ಕನಸುಗಳು ಮಾರಾಟವಾಗಿದೆ…! ಏಳು ಸುತ್ತಿನ ಕೋಟೆಯಲಿ ….ಕನಸುಗಳು ಇದೆ ನೂರಾರುಸಾಗುತಿದೆ ಕಾವಲುದಾರಿಯಲ್ಲಿ ಗುರಿ, ಗುರು ಮರೆತು ಬೇಕಾಗಿದ್ದಾರೆ… ಕನಸುಗಳಿಗೆ ಬಣ್ಣ ಹಚ್ಚುವವರು ಬೇಕು… ಆಸೆಗಳಿಗೆ ದಾರಿ ತೋರಿಸುವವರುಕನಸು ಮಾರಿ ಹೊರಟಿದೆ ಜೀವಗಳುಬಿಳಿ ಬಟ್ಟೆ ಹೊದ್ದು, ಬಣ್ಣದ ಬಟ್ಟೆ ಮರೆತು. ಸಾವುವೆಂಬ ಕಠಿಣ ಶಬ್ದ ಮೆಲ್ಲನೆ ಹೇಳಿ ಸೂಚನೆ ಕೊಡದೆ ಹೊರಟು ನಿಂತಿದ್ದಾರೆಯಾರಿಗೂ ಹೇಳದೇ…. ಏನನು ಕೇಳದೆ ಯಾರನು ಕಾಯದೆ… ಬಾರದ ಲೋಕದಡೆ …ಕನಸು ಹೊತ್ತವನ ಪ್ರಯಾಣ…! ಈಶ್ವರ ಸಿ ನಾವುಂದ
Category: ಸುದ್ದಿ ಸಮಾಚಾರ
ಸುದ್ದಿ ಸಮಾಚಾರ
ಸಂತ ಮೇರಿ ಮಹಾವಿದ್ಯಾಲಯ, ಶಿರ್ವ : ಅಂತರಾಷ್ಟ್ರೀಯ ಯೋಗ ದಿನಾಚರಣೆ
ಶಿರ್ವ (ಜೂ, 21): ಅಂತರಾಷ್ಟ್ರೀಯ ಯೋಗ ದಿನವನ್ನು ಜೂನ್ 21ರಂದು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ.ಪ್ರಸ್ತುತ ಸಾಲಿನಲ್ಲಿ ಕೋವಿಡ್ -19 ಕಾರಣದಿಂದಾಗಿ ಸಾರ್ವಜನಿಕ ಸಭೆ,ಸಮಾರಂಭ ಹಾಗೂ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ನಿಷೇಧಿಸುವುದರಿಂದ, ಮನೆಯಿಂದಲೇ ಯೋಗ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ,ಯೋಗ ದಿನವನ್ನು ಆಚರಿಸಲು ಸರ್ಕಾರದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಆಯುಷ್ ಇಲಾಖೆ ಹಾಗೂ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸಹಯೋಗದಲ್ಲಿ ಆಯುಷ್ ಮಂತ್ರಾಲಯವು ನೀಡಿರುವ ಮಾರ್ಗಸೂಚಿಯಂತೆ “Be With Yoga, Be At Home” ಘೋಷವಾಕ್ಯದೊಂದಿಗೆ […]
ನೀವೊಬ್ಬರೇ ಅಲ್ಲಾ ಲಾಕ್ಡೌನ್ ಓಪನ್ ಆಗೋದಕ್ಕೆ ಕಾಯ್ತಾ ಇರೋದು…. ಕರೋನಾ ವೈರಸ್ ಕೂಡ ಕಾಯ್ತಾ ಇದೆ……. ಜಾಗ್ರತರಾಗಿರಿ!
