ಗಂಗೊಳ್ಳಿ (ಜು,27): ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಲಿಕೆಯ ಜೊತೆ ಜೊತೆಗೆ ಮಕ್ಕಳನ್ನು ಸಂಸ್ಕಾರದ ಮೌಲ್ಯಗಳೊಂದಿಗೆ ಬೆಳೆಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಹೆತ್ತವರು ಮತ್ತು ಶಿಕ್ಷಕರ ಜವಾಬ್ದಾರಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕುಂದಾಪುರದ ಡಾ. ಬಿ ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ .ಕೆ. ಉಮೇಶ್ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಸಭಾಂಗಣದಲ್ಲಿ ಗಂಗೊಳ್ಳಿಯ ಬಿಲ್ಲವರ ಹಿತರಕ್ಷಣಾ ವೇದಿಕೆಯ ಮೂರನೇ ವಾರ್ಷಿಕ […]
Author: KundaVahini Editor
ಬಿ. ಬಿ. ಹೆಗ್ಡೆ ಕಾಲೇಜು: ‘ಗ್ರಾಜುಯೇಷನ್ ಡೇ’
ಕುಂದಾಪುರ (ಜುಲೈ 24): ವಿದ್ಯಾರ್ಥಿಗಳು ಅವಕಾಶಗಳನ್ನು ಪ್ರೀತಿಸುವಂತಾಗಬೇಕು ಮತ್ತು ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಅವಕಾಶದೊಂದಿಗೆ ಅಭಿವೃದ್ಧಿ ಹೊಂದಿದಾಗ ಹೆತ್ತವರ, ಗುರುಗಳ ಮತ್ತು ಸಮಾಜದ ಕಾಳಜಿ ವಹಿಸಬೇಕು. ಆ ಮೂಲಕ ಪಡೆದ ಪದವಿಗೆ ಗೌರವ ದೊರೆಯುವಂತಾಗಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ ಪ್ರೊ| ಹೇಮಂತ್ ಕುಮಾರ್ ಹೇಳಿದರು. ಅವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಕಾಲೇಜಿನ ಐಕ್ಯೂಎಸಿ ಸಂಯೋಜಿಸಿದ ‘ಗ್ರಾಜುಯೇಷನ್ ಡೇ’ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕುಂದಾಪುರ […]
ಕುಂದಾಪುರ : ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಶಾಲೆ:ಟೀಚರ್ ಟ್ರೈನಿಂಗ್ ವಿಭಾಗದ ಉದ್ಘಾಟನಾ ಸಮಾರಂಭ
ಕುಂದಾಪುರ(ಜು,24): ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್ ಹಾಗೂ ವಿ.ಕೆ.ಆರ್ ಶಾಲೆಗಳಲ್ಲಿ 2024-25ರ ಶೈಕ್ಷಣಿಕ ವರ್ಷದಲ್ಲಿ ಹೊಸದಾಗಿ ಸೇರ್ಪಡೆಗೊಂಡಿರುವ ಟೀಚರ್ ಟ್ರೈನಿಂಗ್ ವಿಭಾಗದ ಉದ್ಘಾಟನೆ ಜುಲೈ 22 ರಂದು ಸಂಸ್ಥೆಯ ಪ್ರಾಂಶುಪಾಲರಾಗಿರುವ ಡಾ. ಚಿಂತನಾ ರಾಜೇಶ್ ರವರ ಮಾರ್ಗದರ್ಶನದಲ್ಲಿ ನೆರವೇರಿತು. ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಲತಾ. ಜಿ ಭಟ್ ರವರು ಮುಖ್ಯ ಅತಿಥಿಗಳಾಗಿ ಶಿಕ್ಷಕ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಿಕ್ಷಕ ವಿದ್ಯಾರ್ಥಿಗಳಿಗೆ ಪುಷ್ಪವನ್ನು ನೀಡುವ […]
