ಕ್ರೀಡೆಯಿಂದ ಅದೆಷ್ಟೋ ಯುವಜನತೆ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು ಕ್ರೀಡಾಸ್ಫೂರ್ತಿಯನ್ನು ಮೆರೆಯುವುದರ ಜೊತೆಗೆ ತಮ್ಮ ವ್ಯಕ್ತಿತ್ವ ಮತ್ತು ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಲೆಕ್ಕಪರಿಶೋಧಕರು ಹಾಗೂ ತರಿಗೆ ಸಲಹೆಗಾರರಾದ ಶ್ರೀ ಗಣೇಶ್ ಶೆಟ್ಟಿ ಮೊಳಹಳ್ಳಿ ಹೇಳಿದರು.
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
ಕರಾವಳಿಯಲ್ಲಿ ಕವಿರತ್ನ..!! ಇದು ಸವಿ ಸಂಜೆಯ ಕರೆಯೋಲೆ…
ಇವರು ಪೆನ್ನನೊಮ್ನೆ ಹಿಡಿದರೆ ಕಡಲ ಅಲೆಗಳ ನೀನಾದಕ್ಕು ಅಕ್ಷರಗಳಲ್ಲೆ ಹೊಂಬಣ್ಣ ಹೊದಿಸಬಲ್ಲರು, ಆಡುನುಡಿಗಳನ್ನೆ ಬಿಲ್ಲು ಮಾಡಿಕೊಂಡು ಹೂಬಾಣದಂತೆ ಎದೆಗೆ ನೂಗ್ಗ ಬಲ್ಲದು ಇವರ ಬತ್ತಳಕೆಯ ಅಕ್ಷರಾಸ್ತ್ರ…! D ಬಾಸ್ ಇಂಟ್ರೂಡಕ್ಷನ್ನು ,ರಾಕಿ ಬಾಯ್ಗೆ ಸಲಾಮು, ಕಿಚ್ಚನ ಸ್ಟೈಲು, ಅಪ್ಪು ಡ್ಯಾನ್ಸು ಇದೆಲ್ಲವಕ್ಕು ಇವರ ಸಾಲುಗಳೆ ಮಾಸು… ಪ್ರೀತಿ ಕಳೆದುಕೊಂಡವರಿಗೆ, ಪ್ರಣಯದಲ್ಲಿ ಬಿದ್ದೊರಿಗೆ ಇವರ ಹಾಡುಗಳೆ ಕ್ಲಾಸು…ಆಸ್ತಿಕರಿಗು, ನಾಸ್ತಿಕರಿಗೂ ಇವರು ಬರೆದಿರೊ ಹಾಡೇ ಫೆವರೇಟು.. ಕ್ವಾರ್ಟರ್ ಹಾಕೊಂಡು ಜೂಮಲ್ಲಿರುವವರ ಮೊಬೈಲ್ ಗ್ಯಾಲರಿಯಲ್ಲು […]
ಫೆಬ್ರವರಿ, 27 ರಂದು ಗಂಗೊಳ್ಳಿ ಸೇವಾ ಸಹಕಾರಿ ಬ್ಯಾಂಕ್ (ನಿ) ಅಮೃತ ಮಹೋತ್ಸವ
ಗಂಗೊಳ್ಳಿ ಸೇವಾ ಸಹಕಾರಿ ಬ್ಯಾಂಕ್(ನಿ) ಇದರ ಅಮೃತ ಮಹೋತ್ಸವ ಇದೇ ಫೆಬ್ರವರಿ 27 ರ ಶನಿವಾರ ಬೆಳಿಗ್ಗೆ 10 ಗಂಟೆಗೆ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಠಾರದಲ್ಲಿ ನಡೆಯಲಿದೆ.
ಮೂಡ್ಲಕಟ್ಟೆ ಎಂ.ಐ.ಟಿ : ತಾಂತ್ರಿಕ ಕಾರ್ಯಾಗಾರ
ಕುಂದಾಪುರ(ಫೆ.23) : ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ” ಡೆವಲಪ್ಮೆಂಟ್ ಆಫ್ ಸಿಗ್ನಲ್ಸ್ ಆಂಡ್ ಸಿಸ್ಟಮ್ಸ್ ಯುಸಿಂಗ್ ಮ್ಯಾಟ್ ಲ್ಯಾಬ್” ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ನಿಟ್ಟೆ ವಿಶ್ವವಿದ್ಯಾಲಯದ ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕಿ ಡಾ| ಉಷಾ ದೆಸಾಯಿ ರವರು ಆಗಮಿಸಿದ್ದರು. ಡಾ| ಉಷಾ ದೆಸಾಯಿ ರವರು ಕಾರ್ಯಾಗಾರವನ್ನು ಉದ್ಘಾಟಿಸಿ ನಮ್ಮ ದಿನ ನಿತ್ಯದ ಜೀವನದಲ್ಲಿ ಸಿಗ್ನಲ್ಸ್ ಹೇಗೆ ಅವಿಭಾಜ್ಯ ಅಂಗವಾಗಿದೆ […]
ಪವರ್ ಲಿಫ್ಟಿಂಗ್ ದಾಖಲೆಯ ವೀರ ವಿಶ್ವನಾಥ ಗಾಣಿಗರಿಗೆ ಮೂರು ಸ್ವರ್ಣ ಪದಕ
ಕುಂದಾಪುರ (ಫೆ-22): ಅಂತರ್ ರಾಷ್ಟ್ರೀಯ ಹಾಗೂ ರಾಷ್ಟ್ರೀಯ ಪವರ್ ಲಿಫ್ಟಿಂಗ್ ನಲ್ಲಿ ದಾಖಲೆ ನಿರ್ಮಿಸಿರುವ ಕುಂದಾಪುರದ ಬಾಳಿಕೆರೆಯ ವಿಶ್ವನಾಥ್ ಗಾಣಿಗ ರವರು ಮತ್ತೊಮ್ಮೆ ಸಾಧನೆಯನ್ನು ಮಾಡಿದ್ದಾರೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಸೀನಿಯರ್ ನ್ಯಾಷನಲ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್- 2021 ರಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ, 93 ಕೆಜಿ ವಿಭಾಗದಲ್ಲಿ ಮೂರು ಚಿನ್ನದ ಪದಕಗಳನ್ನು ಗಳಿಸಿದ್ದಾರೆ.
ಬಗಳಾಂಬಾ ತಾಯಿ ದೇವಸ್ಥಾನ : ಪ್ರತಿಷ್ಠಾ ವರ್ಧಂತಿ ಮಹೋತ್ಸವ
ಕುಂದಾಪುರ( ಫೆ.23): ಕುಂದಾಪುರದ ಚಿಕ್ಕನ್ ಸಾಲ್ ರಸ್ತೆಯ ಶ್ರೀ ಬಗಳಾಂಬ ತಾಯಿ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಮಹೋತ್ಸವ ದ ಪ್ರಯುಕ್ತ ಬ್ರಹ್ಮಕಲಶಾಭಿಷೇಕ, ಚಂಡಿಕಾಯಾಗ ಶ್ರೀ ಗುರುಪರಾಶಕ್ತಿ ಮಠ, ಮರಕಡದ ಶ್ರೀ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮಿಗಳವರ ಅನುಗ್ರಹದೊಂದಿಗೆ ವೇದಮೂರ್ತಿ ಕೆ. ಚಂದ್ರಶೇಖರ ಸೋಮಯಾಜಿಯವರ ನೇತೃತ್ವದಲ್ಲಿ ಧಾರ್ಮಿಕ ವಿಧಿ – ವಿಧಾನಗಳೊಂದಿಗೆ ನೆರವೇರಿತು. ಪ್ರತಿಷ್ಠಾ ವರ್ಧಂತಿ ಮಹೋತ್ಸವದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ಗಣಪತಿಯಾಗ, ಸತ್ಯನಾರಾಯಣ ಪೂಜೆ, ಗುರು ಸನ್ನಿಧಿಯಲ್ಲಿ ನವಕ ಪ್ರಧಾನ ಕಲಶಾಭಿಷೇಕ, […]
ಶ್ರೀ ಎಸ್ ಆರ್ ಕಂಠಿ ಕಾಲೇಜು : “ವಿಶ್ವ ಚಿಂತಕರ ದಿನ “
ಶ್ರೀ ಎಸ್ .ಆರ್ ಕಂಠಿ ಕಲಾ,ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ ಮುಧೋಳ ಹಾಗೂ ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಫೆಬ್ರವರಿ 22 ರಂದು ಬೇಡನ್ ಪಾವೆಲ್ ರವರ 164 ನೇ ಜನ್ಮದಿನೋತ್ಸವದ ಅಂಗವಾಗಿ “ವಿಶ್ವ ಚಿಂತಕರ ದಿನ “ವನ್ನು ಆಚರಿಸಲಾಯಿತು.
ಕಲಾಸೃಷ್ಟಿ ಅರ್ಪಿಸುವ ಅಂತರ್ಜಾಲ ಚಿತ್ರಕಲಾ ಸ್ಪರ್ಧೆ
Magic – The Art of Life ಎನ್ನುವ ಪರಿಕಲ್ಪನೆಯಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಿದ್ದು ಆಸಕ್ತರು ತಾವು ರಚಿಸಿದ ಚಿತ್ರವನ್ನು ಫೆಬ್ರವರಿ 23ರ ಒಳಗೆ ಕೆಳಕಂಡ ವಿಳಾಸಕ್ಕೆ ಕಳುಹಿಸಲು ಸೂಚಿಸಲಾಗಿದೆ.
ಶಿವಾಜಿ ಇಡೀ ಹಿಂದು ಸಮಾಜದ ಐಕ್ಯತಾ ಶಕ್ತಿ – ಚಕ್ರವರ್ತಿ ಸೂಲಿಬೆಲೆ
ಶಿವಾಜಿ ಕೇವಲ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಾದವರಲ್ಲ ಇಡೀ ಹಿಂದೂ ಸಮಾಜದ ಒಗ್ಗೂಡಿಸಿದ ಮಹಾನ್ ನಾಯಕ ಅವರು ಇಡೀ ದೇಶದ ಆಸ್ತಿ, ಶಿವಾಜಿಯ ಹೋರಾಟ, ತ್ಯಾಗ, ಹಿಂದೂ ಸಾಮ್ರಾಜ್ಯ ಕಟ್ಟಬೇಕು ಎನ್ನುವ ಛಲ ನಮ್ಮೆಲ್ಲರಿಗೂ ಆದರ್ಶ.
ಕ್ಲೀನ್ ಕುಂದಾಪುರ ಪ್ರಾಜೆಕ್ಟ್ – ಕೋಡಿ ಕಡಲ ತೀರ : ಸ್ವಚ್ಛತಾ ಕಾರ್ಯಕ್ರಮ
ಕುಂದಾಪುರದ ಪ್ರಸಿದ್ಧ ಪ್ರವಾಸಿ ತಾಣ ಕೋಡಿ ಕಡಲತೀರದಲ್ಲಿ ನಿರಂತರವಾಗಿ ಸ್ವಚ್ಛತಾ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವ ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ವತಿಯಿಂದ 84ನೇ ವಾರದ ಸ್ವಚ್ಛತಾ ಕಾರ್ಯಕ್ರಮ ಫೆಬ್ರವರಿ 21ರಂದು ಜರುಗಿತು.