ಶ್ರೀ ಗುರುಭ್ಯೋ ನಮಃ ಜ್ಞಾನ ಸಮ್ಮುದ್ರವ ಕಲಕಿಸ್ಮೃತಿಪಟಲದಲ್ಲಿ ತಲಪಿವಿದ್ಯೆ – ಬುದ್ಧಿ ವಿನಯ-ವಿಧೇಯ ನೀಡುವ ಶ್ರೇಷ್ಠನೆಶ್ರೀ ಗುರುಭ್ಯೋ ನಮಃಶ್ರೀ ಗುರುಭ್ಯೋ ನಮಃಶ್ರೀ ಗುರುಭ್ಯೋ ನಮಃಶ್ರೀ ಗುರುಭ್ಯೋ ನಮಃ. ಶಾರದೆಯ ನಿವಾಸ ನಿನ್ನ ಜಿಹ್ವವುಮಮತೆ ತುಂಬಿರುವ ಎದೆ ಭಾವವುಪ್ರೀತಿ ನೀತಿಯೇ ನಿನ್ನ ಕಣ್ಗಳುಕ್ಷಮೆ ತಾಳ್ಮೆಯೇ ನಿನ್ನ ಭುಜಗಳುಶಿಸ್ತು ಗತ್ತೆ ನಿನ್ನ ಕಾಲುಗಳುಧೈರ್ಯ ಸ್ಥೈರ್ಯವೇ ನಿನ್ನ ಕರಗಳುನಖ-ಶಿರ ತುಂಬಾ ಕೌಶಲ್ಯ ತುಂಬಿದ ಕುಂಜವೇಶ್ರೀ ಗುರುಭ್ಯೋ ನಮಃಶ್ರೀ ಗುರುಭ್ಯೋ ನಮಃಶ್ರೀ ಗುರುಭ್ಯೋ ನಮಃಶ್ರೀ ಗುರುಭ್ಯೋ […]
Category: ಸಮಗ್ರ ಕನ್ನಡ
ಬಾವುಟದ ಪಾಠ
ಬಾವುಟದ ಪಾಠ ತ್ರಿವರ್ಣ ಧ್ವಜದ ಮಹಿಮೆನಮ್ಮೆಲ್ಲರ ಗರಿಮೆಉತ್ತುಂಗಕ್ಕೆ ಹಾರುತಿರುವ ನಮ್ಮ ಬಾವುಟಸಾರುತಿಹುದು ಜೀವನದ ಪಾಠ. ಬಾವುಟದ ಮೊದಲ ಬಣ್ಣ ಕೇಸರಿತ್ಯಾಗ-ಶೌರ್ಯದ ಪ್ರತೀಕವೇ ಸರಿವಿಶ್ವಕ್ಕೆ ಹೇಳುತಿಹುದು ಸಾರಿ ಸಾರಿಭಾರತೀಯರ ಬಲ, ಬೆಂಬಲ ಹಂಬಲದ ಐಸಿರಿ. ಮಧ್ಯಮ ಬಣ್ಣ ಶ್ವೇತಸತ್ಯ – ಶಾಂತಿಯ ಇದು ಸಂಕೇತಭಾರತ ಎಂದಿಗೂ ವಿಶ್ವ ಶಾಂತಿಯ ಧೂತಸತ್ಯ ಪ್ರತಿಷ್ಠಾಪನೆಗೆ ಆಗುವುದು ಅವಧೂತ. ಬಿಳಿಯ ಮಧ್ಯ ಅಶೋಕ ಚಕ್ರ ನೀಲಿಏನು ಹೇಳುತ್ತಿದೆ ನೀವು ಕೇಳಿ?24 ತಾಸು ನಡೆಮುಂದೆ ಧರ್ಮದ ಹಾದಿಯಲಿಪ್ರಗತಿ […]
ಯಕ್ಷಗಾನ ಯಕ್ಷ ಚೆಲುವೆ ಶರತ್ ಶೆಟ್ಟಿ ತೀರ್ಥಳ್ಳಿ
ಯಕ್ಷಗಾನದಲ್ಲಿ ಸ್ತ್ರೀ ಪಾತ್ರಕ್ಕೆ ವಿಭಿನ್ನ ಮತ್ತು ವಿಶಿಷ್ಟ ವೇಷಭೂಷಣದ ಮೆರಗು ಇರುವುದು ಯಕ್ಷಗಾನ ಪ್ರಿಯರಿಗೆ ತಿಳಿದ ವಿಷಯ. ಸಾಂಪ್ರದಾಯಿಕ ಯಕ್ಷಗಾನದಲ್ಲಿ ಸ್ತ್ರೀ ಪಾತ್ರಗಳನ್ನು ನಿರ್ವಹಿಸುವುದು ಕಲಾವಿದರಿಗೆ ಒಂದು ಸವಾಲೇ ಸರಿ. ಸ್ವರದ ಸಮತೋಲನ ತನ್ನದಲ್ಲದ ನಯ ವಿನಯ ವಯ್ಯಾರ ತನ್ನ ಪಾತ್ರದಲ್ಲಿ ತಂದು ಪಾತ್ರಕ್ಕೂ ನ್ಯಾಯ ಒದಗಿಸುತ್ತ ಅಭಿಮಾನಿಗಳನ್ನು ಆಕರ್ಷಿಸುತ್ತ ಯಕ್ಷಗಾನದಲ್ಲಿ ಒಂದು ಭದ್ರವಾದ ಸ್ಥಾನವನ್ನು ಪಡೆಯಲು ಹರಸಾಹಸ ಮಾಡಬೇಕಾಗುತ್ತದೆ. ಪಾತ್ರದ ಒಳಹೊಕ್ಕು ಸ್ತ್ರಿ ವೈಯಾರಗಳಲ್ಲಿ ಹೆಣ್ಣನ್ನೇ ನಾಚಿಸುವ […]
ಮಣ್ಣ್ ಅರಳಿ ಹಣತೆಯಾಗಿ………….