ಹೆಮ್ಮಾಡಿಯ ಜನತಾ ಪದವಿಪೂರ್ವ ಕಾಲೇಜಿನಲ್ಲಿ ‘ಜನತಾ ನವನೀತ 2024’ ಸಂಪನ್ನ
ಕುಂದಾಪುರ;(ಜು,23): ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜಿನ ‘ಜನತಾ ನವನೀತ-2024’ ಕಾರ್ಯಕ್ರಮ ಕುಂದಾಪುರದ ಮೊಗವೀರ ಭವನದಲ್ಲಿ ಜುಲೈ 22 ರಂದು ಜರುಗಿತು.ಸಮಾರಂಭವನ್ನು ಉದ್ಘಾಟನೆಗೈದ ಶಿಕ್ಷಕರು ಮತ್ತು ರಾಷ್ಟ್ರೀಯ ಮಟ್ಟದ ವ್ಯಕ್ತಿತ್ವ ವಿಕಸನ ತರಬೇತುದಾರರಾದ ಶ್ರೀ ರಾಜೇಂದ್ರ ಭಟ್ ಕೆ.ಯವರು ಮಾತನಾಡಿ ಜೀವನದಲ್ಲಿ, ಪರೀಕ್ಷೆಯಲ್ಲಿ, ಬದುಕಿನಲ್ಲಿ ಸೋತವರ ಕಥೆಗಳು ನಮ್ಮನ್ನು ಪ್ರೇರೇಪಿಸುತ್ತಾ ಹೋಗುತ್ತವೆ. ಸೋತವರ ಕಥೆಗಳು ನಮಗೆ ಆದರ್ಶಗಳಾಗುತ್ತವೆ.ಗೆದ್ದಾಗ ಮಾತ್ರ ಸಂಭ್ರಮಿಸುವುದಲ್ಲ. ಸೋತಾಗಲೂ ಸಂಭ್ರಮಿಸಬೇಕು. ಸಣ್ಣ ಸಣ್ಣ ಸೋಲುಗಳನ್ನು ಎದುರಿಸುವುದನ್ನು ಅತ್ಯದ್ಭುತವಾಗಿ ಕಲಿಯಬೇಕು. […]
ಮೊಗವೀರ ಯುವ ಸಂಘಟನೆ (ರಿ) ಉಡುಪಿ ಜಿಲ್ಲೆ ಕೋಟೇಶ್ವರ ಘಟಕ: ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಕೋಟೇಶ್ವರ(ಜು,22): ಮೊಗವೀರ ಯುವ ಸಂಘಟನೆ (ರಿ) ಉಡುಪಿ ಜಿಲ್ಲೆ ಕೋಟೇಶ್ವರ ಘಟಕ ಹಾಗೂ ಮಹಿಳಾ ಸಂಘಟನೆ ಹಾಗೂ ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ) ಅಂಬಲಪಾಡಿ ಉಡುಪಿ ,ರೋಟರಿ ಕ್ಲಬ್ ಕೋಟೇಶ್ವರ, ರಕ್ತನಿಧಿ ಕೆ.ಎಂ.ಸಿ ಮಣಿಪಾಲ ,ಜಿಲ್ಲಾಡಳಿತ ಉಡುಪಿ ಇವರ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕೋಟೇಶ್ವರದ ಶಾರದಾ ಕಲ್ಯಾಣ ಮಂಟಪದಲ್ಲಿ ಜುಲೈ 21 ರಂದು ನಡೆಯಿತು . ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕದ ಅಧ್ಯಕ್ಷರಾದ ನಾಗರಾಜ […]
ಗಂಗೊಳ್ಳಿ: ಹೆಬ್ಬಾಗಿಲು ಮನೆ ಕಾವೇರಿ ದೇವಾಡಿಗ ನಿಧನ
ಗಂಗೊಳ್ಳಿ(ಜು,19): ಇಲ್ಲಿನ ಹೆಬ್ಬಾಗಿಲು ಮನೆ, ಕಾಯ ದೇವಾಡಿಗ ಯಾನೆ ಕಾವೇರಿ ದೇವಾಡಿಗ ಅಲ್ಪ ಕಾಲದ ಅಸೌಖ್ಯದ ಬಳಿಕ ಜುಲೈ 18 ರ ರಾತ್ರಿ ಸ್ವ ಗೃಹದಲ್ಲಿ ನಿಧನ ಹೊಂದಿದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಮೃತರು ಮೂರು ಪುತ್ರರು ಹಾಗೂ ಮೂರು ಪುತ್ರಿಯರನ್ನು ಅಗಲಿದ್ದಾರೆ.
