ಕುಂದಾಪುರ (ಜುಲೈ 05): ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ವತಿಯಿಂದ ಜುಲೈ 5 ರಂದು ತಲ್ಲೂರು ಸಮೀಪದ ನಮ್ಮ ಭೂಮಿ ಸಂಸ್ಥೆಗೆ ವಿಸ್ತರಣಾ ಚಟುವಟಿಕೆ ಹಿನ್ನೆಲೆಯಲ್ಲಿ ಭೇಟಿ ನೀಡಲಾಯಿತು. ನಮ್ಮ ಭೂಮಿ ಸಂಸ್ಥೆಯ ಸಹಾಯಕ ನಿರ್ದೇಶಕರಾದ ಶ್ರೀ ಶಿವಾನಂದ ಶೆಟ್ಟಿ ಯವರು ಸಂಸ್ಥೆಯ ಹಿನ್ನಲೆ ಮತ್ತು ಸಂಸ್ಥೆಯ ಉದ್ದೇಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾಲೇಜಿನ ದ್ವಿತೀಯ ಬಿಬಿಎ ವಿದ್ಯಾರ್ಥಿಗಳು ನಮ್ಮ ಭೂಮಿ ಸಂಸ್ಥೆಯ […]
Category: ಸಂಘ -ಸಂಸ್ಥೆಗಳು
ಸಂಘ -ಸಂಸ್ಥೆಗಳು
ಸಿಎ ಫೈನಲ್ ಪರೀಕ್ಷೆಯಲ್ಲಿ ಸಚಿನ್ ಮೊಗವೀರ ಕಾವ್ರಾಡಿ ತೇರ್ಗಡೆ
ಕುಂದಾಪುರ (ಜು,2): ಇನ್ಸ್ಟಿಟ್ಯೂಟ್ ಆಫ್ ಚಾರ್ಟಡ್ ಅಕೌಂಟೆಂಟ್ಸ್ ಆಫ್ ಇಂಡಿಯ ಇವರು ಮೇ 2023ರಲ್ಲಿ ನೆಡೆಸಿದ ಸಿಎ ಫೈನಲ್ ಪರೀಕ್ಷೆಯಲ್ಲಿ ಸಚಿನ್ ಮೊಗವೀರ ಕಾವ್ರಾಡಿ ಸಿಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವುದರ ಮೂಲಕ ಲೆಕ್ಕ ಪರಿಶೋಧಕರಾಗಿ ಹೊರಹೊಮ್ಮಿದ್ದಾರೆ. ಇವರು ಕಾವ್ರಾಡಿಯ ಮುಂಬಾರುಗುಡ್ಡಿ ನಿವಾಸಿ ಸವಿತಾ ಸಂತೋಷ ಮೊಗವೀರ ರವರ ಪುತ್ರ.
ಬಿಲ್ಲವರ ಹಿತರಕ್ಷಣಾ ವೇದಿಕೆ ಗಂಗೊಳ್ಳಿ: ಜು.9 ರಂದು ಎರಡನೇ ಮಹಾಸಭೆ
ಗಂಗೊಳ್ಳಿ(ಜು,5) : ಬಿಲ್ಲವರ ಹಿತರಕ್ಷಣಾ ವೇದಿಕೆ ಗಂಗೊಳ್ಳಿಯ ಎರಡನೇ ವಾರ್ಷಿಕ ಮಹಾಸಭೆ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವು ಜುಲೈ 9 ರ ಭಾನುವಾರದಂದು ಗಂಗೊಳ್ಳಿಯ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಸಭಾಂಗಣದಲ್ಲಿ ನಡೆಯಲಿದೆ. ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಪ್ರವರ್ತಕರಾದ ಡಾ. ಗೋವಿಂದ ಬಾಬು ಪೂಜಾರಿಯವರು ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಮಾಜಿ ಶಾಸಕರಾದ ಕೋಟ ಶ್ರೀನಿವಾಸ್ ಪೂಜಾರಿ, ಉಡುಪಿ ಜಿಲ್ಲಾ ಪಂಚಾಯತ್ ನ ಮಾಜಿ ಸದಸ್ಯೆ […]
