ಕಮಲಶಿಲೆ( ಮೇ,09): ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ,ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ದೇವಿಯ ಭಕ್ತಿ ಗೀತೆ” ಶ್ರೀ ಬ್ರಾಹ್ಮಿ ಗೀತಾಮೃತ”ವನ್ನು ಮೇ, 8 ರ ಆದಿತ್ಯವಾರದಂದು ಕ್ಷೇತ್ರದ ಧರ್ಮದರ್ಶಿಗಳಾದ ಸಚ್ಚಿದಾನಂದ ಚಾತ್ರರವರು ದೇವಳದ ಮುಂಭಾಗದಲ್ಲಿ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಆಡಳಿತ ಧರ್ಮದರ್ಶಿ ಸಚ್ಚಿದಾನಂದ ಚಾತ್ರ, ಜೊತೆ ಧರ್ಮದರ್ಶಿ ಆಜ್ರಿ ಚಂದ್ರಶೇಖರ ಶೆಟ್ಟಿ, ಭಕ್ತಿಗೀತೆಗಳ ನಿರ್ಮಾಪಕ ಸುಕುಮಾರ್ ಶೆಟ್ಟಿ ಕಮಲಶಿಲೆ, ಭಕ್ತಿ ಗೀತೆಗಳ ಗೀತಸಾಹಿತಿ ಪ್ರಸಾದ್ ಕುಮಾರ್ ಮೊಗೆಬೆಟ್ಟು, ಗೀತ ಗಾಯಕರಾದ ಕೃಷ್ಣ […]
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
ನೀ ಸೂತ್ರಧಾರಿ ನಾ ಪಾತ್ರಧಾರಿ
” ಕುಣಿಸಲು ನೀನು ಕುಣಿವೇನು ನಾನು ……..ನೀ ಸೂತ್ರಧಾರಿ ನಾ ಪಾತ್ರಧಾರಿ “ಎನ್ನುವ ಸಾಲು ಪ್ರತಿ ವ್ಯಕ್ತಿಯ ಜೀವನ ಬಂಡಿಯ ಚಲನೆಗೆ ಒಂದು ನಿದರ್ಶನ. ಭೂಮಿ ನಮ್ಮದಲ್ಲ, ಗಾಳಿ ನಮ್ಮದಲ್ಲ, ಈ ನಾಲ್ಕು ದಿನದ ಜೀವನದಲ್ಲಿ ಚಿರಾಸ್ಥಾಯಿಯಾಗಿ ಉಳಿಯುವು ಸತ್ಕರ್ಮವಷ್ಟೇ! ಜೀವನಕ್ಕೇನು? ನಿರ್ಜೀವ ವಸ್ತುಗಳಿಗೂ ಕೂಡ ಹುಟ್ಟು , ವಿಕಾಸ ಹಾಗೂ ಅವನತಿ ಎನ್ನುವ ಜೀವನದ ಹಂತವಿರುತ್ತದೆ. ಆದರೆ ಈ ಜೀವನದಲ್ಲಿ ಅವಶ್ಯವಾಗಿರುವುದು ಜೀವಿಸುವುದು ಹಾಗೂ ನಿರರ್ಥಕ ಜೀವನವನ್ನು ಸಾರ್ಥಕವನ್ನಾಗಿಸಿಕೊಂಡು ಬದುಕಿನಲ್ಲಿ […]
ಕುಂದಾಪುರ ತಾಲೂಕು ಯುವ ಬಂಟರ ಸಂಘ: ದಶಮಾನೋತ್ಸವ ವರ್ಷದ ನೂತನ ಅಧ್ಯಕ್ಷರಾಗಿ ಡಾ.ಅಂಪಾರು ನಿತ್ಯಾನಂದ ಶೆಟ್ಟಿ ಆಯ್ಕೆ
