ಕುಂದಾಪುರ (ಮಾ.4): ಕುಂದಾಪುರ ತಾಲೂಕಿನ ಪುರಾಣಪ್ರಸಿದ್ಧ ಹಾಗೂ ಕಾರಣೀಕ ಶಕ್ತಿ ಕೇಂದ್ರಗಳಲ್ಲಿ ಒಂದಾದ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಗೀತಾನಂದ ಫೌಂಡೇಷನ್ ಇದರ ಪ್ರವರ್ತಕರಾದ ಉದ್ಯಮಿ ಆನಂದ. ಸಿ. ಕುಂದರ್ ಹಾಗೂ ಕಾವ್ರಾಡಿ ಕಲ್ಲೋಳಿಮನೆ ಕೆ. ವಿ. ಬಾಲಚಂದ್ರ ಶೆಟ್ಟಿಯವರು ಕೊಡುಗೆ ರೂಪದಲ್ಲಿ ನಿರ್ಮಿಸಿಕೊಟ್ಟ ಸ್ವಾಗತ ಗೋಪುರದ ಲೋಕಾರ್ಪಣಾ ಕಾರ್ಯಕ್ರಮ ಮಾರ್ಚ್ 3 ರಂದು ನಡೆಯಿತು. ಈ ಕಾರ್ಯಕ್ರಮಕ್ಕೆ ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ಶ್ರೀಪಾದರು ಆಗಮಿಸಿ ಸ್ವಾಗತ ಗೋಪುರವನ್ನು ಲೋಕಾರ್ಪಣೆಗೊಳಿಸಿದರು. […]
Day: March 5, 2021
ಶ್ರೀ ಮದ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ – ಜನೌಷಧಿ ಸಪ್ತಾಹ
ಉಡುಪಿ(ಮಾ.5): ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಮಹಿಳಾ ಸಬಲೀಕರಣ ಘಟಕ, ರೋಟರಿ ಕ್ಲಬ್ ಶಂಕರಪುರ ಮತ್ತು ಸದ್ಗುರು ಸೌಹಾರ್ದ ಸಹಕಾರಿ ಲಿಮಿಟೆಡ್, ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ “ಜನೌಷಧಿ ಸಪ್ತಾಹ ದ ಅಂಗವಾಗಿ ಆರೋಗ್ಯ ಮಾಹಿತಿ ಕಾರ್ಯಗಾರವನ್ನು ಮಾರ್ಚ್3 ರಂದು ಕಾಲೇಜಿನ ಸಿಬ್ಬಂದಿಗಳಿಗೆ ಮತ್ತು ವಿಧ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು. ಈ ಕಾರ್ಯಗಾರವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಉದ್ಘಾಟಿಸಿದರು.ಉಡುಪಿ ಉದ್ಯಾವರ ಎಸ್.ಡಿ.ಎಮ್. ಕಾಲೇಜಿನ ಆಯುರ್ವೇದ ಕಾಲೇಜಿನ ಸಹಾಯಕ […]
ಭಯವೆಂಬ ಕತ್ತಲಿನಿಂದ …. ಧೈರ್ಯವೆಂಬ ಬೆಳಕಿನೆಡೆಗೆ …..
ಹೆಣ್ಣನ್ನು ಪೂಜಿಸುವ ದೇಶ ನಮ್ಮದು. ಭಾರತಮಾತೆಯನ್ನು ತಾಯಿ ಎಂದು ಆರಾಧನೆ ಮಾಡುವ ನಾವು ಅನಾದಿ ಕಾಲದಿಂದಲೂ ಹೆಣ್ಣಿಗೆ ವಿಶೇಷ ಸ್ಥಾನಮಾನ ನೀಡುತ್ತಾ ಬಂದಿದ್ದೆವೆ.ಶೋಷಣೆ ,ಪುರುಷ ಪ್ರಧಾನ ಸಮಾಜದ ದಬ್ಬಾಳಿಕೆಯ ವಿರುದ್ಧ ನಿರಂತರ ಹೋರಾಟ ಮಾಡಿರುವ ಮಹಿಳೆಯರು,ಬ್ರಿಟಿಷರು ನಮ್ಮನ್ನು ಆಳುವ ಸಂದರ್ಭದಲ್ಲಿಯೂ ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಉದಾಹರಣೆಗಳು ನಮ್ಮ ಇತಿಹಾಸದಲ್ಲಿ ದಾಖಲಾಗಿದೆ. ಆದರೆ ಅಂತಹ ಹೆಮ್ಮೆಯ ಹೆಣ್ಣು ಮಕ್ಕಳ ಸ್ಥಿತಿ ಇವತ್ತಿನ ದಿನಗಳಲ್ಲಿ ಎನಾಗಿದೆ? ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು […]
ಡಾ| ಬಿ. ಬಿ. ಹೆಗ್ಡೆ ಕಾಲೇಜು : ಜಾಗೃತಿ ಕಾರ್ಯಕ್ರಮ
ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಮಾನವ ಹಕ್ಕುಗಳ ಘಟಕ, ರೋಟರಿ ದಕ್ಷಿಣ ಹಾಗೂ ಯುವ ಸ್ಪಂದನ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಪೋಕ್ಸೋ ಕಾಯ್ದೆ, ಮಾನವ ಹಕ್ಕುಗಳು ಮತ್ತು ರಸ್ತೆ ಸುರಕ್ಷತೆಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಇ. ಸಿ. ಆರ್ ಕಾಲೇಜು : ಉಪನ್ಯಾಸಕರ ಜೊತೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ
ಇ .ಸಿ .ಆರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ನಲ್ಲಿ ಉಪನ್ಯಾಸಕರ ಜೊತೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಡಾ|ಬಿ. ಬಿ. ಹೆಗ್ಡೆ ಕಾಲೇಜು : ಉಚಿತ ನ್ಯಾಪ್ಕಿನ್ ವಿತರಣೆ ಕಾರ್ಯಕ್ರಮ
ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜನ ಯುವ ರೆಡ್ಕ್ರಾಸ್ ಘಟಕ, ಮಹಿಳಾ ಘಟಕ ಹಾಗೂ ಭಾರತೀಯ ರೆಡ್ಕ್ರಾಸ್ ಕುಂದಾಪುರ ಘಟಕದ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿನಿಯರಿಗೆ ಉಚಿತ ನ್ಯಾಪ್ಕಿನ್ ವಿತರಣೆ’ ಕಾರ್ಯಕ್ರಮ ಮಾರ್ಚ್ 4 ರಂದು ನಡೆಯಿತು.