ತಕ್ಷಣವೇ ಸಾಲ ಕೊಡುತ್ತೇವೆ ಎಂದು ನಂಬಿಸುವ ಅನುಮಾನಸ್ಪದ ಲಿಂಕ್ ಗಳನ್ನು ಕ್ಲಿಕ್ ಮಾಡಬೇಡಿ. ಇದರಿಂದ ಮೋಸ ಹೋದವರು ಹೆಚ್ಚು, ನೆನಪಿರಲಿ. ಈ ಆ್ಯಪ್ ಗಳಿಗೆ ನೀವು ಏನು ಅನುಮತಿಯನ್ನು ನೀಡುತ್ತಿದ್ದೀರಿ ಎಂಬುದರ ಮೇಲೆ ಒಂದು ಕಣ್ಣಿಡಿ. ದಯವಿಟ್ಟು ನಿಮ್ಮ ವೈಯಕ್ತಿಕ ವಿವರಗಳನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಈ ಲೋನ್ ಆ್ಯಪ್ಗಳು ಆರ್ .ಬಿ.ಐ. (Reserve Bank of India ) ಅಡಿಯಲ್ಲಿ ಬರುವುದಿಲ್ಲ ಹಾಗೂ ಸಾಲ ತೀರಿಸದೇ ಹೋದರೆ ಇವರು […]
Category: ಸಮಗ್ರ ಕನ್ನಡ
ಸೈಬರ್ ಸೆಕ್ಯೂರಿಟಿ : ಒಂದಿಷ್ಟು ಮಾಹಿತಿ – ಜಾಗೃತಿ
ಕಂಪ್ಯೂಟರ್, ಮೊಬೈಲ್ ಮತ್ತು ಇಂಟರ್ನೆಟ್ ಗಳ ವಿವಿಧ ಮೂಲಗಳನ್ನು ದುರ್ಬಳಕೆ ಮಾಡಿಕೊಂಡು ಕೆಲವು ದುಷ್ಕರ್ಮಿಗಳು ಸಾರ್ವಜನಿಕರನ್ನು ಮೋಸಗೊಳಿಸುವುದು, ವೈಯಕ್ತಿಕ ಬ್ಯಾಂಕ್ ಖಾತೆಗೆ ಕನ್ನ ಹಾಕುವಂಥದ್ದು, ಸುಳ್ಳು ಮಾಹಿತಿ ಮೂಲಕ ದಾರಿ ತಪ್ಪಿಸುವಂತದ್ದು, ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ.
ಬಿಡುಗಡೆಗೆ ಸಜ್ಜಾಗುತ್ತಿದೆ ಕುಂದಗನ್ನಡದ ಅಲ್ಬಂ ಹಾಡು “ಹೇಳ್ವರಿಲ್ಲ ಕೇಂಬರಿಲ್ಲ”
ಹಲವು ಅಲ್ಬಂ ಹಾಡು, ಕಿರುಚಿತ್ರ ನಿರ್ಮಿಸಿ ಕರಾವಳಿ ಭಾಗದಲ್ಲಿ ಹೆಸರು ಮಾಡಿರುವ ಅಶ್ನಿಗ್ಧ ಕ್ರಿಯೇಶನ್ಸ್ ತಂಡದ ಮುಂದಿನ ಪ್ರಯತ್ನ ಹೇಳ್ವರಿಲ್ಲ ಕೇಂಬರಿಲ್ಲ. ಈ ಹಾಡಿಗೆ ಸಂಗೀತ ನಿರ್ದೇಶಿಸಿ, ಬರೆದು ಹಾಡಿರುವುದು ಕರಾವಳಿಯ ಹೆಸರಾಂತ ಗಾಯಕ ಅಕ್ಷಯ್ ಬಡಾಮನೆ. ಹಾಡಿನ ಸಂಪೂರ್ಣ ನಿರ್ದೇಶನದ ಹೊಣೆ ಹೊತ್ತವರು ರಿಶಿತ್ ಶೆಟ್ಟಿ ಹಾಗೂ ರಾಘು ಶಿರೂರು. ಹಾಡಿನ ಸಂಪೂರ್ಣ ಚಿತ್ರೀಕರಣ ಗಂಗೊಳ್ಳಿಯ ಕಡಲ ತೀರದಲ್ಲಿ ಮುಗಿಸಿದ್ದು, ಚಿತ್ರೀಕರಣದ ಹೊಣೆ ಹೊತ್ತವರು ಆವರಿಸಿದೆ ಹಾಡಿನ ಖ್ಯಾತೀಯ […]
ಸ್ವಾವಲಂಬಿ ಬದುಕಿಗೆ ಹಿಡಿದ ಕೈಗನ್ನಡಿ – ದೈಹಿಕ ನ್ಯೂನತೆಗೆ ಸವಾಲೆಸೆದ ದಿಟ್ಟ ಮಹಿಳೆ ಲಲಿತಾ ಕೊರವಾಡಿ
ಆಗದು ಎಂದು… ಕೈಲಾಗದು ಎಂದು … ಕೈಕಟ್ಟಿ ಕುಳಿತರೇ… ಸಾಗದು ಕೆಲಸವು ಮುಂದೆ…. ಮನಸೊಂದಿದ್ದರೆ ಮಾರ್ಗವು ಉಂಟು… ಕೆಚ್ಚೆದೆ ಇರಬೇಕೆಂದು …ಕೆಚ್ಚೆದೆ ಇರಬೇಕೆಂದು… ಈ ಮಾತನ್ನು ಅಕ್ಷರಶಃ ಪಾಲಿಸಿ ಶಾರೀರಿಕ ನ್ಯೂನತೆಗೆ ಸವಾಲೆಸೆದು ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡ ದಿಟ್ಟ ಮಹಿಳೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊರವಾಡಿ ಗ್ರಾಮದ ಲಲಿತಾ ಕೊರವಾಡಿ.ಚಿಕ್ಕವರಿರುವಾಗ ಅನಿರೀಕ್ಷಿತ ಜ್ವರದಿಂದ ಬಳಲುತ್ತಿದ್ದ ಇವರು ಕ್ರಮೇಣ ಕೈ- ಕಾಲುಗಳ ಸ್ವಾಧೀನ ಕಳೆದುಕೊಂಡು ಮನೆಯಲ್ಲೇ ಇರುವಂತಾಯಿತು. ದುರದ್ರಷ್ಟಷಾತ್ ಬಾಲ್ಯದಲ್ಲಿಯೇ […]
ಹೆಣ್ಣು
ಹೆಣ್ಣು ಸಂಸಾರದ ಕಣ್ಣು ಹೆಣ್ಣುಸಂಸ್ಕಾರದ ಹೊನ್ನು ಹೆಣ್ಣುಮಣ್ಣಿಗೆ ಉಪಮಾನ ಹೆಣ್ಣುಮನೆಗೆ ಸಮಾಧಾನ ಹೆಣ್ಣುಶಕ್ತಿಗೆ ಉಪಮೆಯ ಹೆಣ್ಣುಭಕ್ತಿಗೆ ಪ್ರಮೇಯ ಹೆಣ್ಣುಪುಷ್ಟಿಯ ಪ್ರಮಾಣ ಹೆಣ್ಣುಸೃಷ್ಟಿಯ ನಿರ್ಮಾಣ ಹೆಣ್ಣುಮುಕ್ತಿಯ ನಿರ್ವಾಣ ಹೆಣ್ಣುಯುಕ್ತಿಯ ವ್ಯವಧಾನ ಹೆಣ್ಣುಹೆಣ್ಣು, ಸ್ವಾಭಿಮಾನ ಹೆಣ್ಣುಹೆಣ್ಣು, ಅಭಿಮಾನ ಹೆಣ್ಣು. ಕವಿಯತ್ರಿ: ಡಾ. ಉಮ್ಮೆ ಸಲ್ಮಾ ಎಂ. ಸಹಾಯಕ ಪ್ರಾಧ್ಯಾಪಕರುಕ್ರೈಸ್ಟ್ ವಿಶ್ವವಿದ್ಯಾಲಯಬೆಂಗಳೂರು ೫೬೦೦೨೯
ಭಯವೆಂಬ ಕತ್ತಲಿನಿಂದ …. ಧೈರ್ಯವೆಂಬ ಬೆಳಕಿನೆಡೆಗೆ …..
