ಕವಿತೆ ಬಾರದ ನನಗೆ…ನೆನಪಿಗೆಅದು ಎಳೆ ಬಿಸಿಲಿನ ಮುಸ್ಸಂಜೆಯವೇಳೆಗೆ ಏಕೋ ಗೊತ್ತಿಲ್ಲ ನನಗೆಕವಿತೆ ಬಾರದ ನನಗೆ…. ನೆನಪಿಗೆ… ಹನಿ ಹನಿ ಇಬ್ಬನಿಯು ಮಳೆಹನಿಯಾಗಿ ಬೀಳುವ ಸಮಯದಲ್ಲಿಹಚ್ಚ ಹಸಿರಿನಿಂದ ಕೂಡಿದ ಹಚ್ಚಹಸಿರಿನಲ್ಲಿ ಕವಿತೆ ಬಾರದ ನನಗೆ…ನೆನಪಿಗೆ… ಹಸಿರ ಸೀರೆ ಉಟ್ಟು ಕೊಂಡು ನೀನುಕೈ ಗಳಿಗೆ ಹಸಿರ ಬಳೆ ಹಾಕಿ ಕೊಂಡುನಿಂತರೆ ಅದೇನೇ ಎಷ್ಟು ಸುಂದರವಾಗಿಕಾಣತಿ ಕವಿತೆ ಬಾರದ ನನಗೆ ….ನೆನಪಿಗೆ… ಕವಿತೆ ರಾಣಿ ನನ್ನ ಎರಡು ಕಣ್ಣುಗಳುಸಾಲದು ನಿನ್ನನ್ನು ನೊಡಲು ನನ್ನ ಕನಸಿನಕಲ್ಪನೆಯ […]
Category: ಕವನ/ಹನಿಗವನ
ಕನ್ನಡದ ಋಣ
ಮಾತೆಯ ತನುವಿಂದ ಬಿಳ್ಕೊಟ್ಟ ದಿನಸ್ವಾಗತಿಸಿತು ನನ್ನಿ ಹೆಮ್ಮೆಯ ನೆಲಉದರದಿಂದುಚ್ಚರಿಸಿದೆ ಕನ್ನಡದ ಪದಅದುವೇ ನನ್ನ ಬಾಳಿನ ಉತ್ತುಂಗದ ಸುದಿನ ಬರೆದೆನು ಅದೆಷ್ಟೋ ಕನ್ನಡದಕ್ಷರಹಾಡ ಬಯಸಿದೆ ಕನ್ನಡದ ಕವಿತೆಗಳ ಇಂಚರಎಲ್ಲವೂ ನನ್ನಿ ಹೆಮ್ಮೆಯ ನೆಲದಲಿಕನ್ನಡಾಂಬೆಯ ಪ್ರೀತಿಯ ಕೃಪೆಯಲಿ ದುಃಖದಲಿ ನಗುವಾಗಿ, ಸೋತಾಗ ಗೆಲುವಾಗಿಮನಸಲ್ಲಿ ಕೂತವಳು ಕನ್ನಡದ ತಾಯಿಮನೆಯಲ್ಲಿ ಶಕ್ತಿಯಾಗಿ, ಮನಸಲ್ಲಿ ನೆಮ್ಮದಿಯಾಗಿ ಅನ್ನವ ತಿನಿಸಿದಳು ಕನ್ನಡದ ತಾಯಿ ಬಾಳಬಂಡಿಗೊಂದು ಕನ್ನಡದ ಚುಕ್ಕಿಒಡಲಿಂದ ಕೊಟ್ಟಳು ಖುಷಿಯಿಂದ ಹೆಕ್ಕಿಬಲು ಚಂದ ನಮ್ಮಿ ಭಾಷೆಯ ಪಯಣತೀರಿಸಲಸಾದ್ಯ ಈ ಕನ್ನಡದ […]
ಮೌನಿಯಾಗಬೇಕೆನಿಸಿದೆ
