Net – Work ಕಟ್ಟು ಪಾಡುಗಳ ನಡುವೆ ಬದುಕು ಕಟ್ಟುವ ಪಾಡು ಪೆಟ್ಟುಗಳ ನಡುವೆ ಪಟ್ಟು ಬಿಡದೆ ಕಟ್ಟುವ ಗೂಡು ದಿಟ್ಟವಾಗಿ ಅಟ್ಟದಿ ಕುಳಿತು ಮೌನದಿ ಹಾಡುವ ಹಾಡು #ಏನೇ_ಹೇಳಿ, ಒಟ್ಟು ಇಷ್ಟ ಕಷ್ಟ ನಷ್ಟಗಳ ನಡುವೆ ನಡೆಯುವುದು ಸಂತುಷ್ಟ ಜೀವನದ ಹೊಟ್ಟೆಪಾಡು . #Say_Whatever, Life Is a ” Net – Work ” . . . . 🕸️
Day: February 13, 2021
ಸಮುದಾಯ ತಿಂಗಳ ಕಥಾ ಓದು
ಕೊರೋನಾ ಎಂಬ ವಿಚಿತ್ರ ಸಂಕಟದ ಸಂದರ್ಭದಲ್ಲಿ ಆಧುನಿಕ ರಂಗಭೂಮಿಯ ಹೊಸ ಸಾಧ್ಯತೆ ಮತ್ತು ದಾರಿಗಳನ್ನು ಕಂಡುಕೊಳ್ಳುತ್ತಿರುವಾಗ ಈ ಹಿನ್ನೆಲೆಯಲ್ಲಿ ನಮ್ಮದು ಈ ಪ್ರಯತ್ನ ಎನ್ನುತ್ತಾ ಆರಂಭಿಸಿದರು ಸಂಕಥನ ಎನ್ನುವ ರಂಗ ಓದನ್ನು ಮಂದಾರ ಕಲಾವಿದರು ಈ ಸಂಜೆ ಕುಂದಾಪುರ ಜೇಸಿ ಭವನದಲ್ಲಿ.ಪುಟ್ಟ, ಪುಟ್ಟ ಒಂದೈದು ಕತೆ-ಲೇಖನ-ಕವಿತೆಗಳ ಎಳೆಗಳನ್ನು ಬಿಡಿಬಿಡಿಯಾಗಿ ರೋಹಿತ್ ಬೈಕಾಡಿ ವಿನ್ಯಾಸಗೊಳಿಸಿದ್ದರು. ವಿಶಿಷ್ಟ ತೀರ್ಪು ಇದರಲ್ಲಿ ಬ್ರೆಡ್ ಮತ್ತು ಜಾಮ್ ಕದ್ದ ಕಾರಣಕ್ಕಾಗಿ ಹದಿನೈದರ ಹುಡುಗನೊಬ್ಬನನ್ನು ಕಟಕಟೆಯಲ್ಲಿ ಪ್ರಶ್ನಿಸಲಾಗುತ್ತದೆ. […]
ರೋಟರಿ ಕ್ಲಬ್ ಹಳೆಯ ಕಟ್ಟಡದ ಮಾಡುಕುಸಿತ
ಕುಂದಾಪುರ(ಫೆಬ್ರವರಿ 13) : ಕುಂದಾಪುರದ ಹೊಸ ಬಸ್ ಸ್ಟ್ಯಾಂಡ್ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಬಳಿ ಇರುವ ರೋಟರಿ ಕ್ಲಬ್ನ ಹಳೆ ಕಟ್ಟಡದ ಮಾಡು ಶುಕ್ರವಾರ ಸಂಜೆ ದಿಢೀರ್ ಕುಸಿದಿದೆ. ಎರಡು ವರ್ಷಗಳ ಹಿಂದೆ ಈ ಕಟ್ಟಡದವನ್ನು ದುರಸ್ತಿಗೊಳಿಸಲಾಗಿತ್ತು. ಇದರ ಪಕ್ಕದಲ್ಲೆ ಇರುವ ಹೊಸ ಕಟ್ಟಡದಲ್ಲಿ ನರ್ಸರಿ ಶಾಲೆ, ಮಕ್ಕಳಿಗೆ ಚಿತ್ರಕಲೆ, ಸಂಗೀತ ತರಬೇತಿಗೆ ಅವಕಾಶ ಕಲ್ಪಿಸಲಾಗಿತ್ತು. ಅದೇ ದಿನ ಸಂಜೆ 06:30ಕ್ಕೆ ರೋಟರಿ ಕ್ಲಬ್ ನ ವಾರದ ಸಭೆ ನಡೆಯಬೇಕಿದ್ದು […]
ಜಾನಪದ ಭೂಷಣ ಪ್ರಶಸ್ತಿಗೆ ಗಣೇಶ್ ಗಂಗೊಳ್ಳಿ ಆಯ್ಕೆ
ಖ್ಯಾತ ಗಾಯಕ ,ಜಾನಪದ ಚಿಂತಕ ಹಾಗೂ ಉಡುಪಿ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷರಾಗಿರುವ ಗಣೇಶ್ ಗಂಗೊಳ್ಳಿಯವರು ಜಾನಪದ ಭೂಷಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಹೌಂದರಾಯನ ವಾಲ್ಗ
ಹೌಂದರಾಯನ ವಾಲ್ಗ ಇದು ಕುಂದಾಪುರದ ಕರಾವಳಿ ಭಾಗದ ಜನಪದ ಸಂಸ್ಕೃತಿಯ ಒಂದು ಭಾಗವಾಗಿದ್ದು, ಇದನ್ನು ಜನರು ಧಾರ್ಮಿಕ ಹಿನ್ನೆಲೆಯಲ್ಲಿ ಆಚರಿಸಿಕೊಂಡು ಬರುತ್ತಿರುವುದು ನಿಜಕ್ಕೂ ಪ್ರಶಂಸನೀಯ.










