ಬೆಂಗಳೂರು (ಆ, 27) : ಜನ್ಮಭೂಮಿ ಫೌಂಡೇಷನ್ (ರಿ)ಬೆಂಗಳೂರು ಕೊಡಮಾಡುವ “ಭಾರತ ಗೌರವ ಪ್ರಶಸ್ತಿ”ಗೆ ಉದ್ಯಮಿ, ಸಮಾಜಸೇವಕ ಶ್ರೀ ಗೋವಿಂದ ಬಾಬು ಪೂಜಾರಿ ಆಯ್ಕೆಯಾಗಿದ್ದಾರೆ. ರಾಜ್ಯದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಹಾಗೂ ಕೊರೊನಾ ವಾರಿಯರ್ಸ್ಗೆ ಆಗಸ್ಟ್ , 29 ರಂದು ಬೆಂಗಳೂರಿನ ಗಾಂಧಿನಗರದ ಆನಂದರಾವ್ ಸರ್ಕಲ್ ಬಳಿಯ ಸ್ಯಾಂಕ್ಟಮ್ ಹೋಟೆಲ್ ನಲ್ಲಿ ಆಯೋಜಿಸಲಾದ ಅಭಿನಂದನಾ ಸಮಾರಂಭದಲ್ಲಿ ಶ್ರೀ ಗೋವಿಂದ ಬಾಬು ಪೂಜಾರಿಯವರು “ಭಾರತ ಗೌರವ ಪ್ರಶಸ್ತಿ”ಯೊಂದಿಗೆ ಸನ್ಮಾನಗೊಳ್ಳಲಿದ್ದಾರೆ. […]
Category: ದೇಶ ಸುದ್ದಿ
ಸುದ್ದಿ ಸಮಾಚಾರ — > ದೇಶ ಸುದ್ದಿ
ಹರೀಶ್ ಬಂಗೇರ ತಾಯ್ನಾಡಿಗೆ ಆಗಮನ: ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು ಬೆಂಗಳೂರು ಏರ್ಪೋರ್ಟ್
ಬೆಂಗಳೂರು (ಆ,18): ಸೌದಿ ಅರೇಬಿಯಾದಲ್ಲಿ ಬಂಧನಕ್ಕೊಳಪಟ್ಟಿದ್ದ ಕುಂದಾಪುರ ಮೂಲದ ಹರೀಶ್ ಬಂಗೇರ ಬೆಂಗಳೂರು ಏರ್ಪೋರ್ಟ್ ತಲುಪಿದ್ದಾರೆ. ಸೌದಿ ದೊರೆಯ ವಿರುದ್ಧ ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದರೆಂದು ಆರೋಪ ಎದುರಿಸಿರುವ ಹರೀಶ್ ನಿರಪರಾಧಿ ಎಂದು ತಿಳಿದ ಮೇಲೆ ಸೌದಿ ಅರೇಬಿಯಾ ಸರಕಾರ ಇವರನ್ನು ಬಿಡುಗಡೆಗೊಳಿಸಿದ್ದು,ಇದೀಗ ಕುಂದಾಪುರ ಪರಿಸರದ ಜನತೆಗೆ ಸಂತೋಷ ತಂದಿದೆ. ಬೆಂಗಳೂರಿಗೆ ಆಗಮಿಸಿದ ಹರೀಶ್ ಬಂಗೇರರನ್ನು ಲೋಕೇಶ್ ಅಂಕದಕಟ್ಟೆ ಮತ್ತು ತಂಡ ಬೆಂಗಳೂರಿನ ಏರ್ಪೋರ್ಟ್ನಲ್ಲಿ ಬರಮಾಡಿಕೊಂಡರು.
