ಅಮೆರಿಕದ ಮಾರ್ಕ್ ಜುಕರ್ಬರ್ಗ್ 2004 ರಲ್ಲಿ ಹುಟ್ಟುಹಾಕಿದ ಫೇಸ್ಬುಕ್ ಎನ್ನುವ ಸಾಮಾಜಿಕ ಜಾಲತಾಣ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಜಾಗತಿಕವಾಗಿ ಹರಡಿಕೊಂಡಿರುವ ಈ ಫೇಸ್ಬುಕ್ ಇಂದು ಕೋಟ್ಯಂತರ ಬಳಕೆದಾರರನ್ನು ಹೊಂದಿದೆ. ಫೇಸ್ಬುಕ್ ಬಳಕೆದಾರರು ಬೇರೆಬೇರೆ ಉದ್ದೇಶವನ್ನಿಟ್ಟುಕೊಂಡು ಫೇಸ್ಬುಕ್ ಖಾತೆಗಳನ್ನು , ಫೇಸ್ಬುಕ್ ಪೇಜ್ ಹಾಗೂ ಗ್ರೂಪ್ ಗಳನ್ನು ತೆರೆಯುತ್ತಾರೆ. ಆಮೂಲಕ ಇತರರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಾರೆ. ನಮ್ಮ ದೇಶದಲ್ಲೂ ಕೋಟ್ಯಾಂತರ ಫೇಸ್ ಬುಕ್ ಬಳಕೆದಾರರಿದ್ದಾರೆ. ಅದೆಷ್ಟೋ ಫೇಸ್ಬುಕ್ ಖಾತೆಗಳು, ಗ್ರೂಪ್ ಹಾಗೂ […]
Category: ಪ್ರಚಲಿತ
ಸುದ್ದಿ ಸಮಾಚಾರ — > ಪ್ರಚಲಿತ
ಕುಂದವಾಹಿನಿಗೆ ಶುಭ ಹಾರೈಸಿದ ಇಶಾ ಫೌಂಡೇಶನ್ ಸ್ವಯಂ ಸೇವಕ ಪ್ರಖ್ಯಾತ್
ಕಿರು ಅವಧಿಯಲ್ಲಿಯೇ ಕುಂದಾಪುರದಲ್ಲಿ ಜನಮನ್ನಣೆ ಪಡೆದಿರುವ ಕುಂದಾಪುರದ ನೂತನ ಅಂತರ್ಜಾಲ ಸುದ್ದಿತಾಣ ಕುಂದವಾಹಿನಿ ಗೆ ಜಗದ್ವಿಖ್ಯಾತ ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ ರವರ ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಇಶಾ ಫೌಂಡೇಶನ್ ನ ಸ್ವಯಂಸೇವಕ ಪ್ರಖ್ಯಾತ್ ಇಶಾ ಫೌಂಡೇಶನ್ ನ ಕ್ಯಾಂಪಸ್ ನಿಂದಲೇ ಶುಭ ಹಾರೈಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಸಪ್ತಪದಿ ಯೋಜನೆ : ಸಾಮೂಹಿಕ ವಿವಾಹ ಕಾರ್ಯಕ್ರಮ – ಒಂದಿಷ್ಟು ಮಾಹಿತಿ
ಮದುವೆ ಸಂದರ್ಭದಲ್ಲಿ ಉಳ್ಳವರು ಮಾಡುವ ಖರ್ಚು, ದುಂದುವೆಚ್ಚ, ಆಡಂಬರ ಒಂದುಕಡೆಯಾದರೆ, ಮದುವೆಯಾಗಲು ಆರ್ಥಿಕ ಸಂಕಷ್ಟ ಸವಾಲುಗಳನ್ನು ಎದುರಿಸುತ್ತಿರುವವರು ಇನ್ನೊಂದು ಕಡೆ. ಬಡ ಕುಟುಂಬಗಳಲ್ಲಿ ಮದುವೆ ಕಾರ್ಯ ಇಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಕರೋನೊತ್ತರ ದಿನಗಳಲ್ಲಂತೂ ಬಡಕುಟುಂಬಗಳಿಗೆ ವಿವಾಹ ಕಾರ್ಯ ನಡೆಸಲು ತುಂಬಾ ಕಷ್ಟ.
