ಕುಂದಾಪುರ(ಏ.7): ಕುಂದಾಪುರ ತಾಲ್ಲೂಕು ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸಂಘದ ಕಚೇರಿಯಲ್ಲಿ ಇತ್ತೀಚೆಗೆ ನಡೆಯಿತು. ಅಧ್ಯಕ್ಷರಾಗಿ ಕಿರಣ್ ಪೂಜಾರಿ,ಕಾರ್ಯದರ್ಶಿಯಾಗಿ ಸಂತೋಷ ಪಟೇಲ್, ಗೌರವಾಧ್ಯಕ್ಷರಾಗಿ ಎಸ್ ಸತೀಶ್ ಕುಮಾರ್ ಕೋಟೇಶ್ವರ ರವರನ್ನು ಆಯ್ಕೆ ಮಾಡಲಾಯಿತು. ಕಾನೂನು ಸಲಹೆಗಾರರಾಗಿ ಶ್ರೀ ರವಿಕಿರಣ್ ಮುರ್ಡೇಶ್ವರ ಮತ್ತು ಶ್ರೀ ಸೋಮನಾಥ ಹೆಗ್ಡೆ ಮತ್ತು ಸಂಘದ ಗೌರವ ಸಲಹೆಗಾರರಾಗಿ ಕುಂದಾಪುರ ಮಿತ್ರ ಪತ್ರಿಕೆಯ ಸಂಪಾದಕರಾದ ಟಿ. ಪಿ. ಮಂಜುನಾಥ್, ಉಪಾಧ್ಯಕ್ಷರಾಗಿ ಪ್ರದೀಪ್ ಪಟೇಲ್, ದಯಾನಂದ್ ನಾಯಕ್ ಮತ್ತು […]
Category: ಜಿಲ್ಲಾ ಸುದ್ದಿ
ಸುದ್ದಿ ಸಮಾಚಾರ — > ಜಿಲ್ಲಾ ಸುದ್ದಿ
ಬಿಜೆಪಿಹಿಂದುಳಿದ ವರ್ಗಗಳ ಮೋರ್ಚಾ ಕುಂದಾಪುರ ಮಂಡಲ: ಕಾರ್ಯಕಾರಿಣಿ ಸಭೆ
ಕುಂದಾಪುರ(ಏ.5): ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗಗಳ ಮೋರ್ಚಾ ಕುಂದಾಪುರ ಮಂಡಲದ ಕಾರ್ಯಕಾರಿಣಿ ಸಭೆ ಏ.05 ರಂದು ಕುಂದಾಪುರದ ಬಿಜೆಪಿ ಕಚೇರಿಯಲ್ಲಿ ಹಿಂದುಳಿದ ವರ್ಗಗಳ ಮೋರ್ಚಾ ಮಂಡಲ ಅಧ್ಯಕ್ಷರಾದ ಸತೀಶ್ ಬಾರಿಕೆರಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯಗಳ ಬಗ್ಗೆ ಅವಲೋಕನ ನಡೆಸಲಾಯಿತು. ಹಾಗೂ ಮುಂದಿನ ದಿನಗಳಲ್ಲಿ ಚುನಾವಣಾ ದೃಷ್ಟಿಯಿಂದ ಪಕ್ಷ ಸಂಘಟನೆ ಬಗ್ಗೆ, ಹಿಂದುಳಿದ ಮೋರ್ಚಾದ ಪಾತ್ರದ ಬಗ್ಗೆ ಮತ್ತು ಸರ್ಕಾರದ ವಿವಿಧ ಯೋಜನೆಯನ್ನು […]
ಮೊಗವೀರ ಯುವ ಸಂಘಟನೆ (ರಿ) ಉಡುಪಿ ಜಿಲ್ಲೆ: ಕುಂದಾಪುರ ಘಟಕದ ಪದಪ್ರದಾನ ಸಮಾರಂಭ
ಕುಂದಾಪುರ(ಮಾ.28): ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೊಗವೀರ ಯುವ ಸಂಘಟನೆ (ರಿ.), ಉಡುಪಿ ಜಿಲ್ಲೆ ಇದರ ಕುಂದಾಪುರ ಘಟಕದ 2022-24 ನೇ ಸಾಲಿನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಮಾ.27 ರಂದು ಕುಂದಾಪುರದ ಕುಂಭಾಶಿ ರಾಧಾಬಾಯಿ ವೆಂಕಟ್ರಮಣ ಪ್ರಭು ರಂಗಮಂದಿರ (ಕೊಯಾಕುಟ್ಟಿ) ಸಭಾಂಗಣದಲ್ಲಿ ನಡೆಯಿತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಎ.ಸುವರ್ಣ 2022-24 ನೇ ಸಾಲಿನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮೊಗವೀರ ಯುವ ಸಂಘಟನೆ ಕುಂದಾಪುರ ಘಟಕದ […]
