ಗೆಳೆಯರ ಬಳಗ ಬೀಜಾಡಿ ಇವರ ಆಶ್ರಯದಲ್ಲಿ ದ್ವಿತೀಯ ಬಾರಿಗೆ ಬೀಜಾಡಿ ಯಲ್ಲಿ ನಡೆದ 40 ಗಜಗಳ ಹೊನಲು ಬೆಳಕಿನ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ- ಅವೀಘ್ನ ಸ್ರಷ್ಠಿ ಟ್ರೋಫಿ- 2021, ಕುಂದಾಪುರದ 4 ಬಲಿಷ್ಠ ತಂಡಗಳ ನಡುವೆ ನಡೆದ ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 6ರ ಶನಿವಾರ ಉದ್ಘಾಟನೆಗೊಂಡಿತು.
Author: KundaVahini Editor
ಅಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣ ನಿಧಿಗೆ ಶಾಸಕ ಬಿ. ಎಮ್. ಸುಕುಮಾರ ಶೆಟ್ಟಿ 1 ಲಕ್ಷ ರೂ ದೇಣಿಗೆ
ಆಯೋದ್ಯೆ ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣ ಅಭಿಯಾನಕ್ಕೆ ಬೈಂದೂರು ಶಾಸಕರಾದ ಬಿ.ಎಮ್. ಸುಕುಮಾರ ಶೆಟ್ಟಿಯವರು ಒಂದು ಲಕ್ಷ ದೇಣಿಗೆ ನೀಡಿದರು. ದೇಶದಾದ್ಯಂತ ನಡೆಯುತ್ತಿರುವ ಈ ಅಭಿಯಾನಕ್ಕೆ ಶಾಸಕರು ಶುಭಹಾರೈಸಿದರು.
ಡಾ. ಬಿ. ಬಿ. ಹೆಗ್ಡೆ ಕಾಲೇಜು : ಬಿ. ಕಾಂ. ಪ್ರೋಫೆಷನಲ್ ಕೋರ್ಸುಗಳ ಉದ್ಘಾಟನೆ
ಕುಂದಾಪುರ: ವಿದ್ಯಾರ್ಥಿಗಳು ಬದುಕಿನ ಸವಾಲುಗಳನ್ನು ಸಮಚಿತ್ತದಿಂದ ಎದುರಿಸಬೇಕು. ಸಿ.ಎ. ಹಾಗೂ ಸಿ.ಎಸ್. ಕೋರ್ಸುಗಳ ಜೊತೆಗೆ ತಮ್ಮ ಬಿ.ಕಾಂ ವ್ಯಾಸಂಗವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿದ್ದಲ್ಲಿ ಮುಂದಿನ ಶೈಕ್ಷಣಿಕ ಗುರಿಯನ್ನು ಯಶಸ್ವಿಯಾಗಿ ತಲುಪಬಹುದು ಎಂದು ಕಾಮತ್ & ಕೋ ಚಾರ್ಟರ್ಡ್ ಅಕೌಂಟೆಂಟ್ ಉಡುಪಿ ಇದರ ಪಾಲುದಾರರಾದ ಎಮ್ ಶ್ರೀಧರ್ ಕಾಮತ್ ಹೇಳಿದರು. ಅವರು ಕಾಲೇಜಿನ 2020-21 ನೇ ಸಾಲಿನಲ್ಲಿ ನೂತನವಾಗಿ ಪ್ರಾರಂಭಿಸಿರುವ ಬಿ.ಕಾಂ ಪ್ರೋಫೆಷನಲ್ (ಸಿ.ಎ. & ಸಿ.ಎಸ್.) ಕೋರ್ಸುಗಳನ್ನು ಉದ್ಘಾಟಿಸಿ ಮಾತನಾಡಿದರು. […]
ಮೊಗವೀರ ಯುವ ಸಂಘಟನೆ (ರಿ) ಉಡುಪಿ ಜಿಲ್ಲೆ – ವಾರ್ಷಿಕ ಮಹಾಸಭೆ
ಮೊಗವೀರ ಯುವ ಸಂಘಟನೆ (ರಿ) ಉಡುಪಿ ಜಿಲ್ಲೆ ಇದರ 2020 -21ನೇ ಸಾಲಿನ ವಾರ್ಷಿಕ ಮಹಾಸಭೆ ಯುವ ಸಂಘಟನೆಯ ಮಹಾಪೋಷಕರು ಹಾಗೂ ಮಾರ್ಗದರ್ಶಕರಾದ ನಾಡೋಜಾ ಡಾ. ಜಿ. ಶಂಕರ್ ರವರ ಉಪಸ್ಥಿತಿಯಲ್ಲಿ ಅಂಬಲಪಾಡಿಯ ಶ್ಯಾಮಿಲಿ ಸಭಾಂಗಣದಲ್ಲಿ ಫೆಬ್ರವರಿ 7 ರಂದು ನಡೆಯಿತು.