ಸೈಬರ್ ಸೆಕ್ಯೂರಿಟಿ : ಒಂದಿಷ್ಟು ಮಾಹಿತಿ – ಜಾಗೃತಿ
ಕಂಪ್ಯೂಟರ್, ಮೊಬೈಲ್ ಮತ್ತು ಇಂಟರ್ನೆಟ್ ಗಳ ವಿವಿಧ ಮೂಲಗಳನ್ನು ದುರ್ಬಳಕೆ ಮಾಡಿಕೊಂಡು ಕೆಲವು ದುಷ್ಕರ್ಮಿಗಳು ಸಾರ್ವಜನಿಕರನ್ನು ಮೋಸಗೊಳಿಸುವುದು, ವೈಯಕ್ತಿಕ ಬ್ಯಾಂಕ್ ಖಾತೆಗೆ ಕನ್ನ ಹಾಕುವಂಥದ್ದು, ಸುಳ್ಳು ಮಾಹಿತಿ ಮೂಲಕ ದಾರಿ ತಪ್ಪಿಸುವಂತದ್ದು, ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ.
ಮಿಲಾಗ್ರಿಸ್ ಪದವಿಪೂರ್ವ ಕಾಲೇಜು ಕಲ್ಯಾಣಪುರ : ವಾರ್ಷಿಕ ಕ್ರೀಡಾಕೂಟ
ಉಡುಪಿ (ಮಾ.14) ಮಿಲಾಗ್ರಿಸ್ ಪದವಿಪೂರ್ವ ಕಾಲೇಜು ಕಲ್ಯಾಣಪುರ ಇದರ 2020-21 ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ಮಾರ್ಚ್ 10ರಂದು ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಿತು. ಈ ಕ್ರೀಡಾಕೂಟದ ಅಧ್ಯಕ್ಷತೆಯನ್ನು ಮಿಲಾಗ್ರಿಸ್ ಸಂಸ್ಥೆಗಳ ಸಂಚಾಲಕರಾದ ಅತೀ ವಂದನೀಯ ಫಾ.ವೆಲೆರಿಯನ್ ಮೆಂಡೋನ್ಸಾ ರವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಬಿ.ಎಸ್.ಎನ್.ಎಲ್ ಉಡುಪಿ ವಲಯದ ನಿರ್ವಹಣಕಾರರಾದ ಎನ್ .ಸಂದೀಪ್ ರವರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಸವಿತಾ ಹೆಬ್ಬಾರ್, ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿನ್ಸೆಂಟ್ […]
ಗಂಗೊಳ್ಳಿ ಮೀನುಗಾರಿಕಾ ಬಂದರು ಸಮಗ್ರ ಅಭಿವೃದ್ಧಿ – ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ
ಜಿಲ್ಲೆಯ ಪ್ರಮುಖ ಮೀನುಗಾರಿಕಾ ಬಂದರುಗಳಲ್ಲಿ ಒಂದಾಗಿರುವ ಗಂಗೊಳ್ಳಿ ಮೀನುಗಾರಿಕಾ ಬಂದರಿನ ಮೀನುಗಾರಿಕೆ ಜೆಟ್ಟಿಯ ಸುಮಾರು 12 ಕೋಟಿ ರೂ. ವೆಚ್ಚದ ಪುನರ್ ನಿರ್ಮಾಣ ಕಾಮಗಾರಿ ಮತ್ತು ಒಂದು ಕೋಟಿ ರೂ. ವೆಚ್ಚದ ಮೀನುಗಾರಿಕಾ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು.