ಕುಂದಾಪುರ(ಮೇ 05):ಕುಂದಾಪುರ ತಾಲೂಕು ಯುವ ಬಂಟರ ಸಂಘ(ರಿ) ಇದರ ದಶಮಾನೋತ್ಸವ ವರ್ಷದ ನೂತನ ಅಧ್ಯಕ್ಷರಾಗಿ ಉಡುಪಿಯ ಮಿಲಾಗ್ರಿಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಲಯನ್ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಇವರು ಯುವ ಬಂಟರ ಸಂಘದ ಸ್ಥಾಪಕಾಧ್ಯಕ್ಷರಾಗಿ, ಗೌರವಾಧ್ಯಕ್ಷರಾಗಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟ(ರಿ) ಇದರ ಗವರ್ನಿಂಗ್ ಕೌನ್ಸಿಲ್ ಸದಸ್ಯರಾಗಿ, ಬಂಟರ ಯಾನೆ ನಾಡವರ ಮಾತೃ ಸಂಘ(ರಿ) ಮಂಗಳೂರು ಇದರ ಕುಂದಾಪುರ ತಾಲೂಕು ಸಮಿತಿಯ ನಾಮನಿರ್ದೇಶಿತ ಸದಸ್ಯರಾಗಿ, ವಿಶ್ವ […]
ಬದುಕೆಂಬ ಗೊಂಬೆಯಾಟ
ಗೊಂಬೆಯಾಟ ಎಂದಾಗಲೆಲ್ಲ ಎಂದೋ ಇಂಡಿಯಾ ಗೋಟ್ ಟ್ಯಾಲೆಂಟ್ ಕಾರ್ಯಕ್ರಮದಲ್ಲಿ ಕಂಡ ರಾಜಸ್ಥಾನದ ರಾಮಾಯಣದ ಗೊಂಬೆಯಾಟವೇ ನೆನಪಿಗೆ ಬರುತಿತ್ತೇ ಹೊರತು ನಮ್ಮೂರಲ್ಲೂ ಒಂದು ಗೊಂಬೆಯಾಟದ ಆರು ತಲೆಮಾರಿನ ಪರಂಪರೆ ಇತ್ತೆಂದು ಗೊತ್ತಾಗಿದ್ದು ಇಂದು ಭಾಸ್ಕರ್ ಕೊಗ್ಗ ಕಾಮತ್ ಮಾತು ಕೇಳಿದ ಬಳಿಕ. ಜಗವೇ ಆ ದೇವರಾಡಿಸೋ ನಾಟಕ…. ನಾವೆಲ್ಲ ಅವನ ಕೈಯ ಗೊಂಬೆಗಳು ಎಂಬ ಮಾತಿನಂತೆ ಇಂದು ನಮ್ಮ ಕಾಲೇಜಿನ ಯಕ್ಷಗಾನ ಸಂಘ ಹಾಗೂ ಕನ್ನಡ ವಿಭಾಗ ಆಯೋಜಿಸಿದ ಉಪ್ಪಿನಕುದ್ರು ಗೊಂಬೆ […]
ಹಿರಿಯ ಯಕ್ಷಗಾನ ಕಲಾವಿದ ಸರ್ವೋತ್ತಮ್ ಗಾಣಿಗರಿಗೆ ಸಹಾಯ ಹಸ್ತ ಚಾಚಿದ ಡಾ.ಗೋವಿಂದ ಬಾಬು ಪೂಜಾರಿ
ಬೈಂದೂರು (ಏ.30): ಬಡಗುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಸರ್ವೋತ್ತಮ್ ಗಾಣಿಗರವರು ಯಕ್ಷರಂಗದಲ್ಲಿ ಸಾಕಷ್ಟು ಮಿಂಚಿದರೂ ಅವರಿಗೆ ಆರ್ಥಿಕ ನೆರವಿನ ಅವಶ್ಯಕತೆ ಇರುವುದನ್ನು ಮನಗಂಡು ಸಮಾಜ ಸೇವಕ ,ಉದ್ಯಮಿ ಡಾ.ಗೋವಿಂದ ಬಾಬು ಪೂಜಾರಿಯವರು ಕಲಾವಿದನ ಬದುಕು ಎತ್ತಿಹಿಡಿಯುವ ದೃಷ್ಟಿಯಿಂದ 50,000 ರೂ ಚೆಕ್ ನೀಡಿ ಸಹಾಯ ಹಸ್ತ ಚಾಚಿದರು. ಹಾಗೆಯೇ ಭವಿಷ್ಯದ ದಿನಗಳಲ್ಲಿಯೂ ತನ್ನಿಂದಾದ ಇನ್ನಷ್ಟು ಸಹಾಯವನ್ನು ನೀಡುವುದಾಗಿ ತಿಳಿಸಿದರು.