ರಾಜ್ಯದಲ್ಲಿ ಜೂನ್, 21 ರ ಸೋಮವಾರದಿಂದ ಅನ್ ಲಾಕ್ ಪ್ರಕ್ರಿಯೆ ಪ್ರಾರಂಭವಾಗಿದೆ. 16 ಜಿಲ್ಲೆಗಳಲ್ಲಿ ಕೆಲವೊಂದು ನಿರ್ಬಂಧಗಳನ್ನು ಒಳಗೊಂಡಂತೆ ಸಡಿಲಿಕೆ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಉಳಿದ 13 ಜಿಲ್ಲೆಗಳಲ್ಲಿ ಸೋಂಕು ಪೂರ್ಣಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ 2ರವರೆಗೆ ಮಾತ್ರ ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆ. ಆದರೆ ಭಾರತದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆ ಏಮ್ಸ್ ಮುಖ್ಯಸ್ಥ ಡಾ.ರಣದೀಪ್ ಗುಲೇರಿಯಾರವರು ಬೆಚ್ಚಿಬೀಳಿಸುವ ಸಂಗತಿಯೊಂದನ್ನು ಹೊರಹಾಕಿದ್ದಾರೆ. ಭಾರತದಲ್ಲಿ ಮೂರನೇ ಕೋವಿಡ್ ಅಲೆ […]
ಹೇಳದೆ ಹೋದ ಅಪ್ಪನಿಗಾಗಿ…
ಅಂದು ಶಿವರಾತ್ರಿಯ ಅಮಾವಾಸ್ಯೆ, ಸಂಜೆ ಹೊತ್ತು ನನ್ನ ಬಾಲ್ಯದ ಸ್ನೇಹಿತರ ಜೊತೆ ಆಟ ಮುಗಿಸಿ ಮನೆಗೆ ಹೋಗುವಾಗ, ಗೆಳೆಯ ಅಶೋಕ್ ಹೇಳಿದ “ಇವತ್ತು ಕೋಟೇಶ್ವರ ದೇವಸ್ಥಾನದಲ್ಲಿ ಯಕ್ಷಗಾನ ಇದೆ, ನನ್ನ ಬಳಿ ಹಣ ಇದೆ, ಈವಾಗಲೇ ಹೋಗಿ ಅಲ್ಲೇ ಏನಾದ್ರೂ ತಿಂದು ಯಕ್ಷಗಾನ ನೋಡಿಕೊಂಡು ಬರೋಣ” ಎಂದು ಹೇಳುತ್ತಿದ್ದಂತೆ ಹಿಂದೆ ಮುಂದೆ ನೋಡದೆ ಅವನೊಂದಿಗೆ ಯಕ್ಷಗಾನ ನೋಡಲು ಹೋಗಿದ್ದೆ. ಇತ್ತ ಊಟ ಸಿದ್ದಪಡಿಸಿಕೊಂಡು ಕಾದಿದ್ದ ಅಮ್ಮನಿಗೆ ಚಿಂತೆ ಹೆಚ್ಚಾಗಿ ಅಪ್ಪನಿಗೆ […]
ಪ್ರವಾಹದಿಂದಾಗಿ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ ಪರಿಹಾರ: ಸಚಿವ ಆರ್. ಅಶೋಕ್
ಬೆಂಗಳೂರು (ಜೂ, 20): ಕರ್ನಾಟಕ ರಾಜ್ಯ ಸರ್ಕಾರವು ಮಳೆಗಾಲ ಸಂದರ್ಭದಲ್ಲಿನ ಪ್ರವಾಹದಿಂದಾಗಿ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಇತ್ತೀಚೆಗೆ ಚಂಡಮಾರುತದಿಂದಾಗಿ ಕರಾವಳಿ ಭಾಗದಲ್ಲಿ 300 ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಹಾನಿಯಾಗಿದ್ದು, ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ ಪರಿಹಾರ, ಹಾಗೆಯೇ ಭಾಗಶಃ ಹಾನಿಯಾಗಿರುವ ಮನೆಗೆ 1ಲಕ್ಷ ರೂ. ಮತ್ತು ನೀರು ನುಗ್ಗಿ ಮನೆಗೆ ಹಾನಿಯಾಗಿದ್ದರೆ 10 […]
ಕುಂದಗನ್ನಡದಲ್ಲೊಂದು ಪ್ರೇಮಪತ್ರ
ನಾನು ನೀನು ಹೈಕಂಡದ್ ಆಣ್ಭಾಷಿ ತೀರ್ಮಾನ ಆಯ್ಕರೆ ಯಾವ್ ದೈದ್ ಮನಿಗ್ ಹೊಯ್ಕೋ ಗುತ್ತಿಲ್ಲ. ಆರೆ ಎಂತ ಮಾಡುದ್ ನೀ ಜಾಸ್ತಿ ಸಿಟ್ ಮಾಡುಕು ನನ್ನಾಣಿ ನೀ ನನ್ ಗೊಂಬಿ ತುಂಡ್ ಅಂತಿದ್ದಿದೆ. ನೀ ಸಿಟ್ಟಂಗೆ ದೂರ್ವಾಸ್ರ್ ಹತ್ರದ್ ಪೈಕಿ ನೀನ್. ಅಲ್ದಿರೆ ಹಬ್ಬದಗೆ ಬಳಿ ತ್ಯಾಗ್ಸಿ ಕೊಡ್ಲ ಅಂದೇಳಿ ತಿಂಗ್ಳನಾಗಟ್ಲೆ ಮಾತೇ ಆಡ್ಲಾ ನೀನ್. ನಿಂಗೆಂತ ಗೊತಿತ್ ನನ್ ಕಷ್ಟ ಮಾರಾಯ್ತಿ, ಹೆಣ್ಮಕ್ಕಳ್ ಅಂದ್ರೆ ನಾಚ್ಕಿ ಕೊಟ್ಟಿ ನಾನ್. […]
