ಗಂಗೊಳ್ಳಿ(ಏ,01): ಡಾ.ಬಿ.ಆರ್ ಅಂಬೇಡ್ಕರ್ ಯುವಕ ಮಂಡಲ(ರಿ),ಅಮೃತಾ ಯುವತಿ ಮಂಡಲ (ರಿ) ಮತ್ತು ಅರ್ಚನಾ ಮಹಿಳಾ ಮಂಡಲ ಮೇಲ್ ಗಂಗೊಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ 132ನೇ ಜನ್ಮ ದಿನಾಚರಣೆಯ ಪ್ರಯುಕ್ತ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಪದವಿ ಪೂರ್ವ ಮತ್ತು ಪದವಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ವಿಷಯ : ನನ್ನ ಅರಿವಿನ ಅಂಬೇಡ್ಕರ್. ಸ್ಪರ್ಧೆಯ ನಿಯಮಗಳು *2022-23 ನೇ ಶೈಕ್ಷಣಿಕ ಸಾಲಿನಲ್ಲಿ ಉಡುಪಿ […]
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
ಐ.ಎಂ.ಜೆ. ವಿದ್ಯಾ ಸಂಸ್ಥೆ: ಸಂಸ್ಥಾಪಕ ದಿನದ ಅಂಗವಾಗಿ ವಿಸ್ಮಯ ಕಾರ್ಯಕ್ರಮ
ಕುಂದಾಪುರ(ಏ,01): ಏಪ್ರಿಲ್ 10 ರಂದು ಐ.ಎಂ.ಜೆ. ವಿದ್ಯಾ ಸಂಸ್ಥೆಯಲ್ಲಿ ‘ಸಂಸ್ಥಾಪಕ ದಿನ’ವನ್ನು ಆಚರಿಸುವ ಅಂಗವಾಗಿ ಕುಂದಾಪುರ ‘ಮಾನಸ- ಜ್ಯೋತಿ’ ವಿಕಲಚೇತನ ಮಕ್ಕಳಿಗೆ ನಮ್ಮ ಐ. ಎಂ. ಜೆ. ವಿದ್ಯಾ ಸಂಸ್ಥೆ ಬೋಧಕ- ವಿದ್ಯಾರ್ಥಿವೃಂದದವರು ‘ವಿಸ್ಮಯ’ ಕಾರ್ಯಕ್ರಮದಡಿ ವಿವಿಧ ಪ್ರದರ್ಶನದಿಂದ ಮಕ್ಕಳನ್ನು ರಂಜಿಸಿದರು. ಮಾನಸ ಜ್ಯೋತಿ ಸಂಸ್ಥೆಯ ವ್ಯವಸ್ಥಾಪಕರಾದ ಶ್ರೀಮತಿ ಶೋಭಾ ಮಧ್ಯಸ್ಥ ಅವರು ಈ ಸಂಸ್ಥೆಯನ್ನು ಪ್ರಸ್ತುತ ನಿರ್ವಹಿಸುತ್ತಿದ್ದಾರೆ. ಈ ಸಂಸ್ಥೆಯಲ್ಲಿ 2011 ರಿಂದ ನೆದರ್ಲ್ಯಾಂಡಿನ ಮಾರ್ಟೆ ವಾನ್ ಡೆನ್ ಬ್ಯಾಂಡ್ ನವರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಐ.ಎಂ.ಜೆ ವಿದ್ಯಾ ಸಂಸ್ಥೆಯ […]
ಎಚ್. ಎಮ್. ಎಮ್.ಆಂಗ್ಲ ಮಾಧ್ಯಮ ಶಾಲೆ: ಗ್ರಾಜುಯೇಷನ್ ಡೇ ಆಚರಣೆ