ಕನ್ನಡ ನೆಲದಲ್ಲಿ ಛತ್ರಪತಿ ಶಿವಾಜಿ
ಬಸ್ರೂರು ಹಿಂದೆ ಗತವೈಭವ ಮೆರೆದ ಸ್ಥಳ. ಇಲ್ಲಿಯ ಒಂದೊಂದು ಕಲ್ಲು ಒಂದೊಂದು ಇತಿಹಾಸದ ಚಿತ್ರಣವನ್ನೂ ತಿಳಿಸುತ್ತದೆ. ಆಳುಪ, ವಿಜಯನಗರ, ಕೆಳದಿಯಂತಹ ಆಳ್ವಿಕೆ ನಡೆಸಿದ ಪ್ರದೇಶ ಬಸ್ರೂರು. ಬಾರಕೂರು ತನ್ನ ರಾಜಧಾನಿಯನ್ನಾಗಿ ಮಾಡಿ ಬಸ್ರೂರು ವ್ಯಾಪಾರದ ಕೇಂದ್ರವನ್ನಾಗಿ ಆಳುಪರು ಆಳ್ವಿಕೆ ನಡೆಸುತ್ತಿದ್ದರು. ಬಾರಕೂರು ಹಾಗೂ ಬಸ್ರೂರು ಅವಳಿ ಪ್ರದೇಶವೆಂದು ಕರೆಯುತ್ತಿದ್ದರು. ಗುರು ವಿದ್ಯಾರಣ್ಯರ ಮಾರ್ಗದರ್ಶನದಲ್ಲಿ ಸುಭದ್ರವಾಗಿ ಆಳ್ವಿಕೆ ನಡೆಸಿದ ರಾಜ ಮನೆತನ, ವಿಜಯನಗರ ಆಳ್ವಿಕೆ ನಡೆಸಿದ ಪ್ರಸಿದ್ಧ ಪ್ರದೇಶ ಕೂಡಾ ಬಸ್ರೂರು. […]
ಅಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣ ನಿಧಿಗೆ ಶಾಸಕ ಬಿ. ಎಮ್. ಸುಕುಮಾರ ಶೆಟ್ಟಿ 1 ಲಕ್ಷ ರೂ ದೇಣಿಗೆ
ಆಯೋದ್ಯೆ ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣ ಅಭಿಯಾನಕ್ಕೆ ಬೈಂದೂರು ಶಾಸಕರಾದ ಬಿ.ಎಮ್. ಸುಕುಮಾರ ಶೆಟ್ಟಿಯವರು ಒಂದು ಲಕ್ಷ ದೇಣಿಗೆ ನೀಡಿದರು. ದೇಶದಾದ್ಯಂತ ನಡೆಯುತ್ತಿರುವ ಈ ಅಭಿಯಾನಕ್ಕೆ ಶಾಸಕರು ಶುಭಹಾರೈಸಿದರು.
ಯಕ್ಷಗಾನ ಕಲೆಯನ್ನು ಗೌರವಿಸಿ ಬೆಳೆಸಬೇಕು: ಡಾ. ಜಿ. ಶಂಕರ್
ಯಕ್ಷಗಾನ ಕರಾವಳಿ ಭಾಗದ ಸಾಂಸ್ಕೃತಿಕ ಶ್ರೀಮಂತಿಕೆ ಪ್ರತೀಕವಾಗಿದ್ದು, ಯಕ್ಷಗಾನ ಕಲೆ ಹಾಗೂ ಕಲಾವಿದರುಗಳನ್ನು ಗುರುತಿಸಿ ಗೌರವಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್(ರಿ) ಅಂಬಲಪಾಡಿ ಉಡುಪಿ ಇದರ ಪ್ರವರ್ತಕರಾದ ನಾಡೋಜ ಡಾ. ಜಿ. ಶಂಕರ್ ಹೇಳಿದರು.
ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ದೇಶಭಕ್ತಿ ಬೆಳೆಸುವಲ್ಲಿ ಎನ್.ಸಿ.ಸಿ. ಯ ಪಾತ್ರ ಮಹತ್ವದ್ದಾಗಿದೆ – ಶ್ರೀ ಬಿ.ಎಂ. ಸುಕುಮಾರ್ ಶೆಟ್ಟಿ
ಯುವಜನತೆಯಲ್ಲಿ ಶಿಸ್ತು ಮತ್ತು ರಾಷ್ಟ್ರಭಕ್ತಿಯನ್ನು ಹೆಚ್ಚಿಸುವಲ್ಲಿ ಎನ್.ಸಿ.ಸಿ. ಯ ಪಾತ್ರ ಬಹುಮುಖ್ಯವಾದದ್ದು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಎನ್.ಸಿ.ಸಿ. ಗೆ ಸೇರ್ಪಡೆಗೊಂಡು ದೇಶದ ಸೈನ್ಯದಲ್ಲಿ ಗುರುತಿಸಿಕೊಳ್ಳಬೇಕು ಹಾಗೂ ದೇಶಸೇವೆಗೆ ಸದಾ ಸಿದ್ದರಾಗಬೇಕು ಎಂದು ಬೈಂದೂರಿನ ಶಾಸಕರು ಹಾಗೂ ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ಅಧ್ಯಕ್ಷರಾಗಿರುವ ಶ್ರೀ ಬಿ.ಎಂ. ಸುಕುಮಾರ್ ಶೆಟ್ಟಿ ಹೇಳಿದರು.