ಕೋಟ (ಅ, 12) : ಪ್ರತಿವರ್ಷದಂತೆ ಶ್ರೀ ಅಘೋರೇಶ್ವರ ಕಲಾರಂಗದ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಕೊಡಮಾಡುತ್ತಿರುವ ಶ್ರೀಅಘೋರಶ್ವರ ರಾಜ್ಯೋತ್ಸವ ಪ್ರಶಸ್ತಿಗೆ ಈ ಸಮಾಜ ಸೇವಕ, ಮುಳುಗು ತಜ್ಞ, ಜೀವರಕ್ಷಕ, ಆಪದ್ಬಾಂಧವ. ಈಶ್ವರ ಮಲ್ಪೆ ಯವರನ್ನು ಆಯ್ಕೆಗೊಳಿಸಲಾಗಿದ್ದು ನವಂಬರ್ 13ರಂದು ಸಂಜೆ ಸಂಜೆ ಸಾಲಿಗ್ರಾಮದಲ್ಲಿ ನಡೆಯಲಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಮಾಜದ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ನೀಡಲಿದೆ ಎಂದು ಶ್ರೀ ಅಘೋರೇಶ್ವರ ಕಲಾರಂಗದ ಕಾರ್ಯದರ್ಶಿ ನಾಗರಾಜ್ ಐತಾಳ್ ಪತ್ರಿಕಾ […]
Category: ಗ್ರಾಮೀಣ ಸುದ್ದಿ
ಸುದ್ದಿ ಸಮಾಚಾರ — > ಗ್ರಾಮೀಣ ಸುದ್ದಿ
ಶೆಫ್ ಟಾಕ್ ಸಂಸ್ಥೆಯ ಗುಣಮಟ್ಟದ ಸೇವೆಗೆ ಕ್ಯಾಟರಿಂಗ್ ಕಂಪೆನಿ ಆಫ್ ದಿ ಅವಾರ್ಡ್ – 2021 ಪ್ರಶಸ್ತಿ
ಬೈಂದೂರು (ಅ, 12) :ದೇಶದ ವಿವಿಧ ರಾಜ್ಯಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ಪೂರೈಕೆಯ ಜೊತೆಗೆ ಉತ್ತಮ ಆದರಾತಿಥ್ಯಕ್ಕೆ ಹೆಸರುವಾಸಿಯಾದ ಡಾ. ಗೋವಿಂದ ಬಾಬು ಪೂಜಾರಿಯವರ ಮಾಲೀಕತ್ವದ ಶೆಫ್ಟಾಕ್ ಸಂಸ್ಥೆಗೆ ಆಲ್ ಇಂಡಿಯಾ ಬಿಸಿನೆಸ್ ಡೆವೆಲಪ್ಮೆಂಟ್ ಅಸೋಸಿಯೇಷನ್ ಕ್ಯಾಟರಿಂಗ್ ಕಂಪೆನಿ ಆಫ್ ದಿ ಅವಾರ್ಡ್ -2021 ನೀಡಿ ಗೌರವಿಸಿದೆ. ನವದೆಹಲಿಯಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಡಾ.ಗೋವಿಂದ ಬಾಬು ಪೂಜಾರಿಯವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ರಾಜ್ಯಮಟ್ಟದ ದೇಹದಾಡ್ಯ ಸ್ಫರ್ಧೆ : ಸೋಮಶೇಖರ್ ಖಾರ್ವಿ ದ್ವಿತೀಯ ಸ್ಥಾನ
ಕುಂದಾಪುರ (ಅ, 12) : ಶಿವಮೊಗ್ಗ ಯುವ ದಸರಾದಲ್ಲಿ ನಡೆದ ರಾಜ್ಯಮಟ್ಟದ ದೇಹದಾಡ್ಯ ಸ್ಫರ್ಧೆಯ 65 ಕೆಜಿ ವಿಭಾಗದಲ್ಲಿ ಹೆಮ್ಮಾಡಿಯ ನ್ಯೂ ವೀರ ಮಾರುತಿ ವ್ಯಾಯಾಮ ಶಾಲೆಯ ಶ್ರೀ ಸೋಮಶೇಖರ್ ಖಾರ್ವಿ ದ್ವಿತೀಯ ಸ್ಥಾನ ಪಡೆದಕೊಂಡಿದ್ದಾರೆ. ವಿವಿಧ ಜಿಲ್ಲಾ ಮತ್ತು ರಾಜ್ಯ ಮಟ್ಟದ ದೇಹದಾಢ್ಯ ಸ್ಪರ್ಧೆಗಳಲ್ಲಿ ವಿಜೇತರಾಗಿರುವ ಸೋಮಶೇಖರ್ ಖಾರ್ವಿ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಪೂರ್ವತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಕುಂದಾಪುರ:ವಿಶ್ವ ಅಂಚೆ ದಿನಾಚರಣೆ
ಕುಂದಾಪುರ (ಅ,9): ಭಾರತೀಯ ಅಂಚೆ ಇಲಾಖೆಯ ಕುಂದಾಪುರ ಪ್ರಧಾನ ಅಂಚೆ ಕಛೇರಿಯಲ್ಲಿ ವಿಶ್ವ ಅಂಚೆ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಅಂಚೆ ಇಲಾಖೆಯ 167 ವರ್ಷ ಚರಣೆಯ ಸಂಭ್ರಮವನ್ನುಅಕ್ಟೋಬರ್ 9 ರಿಂದ 15 ರ ವರೆಗೆ “ಅಂಚೆ ಸಪ್ತಾಹ”ದ ಮೂಲಕ ಆಚರಿಸಲಾಗುತ್ತಿದೆ. ಅಂಚೆ ಉಪ ಅಧೀಕ್ಷಕರಾದ ಪಿ ಏನ್ ಸತೀಶ, ಅಂಚೆ ನಿರೀಕ್ಷಿಕರಾದ ಡಿ ಎಮ್ ರಾಮಚಂದ್ರ, ಅಂಚೆಪಾಲಕರಾದ ಮಂಜುನಾಥ್ ಎಚ್ ಹಾಗೂ ಅಂಚೆ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಅಕಾಲಿಕ ಮಳೆಯಿಂದಾಗಿ ಜನ ಜೀವನ ಅಸ್ಥವ್ಯಸ್ಥ: ದುರಸ್ಥಿ ಕಾರ್ಯನಿರತ ಅಂಪಾರು ಗ್ರಾಮಪಂಚಾಯತ್ ನ ಪರಿಶ್ರಮಕ್ಕೆ ಶ್ಲಾಘನೆ
ಅಂಪಾರು(ಅ,9):ಇತ್ತೀಚೆಗೆ ಅಂಪಾರು ಪರಿಸರದಲ್ಲಿ ಗುಡುಗು ,ಮಿಂಚು ಸಹಿತ ಸುರಿದ ಅಕಾಲಿಕ ಮಳೆಯ ಪರಿಣಾಮವಾಗಿ ಅಂಪಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಬಗೆ, ಶಾನ್ಕಟ್ಟು ಕನ್ನಾಲಿಗೆಯಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ಜೋರಾಗಿ ಬೀಸಿದ ಗಾಳಿಯಿಂದಾಗಿ ಬೃಹದಾಕಾರದ ಮರಗಳು ಮನೆ ಹಾಗೂ ರಸ್ತೆಯ ಮೇಲೆರಗಿದ್ದವು.ಇನ್ನೂ ಕೆಲವು ಭಾಗಗಳಲ್ಲಿ ಫಲವತ್ತಾದ ಅಡಿಕೆ, ತೆಂಗಿನ ಮರಗಳು ಧರೆಗುರುಳಿ ಬಿದ್ದಿದೆ.ಅದಲ್ಲದೇ ಗಾಳಿಯ ರಭಸಕ್ಕೆ ಮನೆಗಳ ಹಾಗೂ ದನದ ಕೊಟ್ಟಿಗೆಗಳ ಹೆಂಚು ಹಾಗೂ ತಗಡಿನ ಮಾಡು ಸಂಪೂರ್ಣ ಜಖಂಗೊಂಡಿದ್ದು, ಸಿಡಿಲಿನ ಹೊಡೆತಕ್ಕೆ ಸಿಲುಕಿ […]
ಹೊಸ್ತಿನ ಹೊಸ ಫಸಲು- ಕದಿರು ಕಟ್ಟುವ ಹಬ್ಬ
ಮ್ಮ ಕರಾವಳಿ ಭಾಗದಾದ್ಯಂತ ಹೊಸ ಫಸಲಿನ ಕದಿರುಕಟ್ಟುವ ಪೂಜೆ ಸಂಪ್ರದಾಯಕವಾಗಿ ರೂಡಿಯಲ್ಲಿರುವ ಹಬ್ಬ.ವಿಶೇಷವಾಗಿ ನವರಾತ್ರಿ ಸಂದರ್ಭದಲ್ಲಿ ಆಚರಿಸುವ ಈ ಹಬ್ಬದಂದು ಮನೆ ಮಂದಿಯಲ್ಲಾ ಸಂತಸದಿಂದ ಆಚರಿಸುತ್ತಾರೆ. ಕರಾವಳಿಯ ಕೃಷಿ ಪರಂಪರೆಯಲ್ಲಿ ಮತ್ತು ಸಂಪ್ರದಾಯದಲ್ಲಿ ಕದಿರು ಕಟ್ಟುವ ಹಬ್ಬಕ್ಕೆ ವಿಶೇಷ ಮಹತ್ವ ಇದೆ. ಕ್ರಷಿ ಭೂಮಿಯಲ್ಲಿ ಬೆಳೆದ ಭತ್ತದ ಪೈರು ತೆನೆಬಿಟ್ಟು ಬೆಳೆದಿರುವ ಸಂಭ್ರಮವನ್ನು ಕರಾವಳಿ ಭಾಗದ ಜನತೆ ಭಕ್ತಿಭಾವದಿಂದ ಆಚರಿಸುವ ಹಾಗೂ ದೇವಸ್ಥಾನದಲ್ಲಿ ಹೊಸ ಫಸಲುಗಳನ್ನು ಊರ ಜನತೆಗೆ ಹಂಚುವುದು […]
ಬದುಕು ನೀಡಿದ ದೇವರು
ಬದುಕಿನ ಪಯಣದಲ್ಲಿ ತಾಯಿಯಷ್ಟೇ ತಂದೆ ಎನ್ನುವ ದೇವರ ಮಾರ್ಗದರ್ಶನ ಅತ್ಯವಶ್ಯಕ. ನನ್ನ ಜೀವನದ ಯಶಸ್ಸಿನ ಹಾದಿ ನನ್ನ ತಂದೆ. ಅಪ್ಪ ನಡೆದ ದಾರಿ,ಅಪ್ಪನ ಅನುಭವದ ಬದುಕು,ಸ್ವಾಭಿಮಾನ ಶಿಸ್ತಿನ ಜೀವನ ನಡೆಸಿ ಕಷ್ಟದ ಬದುಕ ಸರಿದೂಗಿಸಲು ಪಟ್ಟಿರುವ ಪಣ ನನ್ನ ಬದುಕಿನ ಬಹು ದೊಡ್ಡ ಪಾಠ. ಅಪ್ಪನ ಕಷ್ಟದ ಜೀವನವೇ ನನಗೆ ಶಿಸ್ತಿನ ಪಾಠವನ್ನು ಕಲಿಸಿದೆ ಎಂದರೆ ಅತಶಯೋಕ್ತಿಯಾಗದು.ಅಪ್ಪನ ನೇರ ನುಡಿ,ಸರಳ ಸ್ವಭಾವದ ವ್ಯಕ್ತಿತ್ವ, ತಿದ್ದಿ ಹೇಳುವ ಪರಿಯು ನನ್ನ ಸಾಧನೆಗೆಸ್ಪೂರ್ತಿಯಾಗಿದೆ. […]
ಅಕ್ಟೋಬರ್ 7 ರಂದು ಕುಂದಾಪುರದ ಹೋಲಿ ರೋಜರಿ ಮಾತೆ ಚರ್ಚಿನ 450ನೇ ವರ್ಷಾಚರಣೆಯ ಸಮಾರೋಪ
ಕುಂದಾಪುರ (ಅ, 06) : ಪೋರ್ಚುಗೀಸರಿಂದ ನಿರ್ಮಾಣವಾದ ಇತಿಹಾಸ ಪ್ರಸಿದ್ಧ ಕುಂದಾಪುರ ಹೋಲಿ ರೋಸರಿ ಚರ್ಚ್450 ನೇ ವರ್ಷಾಚರಣೆಯ ಸಮಾರೋಪ ಸಮಾರಂಭ ಇದೇ ಅಕ್ಟೋಬರ್ ,07 ರ ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಉಡುಪಿಯ ಬಿಷಪ್ ಅತೀ ವಂದನೀಯ ಗುರುಗಳಾದ ಡಾ.