ಉಡುಪಿ( ಡಿ.30): ಉಡುಪಿಯ ತೋನ್ಸೆ ಗ್ರಾಮ ಪಂಚಾಯತ್ ಪಡುಕುದ್ರು ವಾರ್ಡಿನ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಹೇಶ್ ಪೂಜಾರಿ ಅವರು 108 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ನಿತ್ಯಾನಂದ ಕೆಮ್ಮಣ್ಣರವರ ನಿಧನದಿಂದ ತೆರವಾದ ಸ್ಥಾನಕ್ಕೆ ಡಿ.27 ರಂದು ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಮಹೇಶ್ ಪೂಜಾರಿ ಯವರು ಬಿಜೆಪಿ ಬೆಂಬಲಿತ ಅಭ್ಯರ್ಥಿ ವೆಂಕಟೇಶ್ ಕುಂದರ್ ಎದುರು 108 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.
Year: 2021
ಸುಣ್ಣಾರಿ ಶಾಲೆ “ಇ-ಕಲಿಕಾ” ತರಗತಿ ಉದ್ಘಾಟನೆ
ಕುಂದಾಪುರ (ಡಿ.31):ವಿವೇಕೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹೊಂಬಾಡಿ ಮಂಡಾಡಿ (ಸುಣ್ಣಾರಿ) ಹೊಸ ಕಲಿಕಾ ಪದ್ಧತಿಯ ಅನ್ವಯ ಆಧುನಿಕ ಶೈಲಿ “ಇ-ಕಲಿಕಾ” (E-Learning) ತರಗತಿಯನ್ನು ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಡಾ. ಶ್ರೀ ರಮಾನಂದ ಶೆಟ್ಟಿ ಸುಣ್ಣಾರಿ ಉದ್ಘಾಟಿಸಿದರು. ಶಾಲಾ ಸಂಚಾಲಕರಾದ ಸುಣ್ಣಾರಿ ಶ್ರೀ ಕಿಶೋರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಎಂ. ರತ್ನಾಕರ ಶೆಟ್ಟಿ, ಶ್ರೀ ವಿ. ಚಂದ್ರಶೇಖರ […]
ಎಂಸಿಎ ಸ್ನಾತಕೋತ್ತರ ವಿಭಾಗ ಆರಂಭ – ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು, ಪುತ್ತೂರು
ಪುತ್ತೂರು ( ಡಿ.30 ) : ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟ ಎರಡು ವರ್ಷಗಳ ಎಂಸಿಎ ಸ್ನಾತಕೋತ್ತರ ವಿಭಾಗವನ್ನು ಪ್ರಾರಂಭಿಸಲಾಗಿದೆ. ಪದವಿಯನ್ನು ಪೂರೈಸಿದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಎಂಸಿಎ ವಿಭಾಗವನ್ನು ಪ್ರಾರಂಭಿಸಲಾಗಿದೆ. ಬಿಸಿಎ, ಬಿಎಸ್ಸಿ ಪದವಿಯನ್ನು ಪಡೆದವರು ಈ ಕೋರ್ಸಿಗೆ ಸೇರಲು ಅರ್ಹರಾಗಿರುತ್ತಾರೆ. ಸಂಪೂರ್ಣ ಹವಾನಿಯಂತ್ರಿತ ತರಗತಿ ಕೊಠಡಿಗಳು, ಸುಸಜ್ಜಿತ ಪ್ರಯೋಗಾಲಯಗಳು ಈಗಾಗಲೇ ಸಜ್ಜುಗೊಂಡಿವೆ. […]
ಮೂಡ್ಲಕಟ್ಟೆ ಎಂ ಐ ಟಿ: IEEE ವಿದ್ಯಾರ್ಥಿ ಶಾಖೆ ಉದ್ಘಾಟನೆ
ಮೂಡ್ಲಕಟ್ಟೆ(ಡಿ.30): ವಿದ್ಯಾರ್ಥಿಗಳ ಪರಿಪೂರ್ಣ ಅಭಿವೃದ್ಧಿಯ ದೃಷ್ಟಿಕೋನದಿಂದ ಅನೇಕ ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುನ್ನಡೆಯುತ್ತಿರುವ ಕುಂದಾಪುರದ ಪ್ರತಿಷ್ಠಿತ ಸಂಸ್ಥೆಯಾದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಧ್ಯಾರ್ಥಿಗಳಿಗೆ ತಾಂತ್ರಿಕ ಕ್ಷೇತ್ರದಲ್ಲಿ ನಾವೀನ್ಯತೆ ಯನ್ನು ಹೆಚ್ಚಿಸುವ ಉದ್ದೇಶದಿಂದ ಐಇಇಇ ವಿದ್ಯಾರ್ಥಿ ಶಾಖೆ ಆರಂಭಿಸಿದ್ದು ಅದರ ಉದ್ಘಾಟನಾಕಾರ್ಯಕ್ರಮ ಡಿ.30 ರಂದು ನಡೆಯಿತು. ಮುಖ್ಯ ಅತಿಥಿಯಾಗಿ ಐಇಇಇ ಮಂಗಳೂರು ಉಪ ವಿಭಾಗದ ಅಧ್ಯಕ್ಷರಾದ ಡಾ| ಪುಷ್ಪರಾಜ್ ಶೆಟ್ಟಿ ಯ ವರು ಭಾಗವಹಿಸಿ ಐಇಇಇ ವಿದ್ಯಾರ್ಥಿ ಶಾಖೆಯ ಪ್ರಾಮುಖ್ಯತೆಯನ್ನು ವಿವರಿಸಿದರು. […]
ಥ್ಯಾಂಕ್ಯೂ ಹೇಳೋಣವೇ – 2021ಕ್ಕೆ ..
ಮತ್ತದೇ ಡಿಸೆಂಬರ್ ಅಂತ್ಯ….ಹೌದು 2021ರ ಕೊನೆಯ ದಿನಕ್ಕೆ ಬಂದು ನಿಂತಿದ್ದೇವೆ. ಹೊಸವರ್ಷ ಆಚರಣೆ ಈ ಬಾರಿ ಇಲ್ಲ.ಆದರೆ ನಮ್ಮ ದಿನನಿತ್ಯದ ದಿನಗಳ ಗಣನೆ, ದಿನಚರಿಯ ನಡುವೆ ಹೊಸ ವರ್ಷದ ಕ್ಯಾಲೆಂಡರ್ ಸಾಂಕೇತಿಕ ಆಚರಣೆ ಸಮಯ …. ಹೊಸ ವರ್ಷಕ್ಕೆ ಹೊಸ ಅಭಿಯಾನ ಒಂದನ್ನು ಆರಂಭಿಸಿದ್ದರೂ.. 2021ರ ಒಂದು ಪಕ್ಷಿ ನೋಟದೊಡನೆ ಸುಖ- ದುಃಖ ಎನ್ನದೇ ಎಲ್ಲದ್ದಕ್ಕೂ ಕೃತಜ್ಞತೆ ತೋರುವ ಸಲುವಾಗಿ ಥ್ಯಾಂಕ್ಯೂ_ಹೇಳೋಣ ಎಂದು.. ಹೌದು 2021 ಬಹಳಷ್ಟು ಹೊಸ ಅನುಭವಗಳನ್ನು ನೀಡಿತು. ನೋವು […]
ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ : ವಿಶ್ವಾಸ ಕಿರಣ ವಿಶೇಷ ಆಂಗ್ಲಭಾಷಾ ತರಬೇತಿ ಕಾರ್ಯಕ್ರಮ
ಕುಂದಾಪುರ (ಡಿ.29): ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸರಕಾರದ SCSP ಯೋಜನೆಯಡಿಯಲ್ಲಿ ದ್ವಿತೀಯ ಪಿ.ಯು.ಸಿ.ಯಲ್ಲಿ ಕಲಿಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ “ವಿಶ್ವಾಸ ಕಿರಣ” ವಿಶೇಷ ಆಂಗ್ಲಭಾಷಾ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ,ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಾಮಕೃಷ್ಣ ಬಿ.ಜಿ. ಕಾರ್ಯಕ್ರಮ ಉದ್ಘಾಟಿಸಿ ಶುಭಕೋರಿದರು. ಹಿರಿಯ ಉಪನ್ಯಾಸಕರಾದ ಶ್ರೀ ಭುಜಂಗ ಶೆಟ್ಟಿ, ಉಪನ್ಯಾಸಕ ಕಾರ್ಯದರ್ಶಿ ಶ್ರೀ ಉದಯ ಕುಮಾರ ಶೆಟ್ಟಿ ಕಾಳಾವರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆಂಗ್ಲಭಾಷಾ ಹಿರಿಯ […]
ವಿಟಿಯು ಮಂಗಳೂರು ವಲಯದ ಫುಟ್ ಬಾಲ್ ಪಂದ್ಯಾಟ – ನಿಟ್ಟೆ ಪ್ರಥಮ, ಬ್ಯಾರೀಸ್ ದ್ವಿತೀಯ
ಮೂಡುಬಿದ್ರಿ ( ಡಿ.29 ) : ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ ಆತಿಥ್ಯದಲ್ಲಿ ಡಿ. 27 ಮತ್ತು 28 ರಂದು ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮಂಗಳೂರು ವಲಯದ ತಾಂತ್ರಿಕ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳ ಫುಟ್ ಬಾಲ್ ಪಂದ್ಯಾಟದಲ್ಲಿ ಎನ್ಎಂಎಎಂಐಟಿ ನಿಟ್ಟೆ ತಂಡ ಪ್ರಥಮ ಸ್ಥಾನ ಹಾಗೂ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಕಾಲೇಜಿನ ಪ್ರಾಂಶುಪಾಲರಾದ ಡಾ.ಆರ್.ಜಿ. ಡಿಸೋಜ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ, ಸಹಕರಿಸಿದ ಎಲ್ಲರಿಗೂ […]
