
ಫೆಬ್ರವರಿ 14 ಬೃಹತ್ ರಕ್ತದಾನ ಶಿಬಿರ
ಹೆಲ್ಪಿಂಗ್ ಹ್ಯಾಂಡ್ಸ್ ಕುಂದಾಪುರ, ಆದರ್ಶ ಆಸ್ಪತ್ರೆ ಕುಂದಾಪುರ, ಅಭಯಹಸ್ತ ಹೆಲ್ಪ್ ಲೈನ್ ಉಡುಪಿ, ಜೈ ಕುಂದಾಪುರ ಸೇವಾ ಟ್ರಸ್ಟ್(ರಿ) ಹಾಗೂ ಇಂಡಿಯನ್ ರೆಡ್ ಕ್ರಾಸ್ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಪುಲ್ವಾಮ ದಾಳಿಯಲ್ಲಿ ಮೃತರಾದ ವೀರಯೋಧರ ಸ್ಮರಣಾರ್ಥ ಫೆಬ್ರವರಿ 14ರಂದು ಆದರ್ಶ ಆಸ್ಪತ್ರೆ ಕುಂದಾಪುರದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ.