ಗಂಗೊಳ್ಳಿ ( ಸೆ.15): ಭಾಷೆ ನಮ್ಮ ನಡುವೆ ಭಾಂದವ್ಯ ಬೆಸೆಯುತ್ತದೆ. ದೇಶದ ಜನರ ಮನಸ್ಸುಗಳನ್ನು ಒಗ್ಗೂಡಿಸುವಲ್ಲಿ ಹಿಂದಿ ಭಾಷೆಯ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು ಕುಂದಾಪುರದ ಭಂಡಾರಕರ್ಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಗೋವಿಂದ ಗೊಂಡ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಮತ್ತು ರೋಟರಿ ಕ್ಲಬ್ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ನಡೆದ ಹಿಂದಿ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಯ್ಯಫ್, ಸಂಜನಾ, ಲೇಖಾ, ಪ್ರಥ್ವಿ, ಝುವೈನ ಮತ್ತು ಮೆಹಕ್ […]
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
ಬಿ. ಬಿ. ಹೆಗ್ಡೆ ಕಾಲೇಜು : ರ್ಯಾಗಿಂಗ್ ಕುರಿತು ಅರಿವು ಕಾರ್ಯಕ್ರಮ
ಕುಂದಾಪುರ (ಸೆಪ್ಟೆಂಬರ್ 2): ರ್ಯಾಗಿಂಗ್ ಗೆ ಐತಿಹಾಸಿಕ ಹಿನ್ನೆಲೆ ಇದೆ. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯುದ್ಧದ ಪೂರ್ವ ತಯಾರಿಯ ಸಂದರ್ಭದಲ್ಲಿ ಆರಂಭಗೊAಡ ರ್ಯಾಗಿಂಗ್ ಪ್ರಸ್ತುತ ಶಾಲಾ-ಕಾಲೇಜುಗಳಲ್ಲಿ ವಿವಿಧ ರೂಪದಲ್ಲಿ ಕಾಣಿಸಿಕೊಂಡಿದೆ. ಮಹಿಳಾ ದೌರ್ಜನ್ಯ ಮತ್ತು ರ್ಯಾಗಿಂಗ್ ಬಗ್ಗೆ ಕಾನೂನಿನಲ್ಲಿರುವ ಮಾಹಿತಿಗಳನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ದೌರ್ಜನ್ಯ ಆದ ಸಂದರ್ಭದಲ್ಲಿ ಪ್ರಶ್ನಿಸುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳುವ ಮೂಲಕ ಭವಿಷ್ಯದಲ್ಲಿ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ ಎಂದು ಕುಂದಾಪುರದ ಹಿರಿಯ ನ್ಯಾಯವಾದಿ ಸತೀಶ್ಚಂದ್ರ ಕಾಳವರ್ಕರ್ […]
ಬಿ. ಬಿ. ಹೆಗ್ಡೆ ಕಾಲೇಜು : ರೋಟರಾಕ್ಟ್ ಪದಗ್ರಹಣ
ಕುಂದಾಪುರ (ಸೆ. 12) : ಇಲ್ಲಿನ ಡಾ| ಬಿ ಬಿ ಹೆಗ್ಡೆ ಕಾಲೇಜಿನ ರೋಟರಾಕ್ಟ್ ಕ್ಲಬ್ನ 2024-25ನೇ ಸಾಲಿನ ಪದಗ್ರಹಣ ಕಾರ್ಯಕ್ರಮ ಸೆಪ್ಟಂಬರ್ 12ರಂದು ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ರೋಟರಿ ಕ್ಲಬ್ ಕುಂದಾಪುರ ಹಾಗೂ ಕಾಲೇಜಿನ ರೋಟರಾಕ್ಟ್ ಕ್ಲಬ್ನ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ರೋಟರಾಕ್ಟ್ ಸಂಸ್ಥೆಯು ಯುವಕರಿಗಾಗಿ ಸ್ಥಾಪಿಸಿದ ಸಂಸ್ಥೆಯಾಗಿದೆ. ಸದಸ್ಯರು ಸಂಸ್ಥೆಯ ನೀತಿ, ನಿಯಮ, ಉದ್ದೇಶವನ್ನು ತಿಳಿದುಕೊಂಡು ಕಾರ್ಯ ಪ್ರವೃತ್ತರಾಗಬೇಕು, ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ವ್ಯಕ್ತಿತ್ವ […]
ಬಿ.ಬಿ ಹೆಗ್ಡೆ ಕಾಲೇಜು: ವ್ರತ್ತಿ ಮಾರ್ಗದರ್ಶನ ಕಾರ್ಯಕ್ರಮ
