. ಹೆಮ್ಮಾಡಿ (ಆ ,24): ಮೊಗವೀರ ಯುವ ಸಂಘಟನೆ(ರಿ.),ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕದ ನೇತೃತ್ವದಲ್ಲಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ),ಅಂಬಲಪಾಡಿ ಉಡುಪಿ ಸಹಯೋಗದೊಂದಿಗೆ ಬಗ್ವಾಡಿ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನದ ವಠಾರದಲ್ಲಿ ಆಗಸ್ಟ್ 23 ರಂದು ವನಮಹೋತ್ಸವ ಹಾಗೂ ಗಿಡ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಹೆಮ್ಮಾಡಿ ಘಟಕದ ಅಧ್ಯಕ್ಷರಾದ ದಿನೇಶ್ ಕಾಂಚನ್ ಬಾಳಿಕೆರೆ, ಮೊಗವೀರ ಮಹಾಜನ ಸೇವಾ ಸಂಘ (ರಿ.), ಬಗ್ವಾಡಿ ಹೋಬಳಿ ಕುಂದಾಪುರ ಶಾಖೆ ಇದರ ಅಧ್ಯಕ್ಷರಾದ ಶ್ರೀ […]
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
ಹೆಮ್ಮಾಡಿಯಲ್ಲಿ ಅಗಸ್ಟ್ 31 ರಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಹೆಮ್ಮಾಡಿ (ಆ.26): ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.) ಅಂಬಲಪಾಡಿ, ಉಡುಪಿ ಇವರ ನೇತೃತ್ವದಲ್ಲಿ ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ(ನಿ.)ಹೆಮ್ಮಾಡಿ ಇವರ ಸಹಕಾರದೊಂದಿಗೆ ರಕ್ತನಿಧಿ ವಿಭಾಗ ಮಣಿಪಾಲ ಹಾಗೂ ಜಿಲ್ಲಾಡಳಿತ ಉಡುಪಿ ಇವರ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಇದೇ ಅಗಸ್ಟ್ 31 ರಂದು ಹೆಮ್ಮಾಡಿಯ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ(ನಿ). ದ ಮತ್ಸ್ಯಜ್ಯೋತಿ ಸಭಾಂಗಣದಲ್ಲಿ […]
ಕುಂದಾಪುರ : ಡಾ| ಬಿ. ಬಿ. ಹೆಗ್ಡೆ ಕಾಲೇಜಿನ ಪ್ರಾಂಶುಪಾಲರಿಗೆ ಡಾಕ್ಟರೇಟ್ ಪದವಿ
ಕುಂದಾಪುರ(ಆ,25): ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೊತ್ತಾಡಿ ಉಮೇಶ್ ಶೆಟ್ಟಿಯವರು ಮಂಡಿಸಿದ “ಕರಾವಳಿ ಕರ್ನಾಟಕದಲ್ಲಿರುವ ಗ್ರಾಮೀಣ ಮಹಿಳಾ ಉದ್ಯಮಿಗಳಿಗಿರುವ ಅವಕಾಶಗಳು ಮತ್ತು ಸವಾಲುಗಳು” ಎಂಬ ಸಂಶೋಧನಾ ಮಹಾ ಪ್ರಬಂಧಕ್ಕೆ ಕೊಯಮುತ್ತೂರಿನ ಭಾರತೀಯಾರ್ ವಿಶ್ವ ವಿದ್ಯಾನಿಲಯವು ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ. ಇವರ ಸಂಶೋಧನೆಗೆ ಉಡುಪಿ ಜಿಲ್ಲೆಯ ಶಿರ್ವ ಸೈಂಟ್ ಮೇರಿಸ್ ಕಾಲೇಜಿನ ನಿವೃತ್ತ ವಾಣಿಜ್ಯ ಪ್ರಾಧ್ಯಾಪಕರಾದ […]
ದೀಕ್ಷಿತ್ .ಕೆ ಯವರಿಗೆ ಪಿಎಚ್.ಡಿ ಪ್ರದಾನ
