ಕುಮಟಾ (ಜೂ,13): ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಡೆಕೋಡಿಯ ಕು. ದಿಶಾ ಭಾಗವತ ಅಮೇರಿಕಾದ ಕ್ಯಾಲಿಫೋರ್ನಿಯ ಬಾರ್ ಕೌನ್ಸಿಲ್ ನಲ್ಲಿ ಅಟಾರ್ನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಮೂಲಕ ಉತ್ತರಕನ್ನಡ ಜಿಲ್ಲೆ, ರಾಜ್ಯ ಹಾಗೂ ದೇಶದ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೆರಿಸಿದ್ದಾರೆ.ಬೆಂಗಳೂರಿನ ಪ್ರತಿಷ್ಠಿತ ಕ್ರೈಸ್ಟ್ ಕಾಲೇಜಿನಲ್ಲಿ ಕಾನೂನು ಪದವಿ ಮುಗಿಸಿ ನಂತರ ಅಮೆರಿಕದಲ್ಲಿ ಯುಎಸ್ಸಿ ಮಾಸ್ಟರ್ ಡಿಗ್ರಿ ಪಡೆದಿರುತ್ತಾರೆ. ಇವರು ಬಹುಮುಖ ಪ್ರತಿಭೆಯಾಗಿದ್ದು, ಉದ್ಯಮಿ ಮಂಜುನಾಥ ಭಾಗವತ್ ಹಾಗೂ ಲಲಿತಾ ಭಾಗವತ್ […]
Category: ಜಿಲ್ಲಾ ಸುದ್ದಿ
ಸುದ್ದಿ ಸಮಾಚಾರ — > ಜಿಲ್ಲಾ ಸುದ್ದಿ
ಕೋಟೇಶ್ವರ : ಕೋವಿಡ್ ಲಸಿಕಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಜಿ. ಜಗದೀಶ್ ಭೇಟಿ
ಕೋಟೇಶ್ವರ (ಜೂ, 05): ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಕೋಟೇಶ್ವರ ಸರಕಾರಿ ಪ್ರಾಥಮಿಕ ಶಾಲೆಯ ವಠಾರದಲ್ಲಿ ನಡೆಯುತ್ತಿರುವ ಲಸಿಕಾ ಕೇಂದ್ರಕ್ಕೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕೋಟೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ. ಪೂರ್ಣಿಮಾ ಶೇಟ್, ಕೇಂದ್ರದ ನಿರ್ವಾಹಕ ಸುಹಾಸ್ ಪೈ ಜಿಲ್ಲಾಧಿಕಾರಿಗಳಿಗೆ ಲಸಿಕಾ ಕೇಂದ್ರದ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸೇವಾ ಭಾರತಿಯ ಸ್ವಯಂಸೇವಕರು ಉಪಸ್ಥಿತರಿದ್ದರು.