ಹೆಣ್ಣನ್ನು ಪೂಜಿಸುವ ದೇಶ ನಮ್ಮದು. ಭಾರತಮಾತೆಯನ್ನು ತಾಯಿ ಎಂದು ಆರಾಧನೆ ಮಾಡುವ ನಾವು ಅನಾದಿ ಕಾಲದಿಂದಲೂ ಹೆಣ್ಣಿಗೆ ವಿಶೇಷ ಸ್ಥಾನಮಾನ ನೀಡುತ್ತಾ ಬಂದಿದ್ದೆವೆ.ಶೋಷಣೆ ,ಪುರುಷ ಪ್ರಧಾನ ಸಮಾಜದ ದಬ್ಬಾಳಿಕೆಯ ವಿರುದ್ಧ ನಿರಂತರ ಹೋರಾಟ ಮಾಡಿರುವ ಮಹಿಳೆಯರು,ಬ್ರಿಟಿಷರು ನಮ್ಮನ್ನು ಆಳುವ ಸಂದರ್ಭದಲ್ಲಿಯೂ ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಉದಾಹರಣೆಗಳು ನಮ್ಮ ಇತಿಹಾಸದಲ್ಲಿ ದಾಖಲಾಗಿದೆ. ಆದರೆ ಅಂತಹ ಹೆಮ್ಮೆಯ ಹೆಣ್ಣು ಮಕ್ಕಳ ಸ್ಥಿತಿ ಇವತ್ತಿನ ದಿನಗಳಲ್ಲಿ ಎನಾಗಿದೆ? ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು […]
ಬಂಧ ಮುಕ್ತ.. ಇದು ಸ್ವಾವಲಂಬಿ ಬದುಕಿನ ಹುಡುಕಾಟ
ಇದೆಂಥಾ ವಿಪರ್ಯಾಸ ನೋಡಿ. ಓದಿನ್ನು ಮುಗಿಯದೇ ಇದ್ದ ಹುಡುಗಿ, ಊರ ಊಸಾಬರಿ ಅರಿಯದೇ ತನ್ನದೇ ತರಾತುರಿಯಲ್ಲಿದ್ದವಳಿಗೆ, ಪರಿಚಯಸ್ಥರು ಮನೆಯವರ ಮೇಲೆ ಹೇರುತ್ತಿದ್ದದ್ದು ಮದುವೆ ಎಂಬ ‘ಬಂಧನ ‘. ಆಡಿಕೊಳ್ಳೊರ ಬಾಯಿ ಮುಚ್ಚಿಸೋ ಪ್ರಯತ್ನದಲಿ ಹೆತ್ತವರು ಮಗಳ ಮೇಲೆ ಹೊರಿಸುತ್ತಿರೋ ಈ ‘ ಬಂಧನ ‘ ದ ಭಾರದಲಿ ಆಕೆ ಇನ್ನೇಷ್ಟು ನೊಂದು ಬೆಂದು ಬಂಧಿಯಾರಬಹುದು ನೀವೇ ಹೇಳಿ…!?
ಬೆಳದಿಂಗಳ ಬೆಳಕಿನಲಿ
ಚಂದಿರನ ಬೆಳಕಿನಲಿ ತಾರೆಗಳ ನಡುವಿನಲಿಸುಂದರಿಯ ಹಾಗೆ ಬಂದೆ ನನ್ನೆದೆ ಬಾಂದಳದಲಿಒಲವಿನ ಉಡುಗೊರೆಯ ಮುತ್ತಿನಮಾಲಿಕೆಯುನುಣುಪಾಗಿ ಪೋಣಿಸಿ ಕೊರಳಲಿ ಜಾರಿಸಿ ಬೆಳದಿಂಗಳಿಗೊಂದು ಹೆಣ್ಣಾಗಿ ಬಂದಂತೆ ಕಂಡೆಧರೆಗಿಳಿದ ದೇವತೆಯಾಗಿ ನನ್ನ ಎದುರಲಿ ನಿಂದೆನಕ್ಷತ್ರ ಲೋಕದ ಪಾರಿಜಾತದ ಸುಮವುಹುಣ್ಣಿಮೆಯ ಬೆಳಕಿನಲಿ ಬಾನಿಗೆ ಜಾರಿರುವೆ ಅಮೃತ ಸುಧೆಯ ಜರಿಯಾರೆಯ ನಾರಿಎಂದಿಗೂ ನೀ ಸರಿಯದಿರು ನನ್ನ ಕೈ ಜಾರಿತೂಗುಯ್ಯಾಲೆಯಲಿ ಜೋಕಾಲಿಯಾಡುತಾನಿನ್ನಲ್ಲಿ ಪವಡಿಸುವೆ ತಾರೆಗಳ ಜೊತೆಯಾಡುತಾ ಸೌಭಾಗ್ಯ ಲಕ್ಷ್ಮಿಯ ಅವತಾರದ ಪ್ರತೀಕ ಹೆಣ್ಣುಹೃದಯಂಗಳಕೆ ಜಾರಿರುವೆ ಹೊತ್ತು ನೀ ಹೊನ್ನುಪ್ರೀತಿಯ ಮಹಲಿನಲಿ […]