ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದಕ್ಷಿಣ ಕನ್ನಡ ಜಿಲ್ಲಾ ಶಾಖೆ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಉಡುಪಿ ಜಿಲ್ಲೆ ಶಾಖೆ. ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕೊಡಗು ಜಿಲ್ಲಾ ಶಾಖೆಯ ಸಹಯೋಗದೊಂದಿಗೆ ಯೂಥ್ ರೆಡ್ ಕ್ರಾಸ್ ಮಂಗಳೂರು ವಿಶ್ವವಿದ್ಯಾನಿಲಯವು ಸ್ವಾಮಿ ವಿವೇಕಾನಂದರ 158 ನೇ ಜನ್ಮ ದಿನದ ಪ್ರಯುಕ್ತ ಜನವರಿ 12 ರಂದು ರವೀಂದ್ರ ಕಲಾಭವನ, ವಿಶ್ವವಿದ್ಯಾನಿಲಯ ಕಾಲೇಜು, ಹಂಪ್ಪನಕಟ್ಟೆ, ಮಂಗಳೂರು ಇಲ್ಲಿ ನಡೆಸಿದ “ನ್ಯಾಷನಲ್ ಯೂಥ್ ಡೇ” ಮಂಗಳೂರು […]
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
ಕರಾವಳಿಯ ಉದಯೋನ್ಮುಖ ಹಿನ್ನೆಲೆ ಗಾಯಕ ಅಕ್ಷಯ್ ಬಡಾಮನೆಗೆ “ಅತ್ಯುತ್ತಮ ಗಾಯಕ ಪ್ರಶಸ್ತಿ”
ಅಕ್ಷಯ್ ಬಡಾಮನೆ ಓರ್ವ ಉದಯೋನ್ಮುಕ ಪ್ರತಿಭೆ. ಹತ್ತು ಹಲವು ಹಾಡುಗಳಿಗೆ ಧ್ವನಿಯಾಗಿ ಎಲ್ಲರ ಮನೆಮಾತಾದವರು. ರಿಹಾ ಇಂಡಿಯನ್ ಆರ್ಗ್ ಸಂಸ್ಥೆ ಇವರ ಗಾಯನಕ್ಕೆ ಮೆಚ್ಚಿ ಈ ವರ್ಷದ ಅತ್ಯುತ್ತಮ ಗಾಯಕ ಪ್ರಶಸ್ತಿ (ಅಲ್ಬಂ ಹಾಡು ಹಾಗೂ ಕಿರುಚಿತ್ರ ಹಾಡುಗಳ ವಿಭಾಗ) ನೀಡಿರುತ್ತಾರೆ. ರಿಹಾ ಐದಾರು ವರ್ಷಗಳಿಂದ ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಆಯೋಜಿಸುತ್ತದ್ದು, ಈ ವರ್ಷದ ಪ್ರಶಸ್ತಿ ಸಮಾರಂಭವನ್ನು ಗೋವಾದಲ್ಲಿ ನೆಡೆಸುವ ತಯಾರಿಯಲ್ಲಿದೆ. ಈ ಪ್ರಶಸ್ತಿಯನ್ನು ಪಡೆಯುತ್ತಿರುವ ಅಕ್ಷಯ್ ಬಡಾಮನೆ […]
ಮೂಡ್ಲಕಟ್ಟೆ ಎಂ. ಐ. ಟಿ. : ರೌಟರ್ ತಂತ್ರಜ್ಞಾನ ವೆಬಿನಾರ್
ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ “ರೌಟರ್ ತಂತ್ರಜ್ಞಾನ” ವಿಷಯದ ಮೇಲೆ ವೆಬಿನಾರ್ ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಸಿಸ್ಕೋ ಕಂಪನಿಯಲ್ಲಿ ಟೆಕ್ನಿಕಲ್ ಲೀಡ್ ಇಂಜಿನಿಯರ್ ಆಗಿರುವ ಶ್ರೀ. ವಿವೇಕ್ ದಿನಕರ ರವರು ಭಾಗವಹಿಸಿದ್ದರು. ಶ್ರೀ. ವಿವೇಕ್ ದಿನಕರ ರವರು ಇಲೆಕ್ಟ್ರಾನಿಕ್ಸ್ ಸಂವಹನದಲ್ಲಿ ವಿವಿಧ ರೀತಿಯ ರೌಟರ್ ತಂತ್ರಜ್ಞಾನದ ಉಪಯೋಗ ಮತ್ತು ಬಳಕೆಯ ಕುರಿತು ಉಪನ್ಯಾಸ ನೀಡಿದರು. ವಿವಿಧ ರೀತಿಯ ರೌಟರ್ ಪ್ರೋಟೋಕಾಲ್ ಕುರಿತು ಮಾಹಿತಿ […]
ಕುಂದಗನ್ನಡದ ಬಹು ನಿರೀಕ್ಷೆಯ ಚಿತ್ರ : ಜಿ ಸಿ ಮೂವಿಸ್ರವರ ‘ದಿ ಸ್ಟ್ರೇಂಜ್ ಕೇಸ್ ಆಫ್ ಕುಂದಾಪುರ’
ಸಿನಿಮಾಗಳಲ್ಲಿ ಕುಂದಗನ್ನಡ ಭಾಷೆ ಕಾಣಸಿಗುವುದೇ ಅಪರೂಪ, ಸಿಕ್ಕರೂ ಅಲ್ಲಿಲ್ಲೊಂದು ಸಿಗಬಹುದೋ ಏನೋ. ಒಂದೆರಡು ಕುಂದಗನ್ನಡ ಸಿನಿಮಾಗಳು ಬಂದುಹೋದವು ಕೂಡ.
ಶ್ರೀ ಚಿಕ್ಕು ಅಮ್ಮ ಹಾಗೂ ಪರಿವಾರ ದೈವಸ್ಥಾನ ಬೀಜಾಡಿ ಗೋಪಾಡಿ ವಾರ್ಷಿಕ ಜಾತ್ರಾ ಮಹೋತ್ಸವ
ಶ್ರೀ ಚಿಕ್ಕು ಅಮ್ಮ ಹಾಗೂ ಪರಿವಾರ ದೈವಸ್ಥಾನ ಬೀಜಾಡಿ – ಗೋಪಾಡಿ ಇದರ ವಾರ್ಷಿಕ ಜಾತ್ರಾ ಮಹೋತ್ಸವ ಜನವರಿ 28ರಿಂದ 30ರ ತನಕ ನಡೆಯಲಿದೆ.
ಹೇರೂರು : ವೆಂಟೆಡ್ ಡ್ಯಾಂ ಮತ್ತು ಸೇತುವೆ ಕಾಮಗಾರಿಗೆ ಶಾಸಕ ಶ್ರೀ ಬಿ.ಎಂ ಸುಕುಮಾರ ಶೆಟ್ಟಿಯವರಿಂದ ಗುದ್ದಲಿಪೂಜೆ
ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲ್ಗದ್ದೆಕೇರಿ ಎಂಬಲ್ಲಿ ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ವೆಂಟೆಡ್ ಡ್ಯಾಂ ಮತ್ತು ಸೇತುವೆಗೆ ಬೈಂದೂರಿನ ಶಾಸಕರಾದ ಶ್ರೀ ಬಿ. ಎಮ್. ಸುಕುಮಾರ ಶೆಟ್ಟಿಯವರು ಗುದ್ದಲಿಪೂಜೆ ನೆರವೆರಿಸಿದರು.
