ಕಾರ್ಕಳ ( ಜ.17): ರೋಟರಿ ಕ್ಲಬ್ ಮಣಿಪಾಲ್ ಹಿಲ್ಸ್ ವಲಯ 4 ಮತ್ತು ರೋಟರಿ ಕ್ಲಬ್ ಕಾರ್ಕಳ ವಲಯ 5 ರ ಜಂಟಿ ಆಶ್ರಯದಲ್ಲಿ ತ್ರಿವರ್ಣ ಧ್ವಜದ ಮಹತ್ವದ ಬಗ್ಗೆ ಕಾರ್ಯಗಾರವನ್ನು ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಶಾಲೆ ಮತ್ತು ಪ್ರೌಢ ಶಾಲೆಯಲ್ಲಿ ಇಂರ್ಯಾಕ್ಟ್ ಕ್ಲಬ್ಬಿನ ವತಿಯಿಂದ ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕದ ಬಿ ಎಸ್ ಡಿ ಎಲ್ ಸೆಂಟ್ರಲ್ ಸಮಿತಿಯ ಸದಸ್ಯರಾದ ರೊಟೇರಿಯನ್ ಪಿ ಹೆಚ್ ಎಫ್ ತಿಮ್ಮಪ್ಪ […]
Author: KundaVahini Editor
ನಾಡ ಶ್ರೀ ಹಾಡಿಗರಡಿ ದೈವಸ್ಥಾನ: ಜಾತ್ರಾ ಮಹೋತ್ಸವ ಸಂಪನ್ನ
ಕುಂದಾಪುರ(ಜ. 18): ಇಲ್ಲಿನ ನಾಡದ ಶ್ರೀ ಹಾಡಿಗರಡಿ ದೈವಸ್ಥಾನದಲ್ಲಿ ವಾರ್ಷಿಕ ಹಾಲು ಹಬ್ಬ- ಗೆಂಡಸೇವೆ, ಮಹಾ ಅನ್ನಸಂತರ್ಪಣೆ ಜನವರಿ 14 ಮತ್ತು 15ರಂದು ಬಹಳ ವಿಜೃಂಭಣೆಯಿಂದ ಜರುಗಿತು. ಜ.14 ರ ಬೆಳಿಗ್ಗೆ ಮಂಗಳಾರತಿ, ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 4 ಗಂಟೆಗೆ ಕೊಡಗುಂಜಿ ಕಳುವಿನ ಬಾಗಿಲುವಿನಲ್ಲಿ ಮೂಲಸ್ಥಾನ ಸ್ವಾಮಿ ಪೂಜೆ. ನಾಗ ಸನ್ನಿಧಿಯಲ್ಲಿ ಪೂಜೆ, ನಾಗದರ್ಶನ, ಮಹಾಮಂಗಳಾರತಿ, ದೈವದರ್ಶನ, ಗೆಂಡಸೇವೆ, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ ನಡೆಯಿತು. ಸಂಜೆ ಸಾಂಸ್ಕೃತಿಕ […]
ರಾಷ್ಟ್ರಮಟ್ಟದ ಅಬಾಕಸ್ ಮೆಂಟಲ್ ಅರಿಥ್ಮೆಟಿಕ್ ಸ್ಪರ್ಧೆಯಲ್ಲಿ ಅರಾಟೆ ಲಕ್ಶ್ ರಾಜೇಶ್ ಪ್ರಥಮ
ಕುಂದಾಪುರ (ಜ. 17): ಚಿತ್ರದುರ್ಗದಲ್ಲಿ ಇತ್ತೀಚೆಗೆ ಜರುಗಿದ 9ನೇ “ರಾಜ್ಯಮಟ್ಟ’ದ ಐಡಿಯಲ್ ಪ್ಲೇ ಅಬಾಕಸ್ ಮೆಂಟಲ್ ಅರಿಥ್ಮೆಟಿಕ್ ಸ್ಪರ್ಧೆಯಲ್ಲಿ ಅರಾಟೆ ಲಕ್ಶ್ ರಾಜೇಶ್ ಪ್ರಥಮ ಸ್ಥಾನ” ಪಡೆದು ಬೆಂಗಳೂರಿನಲ್ಲಿ ಜನವರಿ 12 ರಂದು ನಡೆದ 20ನೇ “ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿಯೂ ಕೂಡ “ಪ್ರಥಮ ಸ್ಥಾನ” ಪಡೆದಿದ್ದಾನೆ. ಕುಂದಾಪುರದ ಸೆಂಟರ್ ಮುಖ್ಯಸ್ಥರಾದ ಶ್ರೀ ಪ್ರಸನ್ನ ಕೆ. ಬಿ. ಮತ್ತು ಶ್ರೀಮತಿ ಮಹಾಲಕ್ಷ್ಮಿ ಇವರುಗಳಿಂದ ತರಬೇತಿ ಪಡೆಯುತ್ತಿರುವ ಲಕ್ಶ್ ರಾಜೇಶ್ ಪ್ರಸ್ತುತ ಕುಂದಾಪುರದ ಹೆಸರಾಂತ […]