ಶಿಕ್ಷ ಪ್ರಭಾ ಅಕಾಡೆಮಿ ಕುಂದಾಪುರ : ಸಿಎ/ಸಿಎಸ್ ಕೋರ್ಸುಗಳಿಗೆ ದಾಖಲಾತಿ ಆರಂಭ
ಕುಂದಾಪುರ (ಜೂ. 05) : ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪ್ರೊಫೆಷನಲ್ ಕೋರ್ಸುಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎನ್ನುವ ಉದ್ದೇಶದಿಂದ ಕಳೆದ ಹಲವು ವರ್ಷಗಳಿಂದ ಕುಂದಾಪುರದ ಕುಂದೇಶ್ವರ ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ ಸ್ಪೇಸ್) ಸಂಸ್ಥೆ ಸಿಎ/ಸಿಎಸ್ ಮತ್ತು ಸಿಎಂಎ ಪರೀಕ್ಷೆಗಳಿಗೆ ಅನೇಕ ವಿದ್ಯಾರ್ಥಿಗಳನ್ನು ಪರಿಪೂರ್ಣವಾಗಿ ತಯಾರಿಗೊಳಿಸಿ ಅಖಿಲ ಭಾರತ ಮಟ್ಟದಲ್ಲಿ ರ್ಯಾಂಕ್ ಮತ್ತು ಅತ್ಯುತ್ತಮ ಫಲಿತಾಂಶ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುತ್ತದೆ. ಸಂಸ್ಥೆಯ […]
ಎಕ್ಸಲೆಂಟ್ ಕುಂದಾಪುರ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಮೂಡಬಿದ್ರೆ ನೇತೃತ್ವ : ಪ್ರತಿಭಾನ್ವಿತ ವಿದ್ಯಾರ್ಥಿಗಳ ಪಾಲಿಗೆ ಸುವರ್ಣಾವಕಾಶ – ಪ್ರೊ ಬಾಲಕೃಷ್ಣ ಶೆಟ್ಟಿ
ಕುಂದಾಪುರ (ಮೇ, 30) : ಜೀವನದಲ್ಲಿ ನಾನೊಬ್ಬ ಶ್ರೇಷ್ಠ ವೈದ್ಯ ನಾಗಬೇಕು, ಒಳ್ಳೆಯ ಐಐಟಿ ಕಾಲೇಜಿನಲ್ಲಿ ಇಂಜಿನಿಯರ್ ಆಗಬೇಕು ಇಲ್ಲ ಲೆಕ್ಕಪರಿಶೋಧಕನಾಗಬೇಕು,ಕಂಪನಿ ಸೆಕ್ರೆಟರಿ ಆಗಬೇಕು ಎನ್ನುವ ಕನಸನ್ನು ಕಾಣುತ್ತಿರುವ ಅದೆಷ್ಟು ವಿದ್ಯಾರ್ಥಿಗಳಿಗೆ ಡಾ. ರಮೇಶ್ ಶೆಟ್ಟಿ ನೇತೃತ್ವದ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ತಂಡ ಕುಂದಾಪುರದ ಎಕ್ಸಲೆಂಟ್ ಕಾಲೇಜಿನ ಸಂಪೂರ್ಣ ಆಡಳಿತ ವಹಿಸಿಕೊಂಡಿರುವುದು ಸುವರ್ಣ ಅವಕಾಶವಾಗಲಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ಕನಸು ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಮೂಡುಬಿದಿರೆಯ ಮೂಲಕ […]
ಜೆಸಿಐ ಕುಂದಾಪುರ ಸಿಟಿ : 17 ನೇ ದಿನದ ಲಾಕ್ ಡೌನ್ ಊಟ ವಿತರಣೆ
