ಕುಂದಾಪುರ ( ಏ.24): ಮಂಗಳೂರು ವಿ.ವಿಯ 2020-21 ನೇ ಸಾಲಿನ ಅಂತಿಮ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿನಿ ಕಾವ್ಯಾ ದೇವಾಡಿಗ ಬಿ.ಸಿ.ಎ ಪದವಿಯಲ್ಲಿ ಪ್ರಥಮ ರ್ಯಾಂಕ್ ಪಡೆದುಕೊಂಡ ಹಿನ್ನೆಲೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಕೆ.ಉಮೇಶ್ ಶೆಟ್ಟಿ ಹಾಗೂ ಭೋಧಕ ವರ್ಗ ಕಾವ್ಯಾರವರ ಸ್ವಗ್ರಹಕ್ಕೆ ತೆರಳಿ ಅಭಿನಂದನೆ ಸಲ್ಲಿಸಿದರು. ಈ ಸಂಧರ್ಭದಲ್ಲಿ ಕಾವ್ಯಾ ಹಾಗೂ ಅವರ ತಾಯಿಗೆ ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ […]
Category: ಮಹಿಳೆಯರು
ನಮ್ಮ ಕುಂದಾಪುರ —> ಸಾಧಕರು —> ಮಹಿಳೆಯರು
ಶ್ವೇತಾ ಪೂಜಾರಿಗೆ ಚಿನ್ನದ ಪದಕ
ಕುಂದಾಪುರ( ಏ.18): ಬೆಂಗಳೂರಿನ ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ಬಿಸಿನೆಸ್ ಅಂಡ್ ರಿಸರ್ಚ್ ನ ವಿದ್ಯಾರ್ಥಿನಿ ಶ್ವೇತಾ ಪೂಜಾರಿ ಬೆಂಗಳೂರು ವಿಶ್ವವಿದ್ಯಾನಿಲಯದ 2019- 21 ರ ಎಂಬಿಎ ಪರೀಕ್ಷೆಯ ಮಾರ್ಕೆಟಿಂಗ್ ಮತ್ತು ಫೈನಾನ್ಸ್ ವಿಭಾಗದ ಪರೀಕ್ಷೆಯಲ್ಲಿ ಕಾಲೇಜಿಗೆ ಅತ್ಯಧಿಕ ಅಂಕ ಗಳಿಸುವ ಮೂಲಕ ಚಿನ್ನದ ಪದಕವನ್ನು ಗಳಿಸಿರುತ್ತಾರೆ. ಪಠ್ಯಕ್ರಮದ ಹೊರತಾಗಿ ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿರುವ ವಿದ್ಯಾರ್ಥಿಗಳಿಗೆ ನೀಡಲಾಗುವ ಐ ಎಸ್ ಬಿ ಆರ್ ಕಾಲೇಜಿನ ಜೆಮ್ಸ್ ಮತ್ತು […]
ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ :ಶಿಕ್ಷಕಿ ಕೃಪಾ ರಾಜ್ಯಮಟ್ಟಕ್ಕೆ ಆಯ್ಕೆ
ಮಂಗಳೂರು (ಮಾ.16): ದಕ್ಷಿಣ ಕನ್ನಡ ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಸೈಂಟ್ ಅಲೋಸಿಯಸ್ ಈಜುಕೊಳದಲ್ಲಿ ನಡೆದ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟದ ಈಜುಸ್ಪರ್ಧೆಯಲ್ಲಿ ಭಾಗವಹಿಸಿದ ಸರಕಾರಿ ಪ್ರೌಢಶಾಲೆ ಮುಲ್ಲಕಾಡು ಇಲ್ಲಿನ ಹಿಂದಿ ಶಿಕ್ಷಕಿ ಕೃಪಾ ರವರು 200 ಮೀ. ಫ್ರೀ ಸ್ಟೈಲ್ ಚಿನ್ನದ ಪದಕ, 100 ಮೀ. ಬ್ರೆಸ್ಟ್ ಸ್ಟ್ರೋಕ್ನಲ್ಲಿ ಬೆಳ್ಳಿ ಪದಕ, 50 ಮೀ ಬ್ರೆಸ್ಟ್ ಸ್ಟ್ರೋಕ್ನಲ್ಲಿ ಬೆಳ್ಳಿ ಪದಕ ಪಡೆದು ರಾಜ್ಯಮಟ್ಟಕ್ಕೆ […]