ಮುಂಬೈ ವೆಡ್ಡಿಂಗ್ ಅಸೋಸಿಯೇಷನ್ ವತಿಯಿಂದ ರಾಜ್ ಸಾಹೇಬ್ ಠಾಕ್ರೆ ಭೇಟಿ
ಮಂಬೈ (ಆ, 03) : ಕೊರೊನಾ ಲಾಕ್ದೌನ್ ನಿಂದಾಗಿ ಮುಂಬೈಯಲ್ಲಿ ಕೇಟರಿಂಗ್ ಮತ್ತು ಡೆಕೋರೇಷನ್ ಉದ್ಯಮಕ್ಕೆ ಬಹಳಷ್ಟು ಪೆಟ್ಟು ಬಿದ್ದಿದೆ. ಈ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ನವಿ ಮುಂಬೈ ವೆಡ್ಡಿಂಗ್ ಅಸೋಷಿಯೇಷನ್ (ರಿ.) ಕಳೆದ ಕೆಲವು ತಿಂಗಳುಗಳಿಂದ ಬಹಳ ಶ್ರಮ ಪಡುತ್ತಿದೆ. ಹಲವಾರು ಜನಪ್ರತಿನಿಧಿಗಳ ಬಳಿ ತೆರಳಿ ನೆನೆಗುದಿಗೆ ಬಿದ್ದಿರುವ ಈ ಉದ್ಯಮವನ್ನು ಮತ್ತು ಈ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಿ ಕೇಟರಿಂಗ್ ಉದ್ಯಮವನ್ನು ಉಳಿಸಿ ಕೊಡಬೇಕಾಗಿ […]
ಒಲಿಂಪಿಕ್ಸ್ : ಪಿವಿ ಸಿಂಧು ಗೆ ಕಂಚಿನ ಪದಕ
ಬೆಂಗಳೂರು (ಆ, 1) : ಟೋಕಿಯೊ ಒಲಿಂಪಿಕ್ಸ್ನ ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿ.ವಿ. ಸಿಂಧು ಕಂಚಿನ ಪದಕವನ್ನು ಪಡೆದಿದ್ದಾರೆ. ಚೀನಾದ ಹೀ ಬಿಂಗ್ ಜಿಯಾವೊ ರ ವಿರುದ್ಧ 21-13, 21-15 ನೇರ ಗೇಮ್ ಗಳ ಅಂತರದಲ್ಲಿ ಪಿ. ವಿ. ಸಿಂಧು ಗೆಲುವನ್ನು ಸಾಧಿಸಿದ್ದಾರೆ.
ಮಡಿಕೇರಿ : ನವೋದಯ ವಿದ್ಯಾಲಯ 6ನೇ ತರಗತಿ ಪ್ರವೇಶ ಪರೀಕ್ಷೆ
ಮಡಿಕೇರಿ (ಜು. 28) : ಇಲ್ಲಿನ ಗಾಳಿಬೀಡು ಜವಾಹರ ನವೋದಯ ವಿದ್ಯಾಲಯದ 6 ನೇ ತರಗತಿಯ ಪ್ರವೇಶಕ್ಕೆ ಆಗಸ್ಟ್, 11 ರಂದು ಜಿಲ್ಲೆಯ 06 ಕೇಂದ್ರಗಳಲ್ಲಿ ಆಯ್ಕೆ ಪರೀಕ್ಷೆ ನಡೆಯಲಿದೆ. ಪ್ರವೇಶ ಪತ್ರವನ್ನು ನೋಂದಣಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕ ಬಳಸಿ https://cbseitms.nic.in/index.aspx ಲಿಂಕ್ ಮೂಲಕ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ನೀರಜ್ 7676825036, ಪದ್ಮ ಡಿ.ಟಿ. 7019054680 ಮತ್ತು ಗಂಗಾಧರನ್ ಕೆ. 6363354829 ನ್ನು ಸಂಪರ್ಕಿಸಬಹುದು ಎಂದು ಜವಾಹರ್ ನವೋದಯ […]
ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ
ಕುಂದಾಪುರ (ಜು, 27) : ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್ಸಿಸಿ ಘಟಕ ಆಶ್ರಯದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮವನ್ನು ಜುಲೈ, 26 ರಂದು ಆಯೋಜಿಸಲಾಗಿತ್ತು. ನಿವ್ರತ್ತ ಸೈನಿಕ ರವಿಚಂದ್ರ ಶೆಟ್ಟಿ ತೆಕ್ಕಟ್ಟೆಯವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಸೈನ್ಯದ ಸಿಕ್ಕಿಂ ಮತ್ತು ಸಿಯಾಚಿನ್ ದಿನಗಳನ್ನು ನೆನಪಿಸಿ ರೋಮಾಂಚಗೊಳಿಸಿದರು. ಸೈನ್ಯಕ್ಕೆ ಸೇರ ಬಯಸುವ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುವುದಾಗಿಯೂ ತಿಳಿಸಿದರು. ಕಾರ್ಯಕ್ರಮದ […]
ಕುಮಟಾದ ದಿಶಾ ಭಾಗವತ್ ಅಮೆರಿಕದ ಕ್ಯಾಲಿಫೋರ್ನಿಯಾ ಬಾರ್ ಕೌನ್ಸಿಲ್ನಲ್ಲಿ ಅಟಾರ್ನಿಯಾಗಿ ಪ್ರಮಾಣ ವಚನ ಸ್ವೀಕಾರ
ಕುಮಟಾ (ಜೂ,13): ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಡೆಕೋಡಿಯ ಕು. ದಿಶಾ ಭಾಗವತ ಅಮೇರಿಕಾದ ಕ್ಯಾಲಿಫೋರ್ನಿಯ ಬಾರ್ ಕೌನ್ಸಿಲ್ ನಲ್ಲಿ ಅಟಾರ್ನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಮೂಲಕ ಉತ್ತರಕನ್ನಡ ಜಿಲ್ಲೆ, ರಾಜ್ಯ ಹಾಗೂ ದೇಶದ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೆರಿಸಿದ್ದಾರೆ.ಬೆಂಗಳೂರಿನ ಪ್ರತಿಷ್ಠಿತ ಕ್ರೈಸ್ಟ್ ಕಾಲೇಜಿನಲ್ಲಿ ಕಾನೂನು ಪದವಿ ಮುಗಿಸಿ ನಂತರ ಅಮೆರಿಕದಲ್ಲಿ ಯುಎಸ್ಸಿ ಮಾಸ್ಟರ್ ಡಿಗ್ರಿ ಪಡೆದಿರುತ್ತಾರೆ. ಇವರು ಬಹುಮುಖ ಪ್ರತಿಭೆಯಾಗಿದ್ದು, ಉದ್ಯಮಿ ಮಂಜುನಾಥ ಭಾಗವತ್ ಹಾಗೂ ಲಲಿತಾ ಭಾಗವತ್ […]
ಐಎಸ್ಎಸಿ : ಸೈಬರ್ ಭದ್ರತಾ ತರಬೇತಿ ಕೋರ್ಸ್ಗಳಿಗೆ ನೋಂದಣಿ ಪ್ರಾರಂಭ
