ಸಿನಿಮಾಗಳಲ್ಲಿ ಕುಂದಗನ್ನಡ ಭಾಷೆ ಕಾಣಸಿಗುವುದೇ ಅಪರೂಪ, ಸಿಕ್ಕರೂ ಅಲ್ಲಿಲ್ಲೊಂದು ಸಿಗಬಹುದೋ ಏನೋ. ಒಂದೆರಡು ಕುಂದಗನ್ನಡ ಸಿನಿಮಾಗಳು ಬಂದುಹೋದವು ಕೂಡ.
Day: January 28, 2021
ಶ್ರೀ ಚಿಕ್ಕು ಅಮ್ಮ ಹಾಗೂ ಪರಿವಾರ ದೈವಸ್ಥಾನ ಬೀಜಾಡಿ ಗೋಪಾಡಿ ವಾರ್ಷಿಕ ಜಾತ್ರಾ ಮಹೋತ್ಸವ
ಶ್ರೀ ಚಿಕ್ಕು ಅಮ್ಮ ಹಾಗೂ ಪರಿವಾರ ದೈವಸ್ಥಾನ ಬೀಜಾಡಿ – ಗೋಪಾಡಿ ಇದರ ವಾರ್ಷಿಕ ಜಾತ್ರಾ ಮಹೋತ್ಸವ ಜನವರಿ 28ರಿಂದ 30ರ ತನಕ ನಡೆಯಲಿದೆ.
ಹೇರೂರು : ವೆಂಟೆಡ್ ಡ್ಯಾಂ ಮತ್ತು ಸೇತುವೆ ಕಾಮಗಾರಿಗೆ ಶಾಸಕ ಶ್ರೀ ಬಿ.ಎಂ ಸುಕುಮಾರ ಶೆಟ್ಟಿಯವರಿಂದ ಗುದ್ದಲಿಪೂಜೆ
ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲ್ಗದ್ದೆಕೇರಿ ಎಂಬಲ್ಲಿ ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ವೆಂಟೆಡ್ ಡ್ಯಾಂ ಮತ್ತು ಸೇತುವೆಗೆ ಬೈಂದೂರಿನ ಶಾಸಕರಾದ ಶ್ರೀ ಬಿ. ಎಮ್. ಸುಕುಮಾರ ಶೆಟ್ಟಿಯವರು ಗುದ್ದಲಿಪೂಜೆ ನೆರವೆರಿಸಿದರು.
ಕುಂದಾಪುರದ ನೂತನ ಡಿವೈಎಸ್ಪಿಯಾಗಿ ಕೆ. ಶ್ರೀಕಾಂತ್ ಅಧಿಕಾರ ಸ್ವೀಕಾರ
ಕುಂದಾಪುರ ಉಪವಿಭಾಗದ ನೂತನ ಡಿವೈಎಸ್ಪಿ ಯಾಗಿ ಕೆ .ಶ್ರೀಕಾಂತ ಅಧಿಕಾರ ಸ್ವೀಕರಿಸಿದ್ದಾರೆ .ಕಾರವಾರದ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ಯಾಗಿ ಸೇವೆಸಲ್ಲಿಸಿರುವ ಇವರು 1998ರಲ್ಲಿ ಪೊಲೀಸ್ ಇಲಾಖೆಯಲ್ಲಿ ಸೇವೆಯನ್ನು ಆರಂಭಿಸಿ, ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ
ನಮ್ಮಿಬ್ರದ್ದು ಇವತ್ತು ನಿನ್ನೆಯ ಪ್ರೀತಿ ಅನ್ಕೊಂಡ್ರಾ???… ನೋ ವೇ ಚಾನ್ಸೆ ಇಲ್ಲ.
ಕೆಲಸ ಮುಗಿಸಿ ಬಂದು ಸುಸ್ತಾಗಿದ್ದ ಅಜ್ಜಯ್ಯ, ಕಾಲು ತೊಳೆದು ಚಾವಡಿ ಗೆ ಬಂದಿದ್ದರಷ್ಟೇ, ಆಗಲೇ ಬೊಬ್ಬೆ ಬಿದ್ದಿತ್ತು!!!. ಅವರೇನು ಬರಿಗೈಯಲ್ಲಿ ಮನೆಯನ್ನ ಹೊಕ್ಕಿರಲಿಲ್ಲ. ನಾಲ್ಕೈದು ಬೊಟಿ ಪ್ಯಾಕೆಟ್ಟು, ನಾಲ್ಕಾಣೆಯ ನಾಲ್ಕು ಚಾಕ್ಲೆಟ್ಟುಗಳು, ಬಲಗೈಯಲ್ಲಿ ಹಿಡಿದಿದ್ದ ಪ್ಲಾಸ್ಟಿಕ್ ಕೊಟ್ಟೆಯಲ್ಲಿ ಕಣ್ಣ್ ಕಣ್ಣ್ ಬಿಡುತ್ತ, ಎಡಗೈಯಲ್ಲಿ ಹಿಡಿದಿದ್ದ ಮೀನಿನ ಚೀಲದೊಂದಿಗೆ ಅಡುಗೆ ಮನೆ ಸೇರಿದ್ದವು… ನನಗೂ ಮೊದ ಮೊದಲು ಅರ್ಥ ಆಗಿರ್ಲಿಲ್ಲ. ನನ್ನನ್ನ ಯಾಕಿವನು ಇಷ್ಟು ಇಷ್ಟ ಪಡ್ತಿದ್ದಾನೆ ಅಂತ. ಈಗ್ಲೂ ಮಹಾ […]
ವರಸಿದ್ದಿ ವಿನಾಯಕ ಪದವಿ ಪೂರ್ವ ಕಾಲೇಜು ಕೆರಾಡಿ :ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ
ಕುಂದಾಪುರ: ನಮ್ಮ ದೇಶ ಸ್ವಾತಂತ್ರ್ಯಗೊಂಡು 73 ವರ್ಷಗಳು ಕಳೆದರೂ ಮಹಿಳೆಯರ ಹಾಗೂ ಹೆಣ್ಣುಮಕ್ಕಳ ಸ್ಥಿತಿಗತಿ ನಿರೀಕ್ಷಿತ ಮಟ್ಟದಲ್ಲಿ ಸುಧಾರಿಸಿಲ್ಲ ,ಮಹಿಳೆಯರು ತಮ್ಮ ಹಕ್ಕು ಮತ್ತು ಸ್ವತಂತ್ರ ಗಳನ್ನು ಸಂವಿಧಾನಾತ್ಮಕವಾಗಿ ಪಡೆದುಕೊಳ್ಳಬೇಕು, ಆ ಮೂಲಕ ಮಹಿಳಾ ಸಶಕ್ತಿಕರಣ ಸಾಧ್ಯ ಎಂದು ಕಾಲೇಜಿನ ಉಪನ್ಯಾಸಕ ನಾಗರಾಜ್ ಹೆಮ್ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಕೆರಾಡಿ ವರಸಿದ್ದಿವಿನಾಯಕ ಕಾಲೇಜು ಹಾಗೂ ಗ್ರಾಮ ಪಂಚಾಯತ್ ಕೆರಾಡಿ ಇದರ ಜಂಟಿ ಆಶ್ರಯದಲ್ಲಿ ಜನವರಿ 24 ರಂದು ಕಾಲೇಜಿನಲ್ಲಿ ಆಯೋಜಿಸಿದ್ದ […]