ಕುಂದಾಪುರ( ಏ.01): ಇಲ್ಲಿನ ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಂ.ಎಂ ಆಂಗ್ಲ ಮಾಧ್ಯಮ ಶಾಲೆಯ ಪೂರ್ವ ಪ್ರಾಥಮಿಕ ವಿಭಾಗದ ಯುಕೆಜಿ ವಿದ್ಯಾರ್ಥಿಗಳಿಗೆ ಗ್ರಾಜುಯೇಷನ್ ಡೇ ನಡೆಯಿತು . ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಡಾIಬಿ. ಬಿ ಹೆಗ್ಡೆ ಕಾಲೇಜು ಕುಂದಾಪುರ ಇಲ್ಲಿನ ವ್ಯವಹಾರ ನಿರ್ವಹಣಾ ವಿಭಾಗದ ಮುಖ್ಯಸ್ಥರಾದ ನಂದಾ ರೈ ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಶಿಕ್ಷಕರ ಜೊತೆ ಪೋಷಕರ ಪಾತ್ರವೂ ಅತಿ ಮಹತ್ವವಾದದ್ದು ಎಂದು ತಿಳಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ […]
ಶ್ರೀ ಸಸಿಗೋಳಿ ದೈವಸ್ಥಾನದ ಸ್ವಾಗತ ಗೋಪುರ ಲೋಕಾರ್ಪಣೆ
ಶ್ರೀ ನಂದಿಕೇಶ್ವರ ಸಹಪರಿವಾರ ದೈವಸ್ಥಾನಕ್ಕೆ ರಾಜೀವಿ ಹರೀಶ್ ಶೆಟ್ಟಿ, ಕೋಡ್ಗಿ, ಸಿದ್ದಾಪುರ ಇವರು ಕೊಡುಗೆಯಾಗಿ ನೀಡಿದ ಸ್ವಾಗತ ಗೋಪುರ ಲೋಕಾರ್ಪಣೆ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮದಲ್ಲಿ ವಿಜಯ ಕುಮಾರ ಅಡಿಗ ಕಕ್ಕುಂಜೆ, ವೇದಮೂರ್ತಿ ಶ್ರೀಪತಿ ಭಟ್ ಕಂಬಿಕಲ್ಲು, ಹೆಚ್.ಬಿ ರಾಜೀವ ಶೆಟ್ಟಿ, ಶಿವರಾಮ ಶೆಟ್ಟಿ ಪಾತ್ರಿಗಳು ಕಕ್ಕುಂಜೆ, ಹೆರಿಯಣ್ಣ ಶೆಟ್ಟಿ ಹರ್ಕಾಡಿ, ಸುಕೇಶ್ ಶೆಟ್ಟಿ ಹೊಸಮಠ, ದಿನಕರ ಶೆಟ್ಟಿ ಹರ್ಕಾಡಿ, ಸುಧಾಕರ ಶೆಟ್ಟಿ ಹರ್ಕಾಡಿ, ಪ್ರಶಾಂತ್, ರತ್ನಾಕರ ಶೆಟ್ಟಿ ದೊಡ್ಮನೆ, ಪ್ರಶಾಂತ […]
ಕುಂದಾಪುರ : ಏ.05 ರಂದು ವೀಳ್ಯ ಶಾಸ್ತ್ರ ಹಾಗೂ ವಧು-ವರರಿಗೆ ಉಡುಗೆ ತೊಡುಗೆಗಳ ವಿತರಣಾ ಕಾರ್ಯಕ್ರಮ
ಕೋಟೇಶ್ವರ (ಮಾ.29): ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ) ಅಂಬಲಪಾಡಿ ಹಾಗೂ ಮೊಗವೀರ ಯುವ ಸಂಘಟನೆ(ರಿ) ಉಡುಪಿ ಜಿಲ್ಲೆ ಇವರ ಜಂಟಿ ಆಶ್ರಯದಲ್ಲಿ ಮೇ 03 ರಂದು ನಡೆಯಲಿರುವ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಪೂರ್ವಭಾವಿಯಾಗಿ ಸಾಮೂಹಿಕ ವೀಳ್ಯ ಶಾಸ್ತ್ರ ಕಾರ್ಯಕ್ರಮ ಹಾಗೂ ವಧು- ವರರಿಗೆ ಉಡುಗೆ ತೊಡುಗೆಗಳ ವಿತರಣಾ ಕಾರ್ಯಕ್ರಮ ಕುಂದಾಪುರದ ಚಿಕ್ಕನ್ ಸಾಲ್ ರಸ್ತೆ ಬಳಿ ಇರುವ ಮೊಗವೀರ ಭವನದಲ್ಲಿ ಏಪ್ರಿಲ್.05 ರoದು ನಡೆಯಲಿದೆ. ಮಾ.28 ರಂದು […]