ಕುಂದಾಪುರ (ಆ. 25): ದೀಕ್ಷಿತ್ ಕೆ ಅವರು ಮಂಡಿಸಿದ ಡಿಸೈನ್ ಆಫ್ ಮೈಕ್ರೋಫ್ಲೋಯಿಡಿಕ್ ನೆಟ್ವರ್ಕ್ಸ್ ವಿದ್ ಅಪ್ಲಿಕೇಶನ್ టు ರೋಬಸ್ ಕೆಮಿಕಲ್ ಗ್ರೇಡಿಯೆಂಟ್ ಜನರೇ ಷನ್ ಆ್ಯಂಡ್ ಪ್ಯಾಸಿವ್ ಫೋ ಕಂಟ್ರೋಲ್’ ಮಹಾ ಪ್ರಬಂಧಕ್ಕೆ ಐಐಟಿ ಬಾಂಬೆ ಪಿಎಚ್.ಡಿ ಪ್ರದಾನ ಮಾಡಿದೆ. ಐಐಟಿ ಬಾಂಬೆಯ ಕೆಮಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರೊ. ಸಮೀರ್ ಜಾಧವ್ ಮಾರ್ಗದರ್ಶನದಲ್ಲಿ ಡಾ.ದೀಕ್ಷಿತ್ ರವರು ಸಂಶೋಧನೆ ನಡೆಸಿದ್ದರು. ಇವರು ಈ ಹಿಂದೆ ಬಯೋಕೆಮಿಕಲ್ ಇಂಜಿನಿಯರಿಂಗ್ ನಲ್ಲಿ ಮಣಿಪಾಲ್ […]
ಹೆಮ್ಮಾಡಿ ಜನತಾ ಪಿಯು ಕಾಲೇಜಿನಲ್ಲಿ ಜನತಾ ದಿಬ್ಬಣ
ಹೆಮ್ಮಾಡಿ(ಅ 23 ): ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಮತ್ತು ಶಿಸ್ತನ್ನು ಮೈಗೂಡಿಸಿಕೊಂಡು ಆದರ್ಶ ವ್ಯಕ್ತಿಗಳಾಗಿ ಸಮಾಜದಲ್ಲಿ ವಿಜ್ಞಾನಿ, ಡಾಕ್ಟರ್ ಆಗಿ ದೇಶಕ್ಕೆ ಕೊಡುಗೆ ನೀಡಿ ಎಂದು ವಿ ವಿ ವಿ ಮಂಡಳಿ.ರಿ.ಹೆಮ್ಮಾಡಿ ಇದರ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಗೋಪಾಲ ಪೂಜಾರಿ ಹೇಳಿದರು. ಅವರು ಹೆಮ್ಮಾಡಿ ಜನತಾ ಪಿಯು ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಜನತಾ ದಿಬ್ಬಣ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಚಿತ್ರ ಸಾಹಿತಿ ಪ್ರಮೋದ್ ಮರವಂತೆ […]
ಯೋಗಾಸನಾ ಸ್ಪರ್ಧೆ: ಸಂದೀಪ್ ಪೂಜಾರಿ ತ್ರಾಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಕುಂದಾಪುರ( ಆ,24): ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ (ನೊಂ.)ಬೆಂಗಳೂರು ಮತ್ತು ಮುರುಘ ರಾಜೇಂದ್ರ ಬೃಹನ್ಮಠ, ಚಿತ್ರದುರ್ಗ ಇವರ ಸಹಯೋಗದೊಂದಿಗೆ ರಾಜ್ಯ ಮಟ್ಟದ ಯೋಗಾಸನಾ ಸ್ಪರ್ಧೆ ಶ್ರೀ ಅನುಭವ ಮಂಟಪ ಮುರುಘ ರಾಜೇಂದ್ರ ಬೃಹನ್ಮಠ, ಚಿತ್ರದುರ್ಗ ದಲ್ಲಿ ನಡೆದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಗ್ರಾಮ ಪಂಚಾಯತ್ ತ್ರಾಸಿ ಸಿಬ್ಬಂದಿ ಸಂದೀಪ್ ಪೂಜಾರಿಯವರು ವಿವಿಧ ಹಂತದ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟದಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆ […]
ಡಾl ಬಿ.ಬಿ ಹೆಗ್ಡೆ ಕಾಲೇಜು : ಎನ್ಎಸ್ಎಸ್ ಪ್ರಾಕ್ತನ ವಿದ್ಯಾರ್ಥಿಗಳಿಂದ ನೆಲ್ಮೆಯ ನಮನ
ಕುಂದಾಪುರ(ಆ. 23): ವಿದ್ಯಾರ್ಥಿ ಬದುಕಿನಲ್ಲಿ ಪಠ್ಯದ ಜೊತೆಗೆ ಪಠ್ಯಪೂರಕ ಚಟುವಟಿಕೆಗಳು ಅತಿ ಪ್ರಮುಖವಾದ್ದು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಏನ್ ಎಸ್ ಎಸ್ ನಂತಹ ವೇದಿಕೆಗಳು ಮಹತ್ವದ ಪಾತ್ರವನ್ನು ವಹಿಸುತ್ತದೆ. ವಿದ್ಯಾರ್ಥಿ ಸಮುದಾಯದಲ್ಲಿ ವ್ಯಕ್ತಿತ್ವದ ವಿಕಸನದ ಜೊತೆಗೆ ಮಾನವೀಯ ಮತ್ತು ಸಂವಿಧಾನಿಕ ಮೌಲ್ಯವನ್ನು ಬೆಳೆಸಲು ರಾಷ್ಟ್ರೀಯ ಸೇವಾ ಯೋಜನೆಯಂತಹ ಪಠ್ಯ ಪೂರಕ ವೇದಿಕೆಗಳು ಅತ್ಯವಶ್ಯಕ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಏನ್ ಏಸ್ ಏಸ್ ಕಾರ್ಯಕ್ರಮ ಸಂಯೋಜನಾಧಿಕಾರಿಗಳಾದ ಡಾ. ಗಣನಾಥ ಎಕ್ಕಾರು […]
ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಆಂಗ್ಲ ಮಾಧ್ಯಮ ಶಾಲೆ:ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ
ಕುಂದಾಪುರ: (ಆ 21 ): ಕುಂದಾಪುರ ಎಜುಕೇಶನ್ ಸೊಸೈಟಿ( ರಿ ) ಪ್ರವರ್ತಿತ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಆಂಗ್ಲ ಮಾಧ್ಯಮ ಶಾಲೆಗಳ ಪ್ರಾಥಮಿಕ ವಿಭಾಗದ 7ನೇ ತರಗತಿಯ ವಿದ್ಯಾರ್ಥಿನಿ ಸಂಹಿತಾ ತಂತ್ರಿ ಲಯನ್ಸ್ ಕ್ಲಬ್ ಹಂಗಳೂರು ಇವರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆಯೋಜಿಸಲ್ಪಟ್ಟ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾಳೆ. ವಿಜೇತ ವಿದ್ಯಾರ್ಥಿನಿಯನ್ನು ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಮತ್ತು ವಿವಿಧ ವಿಭಾಗಗಳ […]
ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ‘ವಸ್ತ್ರಭಾರತೀ’ಫ್ಯಾಶನ್ ಪೆರೇಡ್
ಕುಂದಾಪುರ (ಆ,13) : ಇಲ್ಲಿನ ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಆಶ್ರಯದಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ, ‘ವಸ್ತ್ರ ಭಾರತೀ’ ಅಂತರ್ ತರಗತಿ ದೇಶಭಕ್ತಿ ಫ್ಯಾಶನ್ ಪೆರೇಡ್ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಸ್ಪರ್ಧೆಯ ಪ್ರಥಮ ಸುತ್ತಿನಲ್ಲಿ 17 ತಂಡಗಳು ಭಾಗವಹಿಸಿ, ದ್ವಿತೀಯ ಸುತ್ತಿಗೆ 10 ತಂಡಗಳು ಆಯ್ಕೆಯಾದವು. ಆರು ವಿದ್ಯಾರ್ಥಿಗಳನ್ನೊಳಗೊಂಡ ತರಗತಿವಾರು ತಂಡದವರು ದಂಡಿ ಸತ್ಯಾಗ್ರಹ, ಬೇರೆ ಬೇರೆ ರಾಜ್ಯಗಳ ಸಂಸ್ಕೃತಿ, ಜನಪದ, ಭಾವೈಕ್ಯತೆ […]
ಜನತಾ ಪಿಯು ಕಾಲೇಜು ಹೆಮ್ಮಾಡಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ-ಜನತಾ ವಿರಾಟ್
ಹೆಮ್ಮಾಡಿ( ಆ ,17): ಹಳ್ಳಿಯ ಎಲ್ಲ ಮಕ್ಕಳಿಗೂ ಶಿಕ್ಷಣ ಸಿಗಬೇಕು.ಆಗ ಮಾತ್ರ ಗಾಂಧಿ ಕಂಡ ಕನಸ್ಸು ಸಾರ್ಥಕತೆ ಪಡೆಯುತ್ತದೆ.ಹಳ್ಳಿಯ ಪ್ರತಿ ಮಗು ಸಮಾಜದ ಮುಖ್ಯ ವಾಹಿನಿಗೆ ಬರಲು ನಾವೆಲ್ಲಾ ಶ್ರಮಿಸಬೇಕು. ವಿದ್ಯಾರ್ಥಿಗಳು ಕೂಡ ವೀರ ಯೋಧರ ತ್ಯಾಗ ಸ್ಮರಿಸಿ ಅವರ ಆದರ್ಶ ಗಳನ್ನುತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜನತಾ ಪಿಯು ಕಾಲೇಜು ಹೆಮ್ಮಾಡಿಯ ಪ್ರಾಂಶುಪಾಲರಾದ ಗಣೇಶ ಮೊಗವೀರ ಹೇಳಿದರು. ಜನತಾ ಪಿಯು ಕಾಲೇಜು ಹೆಮ್ಮಾಡಿ ಹಾಗೂ ಜನತಾ ನ್ಯೂಸ್ಯ ಇಂಗ್ಲೀಷ್ […]