ಹೆಮ್ಮಾಡಿ(ಮಾ.10) : ದೇಶದ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಯಾದ ಐಐಟಿ ಬಾಂಬೆ ನಡೆಸುವ ಬ್ಯಾಚುಲರ್ ಆಫ್ ಡಿಸೈನ್ (B.Des) ಕೋರ್ಸ್ ಪ್ರವೇಶ ಪಡೆಯಲು ನಡೆಯುವ ಯುಸೀಡ್ (UCEED) 2026 ಪ್ರವೇಶ ಪರೀಕ್ಷೆಯಲ್ಲಿ ಹೆಮ್ಮಾಡಿ ಜನತಾ ಪಿಯು ಕಾಲೇಜಿನ ವಿದ್ಯಾರ್ಥಿ ಸುಜಲ್ ತೋಳಾರ್ ಅಮೋಘ ಸಾಧನೆ ಮಾಡಿದ್ದಾರೆ. ಜನವರಿ 2026 ರಲ್ಲಿ ನಡೆದ ಈ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಸುಜಲ್ ತೋಳಾರ್ ಪ್ರಥಮ ಪ್ರಯತ್ನದಲ್ಲೇ ರಾಷ್ಟ್ರಮಟ್ಟದಲ್ಲಿ ಕೆಟಗರಿ ವಿಭಾಗದಲ್ಲಿ 179ನೇ Rank ಪಡೆದು […]
Category: ಸಾಧಕರು
ನಮ್ಮ ಕುಂದಾಪುರ —> ಸಾಧಕರು
“ಉತ್ತಮ ಶಿಕ್ಷಕ” ರಾಜ್ಯ ಪ್ರಶಸ್ತಿ ಪುರಸ್ಕೃತ “ಚಂದ್ರ ಎನ್ ಬಿಲ್ಲವ”
ಒಬ್ಬ ವ್ಯಕ್ತಿಯ ನಡೆತೆ,ಕೌಶಲ್ಯ,ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದುದ್ದು ಆ ಹಿನ್ನೆಲೆಯಲ್ಲಿ ಶಿಕ್ಷಕ ವೃತ್ತಿ ತುಂಬಾ ಶ್ರೇಷ್ಠವಾದದ್ದು ಎಂದು ಎಪಿಜೆ ಅಬ್ದುಲ್ ಕಲಾಂ ಹೇಳಿರುವ ಮಾತು ಅಕ್ಷರಶ ಸತ್ಯ. ಯಾವೊಬ್ಬ ಮಗನು ಜನ್ಮ ಕೊಟ್ಟ ತಾಯಿಯನ್ನು, ಬಾಳು ಕೊಟ್ಟ ತಂದೆಯನ್ನು ಹಾಗೆಯೇ ಅಕ್ಷರ ಕಲಿಸಿದ ಗುರುಗಳನ್ನು ಎಂದಿಗೂ ಮರೆಯುವುದಿಲ್ಲ. ನಮ್ಮ ಜೀವನದ ದಾರಿಗೆ ಅರ್ಥ ಕಲ್ಪಿಸಿ ಸ್ವತಂತ್ರವಾಗಿ ತೀರ್ಮಾನ ಕೈಗೊಳ್ಳಲು ನಮ್ಮನ್ನು ವಿದ್ಯಾವಂತರಾಗಿಸಿದ ಗುರುಗಳೇ ಶ್ರೇಷ್ಠರು. ತಮ್ಮ ಜ್ಞಾನದ ಭಂಡಾರವನ್ನು […]
ಯೋಗಾಸನಾ ಸ್ಪರ್ಧೆ: ಸಂದೀಪ್ ಪೂಜಾರಿ ತ್ರಾಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಕುಂದಾಪುರ( ಆ,24): ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ (ನೊಂ.)