ಮೊಗವೀರ ಯುವ ಸಂಘಟನೆ, ಹೆಮ್ಮಾಡಿ ಘಟಕ : ವನ ಮಹೋತ್ಸವ ಹಾಗೂ ಗಿಡ ವಿತರಣೆ
ಹೆಮ್ಮಾಡಿ (ಜು, 19): ಮೊಗವೀರ ಯುವ ಸಂಘಟನೆ( ರಿ. ),ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕದ ನೇತೃತ್ವದಲ್ಲಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ ),ಅಂಬಲಪಾಡಿ ಉಡುಪಿ, ಗೀತಾನಂದ ಫೌಂಡೇಶನ್ ಮಣೂರು ಕೋಟ, ಮೊಗವೀರ ಮಹಾಜನ ಸೇವಾ ಸಂಘ (ರಿ. ),ಬಗ್ವಾಡಿ ಹೋಬಳಿ ಕುಂದಾಪುರ ಶಾಖೆ, ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ(ನಿ )ಹೆಮ್ಮಾಡಿ, ಮಹಿಷಾಸುರ ಮರ್ದಿನಿ ಸ್ತ್ರೀಶಕ್ತಿ ಬಗ್ವಾಡಿ ಇವರ ಸಹಕಾರದೊಂದಿಗೆ ವನ ಮಹೋತ್ಸವ ಹಾಗೂ ಗಿಡ ವಿತರಣಾ ಕಾರ್ಯಕ್ರಮ ಬಗ್ವಾಡಿ […]
ಬಿ. ಬಿ. ಹೆಗ್ಡೆ ಕಾಲೇಜು: ವಿಶಾಲಾಕ್ಷಿ ಬಿ. ಹೆಗ್ಡೆಯವರ ಸಂಸ್ಮರಣೆ
ಕುಂದಾಪುರ (ಜುಲೈ 18) : ಡಾ| ಬಿ. ಬಿ. ಹೆಗ್ಡೆ ಕಾಲೇಜಿನ ಮಹಾಪೋಷಕರಾದ ದಿವಂಗತ ವಿಶಾಲಾಕ್ಷಿ ಬಿ. ಹೆಗ್ಡೆಯವರ ಸಂಸ್ಮರಣಾ ಕಾರ್ಯಕ್ರಮವನ್ನು ಕಾಲೇಜಿನ ಇಂಗ್ಲೀಷ್ ವಿಭಾಗದ ಆಶ್ರಯದಲ್ಲಿ ಆಯೋಜಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ದೀಪ ಪ್ರಜ್ವಲಿಸಿ, ಪುಷ್ಪಾರ್ಚನೆಗೈದು, ಮೃತರ ಆತ್ಮಕ್ಕೆ ಚಿರಶಾಂತಿ ಕೋರಿದರು. ಉಪಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಪ್ರಸ್ತಾವಿಸಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಶ್ರೀಮತಿ ದೀಪಿಕಾ ಜಿ. ಸ್ವಾಗತಿಸಿ, ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕರಾದ […]
ಎಚ್. ಎಮ್. ಎಮ್. ಮತ್ತು ವಿ. ಕೆ. ಆರ್. ಶಾಲೆ : ಕೃಷಿ ಭೂಮಿಯಲ್ಲಿ ಒಂದು ದಿನ
ಕುಂದಾಪುರ (ಜು15): ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ಕೃಷಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ನೆಟ್ಟಿ ಮಾಡಿದ ಮಕ್ಕಳ ಆಸಕ್ತಿ ಮತ್ತು ಉತ್ಸಾಹ ನಮಗೆ ಸಂತಸವನ್ನು ನೀಡಿದೆ ಎಂದು ಕುಂದಾಪುರದ ಕೃಷಿಕರಾದ ಕೋಟ್ಯಾನ್ ಮನೆಯವರು ಹೇಳಿದರು. ಎಚ್ ಎಮ್ ಎಮ್ ಮತ್ತು ವಿ ಕೆ ಆರ್ ಶಾಲೆಗಳಲ್ಲಿ ನೋಡುತ್ತ ತಿಳಿ ಮಾಡುತ್ತ ಕಲಿ ಎನ್ನುವ ಆಶಯದೊಂದಿಗೆ ಹಮ್ಮಿಕೊಂಡ ನಮ್ಮ ನಡೆ ಕೃಷಿ ಭೂಮಿ ಕಡೆ ಎನ್ನುವ ವಿದ್ಯಾರ್ಥಿಗಳ ಕಾರ್ಯ ಚಟುವಟಿಕೆ ಕುರಿತು ಅವರು […]