ವಿಚಾರಗಳನ್ನು ಅರ್ಥೈಸಿಕೊಂಡು ಪ್ರಸ್ತುತಪಡಿಸಿ : ರವಿಕಿರಣ್ ಮುರುಡೇಶ್ವರ
ನಾಯಕವಾಡಿ(ಜ.15) : ಸಾಹಿತ್ಯ ಅಥವಾ ಇನ್ಯಾವುದೇ ವಿಚಾರಗಳಿರಲಿ ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಪ್ರಸ್ತುತ ಪಡಿಸಿದಾಗಲೇ ಅದು ಸೌಂಧರ್ಯವನ್ನು ಕಂಡುಕೊಳ್ಳುತ್ತದೆ. ನಿರಂತರ ಅಭ್ಯಾಸ ನಮ್ಮನ್ನು ಪರಿಪೂರ್ಣವಾಗಿಸುತ್ತದೆ ಎಂದು ನ್ಯಾಯವಾದಿ ರವಿಕಿರಣ್ ಮುರುಡೇಶ್ವರ ಅವರು ಅಭಿಪ್ರಾಯಪಟ್ಟರು. ಅವರು ಗುಜ್ಜಾಡಿ ನಾಯಕವಾಡಿಯ ಶ್ರೀ ಚೆನ್ನಬಸವೇಶ್ವರ ಯುವಕ ಮಂಡಲದ ಸುವರ್ಣ ಸಂಗಮದ ಎರಡನೇ ದಿನದ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದರು. ಬೋಳಂಬಳ್ಳಿ ಶ್ರೀ ಪದ್ಮಾವತಿ ದೇವಸ್ಥಾನದ ಧರ್ಮದರ್ಶಿಗಳಾದ ಧರ್ಮರಾಜ್ ಜೈನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. […]
ರಾಷ್ಟ್ರಮಟ್ಟದ ಅಬಾಕಸ್ ನಲ್ಲಿ ವೃಷಭ ಶೆಣೈ ಪ್ರಥಮ ಸ್ಥಾನ
ಕುಂದಾಪುರ (ಜ .15): ಬೆಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ ಕಾಂಪಿಟೇಶನ್ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ಆರನೇ ತರಗತಿಯ ವಿದ್ಯಾರ್ಥಿ ವೃಷಭ ಶೆಣೈ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಇವರು ಗಂಗೊಳ್ಳಿಯ ಉದ್ಯಮಿ ವಿಠ್ಠಲ್ ಶೆಣೈ ಮತ್ತು ವೈಷ್ಣವಿ ಶೆಣೈ ದಂಪತಿ ಪುತ್ರ
ಕುಂದಾಪುರ : ಟೀಚರ್ ಟ್ರೈನಿಂಗ್ ಗೆ ಅರ್ಜಿ ಆಹ್ವಾನ
