ಕುಂದಾಪುರ: ಶ್ರೀ ಶಾರದ ಕಾಲೇಜು ಬಸ್ರೂರು ಇದರ ಐಕ್ಯೂಎಸಿ ,ಇತಿಹಾಸ ವಿಭಾಗ ಹಾಗೂ ಕನ್ನಡ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಪ್ರಾರಂಭಗೊಳ್ಳಲಿರುವ ಪುರಾತತ್ವ ದಾಖಲೀಕರಣ ಮತ್ತು ಅಧ್ಯಯನ ಕೇಂದ್ರ ಹಾಗೂ ಕನ್ನಡ ಪ್ರಾತಿನಿಧಿಕ ಸರ್ಟಿಫಿಕೇಟ್ ಕೋರ್ಸುಗಳನ್ನು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಬಿ. ಜಗದೀಶ ಶೆಟ್ಟಿ ಉದ್ಘಾಟಿಸಿದರು. ಅವರು ಜನವರಿ 27ರಂದು ಕಾಲೇಜಿನಲ್ಲಿ ಆಯೋಜಿಸಿದ್ದ ಸರ್ಟಿಫಿಕೇಟ್ ಕೋರ್ಸುಗಳನ್ನು ಉದ್ಘಾಟಿಸಿ ಬಸ್ರೂರಿನ ಮಹತ್ವದ ಬಗ್ಗೆ ತಿಳಿಸಿದರು.ಬಸ್ರೂರು ಐತಿಹಾಸಿಕವಾಗಿ ಮಹತ್ವ ಪಡೆದುಕೊಂಡ […]
Day: January 29, 2021
ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಪ್ರಬಂಧ ಸ್ಪರ್ಧೆ – ಡಾ. ಬಿ.ಬಿ ಹೆಗ್ಡೆ ಕಾಲೇಜಿನ ವಿದ್ಯಾರ್ಥಿ ರಾಜೇಶ್ ಪ್ರಥಮ ಸ್ಥಾನ
ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದಕ್ಷಿಣ ಕನ್ನಡ ಜಿಲ್ಲಾ ಶಾಖೆ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಉಡುಪಿ ಜಿಲ್ಲೆ ಶಾಖೆ. ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕೊಡಗು ಜಿಲ್ಲಾ ಶಾಖೆಯ ಸಹಯೋಗದೊಂದಿಗೆ ಯೂಥ್ ರೆಡ್ ಕ್ರಾಸ್ ಮಂಗಳೂರು ವಿಶ್ವವಿದ್ಯಾನಿಲಯವು ಸ್ವಾಮಿ ವಿವೇಕಾನಂದರ 158 ನೇ ಜನ್ಮ ದಿನದ ಪ್ರಯುಕ್ತ ಜನವರಿ 12 ರಂದು ರವೀಂದ್ರ ಕಲಾಭವನ, ವಿಶ್ವವಿದ್ಯಾನಿಲಯ ಕಾಲೇಜು, ಹಂಪ್ಪನಕಟ್ಟೆ, ಮಂಗಳೂರು ಇಲ್ಲಿ ನಡೆಸಿದ “ನ್ಯಾಷನಲ್ ಯೂಥ್ ಡೇ” ಮಂಗಳೂರು […]
ಕರಾವಳಿಯ ಉದಯೋನ್ಮುಖ ಹಿನ್ನೆಲೆ ಗಾಯಕ ಅಕ್ಷಯ್ ಬಡಾಮನೆಗೆ “ಅತ್ಯುತ್ತಮ ಗಾಯಕ ಪ್ರಶಸ್ತಿ”
ಅಕ್ಷಯ್ ಬಡಾಮನೆ ಓರ್ವ ಉದಯೋನ್ಮುಕ ಪ್ರತಿಭೆ. ಹತ್ತು ಹಲವು ಹಾಡುಗಳಿಗೆ ಧ್ವನಿಯಾಗಿ ಎಲ್ಲರ ಮನೆಮಾತಾದವರು. ರಿಹಾ ಇಂಡಿಯನ್ ಆರ್ಗ್ ಸಂಸ್ಥೆ ಇವರ ಗಾಯನಕ್ಕೆ ಮೆಚ್ಚಿ ಈ ವರ್ಷದ ಅತ್ಯುತ್ತಮ ಗಾಯಕ ಪ್ರಶಸ್ತಿ (ಅಲ್ಬಂ ಹಾಡು ಹಾಗೂ ಕಿರುಚಿತ್ರ ಹಾಡುಗಳ ವಿಭಾಗ) ನೀಡಿರುತ್ತಾರೆ. ರಿಹಾ ಐದಾರು ವರ್ಷಗಳಿಂದ ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಆಯೋಜಿಸುತ್ತದ್ದು, ಈ ವರ್ಷದ ಪ್ರಶಸ್ತಿ ಸಮಾರಂಭವನ್ನು ಗೋವಾದಲ್ಲಿ ನೆಡೆಸುವ ತಯಾರಿಯಲ್ಲಿದೆ. ಈ ಪ್ರಶಸ್ತಿಯನ್ನು ಪಡೆಯುತ್ತಿರುವ ಅಕ್ಷಯ್ ಬಡಾಮನೆ […]
ಮೂಡ್ಲಕಟ್ಟೆ ಎಂ. ಐ. ಟಿ. : ರೌಟರ್ ತಂತ್ರಜ್ಞಾನ ವೆಬಿನಾರ್
ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ “ರೌಟರ್ ತಂತ್ರಜ್ಞಾನ” ವಿಷಯದ ಮೇಲೆ ವೆಬಿನಾರ್ ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಸಿಸ್ಕೋ ಕಂಪನಿಯಲ್ಲಿ ಟೆಕ್ನಿಕಲ್ ಲೀಡ್ ಇಂಜಿನಿಯರ್ ಆಗಿರುವ ಶ್ರೀ. ವಿವೇಕ್ ದಿನಕರ ರವರು ಭಾಗವಹಿಸಿದ್ದರು. ಶ್ರೀ. ವಿವೇಕ್ ದಿನಕರ ರವರು ಇಲೆಕ್ಟ್ರಾನಿಕ್ಸ್ ಸಂವಹನದಲ್ಲಿ ವಿವಿಧ ರೀತಿಯ ರೌಟರ್ ತಂತ್ರಜ್ಞಾನದ ಉಪಯೋಗ ಮತ್ತು ಬಳಕೆಯ ಕುರಿತು ಉಪನ್ಯಾಸ ನೀಡಿದರು. ವಿವಿಧ ರೀತಿಯ ರೌಟರ್ ಪ್ರೋಟೋಕಾಲ್ ಕುರಿತು ಮಾಹಿತಿ […]
ಹೀಗೊಂದು ಪ್ರೇಮ ಕವನ
ಉಳಿದದ್ದು ನೆನಪು ಮಾತ್ರ,ಉಳಿಯದ ಅವಳ ಪ್ರೀತಿಯಲಿ.ಉಳಿದದ್ದು ನೋವು ಮಾತ್ರ,ಮರೆಯದ ಅವಳ ನೆನೆಪಿನಲ್ಲಿ. ಖಾಲಿ ಕಿಸೆಯಿದ್ದರೂ ಆಗ,ನೀಲಿ ಬಾನೆತ್ತರದ ಕನಸುಗಳು.ಜಾಲಿ ಮುಳ್ಳುಗಳೀಗ ನೆನಪು,ಕಿಸೆತುಂಬಿದ್ದರೂ ಮನಸು ಬರಿದು. ಎಲ್ಲಿ ಮರೆಯಾಗುವೆಯೋ ನೀನುಹಂಚಿಕೊಂಡರೆ ಪ್ರೀತಿ.ಹೇಳಲಾಗದ ಧೈರ್ಯ,ಕಳವಳದ ಮನಸ್ಸಿಗೆ ಒಂದೇ ಭೀತಿ. ಅಂದು ನನ್ನದು ಬರೀ ಮೌನ.ಆಡಬೇಕಿದ್ದ ಮಾತುಗಳುಇಂದಾಗುತ್ತಿದೆ ಕವನ.ಕ್ಷಮಿಸಿಬಿಡು ನನ್ನನ್ನ. – ನಾಗು