ಮೊಗವೀರ ಯುವ ಸಂಘಟನೆ (ರಿ) ಉಡುಪಿ ಜಿಲ್ಲೆ: ಹಾಲಾಡಿ ಶಂಕರನಾರಾಯಣ ಘಟಕದ ಮಹಾಸಭೆ & ಪದಪ್ರದಾನ ಸಮಾರಂಭ – ಸಮುದಾಯವನ್ನು ಒಗ್ಗೂಡಿಸುವಲ್ಲಿ ಯುವ ಸಂಘಟನೆಯ ಪಾತ್ರ ಮಹತ್ವವಾದುದ್ದು: ಯಶಪಾಲ್.ಎ.ಸುವರ್ಣ
ಹಾಲಾಡಿ(ಮಾ.27): ನಾಡೋಜ ಡಾ.ಜಿ.ಶಂಕರ್ ರವರ ಸಂಘಟನಾತ್ಮಕ ಚಿಂತನೆ ,ಮಾರ್ಗದರ್ಶನ, ಸಂಘನೆಯ ಕುರಿತಾದ ಅವರ ದೂರದರ್ಶಿತ್ವ ನಮಗೆಲ್ಲರಿಗೂ ಸ್ಪೂರ್ತಿದಾಯಕವಾಗಿದ್ದು ಹಾಗೂ ಸಮುದಾಯವನ್ನು ಒಗ್ಗೂಡಿಸುವಲ್ಲಿ ಯುವ ಸಂಘಟನೆಯ ಪಾತ್ರ ಮಹತ್ವವಾದುದ್ದು ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಎ.ಸುವರ್ಣ ಹೇಳಿದರು. ಅವರು ಮಾ.26 ರಂದು ಹಾಲಾಡಿಯ ಶಾಲಿನಿ ಜಿ. ಶಂಕರ್ ಕನ್ವೆನ್ಷನ್ ಸೆಂಟರ್ ನ ತೆರೆದ ಸಭಾಂಗಣದಲ್ಲಿ ನಡೆದ ಮೊಗವೀರ ಯುವ ಸಂಘಟನೆ (ರಿ.), […]
ಮೊಗವೀರ ಯುವ ಸಂಘಟನೆ(ರಿ.) ಉಡುಪಿ :ಕರೋನ ವಾರಿಯರ್ಸಗಳಿಗೆ ಜಿಲ್ಲಾಡಳಿತದಿಂದ ಅಭಿನಂದನೆ
ಉಡುಪಿ (ಮಾ.29): ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೊಗವೀರ ಯುವ ಸಂಘಟನೆ(ರಿ.), ಉಡುಪಿ ಹಾಗೂ ಜಿ . ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ) ಅಂಬಲಪಾಡಿ ಜಂಟಿ ಆಶ್ರಯದಲ್ಲಿ ಕಳೆದ ಕರೋನಾ ಲಾಕ್ಡೌನ್ ಸಂಧರ್ಭದಲ್ಲಿ ನಾಡೋಜ. ಡಾ.ಜಿ.ಶಂಕರ್ ರವರ ಸಲಹೆಯ ಮೇರೆಗೆ ಕರೋನಾದಿಂದ ಮ್ರತಪಟ್ಟವರ ಶವಸಂಸ್ಕಾರ ಕಾರ್ಯದಲ್ಲಿ ತಮ್ಮ ಜೀವದ ಹಂಗು ತೋರೆದು ಅನೇಕ ಶವಗಳಿಗೆ ಮುಕ್ತಿ ನೀಡುವ ಮಹತ್ಕಾರ್ಯದಲ್ಲಿ ತೊಡಗಿಸಿಕೊಂಡ ಉಡುಪಿ ಹಾಗೂ ಕುಂದಾಪುರ ಭಾಗದ ಕರೋನಾ ಫ್ರಂಟ್ಲೈನ್ ವಾರಿಯರ್ಸ್ ಗಳ […]
ಸಂತ ಮೇರಿ ಕಾಲೇಜು ಶಿರ್ವ: ಎನ್.ಎಸ್.ಎಸ್ ಮಾಹಿತಿ ಕಾರ್ಯಕ್ರಮ