ಉಡುಪಿ: ನವರಾತ್ರಿಯ ಸಂಭ್ರಮದಲ್ಲಿ ಮಹಿಳೆಯರು
ಉಡುಪಿ (ಅ.8): ನವರಾತ್ರಿಯ ಸಡಗರ ದೇಶದೆಲ್ಲೆಡೆ ಮನೆ ಮಾಡುತ್ತಿದ್ದು, ವಿವಿಧ ಸಂಘ -ಸಂಸ್ಥೆ ಗಳಲ್ಲಿ ,ಕಂಪೆನಿಗಳಲ್ಲಿ ಕೆಲಸ ನಿರ್ವಹಿಸುವ ಉದ್ಯೋಗಿಗಳು ಬಣ್ಣ ಬಣ್ಣದ ಉಡುಗೆ ತೊಡುಗೆ ಗಳಲ್ಲಿ ಕಂಗೊಳಿಸಿತ್ತಿದ್ದು ,ನವರಾತ್ರಿಯ ಸಂಭ್ರಮಕ್ಕೆ ಮೆರುಗು ನೀಡುತ್ತಿದ್ದಾರೆ. ಉಡುಪಿಯಲ್ಲಿ ಮಹಿಳೆಯರು ನವರಾತ್ರಿಯ ಪ್ರಯುಕ್ತ ಬಣ್ಣ ಬಣ್ಣದ ಉಡುಗೆ ತೊಡುಗೆಯೊಂದಿಗೆ ಫೋಟೋಗೆ ಫೋಸ್ ನೀಡಿದ ಕ್ಷಣ.
ಕುಂದಾಪುರದ ಕುವರ ಕಿಕ್ ಬಾಕ್ಸರ್ ಅನೀಶ್ ಶೆಟ್ಟಿಗೆ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ
ಪಣಜಿ(ಸೆ,27): ಗೋವಾದ ಪಣಜಿಯಲ್ಲಿ ನಡೆದ ರಾಷ್ಟ್ರೀಯ ಥಾಯ್ ಬಾಕ್ಸಿಂಗ್ ಚಾಂಪಿಯನ್ಷಿಪ್ ನಲ್ಲಿ ಮೊದಲ ಬಾರಿಗೆ ಅಮೆಚೂರು ವಿಭಾಗದಲ್ಲಿ ಸ್ಪರ್ಧಿಸಿದ್ದ ಕರ್ನಾಟಕದ ವೃತ್ತಿಪರ ಕಿಕ್ ಬಾಕ್ಸರ್ ಕುಂದಾಪುರ ಮೂಲದ ಅನೀಶ್ ಶೆಟ್ಟಿ ಬೆಳ್ಳಿಯ ಪದಕ ಪಡೆದಿದ್ದಾರೆ. ವೃತ್ತಿಪರ ಸ್ಪರ್ಧೆಗಳಲ್ಲಿ ಹೆಚ್ಚಿನ ಯಶಸ್ಸನ್ನು ಕಾಣಲು ಗೋವಾದಲ್ಲಿ ತರಬೇತಿ ಪಡೆಯುತ್ತಿರುವ ಅನೀಶ್, ಅಲ್ಲಿಯ ಟ್ರೈಬಲ್ ವಾರಿಯರ್ಸ್ ಗೋವಾ (TWG) ತಂಡವನ್ನು ಪ್ರತಿನಿಧಿಸಿರುತ್ತಾರೆ.ನಾಲ್ಕು ಸುತ್ತಿನ ಹೋರಾಟದಲ್ಲಿ ಅನೀಶ್ ಒಡಿಶಾದ ಸ್ಪರ್ಧಿಯ ವಿರುದ್ಧದ ಅಂತಿಮ ಸುತ್ತಿನಲ್ಲಿ ಪರಾಜಯ ಅನುಭವಿಸಿದರು. […]
ಕನಕದಾಸ ಸಂಶೋಧನಾ ಕೇಂದ್ರಕ್ಕೆ ಡಾ. ಶುಭಾ ಮರವಂತೆ ನಾಮನಿರ್ದೇಶಿತ ಸದಸ್ಯರಾಗಿ ನೇಮಕ
ಶಿವಮೊಗ್ಗ(ಸೆ,27): ನಗರದ ಸಹ್ಯಾದ್ರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಕುಂದಾಪುರ ಮೂಲದ ಡಾ.