ಬೆಂಗಳೂರು ಮತ್ತು ಮುರುಘ ರಾಜೇಂದ್ರ ಬೃಹನ್ಮಠ, ಚಿತ್ರದುರ್ಗ ಇವರ ಸಹಯೋಗದೊಂದಿಗೆ ರಾಜ್ಯ ಮಟ್ಟದ ಯೋಗಾಸನಾ ಸ್ಪರ್ಧೆ ಶ್ರೀ ಅನುಭವ ಮಂಟಪ ಮುರುಘ ರಾಜೇಂದ್ರ ಬೃಹನ್ಮಠ, ಚಿತ್ರದುರ್ಗ ದಲ್ಲಿ ನಡೆದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಗ್ರಾಮ ಪಂಚಾಯತ್ ತ್ರಾಸಿ ಸಿಬ್ಬಂದಿ ಸಂದೀಪ್ ಪೂಜಾರಿಯವರು ವಿವಿಧ ಹಂತದ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟದಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆ […]
ಸೋಮಶೇಖರ್ ಖಾರ್ವಿಯವರಿಗೆ ಬೆಸ್ಟ್ ಪೋಸರ್ ಪ್ರಶಸ್ತಿ
ಕುಂದಾಪುರ (ಅ. 15): ಉಚ್ಚಿಲ ದಸರಾ ಉತ್ಸವದ ಪ್ರಯುಕ್ತ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆದ ಬಾಡಿಬಿಲ್ಡಿಂಗ್ ಸ್ಪರ್ಧೆಯ 60 ಕೆಜಿ ವಿಭಾಗದಲ್ಲಿ ಭಾಗವಹಿಸಿದ ಸೋಮಶೇಖರ್ ಖಾರ್ವಿ ಕಂಚುಗೋಡುರವರು ಬೆಸ್ಟ್ ಪೊಸರ್ ಪ್ರಶಸ್ತಿ ಪಡೆದಿದ್ದಾರೆ. ಈಗಾಗಲೇ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುವ ಸೋಮಶೇಖರ ಖಾರ್ವಿ ಯವರು ಮಿಸ್ಟರ್ ಇಂಡಿಯಾ ಆಗುವ ಕನಸನ್ನು ಹೊಂದಿದ್ದಾರೆ.
ಕನ್ನಡ ಕರಾವಳಿ ಭಾಗದಲ್ಲಿ ರೋಗಿಗಳಿಗೆ ರಕ್ತದ ಅವಶ್ಯಕತೆ ಕೇಳಿ ಬಂದಾಗ ಮೊದಲು ನೆನಪಾಗುವ ಹೆಸರು ಸತೀಶ್ ಸಾಲ್ಯಾನ್ ಮಣಿಪಾಲ್
ದಾನದಲ್ಲೇ ಅತ್ಯಂತ ಶ್ರೇಷ್ಠ ದಾನ ಅದು ರಕ್ತದಾನ ಎಂದು ನಂಬಿದ ವ್ಯಕ್ತಿ ರಕ್ತದ ಆಪತ್ಪಾಂಧವ ಶ್ರೀ ಸತೀಶ್ ಸಾಲ್ಯಾನ್ ಮಣಿಪಾಲ್ . ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಸೇವೆಯಲ್ಲಿ ದೇವರನ್ನು ಕಾಣುವ ವ್ಯಕ್ತಿತ್ವ ಸತೀಶರದ್ದು. ಸತೀಶ್ ಸಾಲ್ಯಾನ್ ಓರ್ವ ರಕ್ತದಾನಿ, ರಕ್ತದ ಜೊತೆಗಾರ ಎನ್ನುವುದು ಎಷ್ಟು ಸತ್ಯವೋ ಅಷ್ಟೇ ಅವರೊಬ್ಬ ಅಪ್ಪಟ ಹೃದಯವಂತ, ಸಂವೇದನಶೀಲ ಮತ್ತು ಮಾನವೀಯತೆ ತುಂಬಿಕೊಂಡಿರುವ ಕರುಣಾಮಯಿ ಮತ್ತು ಮಗುವಿನಂತ ಮನಸ್ಸಿನವರು ಎಂದರೆ ಅತೀಶಯೋಕ್ತಿ ಆಗದು. ಸತೀಶ್ […]