ಎ.06ಕ್ಕೆ ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನದ ರಥೋತ್ಸವ
ಹೆಮ್ಮಾಡಿ (ಮಾ,28) ಕುಂದಾಪುರ ತಾಲೂಕಿನ ಪ್ರಮಖ ದೇವಾಲಯಗಳಲ್ಲಿ ಒಂದಾದ ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನದ ವಾರ್ಷಿಕ ಬ್ರಹ್ಮ ರಥೋತ್ಸವ ಇದೇ ಎಪ್ರಿಲ್ 06 ರ ಗುರುವಾರದಂದು ನಡೆಯಲಿದೆ. ರಥೋತ್ಸವದ ಪ್ರಯುಕ್ತ ಎ.0 4ರಿಂದ 08ರ ವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು: ವಿಶ್ವ ಜಲ ದಿನಾಚರಣೆ
ಕುಂದಾಪುರ(ಮಾ,29): ಇಲ್ಲಿನ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗ ಹಾಗೂ ಇಕೋ ಕ್ಲಬ್ ಇದರ ಸಹಭಾಗಿತ್ವದಲ್ಲಿ ವಿಶ್ವ ಜಲ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ದಕ್ಷಿಣ ಕನ್ನಡ ನಿರ್ಮಿತಿ ಕೇಂದ್ರ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ರಾಜೇಂದ್ರ ಕಲ್ಬಾವಿ ಇವರು ಆಗಮಿಸಿ ನೀರಿನ ಮಹತ್ವ ಮತ್ತು ಸಂರಕ್ಷಣೆ ವಿಷಯದ ಕುರಿತು ವಿಚಾರ ವಿನಿಮಯ ಮಾಡಿದರು. ನೀರನ್ನು ಜೀವ ಜಲ ಎಂದು ಕರೆಯುತ್ತಾರೆ. ಇತ್ತೀಚಿನ […]
ಡಾ| ಬಿ.ಬಿ.ಹೆಗ್ಡೆ ಕಾಲೇಜು ಕುಂದಾಪುರ: ಪಿಜಿಸಿಇಟಿ ಕುರಿತು ಮಾಹಿತಿ ಕಾರ್ಯಗಾರ
ಕುಂದಾಪುರ (ಮಾ, 28): ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದ ಪ್ರವೇಶಕ್ಕಾಗಿ ನಡೆಸುವ ಪಿಜಿಸಿಇಟಿ ಪರೀಕ್ಷೆಯ ಕುರಿತು ಮಾಹಿತಿ ಕಾರ್ಯಗಾರ ಏರ್ಪಡಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಂಗಳೂರಿನ ಅಭಿಜ್ಞಾ ವಿದ್ಯಾಸಂಸ್ಥೆಯ ನಿರ್ದೇಶಕರಾದ ಶ್ರೀ ಅಭಿಲಾಷ್ ಪರೀಕ್ಷೆಯ ತಯಾರಿ ಹೇಗಿರಬೇಕು, ಪರೀಕ್ಷೆ ಯಾವ ಸಂದರ್ಭದಲ್ಲಿ ನಡೆಸಲಾಗುತ್ತದೆ, ಪರೀಕ್ಷೆಯ ಪೂರ್ವ ತಯಾರಿಯೊಂದಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವುದರ ಬಗ್ಗೆ […]