ಏ ಸಖಿ,………….ನಾ ನಿನಗೆ ದೀಪಾವಳಿಯ ಕಥೆ ಹೇಳಲೆಂದೆ ಬಂದೆ. ಆದರೆ ಕಥೆ ಮುಗಿಯುವ ತನಕ ನಾನು ಕರೆದುಕೊಂಡಲ್ಲಿ ನೀನು ಬರಬೇಕು ಅಷ್ಟೆ! ಸರಿ ಎಂದು ತಲೆ ಆಡಿಸಿದ ಆರು ವರುಷದ ಪುಟಾಣಿ ಸಖಿ, ಕಿವಿಗಳೆರಡು ನೆಟ್ಟಗೆ ಮಾಡಿಕೊಂಡು ಬಾ ಎಂದು ಕರೆದೊಯ್ದಿದ್ದು ದೇವಲೋಕಕ್ಕೆ. ಕಲ್ಪನಾಲೋಕದ ಕಥಾಯಾನ ಶುರು. ಹೀಗೆ ಕಥೆ ಪ್ರಾರಂಭವಾಯಿತು. ಒಮ್ಮೆ ದೇವಲೋಕದಲ್ಲಿ ಒಂದು ಸಭೆಯನ್ನು ಏರ್ಪಡಿಸಲಾಗುತ್ತದೆ. ಆ ಸಭೆಯಲ್ಲಿ ಬೆಳಕಿನ ಕಿಡಿಗಳು ತಮ್ಮ ನಿಜವಾದ […]
ಕಾಂತಾರ…..ಇದು ದೈವಲೀಲೆಯ ಅವತಾರ…..
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪಶ್ಚಿಮ ಘಟ್ಟದ ತಪ್ಪಲಿನ ಕೆರಾಡಿ ಎನ್ನುವ ಹಳ್ಳಿಯೊಂದರಲ್ಲಿ ಚಿತ್ರೀಕರಣಗೊಂಡು, ಅದೇ ಹಳ್ಳಿಗರ ಮನೆಮಗ ಸ್ಯಾಂಡಲ್ ವುಡ್ ನ ಖ್ಯಾತ ನಟ -ನಿರ್ದೇಶಕ ರಿಷಬ್ ಶೆಟ್ಟಿಯವರು ನಾಯಕನಾಗಿ ನಟಿಸಿರುವ ಹಾಗೂ ಕೆ.ಜಿ.ಫ್ ಖ್ಯಾತಿಯ ಹೊಂಬಾಳೆ ಫಿಲ್ಸಂ ರವರ ನಿರ್ಮಾಣದಲ್ಲಿ ಮೂಡಿ ಬಂದ ಕಾಂತಾರ ಚಿತ್ರ ಕನ್ನಡದ ಸಿನಿಮಾರಂಗದಲ್ಲಿ ಹೊಸ ಅಲೆಯನ್ನು ಸ್ರಷ್ಠಿಸಿದೆ. ದೈವಾರಾಧನೆಯ ಜೊತೆಗೆ ಭೂ ಮಾಲೀಕತ್ವದ ಸಂಘರ್ಷದೊದಿಗೆ ಹೆಣೆದು ಕೊಂಡಿರುವ ಸಿನೆಮಾದ ಕಥೆ ತುಳುನಾಡು […]
ಅಮ್ಮನ ಅಂತರಾಳ
ಆಕೆಗೆ ಸುಮಾರು ಅರವತ್ತಗಿರಬಹುದು.ಆದರೂ ತನ್ನದೇ ಆದ ಸ್ವಂತ ಗುಡಿಸಲಲ್ಲಿ ಜೀವನ ಸಾಗಿಸುತ್ತಿದ್ದಾಳೆ.ಆಕೆಗೆ ಏರಡು ಮಕ್ಕಳು. ಅದರಲ್ಲೊಬ್ಬ ಮಾನಸಿಕ ಅಸಮಾನತೆಗೆ ಒಳಪಟ್ಟ ಅಂಗವಿಕಲ.