ಉಡುಪಿ (ಜೂ, 09): ಸೈಬರ್ ಉಲ್ಲಂಘನೆಗಳು ಬಹಳ ಗಂಭೀರ ವಿಷಯವಾಗಿದೆ. ಜಗತ್ತಿನಾದ್ಯಂತ ವ್ಯಾಪಿಸಿರುವ ಸೈಬರ್ ಉಲ್ಲಂಘನೆಗಳ ಘಟನೆಗಳನ್ನು ವಿಶ್ವಸಂಸ್ಥೆಯ ಬಹಳ ಗಂಭೀರವಾಗಿ ಗಣನೆಗೆ ತೆಗೆದುಕೊಂಡಿದೆ. ಆ ನಿಟ್ಟಿನಲ್ಲಿ ವಿಶ್ವಸಂಸ್ಥೆಯು ತನ್ನ ನಿರ್ಣಯಗಳ ಮೂಲಕ ಸದಸ್ಯ ರಾಷ್ಟ್ರಗಳು ಜಾಗೃತಿ ಅಭಿಯಾನಗಳನ್ನು ನಡೆಸಬೇಕೆಂದಿದೆ. ಸದಸ್ಯ ರಾಷ್ಟ್ರಗಳು ಸೈಬರ್ ಭದ್ರತಾ ಸಾಮರ್ಥ್ಯದ ಹೆಚ್ಚಿಸಿಕೊಳ್ಳಲು ನೆಟಿಜನ್ಗಳಿಗೆ ತರಬೇತಿ ನೀಡುವುದು ಅಂತರರಾಷ್ಟ್ರೀಯ ಆದೇಶವಾಗಿದೆ. ರಾಷ್ಟ್ರೀಯ ಭದ್ರತಾ ಸಲಹಾ ಸಮಿತಿ ಮತ್ತು ಮಾನ್ಯ ಅಪೆಕ್ಸ್ ನ್ಯಾಯಾಲಯವು ಹೆಚ್ಚಿನ ಜಾಗೃತಿಯ […]
ಕುಂದ ಕನ್ನಡಿಗರ ಮನ ಗೆದ್ದ “ನಮ್ಮ ಕುಂದಾಪುರ” ಫೇಸ್ಬುಕ್ ಗ್ರೂಪ್ ಯಶಸ್ವಿ 12ನೇ ವರ್ಷಕ್ಕೆ ಪಾದಾರ್ಪಣೆ
ಅಮೆರಿಕದ ಮಾರ್ಕ್ ಜುಕರ್ಬರ್ಗ್ 2004 ರಲ್ಲಿ ಹುಟ್ಟುಹಾಕಿದ ಫೇಸ್ಬುಕ್ ಎನ್ನುವ ಸಾಮಾಜಿಕ ಜಾಲತಾಣ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಜಾಗತಿಕವಾಗಿ ಹರಡಿಕೊಂಡಿರುವ ಈ ಫೇಸ್ಬುಕ್ ಇಂದು ಕೋಟ್ಯಂತರ ಬಳಕೆದಾರರನ್ನು ಹೊಂದಿದೆ. ಫೇಸ್ಬುಕ್ ಬಳಕೆದಾರರು ಬೇರೆಬೇರೆ ಉದ್ದೇಶವನ್ನಿಟ್ಟುಕೊಂಡು ಫೇಸ್ಬುಕ್ ಖಾತೆಗಳನ್ನು , ಫೇಸ್ಬುಕ್ ಪೇಜ್ ಹಾಗೂ ಗ್ರೂಪ್ ಗಳನ್ನು ತೆರೆಯುತ್ತಾರೆ. ಆಮೂಲಕ ಇತರರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಾರೆ. ನಮ್ಮ ದೇಶದಲ್ಲೂ ಕೋಟ್ಯಾಂತರ ಫೇಸ್ ಬುಕ್ ಬಳಕೆದಾರರಿದ್ದಾರೆ. ಅದೆಷ್ಟೋ ಫೇಸ್ಬುಕ್ ಖಾತೆಗಳು, ಗ್ರೂಪ್ ಹಾಗೂ […]
ಪಿಪಿಇ ಕಿಟ್ ಧರಿಸಿಯೇ ಸಪ್ತಪದಿ ತುಳಿದ ಜೋಡಿ – ವಿಡಿಯೋ ನೋಡಿ
ಇಂದೋರ್ (ಏ, 27): ಕೊರೋನಾ ಎರಡನೇ ಅಲೆ ದೇಶದಲ್ಲಿ ಪರಿಸ್ಥಿತಿ ಕೈ ಮೀರಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜನತೆ ಹಾಕಿಕೊಂಡ ಎಲ್ಲಾ ಯೋಜನೆ ಹಾಗೂ ಯೋಚನೆಗಳು ತಲೆಕೆಳಗಾಗಿದೆ. ಅದರಲ್ಲೂ ಮದುವೆ ಸಮಾರಂಭ ಆಯೋಜಿಸಿದವರು ಹೇಗಾದರೂ ಮಾಡಿ ಹಮ್ಮಿಕೊಂಡ ಕಾರ್ಯ ಸುಸೂತ್ರವಾಗಿ ನಡೆಸ ಬೇಕೆಂದು ಹರ ಸಾಹಸ ಪಡುತ್ತಿದ್ದಾರೆ. ಈ ಎಲ್ಲದರ ನಡುವೆ ಇಲ್ಲೊಂದು ವಿಶೇಷ ಮದುವೆ ನಡೆದಿದೆ. ವಧು- ವರರಿಬ್ಬರು ಪಿಪಿಇ ಕಿಟ್ ಧರಿಸಿ ಮದುವೆಯಾಗಿರುವ ಸಂಗತಿ ಮಧ್ಯಪ್ರದೇಶದ ರತ್ಲಾಂ […]