ಕುಂದಾಪುರ( ಜ.15): ಇಲ್ಲಿನ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಶಾಲೆಯ ಟೀಚರ್ ಎಜುಕೇಶನ್ ವಿಭಾಗದಲ್ಲಿ ಎರಡನೇ ಬ್ಯಾಚ್ ಗೆ ಒಂದು ವರ್ಷದ ಅವಧಿಯ ಮೊಂಟೆಸ್ಸರಿ / ನರ್ಸರಿ ಟೀಚರ್ ಟ್ರೈನಿಂಗ್ ಹಾಗೂ ಕೌನ್ಸ್ ಲಿಂಗ್ ಅಂಡ್ ಗೈಡೆನ್ಸ್ ಡಿಪ್ಲೋಮಾ ಕೋರ್ಸ್ ಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಬಿಎಸ್ಎಸ್ ವೃತ್ತಿಪರ ಶಿಕ್ಷಣ ಆಶ್ರಯದಲ್ಲಿ ನಡೆಸಲ್ಪಡುವ ಈ ಕೋರ್ಸ್ ಗಳಿಗೆ ಎರಡನೇ ವರ್ಷಕ್ಕೆ ಪ್ರವೇಶಾತಿ ಆರಂಭವಾಗಿದ್ದು, ಟೀಚರ್ ಟ್ರೈನಿಂಗ್ ತರಬೇತಿಗೆ ಪಿಯುಸಿ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿರುವ […]
ಡಾ| ಚೇತನ್ ಶೆಟ್ಟಿ ಕೋವಾಡಿ ಅವರಿಗೆ ಶಿಕ್ಷಣ ರತ್ನ ಪ್ರಶಸ್ತಿ ಪ್ರದಾನ
ಕುಂದಾಪುರ(ಜ.11): ಸೇವಾ ಚೇತನ ಟ್ರಸ್ಟ್ (ರಿ.), ಮೂಡುಬಗೆ ಅಂಪಾರು ಇದರ ನಾಲ್ಕನೇ ವಾರ್ಷಿಕೋತ್ಸವದ ಪ್ರಯುಕ್ತ ಜನವರಿ 11ರಂದು ಅಂಪಾರು ಮೂಡುಬಗೆ ಶಾನ್ಕಟ್ಟು ಮೈದಾನದಲ್ಲಿ ನಡೆದ ‘ನಮ್ಮೂರ ಸಂಭ್ರಮ’ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಚಿಂತಕ, ವಾಗ್ಮಿ ಪ್ರಾಧ್ಯಾಪಕ ಕುಂದಾಪುರದ ಡಾ| ಬಿ. ಬಿ .ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪ-ಪ್ರಾಂಶುಪಾಲ ಡಾ| ಚೇತನ್ ಶೆಟ್ಟಿ ಕೋವಾಡಿ ಅವರಿಗೆ 2024ರ ನಮ್ಮೂರ ‘ಶಿಕ್ಷಣ ರತ್ನ’ ಪ್ರಶಸ್ತಿಯನ್ನು ಹಿರಿಯ ಉದ್ಯಮಿ ಶ್ರೀ ಆನಗಳ್ಳಿ ಕರುಣಾಕರ ಹೆಗ್ಡೆ […]
ರಾಷ್ಟ್ರಮಟ್ಟದ ಅಬಾಕಾಸ್ ಸ್ಪರ್ಧೆ: ಛಾಯಾ ವಿ . ಅರ್. ದ್ವಿತೀಯ ಸ್ಥಾನ
ಕುಂದಾಪುರ( ಜ .15): ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರವೇಟ್ ಲಿಮಿಟೆಡ್ ವತಿಯಿಂದ ಬೆಂಗಳೂರಿನ ವೈಟ್ ಫೆದರ್ ಕನ್ವೇಷನ್ ಹಾಲ್ ನಲ್ಲಿ ನಡೆದ 20ನೇ ರಾಷ್ಟ್ರಮಟ್ಟದ ಅಬಾಕಾಸ್ ಸ್ಪರ್ಧೆಯ 4ನೇ ವಿಭಾಗದಲ್ಲಿ ಕುಂದಾಪುರದ ಛಾಯಾ ವಿ . ಆರ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕುಂದಾಪುರದ ಎಚ್ಎ.ಮ್ .ಎಮ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿರುವ ಇವರು ಕುಂದಾಪುರದ ಪ್ರಸಿದ್ದ ಛಾಯಾ ಚಿತ್ರ ಗ್ರಾಹಕ ವಿಶ್ವನಾಥ ಮುನ್ನಾ ಹಾಗೂ ರಜನಿ ದಂಪತಿಯ ಪುತ್ರಿ.
