ಬ್ರಹ್ಮಾವರ(ನ ,17):ರೋಟರಿ ಕ್ಲಬ್ ಬ್ರಹ್ಮಾವರದ ಆಶ್ರಯದಲ್ಲಿ ಅಲ್ಲಿನ ರೋಟರಾಕ್ಟ್ ಕ್ಲಬ್ ಸಹಯೋಗದೊಂದಿಗೆ ಬ್ರಹ್ಮಾವರದ ರೋಟರಿ ಹಾಲ್ ನಲ್ಲಿ ಕಳೆದ ಶನಿವಾರ ರೋಟರಾಕ್ಟ್ ಕ್ಲಬ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಜಿಲ್ಲಾಮಟ್ಟದ ಸಾಂಸ್ಕೃತಿಕ ಉತ್ಸವ ಕಲಾ ಸಂಗಮದಲ್ಲಿ ಅತ್ಯುತ್ತಮವಾದ ನಿರ್ವಹಣೆಯನ್ನು ನೀಡುವ ಮೂಲಕ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರೋಟರಾಕ್ಟ್ ಕ್ಲಬ್ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಎಂಟು ತಂಡಗಳು ಭಾಗವಹಿಸಿದ್ದ ಈ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸರಸ್ವತಿ ವಿದ್ಯಾಲಯದ ರೋಟರಾಕ್ಟ್ ವಿದ್ಯಾರ್ಥಿಗಳು ನಿರೂಪಣೆಯಲ್ಲಿ ಪ್ರಥಮ […]
Category: ನಮ್ಮ ಕುಂದಾಪುರ
ನಮ್ಮ ಕುಂದಾಪುರ
ಸಂಜಿತ್ ಎಂ ದೇವಾಡಿಗ ಸ್ಯಾಕ್ಸೋಫೋನ್ ವಾದನ ಕಾರ್ಯಕ್ರಮ
ಕಾರ್ಕಳ( ನ ,17): ಕಾರ್ಕಳದ ಅಜೆಕಾರುವಿನ ಶ್ರೀ ರಾಮಮಂದಿರದಲ್ಲಿ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ , ಉಡುಪಿ ಜಿಲ್ಲಾ ಪತ್ರಕರ್ತರ ವೇದಿಕೆ ಹಾಗೂ ಇತರ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಗೌರವ 2021ರ ಸಮಾರಂಭದಲ್ಲಿ ಕುಂದಾಪುರ ತಾಲೂಕಿನ ಗಂಗೊಳ್ಳಿಯ ಬಾಲ ಕಲಾವಿದ ಸಂಜಿತ್ ಎಂ ದೇವಾಡಿಗ ಸ್ಯಾಕ್ಸೋಫೋನ್ ವಾದನ ಕಾರ್ಯಕ್ರಮವನ್ನು ನೀಡಿದರು. ತವಿಲ್ ನಲ್ಲಿ ಗೋಪಾಲ ದೇವಾಡಿಗ, ಮತ್ತು ಹರ್ಷವರ್ಧನ್ ಖಾರ್ವಿ, ತಾಳದಲ್ಲಿ ಮಾಧವ […]
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಡು ಗೋಪಾಡಿ: ಖ್ಯಾತ ಗಾಯಕ ಡಾ.ಗಣೇಶ್ ಗಂಗೊಳ್ಳಿ ಯವರಿಗೆ ಸನ್ಮಾನ
ಕೋಟೇಶ್ವರ (ನ,14): ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಡು ಗೋಪಾಡಿ ಇಲ್ಲಿ ನ,14 ರಂದು ನಡೆದ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ರವರ ಜನ್ಮ ದಿನಾಚರಣೆಯ ಅಂಗವಾಗಿ ಆಚರಿಸಲಾಗುವ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಲೆಯ ಶಾಲಾಭಿವೃದ್ಧ ಸಮಿತಿಯ ಮಾಜಿ ಅಧ್ಯಕ್ಷರು, ತಮಿಳುನಾಡು ಹೊಸೂರಿನ ಇಂಡಿಯನ್ ಎಂಪಾಯಾರ್ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪದವಿ ಪಡೆದ ಖ್ಯಾತ ಗಾಯಕರಾದ ಡಾ.ಗಣೇಶ್ ಗಂಗೊಳ್ಳಿ ಅವರನ್ನು ಶಾಲಾಭಿವೃದ್ಧಿ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ […]
ಕುಂದಾಪ್ರ ಕನ್ನಡ ಬಳಗ ಗಲ್ಫ್ ವತಿಯಿಂದ ಉದ್ಯಮಿ ಶ್ರೀ ಗೋವಿಂದ ಬಾಬು ಪೂಜಾರಿಯವರಿಗೆ ಸನ್ಮಾನ