ಸೇವಾ ಚೇತನ ಟ್ರಸ್ಟ್(ರಿ) ,ಮೂಡುಬಗೆ: ಸ್ವಚ್ಚತೆಯೇ ಸರ್ವೋಚ್ಛತೆ ಕಾರ್ಯಕ್ರಮ
ಕುಂದಾಪುರ(ಜು,03): ಸ್ವಚ್ಚತೆಯೆ ಸರ್ವೋಚ್ಛತೆ ಕಾರ್ಯಕ್ರಮದಡಿಯಲ್ಲಿ ಸೇವಾ ಚೇತನ ಟ್ರಸ್ಟ್ ಮೂಡುಬಗೆ ವತಿಯಿಂದ ಸ್ವಚ್ಚತಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಮೂಡುಬಗೆಯ ಸಣ್ಣ ಊರಿನಲ್ಲಿ ದೊಡ್ಡ ಉದ್ಧೇಶ ಇರಿಸಿಕೊಂಡು ಆರಂಭವಾದ ಸಮಾನ ಮನಸ್ಕರ ತಂಡವೊಂದು ಜನಸ್ನೇಹಿ ಹಾಗೂ ಜನಪರ ಕೆಲಸಗಳನ್ನು ಮಾಡುವ ಮೂಲಕ ಜನಮಾನಸದಲ್ಲಿ ಸ್ಥಾನ ಪಡೆದುಕೊಂಡಿದೆ. ನಮ್ಮೂರ ಸಂಭ್ರಮ ಎಂಬ ಸಾಮಾಜಿಕ- ಧಾರ್ಮಿಕ- ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಊರಿನ ಹೆಸರನ್ನು ರಾಜ್ಯಾದ್ಯಂತ ಪಸರಿಸಿದ ಹೆಮ್ಮ ಸೇವಾ ಚೇತನ ಟ್ರಸ್ಟ್. ಎರಡು ವರ್ಷಗಳಿಂದ ನಿರಂತರ […]
ಯುವ ಬಂಟರ ಸಂಘ ದಶಮ ಸಂಭ್ರಮದ ಸಿಹಿ ನೆನಪಿಗೆ ಹಸಿರು ಹೊನ್ನು
ಕುಂದಾಪುರ(ಜು,3): ಹವಾಮಾನ ವೈಪರೀತ್ಯದಿಂದ ಭವಿಷ್ಯದ ದಿನಗಳು ಆತಂಕದಿಂದ ಕೂಡಿದ್ದು ಯುವ ಜನಾಂಗ ಈ ನಿಟ್ಟಿನಲ್ಲಿ ಕ್ರಿಯಾಶೀಲವಾಗಬೇಕು. ಗಿಡ ಹಸ್ತಾಂತರ ಸಮಾರಂಭವನ್ನು ಕೇವಲವಾಗಿ ಪರಿಗಣಿಸದೆ ಅದು ಜವಾಬ್ದಾರಿಯ ಹಸ್ತಾಂತರ ಎಂದು ಭಾವಿಸಿ, ಮುಂದಿನ ಪೀಳಿಗೆಗೆ ಹಸಿರು ಹೊನ್ನಿನ ಹೂಡಿಕೆಯಾಗಿಸಬೇಕು ಎಂದು ಮೈಸೂರು ಮರ್ಕಂಟೈಲ್ಸ್ ಕಂಪೆನಿ ಲಿಮಿಟೆಡ್ ಬೆಂಗಳೂರಿನ ಆಡಳಿತ ನಿರ್ದೇಶಕ ಶ್ರೀ ಎಚ್.ಎಸ್. ಶೆಟ್ಟಿ ಹೇಳಿದರು. ಅವರು ಜೂನ್ 28ರ ಬುಧವಾರ ಕುಂದಾಪುರದ ಆರ್ ಎನ್ ಶೆಟ್ಟಿ ಸಭಾಭವನದಲ್ಲಿ ಕುಂದಾಪುರ ತಾಲೂಕು […]
ರೋಟರಿ ಕ್ಲಬ್ ಕೋಟೇಶ್ವರ: ಅಧ್ಯಕ್ಷರಾಗಿ ಜಗದೀಶ್ ಮೊಗವೀರ ಮಾರ್ಕೋಡು ಆಯ್ಕೆ
ಕೋಟೇಶ್ವರ(ಜು,02):ರೋಟರಿ ಕ್ಲಬ್ ಕೋಟೇಶ್ವರ ಇದರ 2023-24 ನೇ ಸಾಲಿನ ನೂತನ ಅಧ್ಯಕ್ಷರಾಗಿ ಉದ್ಯಮಿ ಶ್ರೀ ಜಗದೀಶ್ ಮೊಗವೀರ ಆಯ್ಕೆಯಾಗಿದ್ದಾರೆ. ಹಾಗೂ ಕಾರ್ಯದರ್ಶಿಯಾಗಿ ರಾಜು ಮೊಗವೀರ ರವರು ಆಯ್ಕೆಯಾಗಿದ್ದಾರೆ.