ಉಡುಪಿ: ಆಪದ್ಬಾಂಧವ ಈಶ್ವರ ಮಲ್ಪೆಯವರ ಮನೆಗೆ ಪೂರ್ಣಿಮಾ ಶೆಟ್ಟಿ ಭೇಟಿ
ಉಡುಪಿ (ಡಿ.29): ಜಿಲ್ಲೆಯ ಕಡಲ ತೀರದ ಆಪದ್ಬಾಂಧವ ಈಶ್ವರ ಮಲ್ಪೆಯವರ ಮನೆಗೆ ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿ ಉಡುಪಿ ಜಿಲ್ಲೆ ಇದರ ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ಪೂರ್ಣಿಮಾ ಶೆಟ್ಟಿ ಭೇಟಿ ನೀಡಿದರು.ಈಶ್ವರ ಮಲ್ಪೆಯವರ ಸಮಾಜಮುಖಿ ಕಾರ್ಯವನ್ನು ಗುರುತಿಸಿ ಪ್ರಶಂಸೆಯ ಜೊತೆಗೆ ಅವರ ಮಕ್ಕಳ ಯೋಗಕ್ಷೇಮ ವಿಚಾರಿಸಿದರು. ಮಲ್ಪೆ ಬೀಚಿಗೆ ತೆರಳುವ ಮುಖ್ಯರಸ್ತೆಯ ಎಡಭಾಗದಲ್ಲಿ, ಬೀಚಿನಿಂದ ಅನತಿ ದೂರದಲ್ಲಿ ಸಣ್ಣದೊಂದು ಮನೆಯಲ್ಲಿ 3 ವಿಕಲಚೇತನ ಮಕ್ಕಳು. 21 ವರ್ಷ ಹಾಗೂ 19 […]
ರಾಜ್ಯಮಟ್ಟದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಸುಣ್ಣಾರಿಯ ಎಕ್ಸಲೆಂಟ್ ಪ್ರೌಢಶಾಲೆ
ಕೋಟೇಶ್ವರ (ಡಿ.29):ಎಕ್ಸಲೆಂಟ್ ಪಿಯು ಕಾಲೇಜು ಮತ್ತು ಸ್ಕೂಲ್ ಸುಣ್ಣಾರಿ ಶ್ರೀ ಭಗವದ್ಗೀತಾ ಅಭಿಯಾನ – 2021-22, ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನಮ್ – ಶಿರಸಿ (ಉ.ಕ) ಹಾಗೂ ಶ್ರೀ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ (ರಿ) ಇವರು ಆಯೋಜಿಸಿದ ಶ್ರೀ ಭಗವದ್ಗೀತಾ ಅಭಿಯಾನ – 2021-22 ರಾಜ್ಯಸ್ತರದ ಭಗವದ್ಗೀತಾ ಸ್ಪರ್ಧೆಗಳಲ್ಲಿ ಎಕ್ಸಲೆಂಟ್ ಸುಣ್ಣಾರಿ ವಿದ್ಯಾಸಂಸ್ಥೆಯ 8ನೇ ತರಗತಿಯ ಸಾಧನಾ ದೇವಾಡಿಗ ಬಾಲಗಂಗಾಧರ ತಿಲಕ್ ಮತ್ತು ಭಗವದ್ಗೀತೆ ಎಂಬ […]
ಕೋಡಿಯ ಶ್ರೀ ರಾಮ ವಿದ್ಯಾಕೇಂದ್ರದಲ್ಲಿ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾದ ಅಮ್ಮ ನಮನ ಕಾರ್ಯಕ್ರಮ-
ಕುಂದಾಪುರ(ಡಿ.29): ಮಾತೆ ಶಾರದಾದೇವಿಯ ಜನ್ಮ ಜಯಂತಿಯ ಪ್ರಯುಕ್ತ “ಅಮ್ಮ ನಮನ” ಹೆಸರಿನಲ್ಲಿ ತಾಯಂದಿರ ಪಾದಪೂಜೆ ಕಾರ್ಯಕ್ರಮವನ್ನು ಸತತ 6 ವರ್ಷಗಳಿಂದರಾಜ್ಯಾದ್ಯಂತ ಯುವಾಬ್ರಿಗೇಡ್ ಆಯೋಜಿಸುತ್ತಾ ಬಂದಿದೆ. ಅದರಂತೆಯೇ ಈ ವರ್ಷವೂ ಸಹ ವಿಶೇಷವಾಗಿ ಸೈನಿಕರ ತಾಯಂದಿರ ಪಾದಪೂಜೆ ಕಾರ್ಯಕ್ರಮ ರಾಜ್ಯಾದ್ಯಂತ ಹಮ್ಮಿಕೊಂಡಿದ್ದು ,ಆ ಹಿನ್ನೆಲೆಯಲ್ಲಿ ಡಿ.28 ರ ಮಂಗಳವಾರ ಯುವಾಬ್ರಿಗೇಡ್ ಕುಂದಾಪುರದ ವತಿಯಿಂದ ಕೋಡಿಯ ಶ್ರೀ ರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳಿಂದ ಅವರವರ ಮಾತೆಯರಿಗೆ ಪಾದಪೂಜೆ ಮಾಡಿಸುವ ಮೂಲಕ ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ […]