ಕುಂದಾಪುರದ ಆರ್. ಎನ್ ಶೆಟ್ಟಿ ಮಿನಿ ಹಾಲ್ ನಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ, ಅಶಕ್ತರಿಗೆ ವೈದ್ಯಕೀಯ ನೆರವು, ಹೊಸ ಮನೆ ನಿರ್ಮಾಣ ಮತ್ತು ಮನೆ ರಿಪೇರಿ ಕುರಿತ ಸಹಾಯಧನದ ಚೆಕ್ ವಿತರಣಾ ಕಾರ್ಯಕ್ರಮ ನಡೆಯಿತು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಸಹಾಯಧನದ ಚೆಕ್ ವಿತರಿಸಿದರು. ಗೌರವ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ ಪ್ರಾಸ್ತಾವಿಸಿದರು.ಇದೇ ಸಂದರ್ಭ ಎಸ್ಎಸ್ಎಲ್ […]
Month: January 2021
ನಾಳೆ ಗುಜ್ಜಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಸಂಭ್ರಮ -ಉದ್ಘಾಟನಾ ಸಮಾರಂಭ
ಗುಜ್ಜಾಡಿ ಪರಿಸರದಲ್ಲಿ ಶಿಕ್ಷಣದ ಕಂಪನ್ನು ಪಸರಿಸಿ, ಅಕ್ಷರದ ಅಕ್ಕರೆಯನ್ನು ತೋರಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ವರ್ಷ 2019- 20 ರ ಸವಿನೆನಪಿನ ಶತಮಾನೋತ್ಸವ ಭವನ, ರಂಗಮಂದಿರ ಹಾಗೂ ಸ್ಮಾರ್ಟ್ ತರಗತಿಯ ಉದ್ಘಾಟನಾ ಸಮಾರಂಭ ಜನವರಿ 17, 2021 ರಂದು ನಡೆಯಲಿದೆ. ಶತಮಾನೋತ್ಸವ ಭವನದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಂದೂರಿನ ಶಾಸಕರಾದ ಶ್ರೀ ಬಿ. ಎಂ. ಸುಕುಮಾರ ಶೆಟ್ಟಿಯವರು ವಹಿಸಲಿದ್ದಾರೆ. ಹಾಗೆಯೇ ಉದ್ಯಮಿಗಳಾದ ಶ್ರೀ ಎನ್.ಟಿ ಪೂಜಾರಿ ಶಾಲೆಯ […]
ಡಾ| ಬಿ. ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು: ರಾಷ್ಟ್ರೀಯ ಯುವ ದಿನಾಚರಣೆ:
ವಿವೇಕಾನಂದರ ಜಯಂತಿ ಕೇವಲ ಜಯಂತಿಗಷ್ಟೇ ಸೀಮಿತವಾಗಬಾರದು,ವಿದ್ಯಾರ್ಥಿಗಳು ವಿವೇಕಾನಂದರ ತತ್ವ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಆ ಮೂಲಕ ರಾಷ್ಟ್ರೀಯ ಯುವ ದಿನಾಚರಣೆ ಅರ್ಥಪೂರ್ಣವಾಗಬೇಕು ಎಂದು ಕೆನರಾ ಕಿಡ್ಸ್ನ ಸಂಚಾಲಕರಾದ ಶ್ರೀಸುಬ್ರಹ್ಮಣ್ಯ ಶೆಟ್ಟಿ ಹೇಳಿದರು.
ಹರಿಹರ ದೇವಸ್ಥಾನ – ಮನ್ಮಹಾರಥೋತ್ಸವ
ಕುಂಭಾಶಿ: ಜನವರಿ 16 ರಂದು ಮನ್ಮಹಾರಥೋತ್ಸವ – ಪುರಾಣ ಪ್ರಸಿದ್ಧ ಕುಂಭಾಶಿಯ ಶ್ರೀ ಮಹಾಲಿಂಗೇಶ್ವರ (ಹರಿಹರ) ದೇವಸ್ಥಾನದ ಮನ್ಮಹಾರಥೋತ್ಸವವು ಇದೇ ಜನವರಿ 16 ರ ಬೆಳಿಗ್ಗೆ 11:30 ಕ್ಕೆ ನಡೆಯಲಿದ್ದು ತದನಂತರ ಮಧ್ಯಾಹ್ನ ಅನ್ನ ಸಂತರ್ಪಣೆ ಹಾಗೂ ಸಂಜೆ 5 ಗಂಟೆಗೆ ಧಾರ್ಮಿಕ ಪ್ರವಚನದ ಜೊತೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ .
ಸರಸ್ವತಿ ವಿದ್ಯಾಲಯದಲ್ಲಿ ವಿವೇಕಾನಂದ ಜಯಂತಿ ಮತ್ತು ಜಿ.ಎಸ್.ವಿ.ಎಸ್ ಅಸೋಸಿಯೇಷನ್ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ
ಗಂಗೊಳ್ಳಿ : ಗಂಗೊಳ್ಳಿಯ ಜಿ.ಎಸ್.ವಿ.ಎಸ್ ಅಸೋಷಿಯೇಷನ್ , ಸರಸ್ವತಿ ವಿದ್ಯಾಲಯ ಸಮೂಹ ಸಂಸ್ಥೆಗಳು ಮತ್ತು ಬಾಲಚಂದ್ರ ನಾಯ್ಕನಕಟ್ಟೆ ಟ್ರಸ್ಟ್ ಬೆಂಗಳೂರಿನ ಉದಯ್ ಉಳ್ಳಾಲ್ ಪ್ರಾಯೋಜಕತ್ವದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ಜಿ.ಎಸ್.ವಿ.ಎಸ್ ಅಸೋಷಿಯೇಷನ್ ವತಿಯಿಂದ ಕೊಡಲ್ಪಡುವ ವಿದ್ಯಾರ್ಥಿ ವೇತನಾ ವಿತರಣಾ ಕಾರ್ಯಕ್ರಮವು ಕಳೆದ ಬುಧವಾರ ಇಲ್ಲಿನ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಒಳ ಸಭಾಂಗಣದಲ್ಲಿ ನಡೆಯಿತು.
ಕುಂದವಾಹಿನಿ ಅಂತರ್ಜಾಲ ಸುದ್ದಿ ತಾಣ ಉದ್ಘಾಟನೆ
ಕುಂದವಾಹಿನಿ ಅಂತರ್ಜಾಲ ಸುದ್ದಿ ತಾಣ ಉದ್ಘಾಟನೆ ಸುದ್ದಿ ಮಾಧ್ಯಮಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮಾಹಿತಿ ತಂತ್ರಜ್ಞಾನದ ಪ್ರಸ್ತುತ ಯುಗದಲ್ಲಿ ಸುದ್ದಿಗಳು ಸಮಾಜದ ಎಲ್ಲಾ ವರ್ಗದ ಜನರಿಗೆ ತಲುಪಿಸುವ ಕೆಲಸ ಸುದ್ದಿ ತಾಣದಿಂದಾಗಬೇಕಿದೆ. ಆ ನಿಟ್ಟಿನಲ್ಲಿ ಕುಂದವಾಹಿನಿ ಉತ್ಕೃಷ್ಟ ಗುಣಮಟ್ಟದ ಅಂತರ್ಜಾಲ ಸುದ್ದಿತಾಣವಾಗಿ ಮೂಡಿಬರಲಿ ಎಂದು ಬೈಂದೂರಿನ ಶಾಸಕ ಶ್ರೀ ಬಿ.ಎಂ ಸುಕುಮಾರ ಶೆಟ್ಟಿ ಯವರು ಹೇಳಿದರು. ಅವರು ಕುಂದವಾಹಿನಿ ಅಂತರ್ಜಾಲ ಸುದ್ದಿ ತಾಣವನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ […]
ನಮ್ಮ ಕುಂದಾಪುರ
ಕರಾವಳಿ ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲೊಂದಾದ ಉಡುಪಿ ಜಿಲ್ಲೆಯಲ್ಲಿ ತನ್ನದೇ ಆದ ವೈಶಿಷ್ಟ್ಯತೆ ಮತ್ತು ಅಸ್ಮೀತೆಯನ್ನು ಕಾಪಾಡಿಕೊಂಡು ಬಂದಿರುವ ಪ್ರದೇಶವೇ ಕುಂದಾಪುರ.
ನಮ್ಮ ಬಗ್ಗೆ
ಆಧುನಿಕತೆಯ ಈ ತಂತ್ರಜ್ಞಾನ ಯುಗದಲ್ಲಿ ಸುದ್ದಿ ಸಮಾಚಾರಗಳು ಜನತೆಗೆ ತಲುಪಿಸುವ ಮಾರ್ಗಗಳು ಬಹುರೂಪಿಯಾಗಿದೆ. ಮಾಹಿತಿ ತಂತ್ರಜ್ಞಾನದ ಪ್ರಸ್ತುತ ಯುಗದಲ್ಲಿ ಸುದ್ದಿಗಳು ಬೇರೆ ಬೇರೆ ರೂಪದಲ್ಲಿ ಜನತೆಗೆ ತಲುಪಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಆ ನಿಟ್ಟಿನಲ್ಲಿ ಕುಂದಾಪುರದ ಪ್ರಾದೇಶಿಕ ಸಂಸ್ಕೃತಿ, ಅಸ್ಮೀತೆ, ಅನನ್ಯತೆ ಹಾಗೂ ವಸ್ತುನಿಷ್ಠ ವಿಚಾರಗಳನ್ನು ಜನತೆಗೆ ತಲುಪಿಸುವ, ಜೊತೆಗೆ ಜನರ ಸಾಮಾಜಿಕ, ರಾಜಕೀಯ, ಆರ್ಥಿಕ ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯ, ಕ್ರೀಡೆ ಹಾಗೂ ಸಾಂಸ್ಕೃತಿಕ ಬದುಕಿನ ಒಳ-ಹೊರ ನೋಟಗಳ ಸುದ್ದಿಗಳನ್ನು […]