ಕುಂದಾಪುರದ ನೂತನ ಡಿವೈಎಸ್ಪಿಯಾಗಿ ಕೆ. ಶ್ರೀಕಾಂತ್ ಅಧಿಕಾರ ಸ್ವೀಕಾರ
ಕುಂದಾಪುರ ಉಪವಿಭಾಗದ ನೂತನ ಡಿವೈಎಸ್ಪಿ ಯಾಗಿ ಕೆ .ಶ್ರೀಕಾಂತ ಅಧಿಕಾರ ಸ್ವೀಕರಿಸಿದ್ದಾರೆ .ಕಾರವಾರದ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ಯಾಗಿ ಸೇವೆಸಲ್ಲಿಸಿರುವ ಇವರು 1998ರಲ್ಲಿ ಪೊಲೀಸ್ ಇಲಾಖೆಯಲ್ಲಿ ಸೇವೆಯನ್ನು ಆರಂಭಿಸಿ, ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ
ವರಸಿದ್ದಿ ವಿನಾಯಕ ಪದವಿ ಪೂರ್ವ ಕಾಲೇಜು ಕೆರಾಡಿ :ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ
ಕುಂದಾಪುರ: ನಮ್ಮ ದೇಶ ಸ್ವಾತಂತ್ರ್ಯಗೊಂಡು 73 ವರ್ಷಗಳು ಕಳೆದರೂ ಮಹಿಳೆಯರ ಹಾಗೂ ಹೆಣ್ಣುಮಕ್ಕಳ ಸ್ಥಿತಿಗತಿ ನಿರೀಕ್ಷಿತ ಮಟ್ಟದಲ್ಲಿ ಸುಧಾರಿಸಿಲ್ಲ ,ಮಹಿಳೆಯರು ತಮ್ಮ ಹಕ್ಕು ಮತ್ತು ಸ್ವತಂತ್ರ ಗಳನ್ನು ಸಂವಿಧಾನಾತ್ಮಕವಾಗಿ ಪಡೆದುಕೊಳ್ಳಬೇಕು, ಆ ಮೂಲಕ ಮಹಿಳಾ ಸಶಕ್ತಿಕರಣ ಸಾಧ್ಯ ಎಂದು ಕಾಲೇಜಿನ ಉಪನ್ಯಾಸಕ ನಾಗರಾಜ್ ಹೆಮ್ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಕೆರಾಡಿ ವರಸಿದ್ದಿವಿನಾಯಕ ಕಾಲೇಜು ಹಾಗೂ ಗ್ರಾಮ ಪಂಚಾಯತ್ ಕೆರಾಡಿ ಇದರ ಜಂಟಿ ಆಶ್ರಯದಲ್ಲಿ ಜನವರಿ 24 ರಂದು ಕಾಲೇಜಿನಲ್ಲಿ ಆಯೋಜಿಸಿದ್ದ […]
ಕೊಲ್ಲೂರು ಶ್ರೀಮೂಕಾಂಬಿಕೆಗೆ ಸ್ವರ್ಣಲೇಪಿತ ನಾಗಾಭರಣ ಸಮರ್ಪಣೆ
ಶಂಕರಾಚಾರ್ಯ ಪ್ರತಿಷ್ಠಾಪಿತ ಜಗತ್ಪ್ರಸಿದ್ಧ ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಿಗೆ ಬೆಂಗಳೂರು ಮೂಲದ ಉದ್ಯಮಿ ವಿಜಯ್ ಕುಮಾರ್ ರೆಡ್ಡಿ ಅವರು 12 ಲಕ್ಷ ರೂಪಾಯಿ ಮೌಲ್ಯದ ಸ್ವರ್ಣಲೇಪಿತ ನಾಗಾಭರಣ ವನ್ನು ಜನವರಿ 24 ರಂದು ದೇವಿಯ ಸನ್ನಿಧಾನದಲ್ಲಿ ಸಮರ್ಪಿಸಿದರು.
ಶ್ರೀ ಶಾರದಾ ಕಾಲೇಜು ಬಸ್ರೂರು : ರಾಷ್ಟ್ರೀಯ ಮತದಾರರ ದಿನಾಚರಣೆ
ಶ್ರೀ ಶಾರದ ಕಾಲೇಜು ಬಸ್ರೂರು ಇದರ ಐಕ್ಯೂಎಸಿ, ಸ್ವೀಪ್ ಕಮಿಟಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಜನವರಿ 25ರಂದು ಆಚರಿಸಲಾಯಿತು