ಕುಂದಾಪುರ (ಮೇ,15) :ಜೆಸಿಐ ಕುಂದಾಪುರ ಸಿಟಿ ಘಟಕ ಸತತ 17 ನೇ ದಿನದ ಲಾಕ್ ಡೌನ್ ಸಂದರ್ಭದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇವರ ಸಹಭಾಗಿತ್ವದಲ್ಲಿ ಡಾ|ಉಮೇಶ್ ಪುತ್ರನ್ ರವರ ಪ್ರಾಯೋಜತ್ವ ದಲ್ಲಿ ಕುಂದಾಪುರ ಪರಿಸರದ ಕೂಲಿಕಾರ್ಮಿಕರಿಗೆ ಆಸ್ಪತ್ರೆಯ ರೋಗಿಗಳಿಗೆ, ಲಾರಿ ಚಾಲಕರು ಸೇರಿದಂತೆ ಸುಮಾರು 220 ಕ್ಕಿಂತಲೂ ಹೆಚ್ಚು ಜನ ಹಸಿದವರಿಗೆ ಊಟ ವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಜೆಸಿಐ ಕುಂದಾಪುರ ಸಿಟಿಯ ಅಧ್ಯಕ್ಷ ವಿಜಯ ಭಂಡಾರಿ […]
ಬೈಂದೂರು ಶಾಸಕರ ಗೃಹ ಕಛೇರಿಗೆ ನೂತನ ತಹಶೀಲ್ದಾರ್ ಭೇಟಿ
ಬೈಂದೂರು (ಮೇ,13): ಬೈಂದೂರು ತಾಲೂಕಿನ ನೂತನ ತಹಶೀಲ್ದಾರರಾಗಿ ಅಧಿಕಾರ ಸ್ವೀಕರಿಸಿರುವ ಶೋಭಾಲಕ್ಷ್ಮೀ ಹೆಚ್. ಎಸ್ ರವರು ಬೈಂದೂರು ಶಾಸಕ ಬಿಎಂ ಸುಕುಮಾರ್ ಶೆಟ್ಟಿ ಯವರ ಗೃಹಕಛೇರಿಗೆ ಮೇ 13ರಂದು ಭೇಟಿ ನೀಡಿದರು. ನೂತನ ತಹಶೀಲ್ದಾರರಾಗಿ ಅಧಿಕಾರ ಸ್ವೀಕರಿಸಿರುವ ಶೋಭಾ ಲಕ್ಷ್ಮಿ ಹೆಚ್ ರವರನ್ನು ಶಾಸಕರು ಶುಭ ಹಾರೈಸಿ ತಾಲೂಕಿನ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಕೋವಿಡ್ ನಿರ್ವಹಣೆ ಹಾಗೂ ಜಿಲ್ಲೆಯ ಅತ್ಯಂತ ಗ್ರಾಮೀಣ ಭಾಗವಾಗಿರುವ ಬೈಂದೂರು ಕ್ಷೇತ್ರದ ಜನತೆಯ ಆಡಳಿತಾತ್ಮಕ […]
ಬೈಂದೂರು-ನೂತನ ತಹಶೀಲ್ದಾರರಾಗಿ ಶೋಭಾಲಕ್ಷ್ಮೀ ಹೆಚ್. ಎಸ್. ನೇಮಕ
ಬೈಂದೂರು (ಮೇ, 6): ಬೈಂದೂರು ತಾಲೂಕಿನ ನೂತನ ತಹಶೀಲ್ದಾರರಾಗಿ ಶೋಭಾಲಕ್ಷ್ಮೀ ಹೆಚ್. ಎಸ್. ಅವರನ್ನು ಕರ್ನಾಟಕ ರಾಜ್ಯ ಸರ್ಕಾರ ನಿಯುಕ್ತಿಗೊಳಿಸಿ ಆದೇಶಿಸಿದೆ. ತಹಶೀಲ್ದಾರ್ ಬಸಪ್ಪ ಪೂಜಾರಿಯವರ ವರ್ಗಾವಣೆಯ ಬಳಿಕ ಬ್ರಹ್ಮಾವರದ ತಹಶೀಲ್ದಾರ್ ಕಿರಣ ಗೌರಯ್ಯ ಅವರು ಬೈಂದೂರಿನ ಪ್ರಭಾರ ತಹಶೀಲ್ದಾರರರಾಗಿ ಸೇವೆಸಲ್ಲಿದ್ದರು. ಕೆಲವು ತಿಂಗಳಿನಿಂದ ಬೈಂದೂರು ತಾಲೂಕಿನ ತಹಶೀಲ್ದಾರ್ ಹುದ್ದೆ ಖಾಲಿಯಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿತ್ತು. ಇದೀಗ ಸಾರ್ವಜನಿಕರಿಗೆ ವಿವಿಧ ಇಲಾಖೆಗಳ ಸೇವೆಯನ್ನು ಪಡೆಯಲು ತುಂಬಾ ಅನುಕೂಲವಾದಂತಾಗಿದೆ.