ರಾಷ್ಟ್ರಮಟ್ಟದ ಅಬಾಕಾಸ್ ಸ್ಪರ್ಧೆ: ಗಂಗೊಳ್ಳಿಯ ನಮ್ರತಾ .ಎಸ್ ಪೂಜಾರಿ ತ್ರತಿಯ ಸ್ಥಾನ
ಗಂಗೊಳ್ಳಿ( ಜ.15): ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರವೇಟ್ ಲಿಮಿಟೆಡ್ ವತಿಯಿಂದ ಬೆಂಗಳೂರಿನ ವೈಟ್ ಫೆದರ್ ಕನ್ವೇಷನ್ ಹಾಲ್ ನಲ್ಲಿ ನಡೆದ 20ನೇ ರಾಷ್ಟ್ರಮಟ್ಟದ ಅಬಾಕಾಸ್ ಸ್ಪರ್ಧೆಯಲ್ಲಿ ಗಂಗೊಳ್ಳಿ ಸೆಂಟರ್ ನ ನಮ್ರತಾ ಎಸ್ ಪೂಜಾರಿ ತ್ರತಿಯ ಸ್ಥಾನ ಪಡೆದಿದ್ದಾರೆ. ಇವರು ಗಂಗೊಳ್ಳಿಯ ಶ್ರೀಮತಿ ಜ್ಯೋತಿ ಮತ್ತು ಸುರೇಶ್ ಪೂಜಾರಿ ದಂಪತಿಯ ಪುತ್ರಿ. ಗುಜ್ಜಾಡಿ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆ 3 ನೇ ತರಗತಿಯ ವಿದ್ಯಾರ್ಥಿನಿ . ಇವರಿಗೆ ಶಿಕ್ಷಕರಾದ […]
ಸಿ.ಎಮ್.ಎ ಫೌಂಡೇಷನ್ ಪರೀಕ್ಷೆಯಲ್ಲಿ ಉತ್ಕೃಷ್ಟ ಸಾಧನೆಗೈದ ಬಿ.ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳು
ಕುಂದಾಪುರ (ಜ.10): ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ ಆಫ್ ಇಂಡಿಯಾ ನಡೆಸುವ ಪ್ರಾರಂಭಿಕ ಹಂತದ CMA ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಪ್ರಥಮ ಹಂತದಲ್ಲಿಯೇ ಉತ್ಕೃಷ್ಟ ಸಾಧನೆಗೈದಿದ್ದಾರೆ. ವೈಷ್ಣವಿ ಹಾಗೂ ಕಾರ್ತಿಕ್ ಕೆ. ಬಿಲ್ಲವ ಇವರು ಸಿ.ಎಂ.ಎ. ಇಂಟರ್ಮೀಡಿಯೇಟ್ ಪ್ರೋಗ್ರಾಮ್ಗೆ ಅರ್ಹತೆ ಪಡೆದಿದ್ದಾರೆ. ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಹಾಗೂ ವೀ ರೀಚ್ ಸಂಸ್ಥೆಯ ನುರಿತ ತರಬೇತುದಾರರಿಂದ […]










