ಕುಂದಾಪುರ (ಅ,09): ಹಲವಾರು ಅಲ್ಬಂ ಹಾಡುಗಳು, ಸಿನಿಮಾ ಹಾಡನ್ನು ಹಾಡಿರುವ ಬಹುಮುಖ ಪ್ರತಿಭೆ ಗಾಯಕ ಅಕ್ಷಯ್ ಬಡಾಮನೆ ಈ ವರ್ಷದ RIHA Raising Star of India ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇತ್ತೀಚೆಗೆ RIHA India Organisation ಏರ್ಪಡಿಸಿದ್ದ RIHA Stars of India ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಅತ್ತ್ಯುತ್ತಮ ಗಾಯಕ ಪ್ರಶಸ್ತಿಯನ್ನು ಗಾಯಕ ಅಕ್ಷಯ್ ಬಡಾಮನೆಯವರಿಗೆ ಪ್ರದಾನ ಮಾಡಲಾಯಿತು. ಮೂಲತಃ ಕುಂದಾಪುರದ ಬೈಂದೂರಿನ ಕೆರ್ಗಾಲು ನಂದನವನ ಗ್ರಾಮದ ಅಕ್ಷಯ್ ಸುಮಾರು […]
Category: ಸಾಧಕರು
ನಮ್ಮ ಕುಂದಾಪುರ —> ಸಾಧಕರು
ಮೈಸೂರು ದಸರಾ ಪ್ರಯುಕ್ತ ಬಾಡಿ ಬಿಲ್ಡಿಂಗ್ : ಸೋಮಶೇಖರ್ ಖಾರ್ವಿ ದ್ವೀತಿಯ
ಕುಂದಾಪುರ(ಅ,8): ಹಲವಾರು ರಾಜ್ಯ ಮತ್ತು ಅಂತರ್ ರಾಜ್ಯ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಪಡೆದಿರುವ ಕುಂದಾಪುರ ತಾಲೂಕಿನ ಕಂಚುಗೋಡು ನಿವಾಸಿ ಸೋಮಶೇಖರ್ ಖಾರ್ವಿಯವರು ಇತ್ತೀಚೆಗೆ ಮೈಸೂರಿನಲ್ಲಿ ದಸರಾ ಪ್ರಯುಕ್ತ ನಡೆದ ಬಾಡಿ ಬಿಲ್ಡಿಂಗ್ 65 ಕೆ.ಜಿ ವಿಭಾಗದಲ್ಲಿ ದ್ವೀತಿಯ ಸ್ಥಾನ ಪಡೆದಿರುತ್ತಾರೆ. ಸೋಮ ಶೇಖರ್ ಖಾರ್ವಿಯವರ ಈ ಸಾಧನೆಗೆ ಗ್ರಾಮಸ್ಥರು ಮತ್ತು ಅಭಿಮಾನಿಗಳು ಅಭಿನಂದನೆಕೋರಿದ್ದಾರೆ.