ಮೌನಿಯಾಗಬೇಕೆನಿಸಿದೆ.. ಮನೆಯೆಲ್ಲಾ ಓಡಾಡಿ,ಬಾಯ್ತುಂಬಾ ಕೂಗಾಡಿಅಮ್ಮನಿಗೊಂದಿಷ್ಟು ಬೈಗುಳ, ಅಪ್ಪನಿಗೊಂದಿಷ್ಟು ಶಾಪಬಾಯಲ್ಲೆ ಆಯುದವನಿಟ್ಟಂತೆ ಯುದ್ಧ ಸಾರುತಿದ್ದೆ..ನನ್ನ ಅಭ್ಯುದಯಕ್ಕೆ ಶ್ರಮಿಸುವ ಜನಗಳ ಜತೆಗೆಇಂದೆಕೊ ಮೌನಿಯಾಗಬೇಕೆನಿಸಿದೆ.. ಕಣ್ಣ ಕಂಡರೆ ಕೆಂಡ ಕಾರುವ ಕೆಂಪು ಕೋಪನಾಲಿಗೆಯಿಂದ ಜಠರದುದ್ದಕ್ಕೂ ಬೈಗುಳದ ತಾಪಉದರದಸಿವಿಗೆ ಕೊರಳನ್ನೊಡ್ಡುವ ಅನ್ನವನೆಸೆದಿದ್ದೆ ಅಮನಸ್ಕನಂತೆ…ಚೆಲ್ಲಿ ಘರ್ಜಿಸಿದೆ ತೀಥ೯ದಂತಹ ಗಂಗೆಯನ ಟೊಳ್ಳು ವ್ಯಾಘ್ರನಂತೆಇಂದೆಕೊ ಮೌನಿಯಾಬೇಕೆನಿಸಿದೆ… ಮೃದುತನವ ರಕ್ಷಿಸಿದ ಮನಸ್ಸುಗಳ ಮದ್ಯೆ ,ವಚನದುದ್ದಕ್ಕು ಕರ್ಕಶದಂತಹ ಗಟ್ಟಿ ದನಿ ನನ್ನೊಳಗಿಂದಾದರೆಕೇಳಲಿಸ್ಟವಾಗದೆ ಕಿವಿಯ ಬಾಗಿಲೆಳೆಯವರು ವಾಣಿಯ ನಾನಾಡಿದರೆಮುರಿದ ಮನಸ್ಸಿಂದ ಇಷ್ಟವಿಲ್ಲದ ಮಾತಾದರೆ,ಕಷ್ಟದಿಂದ ನೋಡುವ […]
ನನ್ನ ದೇವರು
ನವ ಮಾಸ ತುಂಬುವವರೆಗೆತನ್ನ ಕರುಳ ಕುಡಿಯನ್ನು ರಕ್ಷಿಸಿಜಗತ್ತಿನ ಯಾವ ಮೂಲೆಯಲ್ಲೂಸಿಗಲಾರದಂತಹ ಬೆಚ್ಚನೆಯತನ್ನ ಗರ್ಭ ದಲ್ಲಿರಿಸಿ,ಜೀವ- ಜೀವನವನ್ನು ಲೆಕ್ಕಿಸದೆತನ್ನ ಮಗುವಿಗೆ ಜನ್ಮ ನೀಡುವ ಮಾತೆಯೇನಿನಗಿಂತ ದೊಡ್ಡ ದೇವರಿದ್ದಾರೆಯೇ ಈ ಜಗದಲಿನನ್ನ ಬದುಕಿನ ಪ್ರತ್ಯಕ್ಷ ದೇವರೆಂದರೆಅದು ನೀನೆ ನನ್ನ ಅಮ್ಮನನ್ನ ಹಡೆದವ್ವನನ್ನ ಎಲ್ಲ ತಪ್ಪುಗಳನ್ನು ತಿದ್ದಿ ತೀಡಿಒಳ್ಳೆಯ ಸಂಸ್ಕಾರ ಕಲಿಸಿಸುಸಂಸ್ಕ್ರತನನ್ನಾಗಿ ಮಾಡಿದೆ ನೀವಿದ್ಯೆ ಕೊಟ್ಟುಬುದ್ದಿಯನ್ನು ಸದಾ ಒಳಿತಿನೆಡೆಗೆಹರಿಸುವಂತೆ ದಾರಿ ತೋರಿದೆ ನೀನಿನ್ನನ್ನು ಹೇಗೇ ಸಂಭೋದಿಸಿದರೂನೀ ತಡೆಯಲಿಲ್ಲಅಮ್ಮ ಅಂದೆ, ಅವ್ವ ಅಂದೆಅಬ್ಬೆ ಅಂದೆ, ಮಾ […]
ಪಶ್ಚಾತಾಪ