ಕುಂದಾಪುರ (ನ,15) : ದುಬೈ ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಹೆಸರಾಂತ ಹೋಟೆಲ್ ಉದ್ಯಮಿ ಹಾಗೂ ಕೊಡುಗೈದಾನಿ ಶ್ರೀ ಗೋವಿಂದ ಬಾಬು ಪೂಜಾರಿಯವರನ್ನುಕರ್ನಾಟಕ ರಾಜ್ಯ ಶಿಕ್ಷಣ ಸಚಿವರಾದ ಶ್ರೀ ಬಿ.ಸಿ ನಾಗೇಶ್ ರವರು ಸನ್ಮಾನಿಸಿದರು. ಈ ಸಂದರ್ಭ ನಮ್ಮ ಕುಂದಾಪ್ರ ಕನ್ನಡ ಬಳಗದ ಗೌರವಾಧ್ಯಕ್ಷರಾದ ವಕ್ವಾಡಿ ಪ್ರವೀಣ್ ಶೆಟ್ಟಿ ಅಧ್ಯಕ್ಷರಾದ ಸಾಧನ್ದಾಸ್, ಉಪಾಧ್ಯಕ್ಷರಾದ ದಿನೇಶ್ ದೇವಾಡಿಗ ನಾಗೂರು,ಕೃಷ್ಣಪ್ರಸಾದ್ ಅಡ್ಯಂತಾಯ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ: ಜಾನಪದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
ಉಡುಪಿ (ನ,9): ಕನ್ನಡ ಜಾನಪದ ಪರಿಷತ್ ಬೆಂಗಳೂರು ಹಾಗೂ ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕದ ವತಿಯಿಂದ ಜಾನಪದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ಉಡುಪಿಯ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನ,08 ರಂದು ನಡೆಯಿತು.ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರಾದ ಡಾ.ಎಸ್ ಬಾಲಾಜಿ ರವರು ಮಾತನಾಡಿ ಜಾನಪದ ಮೂಕಾದರೆ ಮಾನವ ಜಾನಂಗ ಮೂಕ ಆದಂತೆ,ಆದ್ದರಿಂದ ಜಾನಪದ ಕಲೆ ಸಂಸ್ಕತಿಯನ್ನು ಇಂದಿನ ಯುವ ಜನಾಂಗ ಉಳಿಸಿ ಬೆಳೆಸ ಬೇಕೆಂದು […]
ಜೀವರಕ್ಷಕ ಭಾಸ್ಕರ್ ತಳಗೊಡುರವರ ಬದುಕನ್ನು ಬೆಳಗಿಸಿದ ದೀಪಾವಳಿ
ಜೀವರಕ್ಷಕ, ಮುಳುಗು ತಜ್ಞ ಭಾಸ್ಕರ್ ಕಳಸ ತಳಗೊಡು, ಈ ಬಡ ಸಂಸಾರ ಆ ಮಕ್ಕಳ ಮೊಗದಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಸಂದರ್ಭದಲ್ಲಿ ಖುಷಿ ತರಿಸಿದ ಎಲ್ಲಾ ಸಮಾಜ ಸೇವಕರಿಗೂ ಶಿರಬಾಗಿ ನಮಸ್ಕರಿಸುವೆ. ಪ್ರತಿಬಿಂಬ ಟ್ರಸ್ಟ್ ಬೆಂಗಳೂರು ಭಾಸ್ಕರ್ ರವರ ಮೂರು ಮಕ್ಕಳಿಗೆ ಅನುಕೂಲವಾಗಲೆಂದು ಶಾಲಾ ಬ್ಯಾಗ್ ಮತ್ತು ಕಲಿಕಾ ಸಾಮಗ್ರಿಗಳು ಮತ್ತು ಬಟ್ಟೆ ಪುಸ್ತಕವನ್ನು ಜೋಡಿಸಿಡಲು ಕಾಪಾಟ್ ಒಂದನ್ನು ಬೆಂಗಳೂರಿನಿಂದ ಕಳಿಸಿಕೊಟ್ಟಿದ್ದಾರೆ. ಕಳಸದ ಕೃಷಿಕರು, ಪತ್ರಕರ್ತರಾದ ರವಿ ಕೆಳಂಗಡಿ […]
ಸಂಜಿತ್ ಎಮ್ ದೇವಾಡಿಗನಿಗೆ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಗೌರವ ಪ್ರಶಸ್ತಿ
ಗಂಗೊಳ್ಳಿ(ನ,7): ಕಾರ್ಕಳ ತಾಲೂಕು ಅಜೆಕಾರುವಿನ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯು ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಕೊಡಮಾಡುವ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಗೌರವ 2021 ಪ್ರಶಸ್ತಿಗೆ ಕುಂದಾಪುರದ ಗಂಗೊಳ್ಳಿಯ ಸ್ಯಾಕ್ಸೋಫೋನ್ ವಾದನದ ಬಾಲಪ್ರತಿಭೆ ಸಂಜಿತ್ ಎಮ್ ದೇವಾಡಿಗ ಇವರು ಆಯ್ಕೆಯಾಗಿರುತ್ತಾರೆ. ಗಂಗೊಳ್ಳಿಯ ಕೊಂಚಾಡಿ ರಾಧಾ ಶೆಣೈ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ಕಲಿಯುತ್ತಿರುವ ಸಂಜಿತ್ ಎಮ್ ದೇವಾಡಿಗ ಗಂಗೊಳ್ಳಿಯ ಖ್ಯಾತ ಸ್ಯಾಕ್ಸೋಫೋನ್ ವಾದಕ ಮತ್ತು ಚಿತ್ರಕಲಾ ಶಿಕ್ಷಕ […]