ಕುಂದಾಪುರ (ಸೆ.14) : ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಗಣಕಶಾಸ್ತ್ರ ವಿಭಾಗ ಮತ್ತು ಪ್ಲೇಸ್ಮೆಂಟ್ ಸೆಲ್ ಆಶ್ರಯದಲ್ಲಿ ದಿನಾಂಕ ಸೆಪ್ಟೆಂಬರ್ 14ರಂದು ಅಂತಿಮ ವರ್ಷದ ಬಿ.ಸಿ.ಎ. ವಿದ್ಯಾರ್ಥಿಗಳಿಗಾಗಿ “ಕರಿಯರ್ ಗೈಡೆನ್ಸ್” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ವಹಿಸಿಕೊಂಡಿದ್ದರು.ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಕಾಲೇಜಿನ ಡೀನ್ (ಅಕಾಡೆಮಿಕ್ಸ್) ಶ್ರೀ ಗಿರಿರಾಜ್ ಭಟ್ರವರು “ನಾವು ಸಂದರ್ಶನಕ್ಕೆ ಹೋದಾಗ ಸಲ್ಲಿಸುವ ರೆಸೂಮ್ ಎನ್ನುವುದು ನಮ್ಮ […]
ಬ್ರಹ್ಮಾವರ: ವಿದ್ಯಾಲಕ್ಷ್ಮೀ ಕಾಲೇಜಿನಲ್ಲಿ ಪೋಸ್ಟರ್ ಮೇಕಿಂಗ್ ಸ್ಪರ್ಧೆ
ಬ್ರಹ್ಮಾವರ(ಸೆ.15): :ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಇಲ್ಲಿ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ “ಪೋಸ್ಟರ್ ಮೇಕಿಂಗ್” ಸ್ಪರ್ಧೆ ಇತ್ತೀಚೆಗೆ ನಡೆಸಲಾಯಿತು. ವಿದ್ಯಾರ್ಥಿಗಳು “ಮಾನವೀಯತೆ” ಎಂಬ ವಿಷಯದ ಕುರಿತು ಪೋಸ್ಟರ್ ಗಳನ್ನು ವಿಭಿನ್ನವಾಗಿ ತಯಾರಿಸಿದರು . ಕಾಲೇಜಿನ ಸಂಸ್ಥಾಪಕರಾದ ಶ್ರೀ ಸುಬ್ರಹ್ಮಣ್ಯ. ನಿರ್ದೇಶಕಿ ಶ್ರೀಮತಿ ಮಮತಾ, ಪ್ರಾಂಶುಪಾಲರಾದ ಶ್ರೀ ರವಿರಾಜ್ ಶೆಟ್ಟಿ ಸಂಸ್ಥೆಯ ಎಲ್ಲಾ ಉಪನ್ಯಾಸಕರು, ಉಪನ್ಯಾಸಕ್ಕೇತರರು ಹಾಗೂ ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು.
ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ ಓಣಂ ಸಂಭ್ರಮಾಚರಣೆ
ಮೂಡ್ಲಕಟ್ಟೆ( ಸೆ.15): ಇಲ್ಲಿನ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ ಲಲಿತ ಕಲಾ ಸಂಘದ ವತಿಯಿಂದ ಓಣಂ ಆಚರಣೆಯನ್ನು ಆಚರಿಸಲಾಯಿತು. ಸೆಪ್ಟೆಂಬರ್ 14 ರ ಪೂರ್ವಾಹ್ನ 9:30 ರಿಂದ ‘ಪೂಕಳಂ’ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಿದ್ದು ಅದರಲ್ಲಿ 9 ತಂಡಗಳು ಭಾಗವಹಿಸಿದ್ದರು. ನಂತರ ಸಭಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ ಪಟೇಲ್ ಓಣಂ ಹಬ್ಬದ ಮಹತ್ವ, ಆಚರಣೆಯ ಹಿನ್ನೆಲೆ, ಭಾರತೀಯ ಸಾಂಸ್ಕೃತಿಕ ವಿನಿಮಯದ […]
ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ ಇಂಜಿನಿಯರ್ಸ್ ದಿನಾಚರಣೆ
ಮೂಡ್ಲಕಟ್ಟೆ ( ಸೆ .15): ಮೂಡ್ಲಕಟ್ಟೆ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ ಸರ್ ಎಂ ವಿಶ್ವೇಶ್ವರಯ್ಯ ರವರ ಜನ್ಮ ದಿನಾಚರಣೆಯ ಹಿನ್ನೆಲೆಯಲ್ಲಿ ಇಂಜಿನಿಯರ್ಸ್ ದಿನಾಚರಣೆಯನ್ನು ಆಯೋಜಿಸಲಾಗಿತ್ತು. ಸರ್ ಎಂ ವಿಶ್ವೇಶ್ವರಯ್ಯ ಅವರ ಪುತ್ತಳಿಗೆ ಪುಷ್ಪಾರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ ಪಟೇಲ್, ಉಪ ಪ್ರಾಂಶುಪಾಲರಾದ ಶ್ರೀ ಜಯಶೀಲ ಕುಮಾರ್, ಐಟಿ ಫೋರಮ್ ಹಾಗು ಕೋಡಿಂಗ್ ಕ್ಲಬ್ ನ ಶಿಕ್ಷಕ ಹಾಗು ವಿದ್ಯಾರ್ಥಿ ಸಂಯೋಜಕರು ಉಪಸ್ಥಿತರಿದ್ದರು.