ಜೆರಾಲ್ಡ್ ಐಸಾಕ್ ಲೋಬೋ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಿವಮೊಗ್ಗದ ಬಿಷಪ್ ಅತೀ ವಂದನೀಯ ಡಾ.ಫ್ರಾನ್ಸಿಸ್ ಸಿರಾವೋ ಎಸ್.ಜೆ ,ಉಡುಪಿಯ ಧರ್ಮಗುರುಗಳಾದ ಬ್ಯಾಪ್ಟಿಸ್ಟ್ ಮೆನೆಜೆಸ್ […]
ನಾಡೋಜ ಡಾ. ಜಿ. ಶಂಕರ್ ರವರ 66ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ಕುಂದಾಪುರ (ಅ, 06) : ಸಮಾಜ ಸೇವಕ, ಉದ್ಯಮಿ ನಾಡೋಜ ಡಾ. ಜಿ. ಶಂಕರ್ ರವರ 66ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಮೊಗವೀರ ಯುವ ಸಂಘಟನೆ(ರಿ) ಉಡುಪಿಯ ವಿವಿಧ ಫಟಕದ ಸದಸ್ಯರು ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ರಾಬರ್ಟ್, ಮೊಗವೀರ ಯುವ ಸಂಘಟನೆ ಉಡುಪಿ, ಜಿಲ್ಲಾ ಸಂಘಟನೆಯ ಮಾಜಿ ಅಧ್ಯಕ್ಷರಾದ ಸತೀಶ್ ಎಂ ನಾಯ್ಕ, ಸದಾನಂದ ಬಳ್ಕೂರು,ಗುತ್ತಿಗೆದಾರ […]
ಡಾ. ಬಿ.ಬಿ. ಹೆಗ್ಡೆ ಕಾಲೇಜು ಕುಂದಾಪುರ : ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಭೇಟಿ
ಕುಂದಾಪುರ (ಅ, 06) : ಇಲ್ಲಿನ ಡಾ.ಬಿ.ಬಿ. ಹೆಗ್ಡೆ ಕಾಲೇಜಿಗೆ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್ ರವರು ಅಕ್ಟೋಬರ್,06 ರಂದು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸಚಿವರು ಡಾ.ಬಿ.ಬಿ. ಹೆಗ್ಡೆ ಕಾಲೇಜಿನ ಪರಿಚಯ ದೃಶ್ಯಿಕೆಯನ್ನು ಬಿಡುಗಡೆಗೊಳಿಸಿದರು. ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರು, ಬೈಂದೂರಿನ ಶಾಸಕರಾದ ಬಿ.ಎಮ್. ಸುಕುಮಾರ ಶೆಟ್ಟಿ, ಸಂಸ್ಥೆಯ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ, ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ, ಉಪನ್ಯಾಸಕರಾದ […]