ಶಿರ್ವ(ಜ.23):ಇಲ್ಲಿನ ಸಂತ ಮೇರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಪ್ರಥಮ ವರ್ಷದ ಸ್ವಯಂ ಸೇವಕರಿಗೆ ಮಾಹಿತಿ ಕಾರ್ಯಕ್ರಮವನ್ನು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಕಾಲೇಜಿನ ಎನ್.ಎಸ್.ಎಸ್ ಸಹ ಯೋಜನಾಧಿಕಾರಿ ಹಾಗೂ ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ಶ್ರೀ ಸ್ಯಾಮ್ಜೋಯಲ್ ಡಯಾಸ್ರವರು ಎನ್.ಎಸ್.ಎಸ್. ಸ್ವಯಂ ಸೇವಕರು ಸದಾ ಕಾರ್ಯ ಪ್ರವೃತ್ತವಾಗುವುದರೊಂದಿಗೆ ಸಮಾಜಕ್ಕಾಗಿ ಅರ್ಪಣಾ ಮನೋಭಾವನೆಯನ್ನು ಹೊಂದಿರಬೇಕು ಎಂದು ಹೇಳುತ್ತಾ ಎನ್,ಎಸ್.ಎಸ್ನ ಧ್ಯೇಯ, ವ್ಯಾಪ್ತಿ ಹಾಗೂ ವಿದ್ಯಾರ್ಥಿ ಜೀವನದಲ್ಲಿ ಎನ್.ಎಸ್.ಎಸ್ನ […]
ಉಡುಪಿ: ಆಪದ್ಬಾಂಧವ ಈಶ್ವರ ಮಲ್ಪೆಯವರ ಮನೆಗೆ ಪೂರ್ಣಿಮಾ ಶೆಟ್ಟಿ ಭೇಟಿ
ಉಡುಪಿ (ಡಿ.29): ಜಿಲ್ಲೆಯ ಕಡಲ ತೀರದ ಆಪದ್ಬಾಂಧವ ಈಶ್ವರ ಮಲ್ಪೆಯವರ ಮನೆಗೆ ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿ ಉಡುಪಿ ಜಿಲ್ಲೆ ಇದರ ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ಪೂರ್ಣಿಮಾ ಶೆಟ್ಟಿ ಭೇಟಿ ನೀಡಿದರು.ಈಶ್ವರ ಮಲ್ಪೆಯವರ ಸಮಾಜಮುಖಿ ಕಾರ್ಯವನ್ನು ಗುರುತಿಸಿ ಪ್ರಶಂಸೆಯ ಜೊತೆಗೆ ಅವರ ಮಕ್ಕಳ ಯೋಗಕ್ಷೇಮ ವಿಚಾರಿಸಿದರು. ಮಲ್ಪೆ ಬೀಚಿಗೆ ತೆರಳುವ ಮುಖ್ಯರಸ್ತೆಯ ಎಡಭಾಗದಲ್ಲಿ, ಬೀಚಿನಿಂದ ಅನತಿ ದೂರದಲ್ಲಿ ಸಣ್ಣದೊಂದು ಮನೆಯಲ್ಲಿ 3 ವಿಕಲಚೇತನ ಮಕ್ಕಳು. 21 ವರ್ಷ ಹಾಗೂ 19 […]
ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯ – ಮಂಗಳೂರು ವಲಯದ ಫುಟ್ ಬಾಲ್ ಪಂದ್ಯಾಟಗಳ ಉದ್ಘಾಟನೆ
ಮೂಡುಬಿದ್ರಿ ( ಡಿ.27 ) : ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ ಆತಿಥ್ಯದಲ್ಲಿ ಡಿ. 27 ಮತ್ತು 28 ರಂದು ನಡೆಯಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮಂಗಳೂರು ವಲಯದ ತಾಂತ್ರಿಕ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳ ಫುಟ್ ಬಾಲ್ ಪಂದ್ಯಾಟಗಳ ಉದ್ಘಾಟನೆ ಇಂದು ನಡೆಯಿತು.