ಹೆಮ್ಮಾಡಿ (ಏ, 15): ಚಿತ್ತೂರು -ಮಾರಣಕಟ್ಟೆ ಪರಿಸರದಲ್ಲಿ ಹಲವು ವರ್ಷಗಳಿಂದ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಿ ಜನಮನ್ನಣೆ ಗಳಿಸಿರುವ ಪ್ರೇರಣಾ ಯುವ ವೇದಿಕೆ ನೈಕಂಬ್ಳಿ -ಚಿತ್ತೂರು ಇವರ 8ನೇ ವಾರ್ಷಿಕೋತ್ಸವ ಪ್ರೇರಣೋತ್ಸವ-21 ಇದೇ ಏಪ್ರಿಲ್ 17 ರ ಶನಿವಾರ ಸಂಜೆ 6.30ರಿಂದ ಮಾರಣಕಟ್ಟೆ ಸಮೀಪದ ನೈಕಂಬ್ಳಿ ಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ನಡೆಯಲಿದೆ. ಈ ಪ್ರೇರಣೋತ್ಸವ – 21ದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಮ್ .ಎಸ್.ಮಂಜ ಚಾರಿಟೇಬಲ್ ಟ್ರಸ್ಟ್ ಮಾರಣಕಟ್ಟೆ […]
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
ಏಪ್ರಿಲ್ 25 ರಂದು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (KSET)
ಮೈಸೂರು (ಏ, 16): ಮೈಸೂರು ವಿಶ್ವವಿದ್ಯಾನಿಲಯ ನಡೆಸುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆಎಸ್.ಇ.ಟಿ.) ಇದೇ ಎಪ್ರಿಲ್ 25 ರ ಭಾನುವಾರದಂದು ನಡೆಯಲಿದೆ. ಈ ಹಿಂದೆ ಏಪ್ರಿಲ್11 ರಂದು ನಡೆಯಬೇಕಿದ್ದ ಕೆ.ಎಸ್.ಇ.ಟಿ. (KSET)ಪರೀಕ್ಷೆಯನ್ನು ಕಾರಣಾಂತರಗಳಿಂದಮುಂದೂಡಲಾಗಿತ್ತು. ಹೆಚ್ಚಿನ ಮಾಹಿತಿಗಾಗಿ ನೊಂದಾಯಿತ ಅಭ್ಯರ್ಥಿಗಳು ಈ ಕೆಳಗಿನ ಕೆಸೆಟ್ ವೆಬ್ಸೈಟ್ನ್ನು http://kset.uni-mysore.ac.in ಸಂಪರ್ಕಿಸಲು ತಿಳಿಸಲಾಗಿದೆ.
ಬಂಟಕಲ್ ಕಾಲೇಜು : ವಿದ್ಯಾರ್ಥಿಗಳಿಂದ ಕೋವಿಡ್ ಲಸಿಕಾ ಮಾಹಿತಿ ಅಭಿಯಾನ
ಉಡುಪಿ (ಏ, 15): ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸುಮಾರು 500 ಕ್ಕೂ ಹೆಚ್ಚು ವಿದ್ಯಾರ್ಥಿ ಸ್ವಯಂಸೇವಕರು ಕೋವಿಡ್ ಲಸಿಕಾ ಮಾಹಿತಿ ಅಭಿಯಾನದಲ್ಲಿ ಪಾಲ್ಗೊಂಡರು. ಸಂಸ್ಥೆಯ ವಿದ್ಯಾರ್ಥಿಗಳು ಬಂಟಿಕಲ್ ಕಾಲೇಜಿನ ಆಸುಪಾಸು, ಹಾಗೂ ಉಡುಪಿ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಿಗೆ ತೆರಳಿ 45ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ತೆಗೆದುಕೊಳ್ಳುವುದರಿಂದ ಆಗುವ ಉಪಯೋಗಗಳನ್ನು ವಿವರಿಸಿ, ಅವರುಗಳಲ್ಲಿ ಜಾಗೃತಿಯನ್ನು ಮೂಡಿಸಿ, ಲಸಿಕೆ ಪಡೆಯಲು ಜನರಲ್ಲಿ ಇರುವ […]
ಮೂಡ್ಲಕಟ್ಟೆ ಎಂ ಐ ಟಿ: ಸಂಸ್ಥಾಪಕರ ದಿನಾಚರಣೆ
ಕುಂದಾಪುರ (ಏ, 15): ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆಯನ್ನು ಆಚರಿಸಲಾಯಿತು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಸಿದ್ಢಾರ್ಥ ಜೆ ಶೆಟ್ಟಿ ಯವರು ಸಿಬ್ಬಂದಿಗಳ ಜೊತೆ ಕಾಲೇಜಿನ ಸಂಸ್ಥಾಪಕರಾದ ಮಾಜಿ ಸಂಸದ ಐ.ಎಂ ಜಯರಾಮ ಶೆಟ್ಟಿಯವರ ಪುತ್ಹಳಿಗೆ ಹಾರಾರ್ಪಣೆ ಮಾಡಿ ಗೌರವವನ್ನು ಸಲ್ಲಿಸಿದರು. ಸಭಾ ಕಾರ್ಯಕ್ರಮದ ಮೊದಲು ಸಂಸ್ಥಾಪಕರ ಸಾಧನೆ ಮತ್ತು ಸೇವೆಗಳ ಸಾರಾಂಶ ವಿರುವ ವಿಡಿಯೊವನ್ನ ಪ್ರದರ್ಶಿಸಿ, ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ […]
ಮೌನಿಯಾಗಬೇಕೆನಿಸಿದೆ
ಮೌನಿಯಾಗಬೇಕೆನಿಸಿದೆ.. ಮನೆಯೆಲ್ಲಾ ಓಡಾಡಿ,ಬಾಯ್ತುಂಬಾ ಕೂಗಾಡಿಅಮ್ಮನಿಗೊಂದಿಷ್ಟು ಬೈಗುಳ, ಅಪ್ಪನಿಗೊಂದಿಷ್ಟು ಶಾಪಬಾಯಲ್ಲೆ ಆಯುದವನಿಟ್ಟಂತೆ ಯುದ್ಧ ಸಾರುತಿದ್ದೆ..ನನ್ನ ಅಭ್ಯುದಯಕ್ಕೆ ಶ್ರಮಿಸುವ ಜನಗಳ ಜತೆಗೆಇಂದೆಕೊ ಮೌನಿಯಾಗಬೇಕೆನಿಸಿದೆ.. ಕಣ್ಣ ಕಂಡರೆ ಕೆಂಡ ಕಾರುವ ಕೆಂಪು ಕೋಪನಾಲಿಗೆಯಿಂದ ಜಠರದುದ್ದಕ್ಕೂ ಬೈಗುಳದ ತಾಪಉದರದಸಿವಿಗೆ ಕೊರಳನ್ನೊಡ್ಡುವ ಅನ್ನವನೆಸೆದಿದ್ದೆ ಅಮನಸ್ಕನಂತೆ…ಚೆಲ್ಲಿ ಘರ್ಜಿಸಿದೆ ತೀಥ೯ದಂತಹ ಗಂಗೆಯನ ಟೊಳ್ಳು ವ್ಯಾಘ್ರನಂತೆಇಂದೆಕೊ ಮೌನಿಯಾಬೇಕೆನಿಸಿದೆ… ಮೃದುತನವ ರಕ್ಷಿಸಿದ ಮನಸ್ಸುಗಳ ಮದ್ಯೆ ,ವಚನದುದ್ದಕ್ಕು ಕರ್ಕಶದಂತಹ ಗಟ್ಟಿ ದನಿ ನನ್ನೊಳಗಿಂದಾದರೆಕೇಳಲಿಸ್ಟವಾಗದೆ ಕಿವಿಯ ಬಾಗಿಲೆಳೆಯವರು ವಾಣಿಯ ನಾನಾಡಿದರೆಮುರಿದ ಮನಸ್ಸಿಂದ ಇಷ್ಟವಿಲ್ಲದ ಮಾತಾದರೆ,ಕಷ್ಟದಿಂದ ನೋಡುವ […]
ನನ್ನ ದೇವರು
ನವ ಮಾಸ ತುಂಬುವವರೆಗೆತನ್ನ ಕರುಳ ಕುಡಿಯನ್ನು ರಕ್ಷಿಸಿಜಗತ್ತಿನ ಯಾವ ಮೂಲೆಯಲ್ಲೂಸಿಗಲಾರದಂತಹ ಬೆಚ್ಚನೆಯತನ್ನ ಗರ್ಭ ದಲ್ಲಿರಿಸಿ,ಜೀವ- ಜೀವನವನ್ನು ಲೆಕ್ಕಿಸದೆತನ್ನ ಮಗುವಿಗೆ ಜನ್ಮ ನೀಡುವ ಮಾತೆಯೇನಿನಗಿಂತ ದೊಡ್ಡ ದೇವರಿದ್ದಾರೆಯೇ ಈ ಜಗದಲಿನನ್ನ ಬದುಕಿನ ಪ್ರತ್ಯಕ್ಷ ದೇವರೆಂದರೆಅದು ನೀನೆ ನನ್ನ ಅಮ್ಮನನ್ನ ಹಡೆದವ್ವನನ್ನ ಎಲ್ಲ ತಪ್ಪುಗಳನ್ನು ತಿದ್ದಿ ತೀಡಿಒಳ್ಳೆಯ ಸಂಸ್ಕಾರ ಕಲಿಸಿಸುಸಂಸ್ಕ್ರತನನ್ನಾಗಿ ಮಾಡಿದೆ ನೀವಿದ್ಯೆ ಕೊಟ್ಟುಬುದ್ದಿಯನ್ನು ಸದಾ ಒಳಿತಿನೆಡೆಗೆಹರಿಸುವಂತೆ ದಾರಿ ತೋರಿದೆ ನೀನಿನ್ನನ್ನು ಹೇಗೇ ಸಂಭೋದಿಸಿದರೂನೀ ತಡೆಯಲಿಲ್ಲಅಮ್ಮ ಅಂದೆ, ಅವ್ವ ಅಂದೆಅಬ್ಬೆ ಅಂದೆ, ಮಾ […]
ಸಾಮಾಜಿಕ ಮೌಲಿಕತೆಯ ಮಹಾನ್ ಪ್ರತಿಪಾದಕ ಅಂಬೇಡ್ಕರ್ : ಚೇತನ್ ಶೆಟ್ಟಿ ಕೋವಾಡಿ
ಕುಂದಾಪುರ(ಏ,14) : ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ, ಸಮಾಜ ಕಲ್ಯಾಣ ಇಲಾಖೆ, ಕುಂದಾಪುರ ಹಾಗೂ ಪರಿಶಿಷ್ಟ ಜಾತಿ ಸಂಘಟನೆಗಳ ಸಹಯೋಗದೊಂದಿಗೆ ನಡೆದ ಡಾ. ಬಿ. ಆರ್. ಅಂಬೇಡ್ಕರ್ ಅವರ 130 ನೇ ಹಾಗೂ ಡಾ ಬಾಬು ಜಗಜೀವನ್ ರಾಮ್ ರವರ 114ನೇ ಜಯಂತಿ ಆಚರಣೆ ಸಮಾರಂಭದಲ್ಲಿ ಉಪನ್ಯಾಸ ನೀಡಿ ಡಾ. ಬಿ. ಬಿ. ಹೆಗ್ಡೆ ಕಾಲೇಜಿನ ಉಪ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ್ತೆ […]
ರಾಜ್ಯಮಟ್ಟದ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಅಶೋಕ್ ಜಿ. ವಿ. ಯವರಿಗೆ ಚಿನ್ನದ ಪದಕ
ದಾವಣಗೆರೆ (ಏ, 11) : ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ಇವರ ಆಶ್ರಯದಲ್ಲಿ ದಾವಣಗೆರೆಯಲ್ಲಿ ನಡೆದ ಮಾಸ್ಟರ್-1 ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಹಿರಿಯ ಪವರ್ ಲಿಫ್ಟ್ ರ್ ಅಶೋಕ್ ಜಿ.ವಿ. ಯವರು 84 ಕೆ.ಜಿ ವಿಭಾಗದಲ್ಲಿ 100 ಕೆ.ಜಿ .ಭಾರ ಎತ್ತುವುದರ ಮೂಲಕ ಮೊದಲ ಸ್ಥಾನ ದೊಂದಿಗೆ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಕೆನರಾ ಬ್ಯಾಂಕ್ ನೇರಳಕಟ್ಟೆ ಶಾಖೆಯ ಬ್ಯಾಂಕ್ ಮ್ಯಾನೇಜರ್ ರಾಗಿ ಸೇವೆ ಸಲ್ಲಿಸಿ ನಿವ್ರತ್ತಿ ಹೊಂದಿರುವ ಅಶೋಕ್ […]
ವೀಲ್ ಚೇರ್ ರೋಮಿಯೋ ಚಿತ್ರದ ನಾಯಕನಾಗಿ ಮಲೆನಾಡ ಯುವ ಪ್ರತಿಭೆ ರಾಮ್ ಚೇತನ್
ಬೆಂಗಳೂರು (ಏ, 13): ಟ್ರೇಲರ್ ಮೂಲಕ ಬಾರೀ ಸದ್ದು ಮಾಡುತ್ತಾ, ಸಾಮಾಜಿಕ ಜಾಲತಾಣಗಳಲ್ಲಿ ನಿರೀಕ್ಷೆಗೂ ಮೀರಿ ಪ್ರೇಕ್ಷಕ ವರ್ಗದ ಮನಗೆದ್ದು ಬಿಡುಗಡೆಗೆ ಸಜ್ಜಾಗುತ್ತಿರುವ ಸ್ಯಾಂಡಲ್ವುಡ್ನ ಬಹುನಿರೀಕ್ಷೇಯ ಚಿತ್ರ “ವೀಲ್ ಚೇರ್ ರೋಮಿಯೋ”. ಶ್ರೀ ತಿಮ್ಮಪ್ಪ ವೆಂಕಟಾಚಲಯ್ಯ ರವರ ನಿರ್ಮಾಣದ ಅಗಸ್ತ್ಯ ಕ್ರೀಯೇಷನ್ಸ್ ಬ್ಯಾನರ್ ನಡಿ ,ಸ್ಯಾಂಡಲ್ವುಡ್ ನ ಹಲವು ಯಶಸ್ವಿ ಸಿನಿಮಾಗಳಿಗೆ ಸಂಭಾಷಣೆ ಬರೆದಿರುವುದರ ಜೊತೆಗೆ ಪ್ರೇಕ್ಷಕರ ಗಮನಸೆಳೆದ ಯುವ ಪ್ರತಿಭೆ ನಟರಾಜ್ ಜಿ. ರವರು ಪೂರ್ಣ ಪ್ರಮಾಣದ ನಿರ್ದೇಶಿಸಿರುವ […]
ಮಂಗಳೂರು ವಿ. ವಿ. ಸ್ನಾತಕೋತ್ತರ ಪರೀಕ್ಷೆಯಲ್ಲಿ ಕುಂದಾಪುರದ ಸಂದೇಶ್ ಶೆಟ್ಟಿ ನಾಲ್ಕನೇ ರ್ಯಾಂಕ್
ಮಂಗಳೂರು (ಏ, 13) : ಮಂಗಳೂರು ವಿಶ್ವವಿದ್ಯಾನಿಲಯ 2019-20 ರಲ್ಲಿ ನಡೆಸಿದ ಎಮ್.ಬಿ.ಎ. ಸ್ನಾತಕೋತ್ತರ ಅಂತಿಮ ಪರೀಕ್ಷೆಯಲ್ಲಿ ಮಂಗಳೂರಿನ ಎಸ್.ಡಿ.ಎಮ್. ಉದ್ಯಮಾಡಳಿತ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿ ಕುಂದಾಪುರ ಮೂಲದ ಸಂದೇಶ್ ಶೆಟ್ಟಿ ನಾಲ್ಕನೇ ರ್ಯಾಂಕ್ ಪಡೆದಿರುತ್ತಾರೆ.ಇವರು ಕುಂದಾಪುರ ತಾಲೂಕಿನ ಇಡೂರು-ಕುಂಜ್ಞಾಡಿ ಗ್ರಾಮದ ನಿವಾಸಿ ಶ್ರೀಮತಿ ಮುಕಾಂಬು ಮತ್ತು ಪ್ರಭಾಕರ ಶೆಟ್ಟಿಯವರ ಪುತ್ರ.