ಪಶ್ಚಾತಾಪ ನಾನಾಗ ಕೂಗಿ ಅದೆಷ್ಟೊ ಬೈದಿದ್ದೆಬಾಯಿಯೆ ಆಯುಧವಾಗಿನೀನೆ ನನ್ನ ಶತ್ರು ಎಂಬಂತೆನಿನ್ನನ್ನೆ ದಿಟ್ಟಿಸಿ ನೋಡುತಿದ್ದೆ ಬೖೆಗುಳವನು ಚೀಲದಲಿ ತುಂಬಿನಿನ್ನ ಮೈ ತುಂಬ ಸುರಿದಿದ್ದೆಕೋಪ ಎಂಬ ಕೆಂಡವನುನಿನ್ನ ಸುತ್ತಲು ಉದಿದ್ದೆ ಎಲ್ಲಾವನು ಮರೆತು ಪ್ರೀತಿ ಎಂಬಇಡೀ ಪರ್ವತ ವನ್ನು ಹೊತ್ತು ತಂದುಮತ್ತೆ ಮದ್ದಿಸುವ ಜೀವಿನೀನೊಬ್ಬನೆ ಅಪ್ಪ…. ತಪಾಯ್ತೆಂಬ ಸನ್ನೆ ನನ್ನ ಕಣ್ಣಿಂದತಪ್ಪಿಲ್ಲವೆಂಬ ಪ್ರೀತಿ ನಿನ್ನ ಕಣ್ಣಿಂದನನ್ನ ಮುಖ ನಿನ್ನ ಎದೆಗಂಟಿದಾಗಸತ್ತು ಬದುಕಿದ ಅನುಭವ… ✍ಸ್ವಸ್ತಿಕ್ ಚಿತ್ತೂರು (ಸ್ವ.ಚಿ.)
ಇಳಿಸಂಜೆ
ಇಳಿಸಂಜೆಯ ಹೊತ್ತು , ಅದು ನೀನಿಳಿದು ಹೋಗುವ ಹೊತ್ತು ನೀನೆಂದರೆ ಮಸ್ತಕಕ್ಕೇರುವ ಮತ್ತು , ವಾಸ್ತವಕ್ಕೆ ಬರಲೆಂದೇ ನಿತ್ಯ ನೀನಿಳಿದು ಹೋಗುವೆ ಎನ್ನುವುದು ಗೊತ್ತು ಕಾದಿರುವೆ ಬಹಳ ಕಾತುರವ ಹೊತ್ತು , ಕಳೆದುಕೊಂಡಿರುವುದೂ ಬಹಳವೇ ಇತ್ತು #ಏನೇ_ಹೇಳಿ , ಈ ಮರುಳನಿಗೇನು ಗೊತ್ತು , ಮರಳಿನ ಮೇಲೆ ಮೂಡುವುದಿಲ್ಲವೆಂದು ನಿನ್ನ ಆ ಹೆಜ್ಜೆಯ ಒತ್ತು.
ಹೆಣ್ಣು
ಹೆಣ್ಣು ಸಂಸಾರದ ಕಣ್ಣು ಹೆಣ್ಣುಸಂಸ್ಕಾರದ ಹೊನ್ನು ಹೆಣ್ಣುಮಣ್ಣಿಗೆ ಉಪಮಾನ ಹೆಣ್ಣುಮನೆಗೆ ಸಮಾಧಾನ ಹೆಣ್ಣುಶಕ್ತಿಗೆ ಉಪಮೆಯ ಹೆಣ್ಣುಭಕ್ತಿಗೆ ಪ್ರಮೇಯ ಹೆಣ್ಣುಪುಷ್ಟಿಯ ಪ್ರಮಾಣ ಹೆಣ್ಣುಸೃಷ್ಟಿಯ ನಿರ್ಮಾಣ ಹೆಣ್ಣುಮುಕ್ತಿಯ ನಿರ್ವಾಣ ಹೆಣ್ಣುಯುಕ್ತಿಯ ವ್ಯವಧಾನ ಹೆಣ್ಣುಹೆಣ್ಣು, ಸ್ವಾಭಿಮಾನ ಹೆಣ್ಣುಹೆಣ್ಣು, ಅಭಿಮಾನ ಹೆಣ್ಣು. ಕವಿಯತ್ರಿ: ಡಾ. ಉಮ್ಮೆ ಸಲ್ಮಾ ಎಂ. ಸಹಾಯಕ ಪ್ರಾಧ್ಯಾಪಕರುಕ್ರೈಸ್ಟ್ ವಿಶ್ವವಿದ್ಯಾಲಯಬೆಂಗಳೂರು ೫೬೦೦೨೯