ಕುಂದಾಪುರ : ಮಹಿಳಾ ಗ್ಯಾಂಗ್ ನಿಂದ ನಗದು ಕಳ್ಳತನ
ನಗರದ ಶಾಸ್ತ್ರೀ ಸರ್ಕಲ್ ಬಳಿ ನಡೆದುಕೊಂಡು ಹೋಗುತ್ತಿದ್ದ ಕುಂದಾಪುರದ ಖಾಸಗಿ ಕಾಲೇಜೊಂದರ ಉಪನ್ಯಾಸಕಿಯ ಬ್ಯಾಗ್ ನಿಂದ ಸರಿಸುಮಾರು 48000 ಸಾವಿರ ರೂಪಾಯಿ ನಗದನ್ನು ಮಹಿಳಾ ಗ್ಯಾಂಗ್ ಒಂದು ಕಳ್ಳತನ ಮಾಡಿರುವ ಪ್ರಕರಣ ಫೆಬ್ರವರಿ 6ರ ಮಧ್ಯಾಹ್ನ ಸರಿ ಸಮಾರು 1:15 ಸಮಯಕ್ಕೆ ನಡೆದಿದೆ.
ಮಿಲಾಗ್ರಿಸ್ ಕಾಲೇಜು : ಪ್ರಶಸ್ತಿ ಪ್ರದಾನ ಹಾಗೂ ರಕ್ತದಾನ ಶಿಬಿರ
ಸ್ವಾಮಿ ವಿವೇಕಾನಂದ ಜಯಂತಿ- ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ರಕ್ತ ದಾನದ ಮಹತ್ವ ಹಾಗೂ ಸಾಮಾಜಿಕ ಜಾಗ್ರತಿ ಮೂಡಿಸುವ ಅಂತರ್ ಕಾಲೇಜು ಮಟ್ಟದ ಕಿರುಚಿತ್ರ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರದಾನ ಹಾಗೂ ರಕ್ತ ದಾನ ಶಿಬಿರವನ್ನು ಫೆಬ್ರವರಿ 4 ರಂದು ಮಿಲಾಗ್ರಿಸ್ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಕುಮಾರ್ ಕಾಂಚನ್ ಬೀಜಾಡಿ ಯವರಿಗೆ ಶ್ರೇಷ್ಠ ಕೃಷಿಕ ಪ್ರಶಸ್ತಿ
ಉಡುಪಿ : ಪ್ರಗತಿಪರ ಕೃಷಿಕ, ದೇಶಿಯ ಗೋವುಗಳ ರಕ್ಷಣೆ ಮತ್ತು ಪಂಚಗವ್ಯ ಉತ್ಪನ್ನಗಳ ಮಹತ್ವದ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸುತ್ತಿರುವ ಕುಂದಾಪುರ ತಾಲೂಕಿನ ಬೀಜಾಡಿ ಗ್ರಾಮದ ಕಪಿಲೆ ಗೋ ಸಮೃದ್ಧಿ ಟ್ರಸ್ಟ್ (ರಿ) ಇದರ ಪ್ರವರ್ತಕರಾದ ಶ್ರೀಕುಮಾರ್. ಎಸ್. ಕಾಂಚನ್ ರವರಿಗೆ ಕರ್ನಾಟಕ ಸರ್ಕಾರ 2020-21 ನೇ ಸಾಲಿನ ಆತ್ಮ ಯೋಜನೆಯಡಿ, ಕೃಷಿ ಸಂಸ್ಕರಣೆ ವಿಭಾಗದಲ್ಲಿ ಉಡುಪಿ ಜಿಲ್ಲಾ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕ ಸರಕಾರದ ಮೀನುಗಾರಿಕೆ […]
ಕಪ್ಪುಸೀರೆಯ ಅಜ್ಜಿ
ಈ ಸ್ವಾರ್ಥ ಪ್ರಪಂಚದಲ್ಲಿ ಇಂತಹ ನಿಸ್ವಾರ್ಥಿ ಅಜ್ಜಿಯಿಂದ ನಾವು ಕಲಿಯುವುದು ತುಂಬಾ ಇದೆ…
ಯಾಕೋ ಈ ಕಪ್ಪು ಸೀರೆಯ ಅಜ್ಜಿ ದಿ ಗ್ರೇಟ್ ಲೇಡಿ ಅನ್ಸಬಿಟ್ರು..
ಜಟ್ಟಿದೇವಸ್ಥಾನ್ ಹಬ್ಬ….. ಒಂದು ನೆನಪು..
ಪೊಡಾಯಿನ್ ಜೋರ್ ಗಾಳಿಗೆ, ಕಡ್ಲಿನ್ ಆ ತೆರಿಗಳ್ ಸುಂಯ್ ಗುಟ್ಟು ಶಬ್ದು ಕೆಳ್ಕಂಡ್, ಅಜ್ಜಿ ಹೇಳು ಕಥಿಗೆ ಮಲ್ಕಂತಿದ್ದರ್ ನಾವ್. ಅವತ್ತ್ ಜನವರಿ ಆರ್ನೆ ದಿನದ್ ಹೊತ್ತ್ ಕಂತಿ ಹೊಯ್ ಇದ್ದಿತ್. ಏಳುವರೆ ಏಂಟ್ ಆಯ್ತ್ ಅಂದ್ರ ಸಾಕ್ ಊರಿಗ್ ಊರೆ ಉಂಡ್ಕ ಮನಿಕಂತ್ ಇದ್ದಿತ್. ಆ ನೂರ್ ವೋಲ್ಟಿನ್ ಬಲ್ಪ ಸುಚ್ಚ್ ಬಂದ್ ಮಾಡಿ ಅಜ್ಜಿ ಹಾಂಗೆ ಎಲಿ ಅಡ್ಕಿ ತಿಂತ ಹಸಿ ಬುಡ್ದಂಗ್ ಗೋಡಿ ಒರ್ಗಿ ಕುಕಂಡಳ್.ಕಾಲ್ […]