ಡಾ.ಬಿ.ಬಿ. ಹೆಗ್ಡೆ ಕಾಲೇಜು: ಹಸ್ತಿನಾವತಿ ಕಾದಂಬರಿಯ ಮರು ಅನಾವರಣ
ಕುಂದಾಪುರ(,ಮಾ.28):ಇಲ್ಲಿನ ಡಾ.ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಜನಸೇವಾ ಟ್ರಸ್ಟ್ ಮೂಡುಗಿಳಿಯಾರು ಆಶ್ರಯದಲ್ಲಿ ‘ಹಸ್ತಿನಾವತಿ’ ಕಾದಂಬರಿಯ ಮರು ಅನಾವರಣ ಕಾರ್ಯಕ್ರಮ ಮಾ.26 ರಂದು ನಡೆಯಿತು. ಬೆಂಗಳೂರು ವಿಶ್ವವಿದ್ಯಾಲಯದ ವಿತ್ತಾಧಿಕಾರಿ ಅಜಿತ್ ಹೆಗ್ಡೆ ಶಾನಾಡಿಯವರು ಜೋಗಿಯವರ ಹಸ್ತಿನಾವತಿ ಕಾದಂಬರಿ ಅನಾವರಣಗೊಳಿಸಿ ಮಾತನಾಡಿದರು. ಈ ಕೃತಿಯಲ್ಲಿ ರಾಜಕೀಯ, ಧಾರ್ಮಿಕ, ಪ್ರೇಮಕತೆ ಎಲ್ಲವೂ ಇದೆ. ಮುಖ್ಯವಾಗಿ ಯುವ ಸಮುದಾಯ ಓದಬೇಕಾದ ಪುಸ್ತಕವಿದು. ಓದುಗರನ್ನು ಬಿಡದಂತೆ ಓದಿಸಿಕೊಂಡು ಹೋಗುವ ಕಲೆ ಜೋಗಿಯವರಿಗೆ ಜನ್ಮತಃ ಸಿದ್ಧಿಯಾಗಿದೆಎಂದರು. ಬದುಕಿನ ವಿಭಿನ್ನ ಪಾತ್ರಗಳನ್ನು […]
ಐ.ಎಂ.ಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಕಾಮರ್ಸ್ ಮೂಡ್ಲಕಟ್ಟೆ:ಶಿಕ್ಷಣ ಮತ್ತು ಜೀವನದ ಬಗ್ಗೆ ಗ್ರಹಿಕೆ ವಿಷಯದ ಕುರಿತು ಕಾರ್ಯಗಾರ
ಕುಂದಾಪುರ(ಮಾ 27): ಇಲ್ಲಿನ ಐ.ಎಂ.ಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಕಾಮರ್ಸ್ ಮೂಡ್ಲಕಟ್ಟೆಯಲ್ಲಿ ‘ಶಿಕ್ಷಣ ಮತ್ತು ಜೀವನದ ಬಗ್ಗೆ ಗ್ರಹಿಕೆ’ ಎಂಬ ವಿಷಯದ ಕುರಿತು ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಐ. ಎಂ. ಜೆ. ವಿದ್ಯಾ ಸಂಸ್ಥೆಗಳ ನಿರ್ದೇಶಕರಾದ ಪ್ರೊIದೋಮ ಚಂದ್ರಶೇಖರ್ ಅವರು ವಿಷಯದ ಕುರಿತು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. “ವೇಗವಾಗಿ ಬೆಳೆಯುತ್ತಿರುವ ಸ್ಪರ್ಧಾತ್ಮಕ ಪ್ರಪಂಚಕ್ಕೆ ವಿದ್ಯಾರ್ಥಿಗಳು ಅಣಿಯಾಗುತ್ತಿರುವ ನಿಟ್ಟಿನಲ್ಲಿ ವಿದ್ಯಾರ್ಥಿ ಜೀವನದಲ್ಲಿ ತೊಡಗಿಸಿಕೊಳ್ಳಬಹುದಾದ ವಿಷಯದ ಕುರಿತು ಮಾತನಾಡುತ್ತಾ, […]