ಸಾಹಿತಿ ಜಗದೀಶ್ ದೇವಾಡಿಗ ಉಪ್ಪುಂದ ರವರಿಗೆ “ಕಣವಿ ಕಾವ್ಯ” ಪ್ರಶಸ್ತಿ ಪ್ರದಾನ
ಕುಂದಾಪುರ (ಜು,23): ಕನಕ ಅಧ್ಯಯನ ಪೀಠ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಚೇತನ ಫೌಂಡೇಶನ್ ಕರ್ನಾಟಕ ಸಹಯೋಗದಲ್ಲಿ ಆಯೋಜಿಸಲಾದ ಧಾರವಾಡ ನುಡಿಸಡಗರ ಕಾರ್ಯಕ್ರಮದಲ್ಲಿ ಸಾಹಿತಿ ಜಗದೀಶ್ ದೇವಾಡಿಗ ಉಪ್ಪುಂದ ಅವರಿಗೆ ಕರ್ನಾಟಕ ವಿವಿ ಕುಲಪತಿ ಪ್ರೊ.ಕೆ.ಬಿ ಗುಡಸಿ ಅವರು ಕಣವಿ ಕಾವ್ಯ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಪ್ರೋ.ನಿಜಲಿಂಗಪ್ಪ ಮಟ್ಟಿಹಾಳ , ಧಾರವಾಡದ ಕನಕ ಅಧ್ಯಯನ ಪೀಠದ ಕ.ವಿ.ವಿ ಮುಖ್ಯಸ್ಥ ಡಾ.ಆರ್.ಸಿ.ಹಿರೇಮಠ,ಗದಗ ಡಾ.ವಿ.ಬಿ.ಪ್ರತಿಷ್ಠಾನ ಅಧ್ಯಕ್ಷ ಡಾ.ವಿ.ವಿ.ಹಿರೇಮಠ ,ಹಿರಿಯ ಸಾಹಿತಿ ಸುರೇಶ್ ಕೋರಕೊಪ್ಪ ಬೆಳಗಾವಿ,ಧಾರವಾಡದ […]
ಡಾ. ಗೋವಿಂದ ಬಾಬು ಪೂಜಾರಿ ಯವರಿಗೆ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಅವಾರ್ಡ್ ಪ್ರದಾನ
ಕುಂದಾಪುರ( ಜೂ30): ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ 111ನೇ ಜನುಮದಿನದ ಸಂಭ್ರಮದ ಅಂಗವಾಗಿ ಶ್ರೀ ಸಿದ್ಧಾರ್ಥ ಎಜುಕೇಷನ್ ಸೊಸೈಟಿ ಹಾಗೂ ಸಾಲುಮರದ ತಿಮ್ಮಕ್ಕ ಇಂಟರ್ ನ್ಯಾಷನಲ್ ಫೌಂಡೇಶನ್ ನೀಡುವ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಅವಾರ್ಡ್ 2020ಯನ್ನು ಡಾ. ಗೋವಿಂದ ಬಾಬು ಪೂಜಾರಿ ಅವರಿಗೆ ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ರಾಜ್ಯ ವಸತಿ ಸಚಿವ ವಿ. ಸೋಮಣ್ಣ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ. […]
ಲಡಾಕ್ ಗೆ ಪ್ರಯಾಣಿಸಿದ ಜಿತೇಂದ್ರ್ ಕುಮಾರ್ ಕೊಲ್ಲೂರು
ಜೀವನದಲ್ಲಿ ಪ್ರತಿನಿತ್ಯ ಹಲವಾರು ಸವಾಲುಗಳನ್ನು ಎದುರಿಸುವುದು ನೋಡಿರುತ್ತೇವೆ ಹಾಗೆ ಪ್ರತಿಯೊಬ್ಬ ಬೈಕ್ ಸವಾರರಿಗೂ ಲಡಾಕ್ ಗೆ ಪ್ರಯಾಣ ಬೆಳೆಸೋದು ಒಂದು ಅತಿದೊಡ್ಡ ಕನಸು. ಆ ಕನಸನ್ನು ನನಸು ಮಾಡಲು ಹೊರಟ ನಮ್ಮೂರ ಹುಡುಗ ಜಿತೇಂದ್ರ್ ಕುಮಾರ್ ಕೂಡ ಒಬ್ಬರು. ವೃತ್ತಿಯಲ್ಲಿ ವಕೀಲ. ಶಿಕ್ಷಣ ಮುಗಿಸಿರುವ ಇವರು ಈಗಾಗಲೇ ಯ್ಯೂಟ್ಯೂಬ್ ನಲ್ಲಿ ಹಲವಾರು VLOG ವಿಡಿಯೋಗಳ ಮೂಲಕ ಮನೆ ಮಾತಾದವರು. ಎಲ್ಲಾ ವಿಡಿಯೋದಲ್ಲು ಕುಂದಾಪ್ರ ಕನ್ನಡದಲ್ಲಿ ಮಾತಾಡೋದು ಇವರ ವಿಶೇಷ. ಕುಂದಾಪುರದ […]
ಚಿಟ್ಟೆ ನಾಟಕ ಪ್ರದರ್ಶನಕ್ಕೆ ಮನಸೋತ ಪ್ರೇಕ್ಷಕ ವರ್ಗ
ಬೇಲೂರು ರಘುನಂದನ್ ಸರ್ ರವರ ರಚನೆಯ, ಕೃಷ್ಣಮೂರ್ತಿ ಕವತ್ತಾರ್ ಸರ್ ರವರ ನಿರ್ದೇಶನದಲ್ಲಿ, ನನ್ನ ಪುಟ್ಟ ಗೆಳೆಯ ಗೋಕುಲ ಸಹೃದಯ ನಟಿಸಿರುವ ನಾಟಕ ಚಿಟ್ಟೆ. ಈ ನಾಟಕ ರಚನೆಯಾಗಿ ಪ್ರದರ್ಶನ ಗೊಳ್ಳಲು ಪ್ರಾರಂಭವಾಗಿ ಸುಮಾರು ಒಂದೂವರೆ ವರ್ಷಗಳೇ ಆಗಿರಬಹುದು ಎಂದು ಭಾವಿಸುತ್ತೇನೆ.ಇಂದು ಕರಾವಳಿ ಭಾಗದಲ್ಲಿ ಈ ನಾಟಕದ ಪ್ರದರ್ಶನಗಳು ಆಯೋಜನೆಗೊಂಡಿದ್ದು ಅದೆಷ್ಟೋ ದಿನಗಳಿಂದ ಈ ನಾಟಕವನ್ನು ನೋಡಲು ಅವಕಾಶ ವಂಚಿತನಾಗಿದ್ದ ನಾನು ಇಂದು ಅರೆಹೊಳೆ ಪ್ರತಿಷ್ಠಾನ, ಅರೆಹೊಳೆಯಲ್ಲಿ ಈ ನಾಟಕದ ನಲವತ್ತೈದನೇ ಪ್ರದರ್ಶನ […]
ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ಶಿಪ್: ಟಿ. ಶಶಾಂಕ್ ಶೆಣೈ ಗೆ ಚಿನ್ನದ ಪದಕ
ಉಡುಪಿ(ಜೂ,5): ಬೊಡೋಕಾನ್ ಕರಾಟೆ& ಸ್ಪೋರ್ಟ್ಸ್ ಅಸೋಸಿಯೇಷನ್ ಉಡುಪಿ ಇವರು ಅಂಬಲಪಾಡಿಯಲ್ಲಿ ಆಯೋಜಿಸಿದ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ಶಿಪ್ ನಲ್ಲಿ ಕಿರಣ್ಸ್ ಡ್ರಾಗನ್ ಫಿಸ್ಟ್ ಮಾರ್ಷಲ್ ಆರ್ಟ್ ವಿದ್ಯಾರ್ಥಿ ಹಾಗೂ ತರಬೇತುದಾರರಾದ ಟಿ. ಶಶಾಂಕ್ ಶೆಣೈ ಸೀನಿಯರ್ ಕಟಾ ವಿಭಾಗದಲ್ಲಿ ಚಿನ್ನದ ಪದಕ ಪಡೆದಿರುತ್ತಾರೆ. ಇವರು ಕಿಯೋಶಿ ಕಿರಣ್ ಕುಂದಾಪುರ ಇವರ ಶಿಷ್ಯ ಹಾಗೂ ಗಂಗೊಳ್ಳಿ ನಿವಾಸಿ ಟಿ.ದಿನಕರ ಶ್ಯಾನುಭಾಗ್ ಮತ್ತು ಉಷಾ ದಿನಕರ್ ರವರ ಪುತ್ರ .