ಬಂಟಕಲ್ ಕಾಲೇಜು : ವಿದ್ಯಾರ್ಥಿಗಳಿಂದ ಕೋವಿಡ್ ಲಸಿಕಾ ಮಾಹಿತಿ ಅಭಿಯಾನ
ಉಡುಪಿ (ಏ, 15): ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸುಮಾರು 500 ಕ್ಕೂ ಹೆಚ್ಚು ವಿದ್ಯಾರ್ಥಿ ಸ್ವಯಂಸೇವಕರು ಕೋವಿಡ್ ಲಸಿಕಾ ಮಾಹಿತಿ ಅಭಿಯಾನದಲ್ಲಿ ಪಾಲ್ಗೊಂಡರು. ಸಂಸ್ಥೆಯ ವಿದ್ಯಾರ್ಥಿಗಳು ಬಂಟಿಕಲ್ ಕಾಲೇಜಿನ ಆಸುಪಾಸು, ಹಾಗೂ ಉಡುಪಿ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಿಗೆ ತೆರಳಿ 45ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ತೆಗೆದುಕೊಳ್ಳುವುದರಿಂದ ಆಗುವ ಉಪಯೋಗಗಳನ್ನು ವಿವರಿಸಿ, ಅವರುಗಳಲ್ಲಿ ಜಾಗೃತಿಯನ್ನು ಮೂಡಿಸಿ, ಲಸಿಕೆ ಪಡೆಯಲು ಜನರಲ್ಲಿ ಇರುವ […]
ಮೇ 1ರಿಂದ 10 – ಟಾರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ ಆಯೋಜನೆಯಲ್ಲಿ ಕ್ರೀಡಾ ಹಬ್ಬ
ಕುಂದಾಪುರ (ಏ, 6): ರಾಜ್ಯದ ಪ್ರತಿಷ್ಠಿತ ಸ್ಪೋರ್ಟ್ ಕ್ಲಬ್ ಗಳಲ್ಲಿ ಒಂದಾದ ಟಾರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ ಆಯೋಜನೆಯಲ್ಲಿ ಮೇ 01 ರಿಂದ 10ರ ವರೆಗೆ ಕುಂದಾಪುರ ಹಾಗೂ ಮಂಗಳೂರಿನ ವಿವಿಧೆಡೆಗಳಲ್ಲಿ ಟಾರ್ಪಡೋಸ್ ಕ್ರೀಡಾ (ಸ್ಪೋರ್ಟ್ಸ್ ಕಾರ್ನಿವಲ್) ಹಬ್ಬ ನಡೆಯಲಿದೆ ಎಂದು ಪ್ರತಿಷ್ಠಿತ ಟಾರ್ಪಡೋಸ್ ಕ್ಲಬ್ನ ಗೌತಮ್ ಶೆಟ್ಟಿ ತಿಳಿಸಿದ್ದಾರೆ. ಸರಿ ಸುಮಾರು 1 ಕೋ. ರೂ. ವೆಚ್ಚದಲ್ಲಿ ಈ ಕ್ರೀಡಾ ಹಬ್ಬವನ್ನು ಆಯೋಜಿಸಲಾಗಿತ್ತಿದ್ದು, ಟೆನಿಸ್ ಹಾಗೂ ಲೆದರ್ ಬಾಲ್ ಕ್ರಿಕೆಟ್ […]
ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ : ಫ್ಯಾಕಲ್ಟಿ ಡೆವಲಪ್ಮೆಂಟ್ ಪ್ರೋಗ್ರಾಮ್
ಇಲ್ಲಿನ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ಮತ್ತು ಇನ್ಫಾರ್ಮೇಶನ್ ಸೈನ್ಸ್ ವಿಭಾಗಗಳು ಆಯೋಜಿಸಿದ್ದ ಫ್ಯಾಕಲ್ಟಿ ಡೆವಲಪ್ಮೆಂಟ್ ಪ್ರೋಗ್ರಾಮ್ ನ ಉದ್ಘಾಟನೆ ಮಾ. 29 ರಂದು ನಡೆಯಿತು.