ಲಾಕ್ ಡೌನ್ ಸಂದರ್ಭದಲ್ಲಿ ವಿಕಲಚೇತನರ ಸಂಕಷ್ಟಕ್ಕೆ ಸ್ಪಂದಿಸಲು ಸಚಿವ ಶ್ರೀನಿವಾಸ ಪೂಜಾರಿಗೆ ಮನವಿ
ಕೋಟ (ಜೂ, 19): ಕರೋನಾ ಲಾಕ್ ಡೌನ್ ಸಂದರ್ಭದಲ್ಲಿ ವಿಕಲಚೇತನರು ಅನುಭವಿಸುತ್ತಿರುವ ಸಂಕಷ್ಟಕ್ಕೆ ಸ್ಪಂದಿಸಲು ಉಡುಪಿ ಜಿಲ್ಲೆಯ ಅಂಗವಿಕಲರ ಮತ್ತು ಪಾಲಕರ ಜಿಲ್ಲೆಯಾಧ್ಯಕ್ಷರಾದ ಶ್ರೀ ಮಂಜುನಾಥ ಹೆಬ್ಬಾರ್ ನೇತೃತ್ವದಲ್ಲಿ ಧಾರ್ಮಿಕ ದತ್ತಿ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀ ಕೋಟಾ ಶ್ರೀನಿವಾಸ ಪೂಜಾರಿ ಯವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾನ್ಯ ಸಚಿವರು ಮಾತನಾಡಿ ಅತ್ಯಂತ ತೀವ್ರತೆ ಮತ್ತು ಕಷ್ಟದಲ್ಲಿದ್ದ ವಿಕಲಚೇತನರಿಗೆ ಆಹಾರ ಸಾಮಗ್ರಿಗಳ ಕಿಟ್ […]
ಬದುಕು ಮತ್ತು ಕಲೆ ಎರಡನ್ನು ಸಮಾನವಾಗಿ ಪ್ರೀತಿಸುವ ಉಪ್ಪುಂದ ಮೇಲ್ಮನೆ ಜಗದೀಶ್ ದೇವಾಡಿಗ
ತನ್ನನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾ, ಮಿತ್ರ ಬಳಗವನ್ನು ಬೆಳೆಸುತ್ತಾ, ತಮ್ಮ ಬದುಕಿನ ಇತಿಮಿತಿಯ ಒಳಗೆ ಉತ್ತಮ ಕೆಲಸ ಮಾಡುವುದರೊಂದಿಗೆ ಹ್ರದಯ ವೈಶಾಲ್ಯತೆಯನ್ನು ತೋರುವ ಒಬ್ಬ ಯುವಕನ ಬಗ್ಗೆ ನಿಮಗೆ ಹೇಳಲೇ ಬೇಕು. ಅವರೇ ಸರಳ ಸ್ವಭಾವದ ಸೇವಾ ಜೀವಿ,ಯುವ ಸಾಹಿತಿ ಉಪ್ಪುಂದ ಮೇಲ್ಮನೆ ಜಗದೀಶ್ ದೇವಾಡಿಗ. ಗೆಳೆಯರು ಇವರನ್ನು ಪ್ರೀತಿಯಿಂದ” ಜಗ್ಗು” ಎಂದು ಕರೆಯುತ್ತಾರೆ. ಶ್ರೀಯುತರು 1985ರ ಮಾರ್ಚ್ ,7 ರಂದು ಭದ್ರ ದೇವಾಡಿಗ & ಚಂದು ದೇವಾಡಿಗರ ಎರಡನೆಯ […]
ಸಮಾಜ ಸೇವೆಯಿಂದ ಸಂತ್ರಪ್ತಿ ಪಡೆದ ಕೊಡುಗೈದಾನಿ ಶ್ರೀ ಗೋವಿಂದ ಬಾಬು ಪೂಜಾರಿಯವರ ಮನದಾಳದ ಮಾತು
ಪ್ರೀತಿಯ ಬಂಧು ಮಿತ್ರರೇ, ನಾನು ನಿಮ್ಮ ಗೋವಿಂದ ಬಾಬು ಪೂಜಾರಿ.ಕರೋನದಿಂದ ಇಡೀ ಜಗತ್ತೇ ತತ್ತರಿಸಿದೆ. ಕಳೆದ ಎರಡು ವರ್ಷಗಳಿಂದ ಕರೋನಾ ಲಾಕ್ಡೌನ್ ಸಂಕಷ್ಟಕ್ಕೆ ಸಿಲುಕಿರುವವರನ್ನು ಗುರುತಿಸಿ ಆಹಾರದ ಕಿಟ್ ಗಳನ್ನು ಅವರವರ ಗ್ರಾಮಕ್ಕೆ ಇಂತಿಷ್ಟು ಎಂದು ನನ್ನ ಕೈಲಾದಷ್ಟು ಸ್ವತಃ ನಾನೇ ಗ್ರಾಮಗಳಿಗೆ ಭೇಟಿ ನೀಡಿ ಕಿಟ್ ಹಸ್ತಾಂತರಿಸಿದ್ದೇನೆ. ಯಾವುದೇ ಜಾತಿ, ಮತ, ಧರ್ಮ, ರಾಜಕೀಯ ಭೇದಭಾವ ಇಲ್ಲದೆ ಎಲ್ಲಾ ವರ್ಗದವರನ್ನು ಸಮಾನರಂತೆ ಪರಿಗಣಿಸಿ ಬೈಂದೂರು ಭಾಗದ ಮೂಲೆ -ಮೂಲೆಗೆ […]