ಶ್ರೀ ನಾಗಯಕ್ಷಿ ಯಕ್ಷಕೂಟ ಮಾರ್ಕೋಡು: ಸಾಧಕರಿಗೆ ಸನ್ಮಾನ
ಕೋಟೇಶ್ವರ(ಏ.29): ಕೋಟೇಶ್ವರದ ಮಾರ್ಕೊಡಿನ ನಾಗಯಕ್ಷಿ ದೇವಸ್ಥಾನ ದ ವರ್ಧಂತ್ಯುತ್ಸವದ ಅಂಗವಾಗಿ ಶ್ರೀ ನಾಗಯಕ್ಷಿ ಯಕ್ಷಕೂಟ ಇದರ 2ನೇ ವರ್ಷದ ಯಕ್ಷಪರ್ವ ಕಾರ್ಯಕ್ರಮ ಏ.23ರಂದು ಜರುಗಿತು. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಕವಿ ಹಾಗೂ ಬಡಗು ತಿಟ್ಟಿನ ಪ್ರಸಿದ್ದ ಭಾಗವತರಾದ ಶ್ರೀ ಪ್ರಸಾದ ಕುಮಾರ್ ಮೊಗೆಬೆಟ್ಟು ಕಾರ್ಯವನ್ನು ಉದ್ಘಾಟಿಸಿದರು. ಶ್ರೀ ನಾಗಯಕ್ಷಿ ಯಕ್ಷಕೂಟ ಮಾರ್ಕೋಡು, ಕೋಟೇಶ್ವರ ಇದರ ಅಧ್ಯಕ್ಷ ಕೆ.ಸುರೇಶ ವಿಠಲವಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ರಾಜ್ಯೋತ್ಸವ […]
ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ & ಮೊಗವೀರ ಯುವ ಸಂಘಟನೆ: ಸಾಮೂಹಿಕ ವಿವಾಹದ ವೀಳ್ಯಶಾಸ್ತ್ರ ಕಾರ್ಯಕ್ರಮ
ಬ್ರಹ್ಮಾವರ( ಏ.28): ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.),ಅಂಬಲಪಾಡಿ, ಮೊಗವೀರ ಯುವಸಂಘಟನೆ (ರಿ.),ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿಮೇ 4 ರಂದು ನಡೆಯಲಿರುವ 13ನೇ ವರ್ಷದ ಉಚಿತ ಸಾಮೂಹಿಕ ಸರಳ ವಿವಾಹದ ಪೂರ್ವಭಾವಿ ವೀಳ್ಯಶಾಸ್ತ್ರ ಕಾರ್ಯಕ್ರಮ ಏ.27 ರಂದು ಬ್ರಹ್ಮಾವರದ ಶ್ಯಾಮಿಲಿ ಶನಾಯ ಹಾಲ್ನಲ್ಲಿ ನಡೆಯಿತು. .ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.) ನ ಪ್ರವರ್ತಕ ನಾಡೋಜ ಡಾ. ಜಿ ಶಂಕರ್ ಹಾಗೂ ಅವರ ಪತ್ನಿ ಶಾಲಿನಿ ಜಿ. ಶಂಕರ್, ಮಗಳು […]
ಆಮೆ ಹಬ್ಬ: ಏ.30 ಕ್ಕೆ ಮೈಸೂರು ಒಡೆಯರ್ ಕುಂದಾಪುರಕ್ಕೆ
ಕೋಡಿ(ಏ,25): ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಹಾಗೂ ಎಫ್.ಎಸ್.ಎಲ್ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಏ.30 ರಂದು ಕುಂದಾಪುರದ ಕೋಡಿ ಕಡಲ ತೀರದಲ್ಲಿ ಆಯೋಜಿಸಿರುವ ಆಮೆ ಹಬ್ಬಕ್ಕೆ ಮೈಸೂರು ಒಡೆಯರ್ ಯದುವೀರ್ ಕ್ರಷ್ಣದತ್ತ ಒಡೆಯರ್ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಆಮೆ ಹಬ್ಬದಲ್ಲಿ ಬೀಚ್ ಸ್ವಚ್ಚತೆ, ಕಡಲಾಮೆಯ ರಕ್ಷಣೆಯ ಕುರಿತು ಅರಿವು, ತ್ಯಾಜ್ಯ ನಿರ್ವಹಣೆ, ಮರಳು ಕಲಾಕ್ರತಿ ರಚನೆ ಹಾಗೂ ಗಾಳಿಪಟ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದ್ದು,ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘಟಕರು […]
ಡಾ.ಗೋವಿಂದ ಬಾಬು ಪೂಜಾರಿ ಯವರಿಗೆ ಕೆ.ಸಿ ಕುಂದರ್ ಸ್ಮರಣಾರ್ಥ ದತ್ತಿ ಪ್ರಶಸ್ತಿ ಪ್ರದಾನ
ಕೋಟ(ಏ,24): ಡಾ.ಶಿವರಾಮ ಕಾರಂತ ಟ್ರಸ್ಟ್(ರಿ.) ,ಕೋಟ, ಡಾ.ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ, ಶಿವರಾಮ ಕಾರಂತ ಥೀಮ್ ಪಾರ್ಕ್ ಕೋಟ, ಕೋಟತಟ್ಟು ಗ್ರಾಮಪಂಚಾಯತ್ ಮತ್ತು ಗೀತಾನಂದ ಫೌಂಡೇಶನ್ ಮಣೂರು ಪಡುಕರೆ ಇದರ ವತಿಯಿಂದ ಕೆ .ಸಿ ಕುಂದರ್ ಸ್ಮರಣಾರ್ಥ ನಡೆದ ಗಮನ-2022 ರ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಸಂದರ್ಭದಲ್ಲಿ ಕೆ .ಸಿ ಕುಂದರ್ ಸ್ಮರಣಾರ್ಥ ದತ್ತಿ ಪ್ರಶಸ್ತಿಯನ್ನು ಉದ್ಯಮಿ& ಸಮಾಜ ಸೇವಕ ಡಾ.ಗೋವಿಂದ ಬಾಬು ಪೂಜಾರಿಯವರಿಗೆ ಪ್ರದಾನ […]
ಡಾ. ಬಿ.ಬಿ. ಹೆಗ್ಡೆ ಕಾಲೇಜು ಕುಂದಾಪುರ: ಪ್ರಥಮ ರ್ಯಾಂಕ್ ವಿಜೇತೆ ಕಾವ್ಯಾ ದೇವಾಡಿಗರಿಗೆ ಸನ್ಮಾನ
ಕುಂದಾಪುರ ( ಏ.24): ಮಂಗಳೂರು ವಿ.ವಿಯ 2020-21 ನೇ ಸಾಲಿನ ಅಂತಿಮ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿನಿ ಕಾವ್ಯಾ ದೇವಾಡಿಗ ಬಿ.ಸಿ.ಎ ಪದವಿಯಲ್ಲಿ ಪ್ರಥಮ ರ್ಯಾಂಕ್ ಪಡೆದುಕೊಂಡ ಹಿನ್ನೆಲೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಕೆ.ಉಮೇಶ್ ಶೆಟ್ಟಿ ಹಾಗೂ ಭೋಧಕ ವರ್ಗ ಕಾವ್ಯಾರವರ ಸ್ವಗ್ರಹಕ್ಕೆ ತೆರಳಿ ಅಭಿನಂದನೆ ಸಲ್ಲಿಸಿದರು. ಈ ಸಂಧರ್ಭದಲ್ಲಿ ಕಾವ್ಯಾ ಹಾಗೂ ಅವರ ತಾಯಿಗೆ ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ […]