ಕಾಳಾವರ: ಎಸ್.ಎಸ್.ಎಲ್ .ಸಿ ಪರೀಕ್ಷೆಯಲ್ಲಿ 625 ಅಂಕ ಗಳಿಸಿದ ನಿಶಾ ಜೋಗಿಗೆ ಸನ್ಮಾನ
ಕೋಟೇಶ್ವರ (ಜೂ,02): ಇಲ್ಲಿನ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ನಿಶಾ ಜೋಗಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿದ ಹಿನ್ನೆಲೆಯಲ್ಲಿ ಕಾಳಾವರ ಗ್ರಾಮ ಪಂಚಾಯತ್, ಶಾಲಾಭಿವೃದ್ಧಿ ಸಮಿತಿ, ಅಧ್ಯಾಪಕ ವೃಂದ ಮತ್ತು ಗ್ರಾಮಸ್ಥರು ಕಾಳಾವರ ಸಹಭಾಗತ್ವದಲ್ಲಿ ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಣಾಧಿಕಾರಿ ಕೆ ರಾಜೀವ ಶೆಟ್ಟಿ ಸಾಧಕ ವಿದ್ಯಾರ್ಥಿ ನಿಶಾ ಜೋಗಿಗೆ ಸನ್ಮಾನಿಸಿ ಶುಭ ಹಾರೈಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾಲತಾ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. […]
ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಶಿಕ್ಷಕ ನಾಗರಾಜ್ ಖಾರ್ವಿ ಆಯ್ಕೆ
ಕುಂದಾಪುರ (ಜೂ,02): ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘ(ರಿ.) ಬೆಂಗಳೂರು ಇವರ ಸಹಯೋಗದಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಮಂಗಳೂರು ಉತ್ತರ ವಲಯದ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಮುಲ್ಲಕಾಡು ಇಲ್ಲಿನ ಪದವೀಧರ ಪ್ರಾಥಮಿಕ ಶಿಕ್ಷಕರಾದ ನಾಗರಾಜ ಖಾರ್ವಿಯವರು ಉತ್ತಮ ಸಾಧನೆ ಮಾಡಿ ರಾಷ್ಟ್ರಮಟ್ಟದ ನಾಗರಿಕ ಸೇವಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಕ್ರೀಡಾಕೂಟದ ಈಜುಸ್ಪರ್ಧೆಯಲ್ಲಿ 100 […]
ಡ್ರಾಮ ಜ್ಯುನಿಯರ್ ಖ್ಯಾತಿಯ ಬಾಲನಟಿ ಕುಂದಾಪುರದ ಕುವರಿ ಸಮೃದ್ಧಿ ಎಸ್ ಮೊಗವೀರ
ನಿಮ್ಮ ಮಕ್ಕಳನ್ನು ಪಠ್ಯದ ಕಲಿಕೆಯ ಪರಿದಿಗೆ ಮಾತ್ರ ಸೀಮಿತಗೊಳಿಸಬೇಡಿ ಎನ್ನುವ ರಾಷ್ಟ್ರಕವಿ ರವೀಂದ್ರನಾಥ ಟಾಗೋರ್ ರವರು ಹೇಳಿದ ಮಾತು ಈಗಿನ ಮಕ್ಕಳ ಪ್ರತಿಭೆ, ಕಲೆ, ಕೌಶಲ್ಯ, ಬುದ್ಧಿವಂತಿಕೆಯನ್ನು ಕಂಡಾಗ ನೂರಕ್ಕೆ ನೂರು ಪ್ರಸ್ತುತ ಅನ್ನಿಸುತ್ತದೆ. ಪ್ರೋತ್ಸಾಹ ಮತ್ತು ಸಹಕಾರ ದೊರೆತರೆ ಉತ್ತಮ ಕಲಾವಿದರಾಗಿ ಹೊರಹೊಮ್ಮುವ ಎಲ್ಲಾ ಲಕ್ಷಣವನ್ನು ನಮ್ಮ ಯುವ ಸಮುದಾಯ ಹೊಂದಿದೆ .ಆ ನಿಟ್ಟಿನಲ್ಲಿ ಬೆಳೆವ ಸಿರಿ ಮೊಳಕೆಯಲ್ಲಿ ಎಂಬಂತೆ ಡ್ರಾಮ ಜುನಿಯರ್ ಸೀಜನ್ -4 ಖ್ಯಾತಿಯ ಬಾಲಪ್ರತಿಭೆ ಕುಂದಾಪುರದ ಸಮೃದ್ಧಿ […]