ಉಡುಪಿ: ನ ,08 ರಂದು ಉಡುಪಿಯ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಜಾನಪದ ರಾಜ್ಯೋತ್ಸವ ಕಾರ್ಯಕ್ರಮ
ಉಡುಪಿ (ನ,06): ಕನ್ನಡ ಜಾನಪದ ಪರಿಷತ್ ಬೆಂಗಳೂರು,ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ಉಡುಪಿ ಜಿಲ್ಲೆ ಹಾಗೂ ಬಾಲಕಿಯರ ಪದವಿ ಪೂರ್ವ ಕಾಲೇಜು ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ಜಾನಪದ ರಾಜ್ಯೋತ್ಸವ ಕಾರ್ಯಕ್ರಮವು ನ,8 ರಂದು ಉಡುಪಿಯ ಬಾಲಕಿಯರ ಪದವಿ ಪೂರ್ವ ಕಾಲೇಜು ಸಭಾ ಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ.ಎಸ್ ಬಾಲಾಜಿಯವರು ನೆರವೇರಿಸಲಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರುದ್ರೇಗೌಡ ರವರು […]
ದೀಪಾವಳಿಯ ನೆನಪಿನಂಗಳ
ದೀಪಾವಳಿ ……ದೀಪಾವಳಿ…………. ಗೋವಿಂದ ಲೀಲಾವಳಿ.. ಅಳಿಯ ಮಗನಾ…….. ” ಹರಿಯಾ ಆ ಟೇಪ್ ಸೌಂಡ್ ಒಂಚೂರ್ ಕಮ್ಮಿ ಮಾಡ್.. ಕೆಮಿ ಕೆಪ್ಪ್ ಆಯ್ತಾ ನಿಮ್ದ್?”… ಗಡಾ ಹೋಯ್ ಕಮ್ಮಿ ಮಾಡ್, ಇಲ್ದಿರ್ ಅಪ್ಪ ಪಟಾಕಿಗ್ ದುಡ್ದ್ ಕೊಡುದಿಲ್ಲ.. ಹ್ಮಾಂ.. ಸರಿ; ಗಳಿನ್ ಒಟ್ಟಿಯಂಗ್ ದುಡ್ಡ್ ಇಟ್ಟದ್ ತೆಗುವಾ? ಪಟಾಕಿಗ್ ಆತ್ತ್…. ಉದ್ದ ತೆಮಿಗ್ ಕಟ್ಟದ್, ಬಿದ್ರಂಗ್ ಮಾಡದ್ ಗೂಡ್ ದೀಪ ಗಾಳಿಗ್ ಬಾಲ ಬೀಸ್ತಾ ಇತ್ತು…ಬಿಸ್ಲ್ ನೆತ್ತಿಗ್ ಏರುಕ್ ಹತ್ತಿತ್…. ಸೆಗ್ಣಿ […]
ರಾಷ್ಟಮಟ್ಟದ ಕ್ರೀಡಾಕೂಟಕ್ಕೆ ಶಿಕ್ಷಕ ನಾಗರಾಜ ಖಾರ್ವಿ ಆಯ್ಕೆ
ಕುಂದಾಪುರ (ಅ,23): ದಾವಣಗೆರೆಯ ಹರಿಹರದಲ್ಲಿ ನಡೆದ ರಾಜ್ಯಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದ ಈಜುಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಶಿಕ್ಷಕ ನಾಗರಾಜ ಖಾರ್ವಿ ಬ್ರೆಸ್ಟ್ ಸ್ಟ್ರೋಕ್ 50 ಮೀ ಚಿನ್ನಬ್ರೆಸ್ಟ್ ಸ್ಟ್ರೋಕ್ 100 ಮೀ ಚಿನ್ನಬ್ರೆಸ್ಟ್ ಸ್ಟ್ರೋಕ್ 200 ಮೀ ಬೆಳ್ಳಿ50×4 ಮೆಡ್ಲೆ ರಿಲೇ ಕಂಚು100X4 ಫ್ರೀ ಸ್ಟೈಲ್ ರಿಲೇ ಕಂಚು ಪಡೆದು ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಇವರುಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಕಂಚುಗೋಡಿನ ನಿವಾಸಿಯಾಗಿದ್ದು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ […]