ಕೋಡಿ ( ನ.01): ಬ್ಯಾರಿಸ್ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ “ರಾಷ್ಟ್ರೀಯ ಏಕತಾ ದಿನಾಚರಣೆ” ಆಚರಿಸಲಾಯಿತು. ಪದವಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಶಬೀನಾ.ಹೆಚ್ ಇವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಕೆ. ಎಂ. ಅಬ್ದುಲ್ ರೆಹಮಾನ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮವನ್ನುದ್ದೇಶಿಸಿ “ವಲ್ಲಭಭಾಯಿ ಪಟೇಲರು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದು, ಗಾಂಧೀಜಿಯ ಆದರ್ಶಗಳಿಂದ ಪ್ರಭಾವಿತರಾದದ್ದು ಮಾತ್ರವಲ್ಲದೆ ಏಕತೆಯ ಸಂಘಟನೆ […]
Category: ಈಗಿನ ಸುದ್ದಿ
ಸುದ್ದಿ ಸಮಾಚಾರ — > ಈಗಿನ ಸುದ್ದಿ
ಬ್ರಹ್ಮಾವರ: ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ದೀಪಾವಳಿ ಸಂಭ್ರಮ
ಬ್ರಹ್ಮಾವರ( ನ.01): ಬೆಳಕು ಎನ್ನುವುದು ಅಂಧಕಾರವನ್ನು ಕಳೆದು ಬೆಳಕಿನೆಡೆಗೆ ಸಾಗುವ ದಿವ್ಯಮಾರ್ಗ. ಸಂಸ್ಕೃತಿ, ಸಂಪ್ರದಾಯ, ಆಚರಣೆಯ ಕುರಿತು ಅಭಿಮಾನವನ್ನು ಹೊಂದಿರುವ ಹಿನ್ನೆಲೆಯಲ್ಲಿ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರ ತರುವ ಸಲುವಾಗಿ ರಂಗೋಲಿ ಸ್ಪರ್ಧೆ, ಗೂಡುದೀಪ ತಯಾರಿಸುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಂಸ್ಥಾಪಕರಾದ ಶ್ರೀ ಸುಬ್ರಹ್ಮಣ್ಯ ಹಾಗೂ ಕಾಲೇಜಿನ ನಿರ್ದೇಶಕಿಯಾದ ಶ್ರೀಮತಿ ಮಮತಾ, ಉಪಪ್ರಾಂಶುಪಾಲರಾದಶ್ರೀಮತಿ ಸುಜಾತ ಹಾಗೂ ಎಲ್ಲಾ ಉಪನ್ಯಾಸಕರು […]
ಕಾಳಾವರ: ದೀಪಕ್ ಕುಮಾರ್ ಶೆಟ್ಟಿ ನಿಧನ
ಕಾಳಾವರ( ನ. 01): ಕುಂದಾಪುರದ ತಾಲೂಕು ಪಂಚಾಯತ್ ಮಾಜಿ ಸದಸ್ಯರೂ , ಕಾಳಾವರ ಗ್ರಾಮಪಂಚಾಯತ್ ಮಾಜಿ ಸದಸ್ಯರು, ಕಾಂಗ್ರೆಸ್ ಪಕ್ಷದ ಕಾಳಾವರ ಪಂಚಾಯತ್ ವ್ಯಾಪ್ತಿಯ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರೂ, ಪಕ್ಷದ ಕಾರ್ಯಕರ್ತ ದೀಪಕ್ ಕುಮಾರ್ ಶೆಟ್ಟಿ ಯವರು ಹೃದಯಾಘಾತ ದಿಂದ ನಿಧನ ಹೊಂದಿದ್ದಾರೆ. ಮೃತರ ಅಂತ್ಯಕ್ರಿಯೆಯು ನವೆಂಬರ್ 01 ರ ಮಧ್ಯಾಹ್ನ 3.30 ಕ್ಕೆ ಕಾಳಾವರದ ಮೃತರ ಮನೆಯಲ್ಲಿ ನಡೆಯಿತು. ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಇತರ […]
ಶ್ರೀ ಉದಯಕುಮಾರ್ ಹಟ್ಟಿಯಂಗಡಿಯವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ಕುಂದಾಪುರ(ಆ, 31): ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದವರ ಅಧಿಕೃತ ಪಟ್ಟಿಯನ್ನು ಉಡುಪಿ ಜಿಲ್ಲಾಡಳಿತ ಬಿಡುಗಡೆಗೊಳಿಸಿದ್ದು ಸಮಾಜ ಸೇವಾ ವಿಭಾಗದಲ್ಲಿ ಶ್ರೀ ಉದಯಕುಮಾರ್ ಹಟ್ಟಿಯಂಗಡಿಯವರು ಆಯ್ಕೆಯಾಗಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಇವರು ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ (ನಿ), ಇದರ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಸಂಘದ ಸ್ಥಾಪನೆಯಿಂದ ಹಿಡಿದು ಸಂಘಕ್ಕೆ ಎನ್ ಸಿ ಡಿ ಸಿ ಪ್ರಶಸ್ತಿ, ಜಿಲ್ಲಾ ಅತ್ಯುತ್ತಮ ಮೀನುಗಾರಿಕಾ ಸಹಕಾರಿ ಸಂಘ […]
ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ವಿದ್ಯಾರ್ಥಿಗಳು
ಕಿರಿಮಂಜೇಶ್ವರ( ಆ,30): ಬೈಂದೂರು ಶೈಕ್ಷಣಿಕ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟವು ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲಾ ಕ್ರೀಡಾಂಗಣ ಮಾವಿನಕಟ್ಟೆಯಲ್ಲಿ ನಡೆಯಿತು. ಈ ಕ್ರೀಡಾಕೂಟದಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕಿರಿಮಂಜೇಶ್ವರ- 14ರ ವಯೋಮಾನದ ಬಾಲಕರ ವಿಭಾಗದ ಗುಂಡು ಎಸೆತದಲ್ಲಿ ಪ್ರವೀಶ್ (8ನೇ ತರಗತಿ) ಪ್ರಥಮ ಸ್ಥಾನ ಹಾಗೂ ಪ್ರಾಥಮಿಕ ಬಾಲಕಿಯರ ವಿಭಾಗದಲ್ಲಿ ಅಪೇಕ್ಷಾ(7ನೆ ತರಗತಿ) ದ್ವಿತೀಯ ಸ್ಥಾನವನ್ನು ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ. […]
ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ : ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ ಪ್ರಥಮಸ್ಥಾನ
ಕಿರಿಮಂಜೇಶ್ವರ(ಆ,30): ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆದ ಅಂತರ ಜಿಲ್ಲಾ ಮಟ್ಟದ 7ರ ವಯೋಮಿತಿ ವಿಭಾಗದಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ಪ್ರಮುಖ ಬಿ ಪೂಜಾರಿ (1ನೆ ತರಗತಿ) ಪ್ರಥಮ ಸ್ಥಾನ ಪಡೆದಿದ್ದಾನೆ. ವಿದ್ಯಾರ್ಥಿಯ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ ಮುಖ್ಯ ಶಿಕ್ಷಕಿ, ಬೋಧಕ ಮತ್ತು ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.
ಕಾರ್ಕಳ ಜ್ಞಾನಸುಧಾ: ತಾಲ್ಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸಂಪನ್ನ
ಕಾರ್ಕಳ( ಆ.30): ಉಡುಪಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕಾರ್ಕಳ ಹಾಗೂ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪ್ರೌಢಶಾಲೆ, ಗಣಿತ ನಗರ ಇವರ ಸಂಯುಕ್ತ ಆಶ್ರಯದಲ್ಲಿ ತಾಲ್ಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದ ಸಮಾರೋಪ ಸಮಾರಂಭ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪ್ರೌಢಶಾಲೆ, ಗಣಿತ ನಗರದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜ್ಞಾನಸುಧಾ […]
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ: ಪ್ರೌಢಶಾಲೆಗಳ ಶಿಕ್ಷಕರ ಕ್ಷೇತ್ರದ ನಿರ್ದೇಶಕರ ಚುನಾವಣೆಯಲ್ಲಿ ಶೇಖರ ಪೂಜಾರಿಯವರಿಗೆ ಗೆಲುವು
ಕುಂದಾಪುರ ( ಆ,30): ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ( ರಿ.), ಬೆಂಗಳೂರು, ತಾಲೂಕು ಶಾಖೆ ಕುಂದಾಪುರ ಇದರ ಪ್ರೌಢಶಾಲೆಗಳ ಶಿಕ್ಷಕರ ಕ್ಷೇತ್ರದಿಂದ ನಿರ್ದೇಶಕರ ಚುನಾವಣೆ (2024 2029 ರ ಅವಧಿ) ಅಕ್ಟೋಬರ್ 28 ರಂದು ನಡೆಯಿತು. ಈ ಚುನಾವಣೆಯಲ್ಲಿ ಸ್ಪರ್ಧಿಸಿದ ಸರಕಾರಿ ಪ್ರೌಢ ಶಾಲೆ ಬಸ್ರೂರು ಇದರ ಸಹ ಶಿಕ್ಷಕರಾದ ಶ್ರೀ ಶೇಖರ ಪೂಜಾರಿಯವರು ಅತ್ಯಧಿಕ ಮತಗಳ ಅಂತರದೊಂದಿಗೆ ಗೆಲುವು ಸಾಧಿಸಿರುತ್ತಾರೆ.
ರಕ್ತದಾನಿಗಳು ವೈದ್ಯರು ಹಾಗೂ ರೋಗಿಗಳ ನಡುವಿನ ಸೇತುವೆ: ಡಾ. ಜಿ .ಎಸ್ ಚಂದ್ರಶೇಖರ್
ಉಡುಪಿ ( ಆ,30): ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ, ಉಡುಪಿ ಗ್ರೂಪ್ಸ್ ಆಫ್ ಇನ್ಸ್ ಟ್ಯೂಷನ್ ಮಣಿಪಾಲ, ಮಾಹೆ ಎನ್ ಎಸ್ ಎಸ್ ಯೂನಿಟ್ 1&2 ಎಂಐಟಿ ಮಣಿಪಾಲ, ಎಚ್ ಡಿ ಎಫ್ ಸಿ ಬ್ಯಾಂಕ್ ಮಂಗಳೂರು, ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ ಇವರ ಸಹಕಾರದಲ್ಲಿ ಅಕ್ಟೋಬರ್ 27 ರಂದು ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲದಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಆದರ್ಶ ಆಸ್ಪತ್ರೆ ಉಡುಪಿ ಇದರ ವೈದ್ಯಕೀಯ […]
ಭ್ರಮಾ ಲೋಕದ ಮೋಡಿಗಾರ-ಅಂತರಾಷ್ಟ್ರೀಯ ಜಾದುಗಾರ ಪ್ರಕಾಶ್ ಹೆಮ್ಮಾಡಿ
ಮ್ಯಾಜಿಕ್ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ.! ಚಿಕ್ಕ ಮಕ್ಕಳಿಂದ ಹಿಡಿದು ವಯೋ ವೃದ್ಧರೂ ಕೂಡ ಇಷ್ಟಪಡುವ ಕಲೆ ಮ್ಯಾಜಿಕ್. ಕ್ಷಣಮಾತ್ರದಲ್ಲಿ ನೋಡುಗರ ಕಣ್ಣನ್ನು ವಂಚಿಸಿ ನಿರೀಕ್ಷೆಗೂ ಮೀರಿದ ಅದ್ಭುತ ಸೃಷ್ಟಿಸುವ ಕಲೆಯೇ ಜಾದು. ಜಾದು ಎನ್ನುವ ಅದ್ಭುತ ಕಲೆ ಜಗತ್ತಿನಾದ್ಯಂತ ಹರಡಿದ್ದು ಭಾರತದಲ್ಲಿಯೂ ಸಹ ತನ್ನ ಛಾಪನ್ನು ಮೂಡಿಸಿದೆ. ಹೊರನೋಟಕ್ಕೆ ಜನಪದೀಯವಾಗಿ ಕಂಡುಬಂದರೂ ಜಾದು ಕಲೆಯನ್ನು ಇವತ್ತು ವ್ಯವಸ್ಥಿತವಾಗಿ ಅಧ್ಯಯನ ಮಾಡಲಾಗುತ್ತದೆ. ಜಾದು ಎನ್ನುವ ಅದ್ಭುತ ಕಲೆಯನ್ನು ಸಿದ್ಧಿಸಿಕೊಳ್ಳುವುದು […]