ಶುಭಾ ಮರವಂತೆ ಯವರನ್ನು ರಾಷ್ಟ್ರೀಯ ಸಂತಕವಿ ಕನಕದಾಸರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಕಾರ್ಯಾನುಷ್ಠಾನ ಮಂಡಳಿಗೆ ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಕೆ. ವೆಂಕಟೇಶಪ್ಪ, ರಾಷ್ಟ್ರೀಯ ಸಂತಕವಿ ಕನಕದಾಸರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ದೈನಂದಿನ ಕಾರ್ಯಚಟುವಟಿಕೆಗಳ ಹಾಗೂ ಕಾರ್ಯಕ್ರಮಗಳ ಅನುಷ್ಠಾನಗಳ ದೃಷ್ಠಿಯಿಂದ […]
ನಿಸ್ವಾರ್ಥ ಕಲಾ ಸೇವಕಿ ಮತ್ತು ಭಜನಾ ಗಾಯಕಿ ಸುಶೀಲಾ ಪೂಜಾರಿ ನಾವುಂದ
ದೇವರ ಮೇಲಿನ ಭಕ್ತಿ ಮತ್ತು ಆಧ್ಯಾತ್ಮಿಕ ವಿಚಾರಗಳು ಪ್ರತಿಯೊಬ್ಬರ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ದೇವರ ಕ್ರಪೆಗೆ ಪಾತ್ರರಾಗಲು ಹಲವು ವಿಧಾನಗಳಿವೆ. ಆದರೆ ಭಜನೆ ಸರಳವಾದ ಮಾರ್ಗ.ಆದರೆ ಆಧುನಿಕತೆಯ ಸ್ಥಿತ್ಯಂತರಕ್ಕೆ ಒಳಗಾದ ಯುವ ಜನತೆ ಆಧ್ಯಾತ್ಮಿಕತೆ , ಭಜನೆ ಹಾಡುವುದು, ಕುಣಿತ ಭಜನೆ, ಜಾನಪದ ಗೀತೆ ಭಾವಗೀತೆಯಂತಹ ಧಾರ್ಮಿಕ ಚಟುವಟಿಕೆಯಿಂದ ದೂರವಾಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಮನೆ-ಮನಗಳಲ್ಲಿ ಭಜನೆಯ ಭಕ್ತಿ -ಭಾವ ಕಡಿಮೆಗೊಳ್ಳುತ್ತಿರುವ ಈ ಆಧುನಿಕ ಕಾಲಘಟ್ಟದಲ್ಲಿ ಭಜನೆಯನ್ನು ಭಕ್ತಿಪೂರ್ವಕವಾಗಿ ಹಾಡುತ್ತಾ, […]
ಗುರು ಮಾತೆ – ಅಕ್ಷರ ಕಲಿಸಿದ ವಿದ್ಯಾ ಸರಸ್ವತಿ : ಸಿಂಗಾರಿ ಅಮ್ಮ ಟೀಚರ್ ನಾವುಂದ
ಗುರು ಎನ್ನುವ ಪರಿಕಲ್ಪನೆಗೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷವಾದ ಸ್ಥಾನವನ್ನು ಕಲ್ಪಿಸಲಾಗಿದೆ. ಏಕೆಂದರೆ ಒರ್ವ ಗುರು ತಂದೆ-ತಾಯಿಯ ಎರಡು ಪಾತ್ರವನ್ನು ಏಕಕಾಲದಲ್ಲಿ ನಿರ್ವಹಿಸಬಲ್ಲವನಾಗಿದ್ದು, ವಿದ್ಯಾರ್ಥಿಗಳನ್ನು ತನ್ನ ಮಕ್ಕಳಂತೆ ಭಾವಿಸುವ ,ಪ್ರೀತಿಸುವ ಹಾಗೂ ತನ್ನ ವಿದ್ಯಾರ್ಥಿಗಳ ಬದುಕನ್ನು ರೂಪಿಸುವ ಮತ್ತು ದೇಶಕ್ಕೆ ಉತ್ತಮ ಪ್ರಜೆಯನ್ನಾಗಿ ರೂಪಿಸುವಲ್ಲಿ ಗುರುವಿನ ಪಾತ್ರ ಮಹತ್ವ ದಾಗಿದೆ. ನಮ್ಮಲ್ಲಿರುವ ಅಜ್ಞಾನವನ್ನು ಹೊರಹಾಕಲು ಶಿಕ್ಷಕರು ಮಾರ್ಗದರ್ಶಕರಾಗುತ್ತಾರೆ. ಗುರು ಎಂಬ ಶಬ್ದದ ಅರ್ಥವು ಅಜ್ಞಾನವನ್ನು ಓಡಿಸುವುದೇ ಆಗಿದೆ. ಪ್ರತಿಯೊಬ್ಬರ ಜೀವನದ ಏಳು- ಬೀಳುಗಳಿಗೆ […]