ಪಂದ್ಯಾಟದ ಉದ್ಘಾಟನೆಯನ್ನು ಕರ್ನಾಟಕದ ಸಂತೋಷ್ ಟ್ರೋಫಿ ಆಟಗಾರರಾದ ಬಾವು ನಿಶಾದ್ ಮತ್ತು ರಿಯಾಜ್ ಪಿ ಟಿ ನೆರವೇರಿಸಿ, ಶುಭಹಾರೈಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಆರ್.ಜಿ. ಡಿಸೋಜ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಕ್ಯಾಂಪಸ್ […]
ಯಕ್ಷಗಾನ ಕಲಾವಿದ ಕೋಡಿ ವಿಶ್ವನಾಥ ಗಾಣಿಗರಿಗೆ 2022 ರ ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿ
ಕೋಟ (ಡಿ,23): ಯಕ್ಷಗಾನ ವಿದ್ವಾಂಸ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ, ರಂಗನಟ, ಸಾಹಿತಿ ಕಾರ್ಕಡ ಶ್ರೀನಿವಾಸ ಉಡುಪ ಸಂಸ್ಮರಣ 2022 ರ ಪ್ರಶಸ್ತಿಯನ್ನು ಯಕ್ಷಗಾನ ಹಿರಿಯ ಕಲಾವಿದ ಕೋಡಿ ವಿಶ್ವನಾಥ ಗಾಣಿಗರಿಗೆ ಪ್ರದಾನ ಮಾಡಲಾಗುವುದೆಂದು ಸ್ಥಾಪಕ ನಿರ್ದೇಶಕ ಎಚ್. ಶ್ರೀಧರ ಹಂದೆ, ಕಾರ್ಯಾಧ್ಯಕ್ಷ ಮಹೇಶ ಉಡುಪ, ಮಂದಾರ್ತಿ ಅಧ್ಯಕ್ಷ ಬಲರಾಮ ಕಲ್ಕೂರು, ಉಪಾಧ್ಯಕ್ಷ ಜನಾರ್ದನ ಹಂದೆಯವರನ್ನೊಳಗೊಂಡ ಸಮಿತಿ ನಿರ್ಧರಿಸಿದೆ. ಬಡಗು ತಿಟ್ಟಿನ ಕಮಲಶಿಲೆ ಮೇಳದಲ್ಲಿ ಗೆಜ್ಜೆ ಕಟ್ಟಿ, ಅಮೃತೇಶ್ವರಿ, ಸಾಲಿಗ್ರಾಮ, ಹಾಲಾಡಿ, ಸೌಕೂರು […]
ಕುತ್ಯಾರು ಸೂರ್ಯ ಚೈತನ್ಯ ಹೈಸ್ಕೂಲ್ : ಸೈಬರ್ ಸುರಕ್ಷತಾ ಅರಿವು ಕಾರ್ಯಕ್ರಮ
ಉಡುಪಿ (ಡಿ,26): ನಮ್ಮ ಖಾಸಗಿ ಮಾಹಿತಿಗಳು ಕ್ಲೌಡ್ ಸರ್ವರ್ ಗಳಲ್ಲಿ ಶೇಖರವಾಗುವುದರಿಂದ ಇವು ಸುರಕ್ಷಿತವಲ್ಲ. ಯಾವುದೇ ಮೊಬೈಲ್ ತಂತ್ರಾಂಶಗಳನ್ನು ಉಪಯೋಗಿಸುವಾಗ ಮಾಹಿತಿಗಳನ್ನು ಅಪರಿಚರೊಡನೆ ಹಂಚಿಕೊಳ್ಳಬಾರದು . ನಮಗೆ ಬರುವ ಇಮೇಲ್ ಮತ್ತು ಎಸ್ ಎಂ ಎಸ್ ಗಳ ಬಗೆಗೆ ಜಾಗರೂಕರಾಗಿರಬೇಕು . ಯಾವುದೇ ಬ್ಯಾಂಕ್ ನವರು ಕರೆ ಮಾಡಿ ಒಟಿಪಿ, ಪಾಸ್ವರ್ಡ್ ಅಥವಾ ಸಿವಿವಿ ಗಳನ್ನು ಕೇಳುವುದಿಲ್ಲ. ಬಳಕೆದಾರರು ವಿವೇಚನೆಯನ್ನು ಬಳಸಿ ವ್ಯವಹರಿಸಿದರೆ ಹಾನಿಯನ್ನು ತಪ್ಪಿಸಬಹುದು . ಫೇಸ್ ಬುಕ್ […]