ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪಶ್ಚಿಮ ಘಟ್ಟದ ತಪ್ಪಲಿನ ಕೆರಾಡಿ ಎನ್ನುವ ಹಳ್ಳಿಯೊಂದರಲ್ಲಿ ಚಿತ್ರೀಕರಣಗೊಂಡು, ಅದೇ ಹಳ್ಳಿಗರ ಮನೆಮಗ ಸ್ಯಾಂಡಲ್ ವುಡ್ ನ ಖ್ಯಾತ ನಟ -ನಿರ್ದೇಶಕ ರಿಷಬ್ ಶೆಟ್ಟಿಯವರು ನಾಯಕನಾಗಿ ನಟಿಸಿರುವ ಹಾಗೂ ಕೆ.ಜಿ.ಫ್ ಖ್ಯಾತಿಯ ಹೊಂಬಾಳೆ ಫಿಲ್ಸಂ ರವರ ನಿರ್ಮಾಣದಲ್ಲಿ ಮೂಡಿ ಬಂದ ಕಾಂತಾರ ಚಿತ್ರ ಕನ್ನಡದ ಸಿನಿಮಾರಂಗದಲ್ಲಿ ಹೊಸ ಅಲೆಯನ್ನು ಸ್ರಷ್ಠಿಸಿದೆ. ದೈವಾರಾಧನೆಯ ಜೊತೆಗೆ ಭೂ ಮಾಲೀಕತ್ವದ ಸಂಘರ್ಷದೊದಿಗೆ ಹೆಣೆದು ಕೊಂಡಿರುವ ಸಿನೆಮಾದ ಕಥೆ ತುಳುನಾಡು […]
Category: ಕಥೆ
ಪುಟ್ಕತೆ – 1 : ನೀತಿ ಕಥೆ
ಮರ ದಿನಂಪ್ರತಿ ಮನೆಯೆದುರು ಹಕ್ಕಿಗಳ ಹಿಕ್ಕೆಯನ್ನು ಗುಡಿಸಿ ಸ್ವಚ್ಛಗೊಳಿಸುವ ಕೆಲಸ ಸಾಕಾಗಿಹೋಗಿತ್ತು. ಮನೆಯೆದುರು ತಾವರೆ ಕೊಳಕ್ಕೆ ಅರ್ಧ ಬುಟ್ಟಿಯಾಗುವಷ್ಟು ಒಣಗಿದ ಎಲೆಗಳೂ ಬೀಳುತ್ತಿದ್ದವು. ಮಳೆ ಬಂದು ನಿಂತರೂ ಮರದ ಎಳೆಗಳಿಂದ ಹನಿಗಳು ಬೀಳುತ್ತಿದ್ದವು. ಒಮ್ಮೊಮ್ಮೆ ಬೀಸುವ ಗಾಳಿಗೆ ಚಳಿಯೂ ವಿಪರೀತ. ಬೇಸರವಾಗಿ ಮರಕ್ಕೊಂದು ಗತಿ ಕಾಣಿಸಿದ. ಈಗ ದಿನವೂ ತಾವರೆ ಕೊಳಕ್ಕೆ ನೀರು ತುಂಬಿಸಬೇಕು. ಪಕ್ಷಿಗಳಿಗಾಗಿ ತಾರಸಿಯಲ್ಲಿ ಪಾತ್ರಗಳಲ್ಲಿ ನೀರಿಡುತ್ತಾನೆ. ಆದರೆ ಪಕ್ಷಿಗಳು ಸುಳಿಯುವುದೇ ಇಲ್ಲ! ಬೆವರಿದಾಗ ಚಳಿಯಾಗುತ್ತದೆ…! ಕಿಗ್ಗಾಲು […]
ಬಾಡಿಗೆಗಿದೆ
ಅದು ಬೆಂಗಳೂರಿನ ಹೊರವಲಯದಲ್ಲಿದ್ದ ಹತ್ತು ವರ್ಷದ ಹಳೆಯ ಅಪಾರ್ಟ್ ಮೆಂಟ್. ಅಲ್ಲಿ ಇಪ್ಪತ್ತೈದು ಕುಟುಂಬದವರು ವಾಸಿಸುತ್ತಿದ್ದಾರೆ. ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಎಲ್ಲರೂ ಅಲ್ಲಿ ಸಂತೋಷದಿಂದ ಬದುಕುತ್ತಿದ್ದಾರೆ. ಹತ್ತು ವರ್ಷಗಳಿಂದ ಒಂದೇ ಕಡೆ ಜೀವನ ಸಾಗಿಸುತ್ತಿರುವ ಈ ಅಪಾರ್ಟ್ ಮೆಂಟ್ ವಾಸಿಗಳ ನಡುವೆ ಒಂದು ವಿಶೇಷವಾದ ಬಾಂಧವ್ಯ ಬೆಳೆದಿದೆ. ಅವರುಗಳ ನಡುವೆ ಸ್ನೇಹ ಸಂಬಂಧವನ್ನು ಮೀರಿದ ಒಂದು ಅನುಬಂಧ ಏರ್ಪಟ್ಟಿದೆ. ಕಳೆದ ಎರಡು ಮೂರು ತಿಂಗಳಿಂದ ಈ ಅಪಾರ್ಟ್ ಮೆಂಟ್ […]
ಕಪಟ ಜ್ಯೋತಿಷಿ
ಜ್ಯೋತಿಷ್ಯದ ಕುರಿತಾದ ಹುಚ್ಚು ಕುತೂಹಲ ಯಾರಿಗಿಲ್ಲಾ ಹೇಳಿ.! ಕೆಲವರು ಅಪಾರವಾಗಿ ನಂಬಿದರೆ, ಇನ್ನೂ ಕೆಲವರು ಅದೊಂದು ಮೂಡನಂಬಿಕೆ ಅಂದುಕೊಂಡು ಸಮ್ಮನಾಗುತ್ತಾರೆ.ಇನ್ನೂ ಕೆಲವರು ಕುತೂಹಲಕ್ಕಾಗಿ ಆಗಾಗ ಜ್ಯೋತಿಷಿಯ ಬಳಿ ಹೋಗುವುದುಂಟು !. ಜ್ಯೋತಿಷ್ಯ ಶಾಸ್ತ್ರಕ್ಕೆ ನಮ್ಮ ದೇಶದಲ್ಲಿ ಅದರದ್ದೆ ಆದ ಪೌರಾಣಿಕ ಮಹತ್ವ ಇದೆ.ಆದರೆ ಜ್ಯೋತಿಷ್ಯವನ್ನೇ ಅಸ್ತ್ರವಾಗಿರಿಸಿಕೊಂಡು ಜನರನ್ನು ಮೋಸಮಾಡುವವರ ನಡುವೆ ಪ್ರಾಮಾಣಿಕತೆಯಿಂದ ಜ್ಯೋತಿಷ್ಯ ಹೇಳುವವರು ಮೂಲೆಗುಂಪಾಗಿರುವುದು ವಿಪರ್ಯಾಸವೇ ಸರಿ.ಅದೇನೇ ಇರಲಿ ! ಆ ನಾಲ್ಕು ಜನ ಯುವಕರು ಜ್ಯೋತಿಷ್ಯದ ಕುರಿತಾದ […]
ಸಮುದಾಯ ತಿಂಗಳ ಕಥಾ ಓದು
ಕೊರೋನಾ ಎಂಬ ವಿಚಿತ್ರ ಸಂಕಟದ ಸಂದರ್ಭದಲ್ಲಿ ಆಧುನಿಕ ರಂಗಭೂಮಿಯ ಹೊಸ ಸಾಧ್ಯತೆ ಮತ್ತು ದಾರಿಗಳನ್ನು ಕಂಡುಕೊಳ್ಳುತ್ತಿರುವಾಗ ಈ ಹಿನ್ನೆಲೆಯಲ್ಲಿ ನಮ್ಮದು ಈ ಪ್ರಯತ್ನ ಎನ್ನುತ್ತಾ ಆರಂಭಿಸಿದರು ಸಂಕಥನ ಎನ್ನುವ ರಂಗ ಓದನ್ನು ಮಂದಾರ ಕಲಾವಿದರು ಈ ಸಂಜೆ ಕುಂದಾಪುರ ಜೇಸಿ ಭವನದಲ್ಲಿ.ಪುಟ್ಟ, ಪುಟ್ಟ ಒಂದೈದು ಕತೆ-ಲೇಖನ-ಕವಿತೆಗಳ ಎಳೆಗಳನ್ನು ಬಿಡಿಬಿಡಿಯಾಗಿ ರೋಹಿತ್ ಬೈಕಾಡಿ ವಿನ್ಯಾಸಗೊಳಿಸಿದ್ದರು. ವಿಶಿಷ್ಟ ತೀರ್ಪು ಇದರಲ್ಲಿ ಬ್ರೆಡ್ ಮತ್ತು ಜಾಮ್ ಕದ್ದ ಕಾರಣಕ್ಕಾಗಿ ಹದಿನೈದರ ಹುಡುಗನೊಬ್ಬನನ್ನು ಕಟಕಟೆಯಲ್ಲಿ ಪ್ರಶ್ನಿಸಲಾಗುತ್ತದೆ. […]