ಕುಂದಾಪುರ ಯುವ ಬಂಟರ ಸಂಘ : ಇಂಜಿನಿಯರ್ ಗೆ ಸನ್ಮಾನ
ಕುಂದಾಪುರ( ಸೆ,15): ಇಲ್ಲಿನ ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮದಿನದ ಅಂಗವಾಗಿ ಇಂಜಿನಿಯರ್ ನ್ನು ಸನ್ಮಾನಿಸುವ ಮೂಲಕ ಇಂಜಿನಿಯರ್ ದಿನಾಚರಣೆಯನ್ನು ಆಚರಿಸಲಾಯಿತು. ಇಂಜಿನಿಯರ್ ಪ್ರವೀಣ್ ಕುಮಾರ್ ಶೆಟ್ಟಿ ನಿರಕೋಡ್ಲು ಅವರನ್ನು ಕೋಟೇಶ್ವರದ ಅವರ ಸ್ವಗ್ರಹದಲ್ಲಿ ತಾಲೂಕು ಯುವ ಬಂಟರ ಸಂಘದ ಸ್ಥಾಪಕ ಅಧ್ಯಕ್ಷ ಡಾ.ಅಂಪಾರು ನಿತ್ಯಾನಂದ ಶೆಟ್ಟಿ ಹಾಗೂ ಜೆ.ಪಿ ಪ್ಯಾಶನ್ ರತ್ನಾಕರ್ ಶೆಟ್ಟಿ ,ಗುತ್ತಿಗೆದಾರರಾದ ಪ್ರಭಾಕರ್ ಶೆಟ್ಟಿ ಸನ್ಮಾನಿಸಿದರು.ಸಂಘದ ಅಧ್ಯಕ್ಷರಾದ ನಿತೀಶ್ ಶೆಟ್ಟಿ […]
ಕೋಡಿ ಬ್ಯಾರೀಸ್ ನಲ್ಲಿ ಹಸಿರು ಕಟ್ಟಡಗಳ ಸಪ್ತಾಹ
ಕೋಡಿ( ಸೆ.16): ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳು ಕೋಡಿ ಹಾಗೂ ಭಾರತೀಯ ಹಸಿರು ಕಟ್ಟಡಗಳ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ ಜಾಗತಿಕ ಹಸಿರು ಕಟ್ಟಡಗಳ ಸಪ್ತಾಹ 2024 ಪ್ರಯುಕ್ತ ವಿಶೇಷ ಕಾರ್ಯಾಗಾರ ಇತ್ತೀಚೆಗೆ ನೆರವೇರಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ. ರಾಜೇಶ್ ಮೋಹನ್ ದಾಸ್ ನಿಪುಣ ಜೇನು ಸಾಕಣೆದಾರರು ಮತ್ತು ಸಾವಯುವ ಕೃಷಿಕರು ತಪೋವನ ಫಾರ್ಮ್ಸ್ ಮೂಲ್ಕಿ ಇವರು ” ಮಾನವನ ಅತಿಯಾದ ಸಂಪನ್ಮೂಲಗಳ ಬಳಕೆಯಿಂದ ಯುವ ಪೀಳಿಗೆಯವರಿಗೆ ಚಿತ್ರಪಟಗಳಲ್ಲಿ […]
ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ : ಜ್ಞಾನಸುಧಾದ ಪ್ರೀತಮ್. ಪಿ. ಎಂ. ರಾಜ್ಯಮಟ್ಟಕ್ಕೆ
ಉಡುಪಿ(ಸೆ,14): ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ವಿದ್ಯೋದಯ ಪದವಿ ಪೂರ್ವ ಕಾಲೇಜು ಉಡುಪಿ ಇಲ್ಲಿ ಸಂಯುಕ್ತ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗದ ಪ್ರೀತಮ್. ಟಿ. ಮನೆಕೋಟೆ ಇವರು ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದರು. ಇವರು ಬಿ.ತಿಪ್ಪೆಸ್ವಾಮಿ ಮತ್ತು ವಿಜಯಲಕ್ಷ್ಮೀ ಟಿ. ದಂಪತಿಗಳ ಸುಪತ್ರರಾಗಿರುತ್ತಾರೆ. ಇವರ ಸಾಧನೆಗೆ ಜ್ಞಾನಸುಧಾ ಶಿಕ್ಷಣ […]