ಯುವ ಬಂಟರ ಸಂಘದ ವತಿಯಿಂದ ಮಕ್ಕಳ ತಜ್ಞ ಡಾ. ಬಿ. ಆರ್. ಶೆಟ್ಟಿಗೆ ಸನ್ಮಾನ
ಕುಂದಾಪುರ(ಜು 01): ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಜುಲೈ 01ರ ರಾಷ್ಟ್ರೀಯ ವೈದ್ಯರ ದಿನಾಚರಣೆ ಪ್ರಯುಕ್ತ ಕುಂದಾಪುರದಲ್ಲಿ ಪ್ರಸಿದ್ಧ ಮಕ್ಕಳ ರೋಗ ತಜ್ಞರಾಗಿ ನಾಲ್ಕು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಸಮಾಜದಲ್ಲಿ ವಿಶೇಷ ಜನಮನ್ನಣೆ ಪಡೆದ ಹಿರಿಯ ಮಕ್ಕಳ ರೋಗ ತಜ್ಞರಾದ ಶ್ರೀ ಡಾ. ಬಿ. ರಾಜೇಂದ್ರ ಶೆಟ್ಟಿ ಯವರನ್ನು ಅವರ ಕುಂದಾಪುರದ ಚಿಕಿತ್ಸಾಲಯದಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷರಾದ ಡಾ.ಅಂಪಾರು ನಿತ್ಯಾನಂದ ಶೆಟ್ಟಿ ಸನ್ಮಾನಿಸಿ […]
ಭಾಸ್ಕರ ಕಾಮತ್ ಮತ್ತು ಆನಂದ ಮರಕಾಲ ರವರಿಗೆ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪುರಸ್ಕಾರ
ಬ್ರಹ್ಮಾವರ (ಜು,02): ಜೆಸಿಐ ಬ್ರಹ್ಮಾವರ ಸೇವಾಮೆ ಬ್ರಹ್ಮಾವರ ಸಂಸ್ಥೆಯ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪುರಸ್ಕಾರವನ್ನು ಆವರ್ಸೆ ಅಂಚೆ ಇಲಾಖೆಯ ಉಪ ಅಂಚೆ ಪಾಲಕರಾಗಿರುವ ಶ್ರೀ ಭಾಸ್ಕರ್ ಕಾಮತ್ ಮತ್ತು ಮಂದಾರ್ತಿ ಜಿಡಿಎಸ್ ಆಗಿರುವ ಶ್ರೀ ಆನಂದ ಮರಕಾಲ ಇವರಿಗೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಆವರ್ಸೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿರುವ ಶ್ರೀ ಸೀತಾರಾಮ ರವರು ಮಾತನಾಡಿ ಗ್ರಾಮೀಣ ಭಾಗದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಸನ್ಮಾನಿಸುತ್ತಿರುವ ಜೆಸಿಐ ಕಾರ್ಯ ಶ್ಲಾಘನೀಯ […]
ಮಾಟುಂಗಾ ಕರ್ನಾಟಕ ಸಂಘದ ನೂತನ ಅಧ್ಯಕ್ಷರಾಗಿ ಡಾ. ಭರತ್ ಕುಮಾರ್ ಪೊಲಿಪು ಆಯ್ಕೆ
ಕುಂದಾಪುರ (ಜೂ,30): ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುಂಬಯಿಯ ಪ್ರತಿಷ್ಠಿತ ಸಂಸ್ಥೆ ಮಾಟುಂಗಾ ಕರ್ನಾಟಕ ಸಂಘದ ನೂತನ ಅಧ್ಯಕ್ಷರಾಗಿ ಡಾ. ಭರತ್ ಕುಮಾರ್ ಪೊಲಿಪು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಮುಂಬಯಿಯ ಕನ್ನಡಪರ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದು ಮುಂಬಯಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ರಾಯಭಾರಿಯಾಗಿ ಡಾ.ಭರತ್ ಕುಮಾರ್ ಪೊಲಿಪುರವರು ಗುರುತಿಸಿಕೊಂಡಿದ್ದಾರೆ. ವರದಿ :-ಈಶ್ವರ್ ಸಿ ನಾವುಂದ
ಜೆ ಸಿ ಐ ಸೆವಾಮೆ ಬ್ರಹ್ಮಾವರ: ವಿವಿಧ ಸಂಘ -ಸಂಸ್ಥೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರ
ಬ್ರಹ್ಮಾವರ(ಜೂ,23): ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಬಿದ್ಕಲ್ಕಟ್ಟೆಇಲ್ಲಿ ಜೆ ಸಿ ಐ ಸೆವಾಮೆ ಬ್ರಹ್ಮಾವರ ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ, ಆರೋಗ್ಯ ಮತ್ತು ಕ್ಷೇಮ ಕೇಂದ್ರ ಬಿದ್ಕಲ್ ಕಟ್ಟೆ ,ಸ್ಮಾರ್ಟ್ ಕ್ರಿಯೇಶನ್ಸ್ ಎಜ್ಯುಕೇಶನ್ ಟ್ರಸ್ಟ್ (ರಿ) ಹೈಕಾಡಿ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಮೊಳಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಇಂದಿರಾ ಉದಯ ಕುಮಾರ ಶೆಟ್ಟಿ ಉದ್ಘಾಟಿಸಿದರು. ಐಟಿಐ ನ ಪ್ರಾಚಾರ್ಯರಾದ ಗಂಗಾಧರಪ್ಪನವರು ಮುಖ್ಯ […]