ಇನ್ನೊಬ್ಬ ಗಲ್ಫ್ ದೇಶದಲ್ಲಿ ಕೆಲಸದಲ್ಲಿದ್ದ. ಆತನನ್ನು ಈಕೆ ನೋಡದೆ ಎಷ್ಟೋ ವರುಷಗಳೇ ಆಗಿದ್ದವು.ಹಬ್ಬಕ್ಕೆ ಹುಣ್ಣಿಮೆಗೊಮ್ಮೆ ಪಕ್ಕದ ಶೆಟ್ಟರ ಮನೆಗೆ ಕರೆಮಾಡಿ ಆಕೆಯ ಬಳಿ ಮಾತನಾಡುತ್ತಿದ್ದ. ಪ್ರತಿ ಬಾರಿಯೂ ಕರೆ ಮಾಡಿದಾಗಲೂ ಆತ ಹೇಳುತ್ತಿದ್ದದ್ದು ಏರಡೇ ಮಾತು.ಮುಂದಿನ ತಿಂಗಳಲ್ಲಿ ಊರಿಗೆ ಬರುವೆ ಹಾಗೂ ನಾಳೆ ಶೆಟ್ಟರ ಬಳಿ ಮಾತನಾಡಿದ್ದೇನೆ ಅವರ […]
ಹಕ್ಕಿ & ಪುಟಾಣಿಗಳು
ನಭದಿ ಹಾರುವ ಹಕ್ಕಿಗಳೆ ನಮ್ಮಯ ಕೂಗನು ಆಲಿಸಿ ಹಾರುವ ಆಸೆಯು ಮನದಲಿ ಹುಟ್ಟಿದೆ ನಮಗೂ ಹಾರಲು ಕಲಿಸುವಿರಾ..? ಅಷ್ಟು ಎತ್ತರ ಹೇಗೆ ಏರಿದಿರಿ ನಮಗೂ ಸ್ವಲ್ಪ ತಿಳಿಸುವಿರಾ? ಗಾಳಿಯ ಪಟದಂತೆ ಮೇಲೆ ಕೆಳಗೆ ತೇಲುತಾ ಆಡುತಾ ಮೆರೆಯುವಿರಿ ಸಾಲುಸಾಲಾಗಿ ಹಾರುವ ಹಕ್ಕಿಗಳೆ ನಮಗೂ ಶಿಸ್ತನು ಕಲಿಸಿದಿರಿ ಭೂಮಿಯ ತುಂಬಾ ಚಿಣ್ಣರ ದಂಡು ಕೇಕೆಯ ಹಾಕುತಾ ನಲಿಯುತಿದೆ ಬೇಗನೆ ಬನ್ನಿರಿ ನಮ್ಮೊಡನೆ ಸರ್ರನೆ ಇಳಿಯುತ ಭೂಮಿಯ ಕಡೆ ಜೊತೆ ಜೊತೆಯಾಗಿ ನಲಿಯುವ […]
ಪಾರ್ವತಿ ಜಿ ಐತಾಳ್ ಸಾಹಿತ್ಯ ಸಾಧನೆ ತೆರೆದಿಡುವ ‘ಸುರಗಂಗೆ’
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅದರಲ್ಲೂ ವಿಶೇಷವಾಗಿ ಅನುವಾದ ಕ್ಷೇತ್ರದಲ್ಲಿ ಅಮೂಲ್ಯ ಕೃತಿ ರಚನೆಗಳ ಮೂಲಕ ತಮ್ಮದೇ ಆದ ಛಾಪನ್ನು ಮೂಡಿಸಿರುವ ಕರಾವಳಿಯ ಸೃಜನಶೀಲ ಬಹುಭಾಷಾ ಲೇಖಕಿ ಪಾರ್ವತಿ ಜಿ. ಐತಾಳರು ಕನ್ನಡ ಸಾಹಿತ್ಯ ಲೋಕದ ಅಪರೂಪದ ಪ್ರತಿಭೆ. ಕನ್ನಡ, ಇಂಗ್ಲೀಷ್ ,ಹಿಂದಿ ,ಮಲಯಾಳಂ ಮತ್ತು ತುಳು ಹೀಗೆ ಐದು ಭಾಷೆಗಳಲ್ಲಿ ಪ್ರಭುತ್ವ ಸಾಧಿಸಿ ಆಯಾ ಭಾಷೆಗಳಲ್ಲಿ ಕೃತಿ ರಚನೆ ಮಾಡಿದ್ದು ಮಾತ್ರವಲ್ಲದೆ ಆಯಾ ಭಾಷೆಗಳ ನಡುವೆ ಅನುವಾದದ ಕೆಲಸವನ್ನೂ ಮಾಡುತ್ತ,ವಿವಿಧ […]
•••ಅವಳೆಂದರೆ•••
ನಾ ಹೇಗೆ ವರ್ಣಿಸಲಿ ನಿನ್ನ ಪುಸ್ತಕ ಪೆನ್ನುಗಳಿಗೆ ಸೀಮಿತವೇ … ನಿನ್ನೆಲ್ಲಾ ಅನುರಣನ ನೆನಪುಗಳು..? ನಾಲ್ಕು ಸಾಲು ಗೀಚಿದರೆ ಮುಗಿಯಿತೇ ನಮ್ಮೆಲ್ಲ ಸ್ನೇಹ ಸಂಬಂಧಗಳು….?? ತಡಕಾಡುವುದೀ ಮನ ಹೊಸ ಪದ ಹುಡುಕಲು…. ಮಿಡಿಯುವುದೀ ಕ್ಷಣ ನಿನ್ನತನವ ಗುರುತಿಸಲು…. ನಾ ಹೇಗೆ ಬರೆಯಲಿ ಹೇಳು….. ಪದಕಡಲ ಸಾಮ್ರಾಜ್ಞಿ ನೀನು…. ಪದ ಪೋಣಿಸುವ ತಿರುಕ ನಾನು…. ಒಮ್ಮೊಮ್ಮೆ ಯೋಚಿಸುವೆ ನಿನ್ನ ನೆರಳ … ಚಿತ್ರಿಸುವ ಕಲಾಕಾರ ನಾನು…. ಚಿತ್ರಭಂಡಾರವೇ ನೀನಾಗಿರುವಾಗ ನಾನೆಷ್ಟು ಗೀಚಲಿ ಹೇಳುನಿನ್ನ […]
•••ಅಲೆಮಾರಿ•••
ಕವಿಸಂಚಾರ ಹೊರಟಿದೆ ಕಾಣದೂರಿಗೆ ನೆನಪ ಮೈಲಿಗಲ್ಲುಗಳ ಜೊತೆಗೆ; ಹರ್ಷೊಲ್ಲಾಸದ ಗಡಿ ಹುಡುಕಿ ನಡಿಗೆ… ನಡೆದಷ್ಟೂ ನಡೆಸುವ ಪಥಕೆ ಹೆಜ್ಜೆಗಳು ಮುನ್ನುಡಿ ಬರೆದಿವೆ,, ಗೀಚಿದಷ್ಟೂ ಜಿನುಗುವ ಭವಕೆಪುಟಗಳು ಸೋಲನೊಪ್ಪಿ ತಿರುಗಿವೆ ..ಅಕ್ಷರವೆಲ್ಲಾ ಮಾಸಿ ಮರೆಯಾಗಿವೆ..!! ದಿಗಂತ ಕಡಲಿನ ನಡುವಿನಲ್ಲಿ ಅನಂತತೆಯ ಹಾಯಿದೋಣಿ…. ಸಾಗುತಿದೆ ನಿರ್ದಿಗಂತವಾಗಿ ಏರಿ ಕವಿಕಲ್ಪನೆಗಳನ್ನ ಅಲ್ಪತೆಗೆ ತೂರಿ!! ಅಲ್ಪಾನಂತತೆಯ ಕದನದಲಿ ಸಕಲತೆಯ ಕಿಡಿ ಉದ್ಭವಿಸಿಧಗಿಸಿತೇ ಧರೆಹೊತ್ತಿ ಜ್ವಾಲೆಯಲಿ?? ಸುಪ್ತ ಮನಸಿನ ಮಿತಿಮೀರಿ…..!! ಸವಿದಷ್ಟೂ ಸವೆಯುತಿದೆ ಜೀವನ ತುಂಬಿದಷ್ಟೂ ಬತ್ತುತಿದೆ […]