ರೋಟರಿ ಕ್ಲಬ್ ಕೋಟೇಶ್ವರ: ಪದಪ್ರದಾನ ಸಮಾರಂಭ-ಅಧ್ಯಕ್ಷರಾಗಿ ಸತೀಶ ಎಂ. ನಾಯ್ಕ ಅಧಿಕಾರ ಸ್ವೀಕಾರ
ಕೋಟೇಶ್ವರ, (ಜು.15) :ರೋಟರಿ ಕ್ಲಬ್ ಕೋಟೇಶ್ವರ ಇದರ2024-25 ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಜುಲೈ 13 ರಂದು ತೆಕ್ಕಟ್ಟೆ ಯ ಗ್ರೇಸ್ ಕನ್ವೆನ್ಸನ್ ಹಾಲ್ ನಲ್ಲಿನಡೆಯಿತು. ನೂತನ ಅಧ್ಯಕ್ಷ ಸತೀಶ ಎಂ. ನಾಯ್ಕ ಮತ್ತು ಕಾರ್ಯದರ್ಶಿ ಸುಭಾಸ್ ಚಂದ್ರ ಶೆಟ್ಟಿ ಅವರಿಗೆ ರೋಟರಿ ಜಿಲ್ಲೆ 3181ರ ಜಿಲ್ಲಾ ಗವರ್ನರ್ ಸಲಹೆಗಾರರದ ಎಂಪಿಎಚ್ಎಫ್ ಬಿ ಶೇಖರಶೆಟ್ಟಿ ಪದಪ್ರದಾನ ನೆರವೇರಿಸಿದರು. 2023-24ನೇ ಸಾಲಿನ ಅಧ್ಯಕ್ಷ ಜಗದೀಶ ಮೊಗವೀರ ಸಮಾರಂಭದ ಅಧ್ಯಕ್ಷತೆ […]
ಪದ್ಮಶ್ರೀ ಪ್ರಶಸ್ತಿಗೆ ಉಡುಪಿ ಯುವ ಸಾಧಕ ಸಂಜಯ್ ದಯಾನಂದ ಕಾಡೂರು ನಾಮನಿರ್ದೇಶನ
ಉಡುಪಿ(ಜು,14): ಉಡುಪಿ ಜಿಲ್ಲೆಯ ಕಾಡೂರು ಶ್ರೀಮತಿ ಸುನೀತಾ ಮತ್ತು ದಯಾನಂದ ಪೂಜಾರಿಯವರ ಪುತ್ರ ಸಂಜಯ್ ದಯಾನಂದ ಪೂಜಾರಿ ಯವರು 2025ರ ಭಾರತದ 4ನೇ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದಾರೆ. ಇವರು ಯುವ ಕಲಾವಿದ, ಉದ್ಯಮಿ, ಸಮಾಜ ಸೇವಕ ಹಾಗೂ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದರು. ಎಲ್ಲರ ಮನದಲ್ಲೂ ಮೈಕ್ರೊ ಸಂಜು, ನ್ಯಾನೋ ಗಣೇಶ ಎಂದೇ ಗುರುತಿಸಿಕೊಂಡಿದ್ದಾರೆ. ಮೈಕ್ರೋ ಕಲಾವಿದರಾಗಿ 2010 ರಲ್ಲಿ ತನ್ನ ಮೈಕ್ರೋ ಗಣೇಶನ ವಿಗ್ರಹಕ್ಕಾಗಿ […]
ಏಷ್ಯಾನ್ ಪೆಷಿಫಿಕ್ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್:ವಿಜಯ ಕಾಂಚನ್ ಬೈಕಂಪಾಡಿಯವರಿಗೆ ಚಿನ್ನದ ಪದಕ
ಉಡುಪಿ (ಜು,10): ದಕ್ಷಿಣ ಆಫ್ರಿಕಾದಲ್ಲಿ ಇತ್ತೀಚೆಗೆ ಜರಗಿದ ಏಷ್ಯಾನ್ ಪೆಷಿಫಿಕ್ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ -2024ನಲ್ಲಿ 105ಕೆಜಿ ವಿಭಾಗದ M2 ನಲ್ಲಿ 2 ಚಿನ್ನದ ಪದಕ ಪಡೆದು ಬೆಸ್ಟ್ ಲಿಫ್ಟಿರ್ ಪ್ರಶಸ್ತಿಯನ್ನು ವಿಜಯ ಕಾಂಚನ್ ಬೈಕಂಪಾಡಿ ಪಡೆದು ಸಾಧನೆಗೈದಿದ್ದಾರೆ. ಇವರು ಏಕಲವ್ಯ ಪಶಸ್ತಿ ವಿಜೇತ ಸತೀಶಕುಮಾರ್ ಕುದ್ರೋಳಿಯವರ ಶಿಷ್ಯ, ಸೆನ್ ಕ್ರೈಂ ಮಂಗಳೂರು ಸಿಟಿ ಯಲ್ಲಿ ಉದ್ಯೋಗ ಹಾಗೂ ಮಂಗಳೂರು ಬಾಲಾoಜನೇಯ,ರಾಮಾಂಜನೇಯ,ಪವರ್ ಜೋನ್,ಬ್ಲಾಕ್ ರಾಕ್, ಮೈ ಫಿಟ್ನೆಸ್ ಜಿಮ್ […]
ಯೋಗ ಕ್ಷೇತ್ರದ ಅಪ್ರತಿಮ ಬಾಲ ಪ್ರತಿಭೆ – ಲಾಸ್ಯ ಮಧ್ಯಸ್ಥ
ಪ್ರತಿಭೆ ಮತ್ತು ರೂಪ ಭಗವಂತನ ಕೊಡುಗೆ ಎಂದು ಹೇಳುತ್ತಾರೆ. ಕೀರ್ತಿ ಮತ್ತು ಹಣ ಮನುಷ್ಯನ ಸೃಷ್ಟಿ.ಗೆಲುವಿಗೆ ಪ್ರತಿಭೆ ಬೇಕು. ಪ್ರತಿಯೊಂದು ಮಕ್ಕಳಲ್ಲೂ ಪ್ರತಿಭೆ ಇದ್ದೇ ಇರುತ್ತದೆ. ಕೆಲವರ ಪ್ರತಿಭೆ ಮುಖ್ಯವಾಹಿನಿಗೆ ಬಂದರೆ ಇನ್ನು ಕೆಲವರದು ತೆರೆಮರೆಯಲ್ಲೇ ಇರುತ್ತದೆ. ನಿಜವಾದ ಪ್ರತಿಭಾವಂತರಿಗೆ ಮತ್ತು ಸಾಧಕರಿಗೆ ಪ್ರಚಾರ ಹಾಗೂ ಪ್ರೋತ್ಸಾಹ ಅಗತ್ಯ. ಆ ನಿಟ್ಟಿನಲ್ಲಿ ತೆರೆಮರೆಯ ಪ್ರತಿಭೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು. ಪ್ರತಿಭಾವಂತರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲಿ ಎನ್ನುವ […]
ಸರಸ್ವತಿ ವಿದ್ಯಾಲಯ ಗಂಗೊಳ್ಳಿ:ಉಪನ್ಯಾಸಕ ಕೃಷ್ಣ ಗುಜ್ಜಾಡಿಯವರಿಗೆ ಬೀಳ್ಕೊಡುಗೆ
ಗಂಗೊಳ್ಳಿ(ಸೆ,03): ವಿದ್ಯಾರ್ಥಿಗಳ ಬೆಳವಣಿಗೆಯನ್ನು ಪ್ರೋತ್ಸಾಹಿಸುವುದರ ಜೊತೆಗೆ ತಾನು ಕೂಡ ಬೆಳೆಯುವುದು ಓರ್ವ ನಿಜವಾದ ಶಿಕ್ಷಕನ ಸಾಮರ್ಥ್ಯವಾಗಿರುತ್ತದೆ. ಬದುಕಿನಲ್ಲಿ ಕಲಿಕೆ ನಿರಂತರವಾಗಿರಬೇಕು ಎಂದು ಜಿ. ಎಸ್ ವಿ. ಎಸ್ ಅಸೋಸಿಯೇಷನ್ ಕಾರ್ಯದರ್ಶಿ ಎಚ್ ಗಣೇಶ್ ಕಾಮತ್ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ10 ವರ್ಷಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿ ಇದೀಗ ಸರಕಾರಿ ಶಾಲಾ ಶಿಕ್ಷಕರಾಗಿ ನೇಮಕಗೊಂಡು ಬೇರೆಡೆಗೆ ತೆರಳುತ್ತಿರುವ ಭೌತಶಾಸ್ತ್ರ ಉಪನ್ಯಾಸಕ ಕೃಷ್ಣ ಗುಜ್ಜಾಡಿ […]










